
3ದಿನಗಳ ರಾಷ್ಟ್ರಮಟ್ಟದ ದೇಸೀಯ ಬಹೃತ್ ಸಿದ್ಧ ಉಡುಪು ಮೇಳ ಬೆಂಗಳೂರು ಅರಮನೆ ಮೈದಾನದ ಪ್ರಿನ್ಸೆಸ್ ಶ್ರೈನ್
ಸೌತ್ ಇಂಡಿಯ ಗಾರ್ಮೆಂಟ್ಸ್ ಅಸೋಸಿಯೇಷನ್ ನಿಂದ ಮೂರು ದಿನಗಳ ಚಾಲನೆ -ಸೌತ್ ಇಂಡಿಯ ಗಾರ್ಮೆಂಟ್ಸ್ ಬಿ 2 ಬಿ ಮೇಳ: 100 ಕೋಟಿ ರೂ ವಹಿವಾಟು ನಿರೀಕ್ಷೆ

ಬೆಂಗಳೂರು, ಜು, 30; ರಾಷ್ಟ್ರಮಟ್ಟದ ದೇಸೀಯ ಬಹೃತ್ ಸಿದ್ಧ ಉಡುಪು ಜವಳಿ ಮೇಳ ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ನಿಂದ ಬೆಂಗಳೂರಿನಲ್ಲಿ ಜುಲೈ 30ರಿಂದ ಅಗಸ್ಟ್ 1ನೇ ತಾರೀಖವರಗೆ 3ದಿನಗಳ ಸಿದ್ಧ ಉಡುಪು ರಾಷ್ಟ್ರಮಟ್ಟದ ಸಮಾವೇಶ 29ನೇ ವೈವಿಧ್ಯಮ ವಿನ್ಯಾಸಗಳ 29ನೇ ನಾವೀನ್ಯತೆ ಪ್ಯಾಷನ್ ಉತ್ಸವ ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ನಿಂದ ಮೂರು ದಿನಗಳ ಅತಿ ದೊಡ್ಡ ಗಾರ್ಮೆಂಟ್ಸ್ ಮೇಳ ಇಂದಿನಿಂದ ಆರಂಭವಾಗಿದ್ದು, ಬಿ2ಬಿ ಮೇಳದಲ್ಲಿ ವೈವಿದ್ಯಮ ಬ್ರಾಂಡ್ ಗಳ ಜವಳಿ ಉಡುಪು ವಲಯದಲ್ಲಿ 100 ಕೋಟಿ ರೂ ಗಿಂತ ಹೆಚ್ಚು ವಹಿವಾಟು ನಡೆಯುವ ನಿರೀಕ್ಷೆಯಿದೆ. ಬೆಂಗಳೂರು ಅರಮನೆ ಮೈದಾನದ ಪ್ರಿನ್ಸೆಸ್ ಶ್ರೈನ್.

ಬೆಂಗಳೂರು ಅರಮನೆ ಮೈದಾನದ ಪ್ರಿನ್ಸೆಸ್ ಶ್ರೇನ್ ನಲ್ಲಿ ಮೇಳ ನಡೆಯುತ್ತಿದ್ದು, ಇದು ನೇರವಾಗಿ ವ್ಯಾಪಾರಿಗಳಿಂದ ವ್ಯಾಪಾರಿಗಳಿಗಾಗಿ ಇರುವ ಮೇಳವಾಗಿದೆ. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತಿತರ ರಾಜ್ಯಗಳ ವ್ಯಾಪಾರಿಗಳು ಮೇಳದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 100 ಕ್ಕೂ ಹೆಚ್ಚು ಬ್ರಾಂಡ್ ಗಳ ಸಿದ್ಧ ಉಡುಪುಗಳ ಮಳಿಗೆಗಳನ್ನು ತೆರೆಯಲಾಗಿದೆ.
ಸೌತ್ ಇಂಡಿಯಾ ಗಾರ್ಮೆಂಟ್ ಉತ್ಪಾದಕರ ಸಂಘದ ಅಧ್ಯಕ್ಷ ಅನುರಾಗ್ ಸಿಂಗ್ಲಾ, ಸಂಘದ ಕಾರ್ಯದರ್ಶಿ ರಾಜೇಶ್ ಚಾಹವತ್, ಉಪಾಧ್ಯಕ್ಷರಾದ ನರೇಶ್ ಲಖನ್ ಪಾಲ್, ಕಿಶನ್ ಜೈನ್ ಉಪಸ್ಥಿತರಿದ್ದರು.

ಜವಳಿ ಉದ್ಯಮ ವಲಯವನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ದೇಶೀಯವಾಗಿ ಉತ್ಪಾದನೆಯಾಗುವ ಬೆಟ್ಟೆಗಳನ್ನು ಖರೀದಿಸುವ ಮನಸ್ಥಿತಿ ಬೆಳೆಯಬೇಕು. ದೇಶೀಯ ಬ್ರಾಂಡ್ ಗಳಿಂದ ಆರ್ಥಿಕಾಭಿವೃದ್ಧಿಗೆ ಹೆಚ್ಚಿನ ರೀತಿಯಲ್ಲಿ ನೆರವಾಗಲಿದೆ. ಹೀಗಾಗಿ ಭಾರತದ ಗಾರ್ಮೆಂಟ್ಸ್ ನಲ್ಲಿ ತಯಾರಿಕೆಯಾದ ಬಟ್ಟೆಗಳನ್ನು ಧರಿಸೋಣ ವಿದೇಶಿ ವ್ಯಾಮೋಹ ಬಿಡೋಣ. ಮತ್ತು ಸ್ಥಳೀಯರುತಯಾರಿಸಿದ ಗಾರ್ಮೆಂಟ್ಸ್ ಬಟ್ಟೆಗಳನ್ನು ದೇಶದ ಜನ ಖರೀದಿಸಿದರೆ ಆರ್ಥಿಕವಾಗಿ ಭಾರತ ಸಧೃಢವಾಗುತ್ತದೆ ಜೊತೆಗೆ ಸ್ವಾವಲಂಬಿ ಭಾರತ ನಿರ್ಮಿಸಲು ನೆರವಾಗುತ್ತದೆ ಎಂದರು.ಸೌತ್ ಇಂಡಿಯಾ ಗಾರ್ಮೆಂಟ್ ಉತ್ಪಾದಕರ ಸಂಘದ ಅಧ್ಯಕ್ಷ ಅನುರಾಗ್ ಸಿಂಗ್ಲಾ ಮಾತನಾಡಿ, ಇಡೀ ದೇಶದ ಜವಳಿ ವಲಯದಲ್ಲಿ ಕರ್ನಾಟಕ ಮಂಚೂಣಿಯಲ್ಲಿದ್ದು, ಬೆಂಗಳೂರು ಜವಳಿ ಉದ್ಯಮದ ಕೇಂದ್ರವಾಗಿದೆ. ಗಾರ್ಮೆಂಟ್ಸ್ ಉದ್ಯಮದಲ್ಲಿ ಬೆಂಗಳೂರಿಗೆ ಉತ್ತಮ ಭವಿಷ್ಯವಿದೆ. ಕೃಷಿ ನಂತರ ಜವಳಿ ಉದ್ಯಮ ಅತಿ ಹೆಚ್ಚು ಉದ್ಯೋಗ ಕಲ್ಪಿಸಿದ್ದು, ವಿಶೇಷವಾಗಿ ಮಹಿಳೆಯರು ಈ ಕ್ಷೇತ್ರದಲ್ಲಿ ಉದ್ಯೋಗ ಪಡೆದು ಆರ್ಥಿಕ ಬೆಳವಣಿಗೆಗೆ ಬಹುದೊಡ್ಡ ಕೊಡುಗೆ ನೀಡುತ್ತಿದ್ದಾರೆ ಎಂದರು.ಕೋವಿಡ್ ನಿಂದ ನೆಲಕಚ್ಚಿದ್ದ ಉದ್ಯಮ ಇದೀಗ ಶೇ 50 ರಷ್ಟು ಚೇತರಿಸಿಕೊಂಡಿದ್ದು, ಕೇಂದ್ರದ ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮ ವಲಯ ಜವಳಿ ಕ್ಷೇತ್ರಕ್ಕೆ ಉತ್ತಮ ರೀತಿಯಲ್ಲಿ ನೆರವು ನೀಡುತ್ತಿದೆ..

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ರಾಜೇಶ್ ಚಾವತ್ ಮತ್ತು ಜವಳಿ ಉತ್ಸವದ ಸಂಚಾಲಕ ಗೋವಿಂದ ಮುದ್ರಾ ನರೇಶ್ ಲಕ್ನಪಾಲ್, ತೇಜಸ್ಮೆಹತ್ ಉಪಸ್ಥಿತರಿದ್ದರು.
City Today News 9341997936

You must be logged in to post a comment.