18ನೇ ಆವೃತ್ತಿಯ ಸೃಷ್ಟಿ- 2024 ಕಾರ್ಯಕ್ರಮ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಅತ್ಯಂತ ಹೆಮ್ಮೆಯ ಸೃಷ್ಟಿ -2024, ನಾವಿನ್ಯತೆಯ ವಿನಿಮಯ ಕಾರ್ಯಕ್ರಮವನ್ನು ವಿಎಸ್ ಎಸ್‌ ಟ್ರಸ್ಟ್ ,ಯುವಕ ಸಂಘ, ಏಟ್ರಿಯ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು ಇವರ ಸಹಯೋಗದೊಂದಿಗೆ ದಿನಾಂಕ ಮೇ 24 25 ಮತ್ತು 26 ರಂದು ಏಟ್ರಿಯ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕ್ಯಾಂಪಸ್ ನಲ್ಲಿ ಜರುಗಲಿದೆ.

ಇಂಜಿನಿಯರಿಂಗ್ ವಿದ್ಯಾರ್ಥಿಗಳ ಹಾಗೂ ವೈಜ್ಞಾನಿಕ, ಸಂಶೋಧನಾ ಮನೋಭಾವವುಳ್ಳ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು 2002ರಲ್ಲಿ ಪ್ರಾರಂಭವಾದ ಸೃಷ್ಟಿ ಕಾರ್ಯಕ್ರಮವು ಶೈಕ್ಷಣಿಕ, ಸಂಶೋಧನಾ ಮತ್ತು ನವೋದ್ಯಮಗಳ ಸಮನ್ವಯವನ್ನು ಸಾಧಿಸುತ್ತಾ, ತನ್ನ 18ನೇ ಆವೃತ್ತಿಗೆ ಸಜ್ಜಾಗಿದೆ.

ಭಾರತದಂತಹ ಅಭಿವೃದ್ಧಿ ಶೀಲ ರಾಷ್ಟ್ರಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಉಪಲಬ್ಧಗಳು ಅತ್ಯಂತ ಮಹತ್ವದ್ದಾಗಿದೆ. ಸಮಾಜ ಮತ್ತು ಯುವ ಸಮುದಾಯ ವೈಜ್ಞಾನಿಕ ಮನೋಭಾವದೊಂದಿಗೆ ಹಲವಾರು ಸವಾಲುಗಳಿಗೆ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಭಾರತದ ವಿಜ್ಞಾನ ಮತ್ತು ತಾಂತ್ರಿಕ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸಂಶೋಧನಾತ್ಮಕ ಕೌಶಲ್ಯಾಧಾರಿತ ಕಲಿಕೆ ಕಡೆಗಿನ ಪ್ರೋತ್ಸಾಹದ ವ್ಯಾಪ್ತಿ ವಿಶಾಲವಾಗಬೇಕಿದೆ. ಸೃಷ್ಟಿ 2024 ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಇಂಜಿನಿಯರಿಂಗ್ ಕಾಲೇಜುಗಳ ಸುಮಾರು 3500 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ನಿಟ್ಟಿನಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳ 300ಕ್ಕೂ ಹೆಚ್ಚು ಪ್ರಾಜೆಕ್ಟ್ ಗಳನ್ನು ಅವುಗಳ ತಾಂತ್ರಿಕ ಮಾಹಿತಿ ಯೊಡನೆ ಪ್ರಸ್ತುತಪಡಿಸಲು, ಒಟ್ಟು ಆರು ವಿಭಿನ್ನ ಗುಂಪುಗಳಲ್ಲಿ ಸೃಷ್ಟಿ ಪ್ರಾಜೆಕ್ಟ್ ಎಕ್ಸಿಬಿಷನ್, ಸುಮಾರು 100ಕ್ಕೂ ಹೆಚ್ಚು 1, 2 ಮತ್ತು 3ನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಸಂಶೋಧನಾತ್ಮಕ ಪ್ರವೃತ್ತಿಯನ್ನು ಪ್ರಸ್ತುತಪಡಿಸಲು ಅವಿಷ್ಕಾರ ಕಾರ್ಯಕ್ರಮ ನೆರವಾಗಲಿದೆ ಹಾಗೂ ಹಲವಾರು ರೀತಿಯ ತಾಂತ್ರಿಕ ಸ್ಪರ್ಧೆಗಳನ್ನು ಒಳಗೊಂಡಿರುವ ಸೃಷ್ಟಿ ಇನ್ನೊವೇಟ‌ರ್ ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ತಂಡಗಳು ಭಾಗವಹಿಸಲಿದ್ದಾರೆ.

ಸೃಷ್ಟಿ 2024ರಲ್ಲಿ 48 ಗಂಟೆಗಳ ಹ್ಯಾಕಾತನ್ ನಡೆಯಲಿದ್ದು ಸುಮಾರು 70ಕ್ಕೂ ಹೆಚ್ಚು ತಂಡಗಳು ಈಗಾಗಲೇ ನೊಂದಾಯಿಸಿಕೊಂಡಿವೆ. ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಯಶೀಲರಾಗುವ ವಿದ್ಯಾರ್ಥಿಗಳಿಗೆ 25 ಲಕ್ಷದವರೆಗಿನ ಬಹುಮಾನವನ್ನು ವಿತರಿಸಲಾಗುವುದು. ಅಷ್ಟೇ ಅಲ್ಲದೆ ವಿವಿಧ ಗುಂಪುಗಳಲ್ಲಿ ನಡೆಯುವ ಸ್ಪರ್ಧೆಯ ಎಲ್ಲಾ ಹಂತಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ ಶೈಕ್ಷಣಿಕ ಸಂಸ್ಥೆಗಳಿಗೆ ಚಾಂಪಿಯನ್ ಹಾಗೂ ರನ್ನರ್ಸ್ ಅಪ್ ಪ್ರಶಸ್ತಿಯನ್ನು ಪಾರಿತೋಷಕದೊಂದಿಗೆ ನೀಡಲಾಗುವುದು.

ಸೃಷ್ಟಿ 2024ರ ಉದ್ಘಾಟನಾ ಸಮಾರಂಭವು 24 ಮೇ 2024 ರಂದು ಮಧ್ಯಾಹ್ನ 3:30 ಗಂಟೆಗೆ ಜರುಗಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ ಎಸ್ ಕೆ ಬಿ ಚಾರಿಟೇಬಲ್ ಫೌಂಡೇಶನ್ ಟ್ರಸ್ಟ್ ನ ಅಧ್ಯಕ್ಷರು ಮತ್ತು ಟ್ರಸ್ಟಿಗಳಾದ ಶ್ರೀಯುತ ಸಿ .ಎಸ್ ಸುಂದರ ರಾಜು ರವರು ವಹಿಸಿಕೊಳ್ಳಲಿದ್ದಾರೆ. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಯು ಜಿ ಸಿ ಉಪಾಧ್ಯಕ್ಷರಾದ ಪ್ರೊಫೆಸರ್ ದೀಪಕ್ ಕುಮಾರ್ ಶ್ರೀವತ್ಸ ರವರು ಭಾಗಿಯಾಗಲಿದ್ದಾರೆ ಹಾಗೂ ಅತಿಥಿಗಳಾಗಿ ಶ್ರೀಯುತ ಮನು ಸಾಳೆ, ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮರ್ಸಿಡಿಸ್ ಬೆಂಜ್ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ಭಾರತ, ಶ್ರೀಯುತ ಡಾ. ಎಸ್ ವಿದ್ಯಾಶಂಕರ್ ಗೌರವಾನ್ವಿತ ಉಪಕುಲಪತಿಗಳು ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಬೆಳಗಾವಿ ಹಾಗೂ ಶ್ರೀಯುತ ಆಶಿಶ್ ಚೌಹಾನ್ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿಗಳು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರವರು ಉಪಸ್ಥಿತರಿರಲಿದ್ದಾರೆ.

ಸೃಷ್ಟಿ 2024 ಕಾರ್ಯಕ್ರಮದ ಸಮಾರೋಪ ಸಮಾರಂಭವು ದಿನಾಂಕ 26 ಮೇ 2024 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದ್ದು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ ಎಸ್ ಕೆ ಬಿ ಚಾರಿಟೇಬಲ್ ಫೌಂಡೇಶನ್ ಟ್ರಸ್ಟ್ ನ ಟ್ರಸ್ಟಿಗಳಾದ ಶ್ರೀಯುತ ಕೆ. ನಾಗರಾಜು ರವರು ವಹಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಯುತ ಸೋಮನಾಥ್, ಇಸ್ರೋ ಅಧ್ಯಕ್ಷರು ಭಾಗಿಯಾಗಲಿದ್ದಾರೆ ಹಾಗೂ ಅತಿಥಿಗಳಾಗಿ ಪ್ರೊಫೆಸರ್ ಗಣೇಶನ್ ಕನ್ನಬೀರನ್, ನ್ಯಾಕ್ ನಿರ್ದೇಶಕರು, ಡಾ. ಟಿ ಎನ್ ಶ್ರೀನಿವಾಸ, ಕುಲಸಚಿವರು (ಮೌಲ್ಯಮಾಪನ) ವಿಟಿಯು, ಶ್ರೀಯುತ ಎಸ್ ಬಾಲಕೃಷ್ಣ, ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿಗಳು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಗೂ ಶ್ರೀಯುತ ಕೌಶಿಕ್ ರಾಜು ನಿರ್ದೇಶಕರು ಏಟ್ರಿಯಾ ಎಜುಕೇಶನ್ ರವರು ಉಪಸ್ಥಿತರಿರಲಿದ್ದಾರೆ ಎಂದು ಎಬಿವಿಪಿ ಕರ್ನಾಟಕ ವತಿಯಿಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಲಾಯಿತು.

City Today News 9341997936