4/3/2024 ರಂದು ವಿಶ್ವಕರ್ಮ ಸಮಾಜದ ಸ್ವಾಮೀಜಿಗಳು ಹಾಗೂ ಮುಖಂಡರಿಂದ ಫ್ರೀಡಂಪಾರ್ಕ್‌ನಲ್ಲಿ ಅನಿರ್ಧಿಷ್ಟಾವಧಿ ಧರಣಿ

ಪತ್ರಿಕಾ ಗೋಷ್ಠಿ ಯಲ್ಲಿ ಶ್ರೀ ಶ್ರೀ ನೀಲಕಂಠಾಚಾರ್ಯ ಸ್ವಾಮೀಜಿ ಆದಿಲಕ್ಷ್ಮೀ ವಿಶ್ವಕರ್ಮ ಮಠ,ಮಳವಳ್ಳಿ ಶ್ರೀನಿವಾಸ್, ರಾಜ್ಯಾಧ್ಯಕ್ಷರು,ಗುರು ವಿಶ್ವಕರ್ಮ, ರಾಜ್ಯ ಕಾರ್ಯಾಧ್ಯಕ್ಷರು,ಟಿ.ಕೆಪುರುಶೋತ್ತಮ್, ರಾಜ್ಯ ಉಪಾಧ್ಯಕ್ಷರು ಮತ್ತು ಆಶಾ ಉಮೇಶ್, ರಾ.ಮ.ಉಪಾಧ್ಯಕ್ಷರು ಉಪಸ್ಥಿತರಿದ್ದರು.

ತಮ್ಮಲ್ಲಿ ಪ್ರಸ್ತುತ ಪಡಿಸುತ್ತಾ ತಮಗೆಲ್ಲರಿಗೂ ತಿಳಿದಿರುವಂತೆ ರಾಜ್ಯದಲ್ಲಿ 45 ಲಕ್ಷ ಜನಸಂಖ್ಯೆಯಷ್ಟು ವಿಶ್ವಕರ್ಮ ಸಮಾಜ ಇದೆ. ಈ ಹಿಂದಿನಿಂದಲೂ ನಮ್ಮನ್ನು ಅಳಿದಂತ ಸರಕಾರಗಳು ನಮ್ಮ ಸಮಾಜಕ್ಕೆ ಆರ್ಥಿಕವಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ನ್ಯಾಯ ಕೋಡಿಸುವಲ್ಲಿ ನ್ಯಾಯಯುತವಾದ ಪ್ರಯತ್ನ ಮಾಡಲೇ ಇಲ್ಲ. ಕಳೆದ ಹತ್ತಾರು ವರ್ಷಗಳಿಂದಲೂ ನಮ್ಮ ಸಮಾಜದ ಹಲವಾರು ಸಂಘಟನೆಗಳು ಹೋರಾಟ ಮಾಡುತ್ತಲೇ ಬಂದಿದ್ದರೂ ಸಹ ಸರ್ಕಾರಗಳು ನಮ್ಮನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಈ ಹಿಂದಿನ ಸರ್ಕಾರಗಳ ರೀತಿಯಲ್ಲೇ ನಾವೆಲ್ಲರೂ ತುಂಬಾ ಭರವಸೆ ಇಟ್ಟಿರುವಂತಹ ಪ್ರಸ್ತುತ ಸಕಾರವು ಸಹಾ ನಮ್ಮನ್ನು ನಿರ್ಲಕ್ಷಿಸುತ್ತಿರುವುದು ನಮಗೆ ಅತಿಯಾದ ನೋವುಂಟು ಮಾಡಿರುತ್ತದೆ. ಹಿಂದುಳಿದ ವರ್ಗದಲ್ಲಿ ನಾವು ಹುಟ್ಟಿರುವುದೇ ನಮಗೆ ಶಾಪವಾಗಿದೆ ಎಂದು ಭಾಸವಾಗುತ್ತಿದೆ.ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ತಳಹದಿಯಲ್ಲಿ ಬದುಕಬೇಕಾದ ನಾವುಗಳು ಕಾಡಿಬೇಡಿ ಬದುಕುವ ಸಂದರ್ಭ ಬಂದಿರುವುದು ನಮ್ಮ ಸಮಾಜಕ್ಕೆ ಬಂದಿರುವುದು ದುರ್ದೆವ, ಜಾತಿ ಧರ್ಮ ನೋಡದೆ ಎಲ್ಲರಿಗೂ ನಮ್ಮ ಪಂಚ ಕಸುಬುಗಳ ಮೂಲಕ ಸೇವೆ ಸಲ್ಲಿಸುವ ನಾವುಗಳು ಹಲವಾರು ದೇವಾಲಯಗಳನ್ನು ಕಟ್ಟಿಕೊಡುವ ಮೂಲಕ ದೇಶದ ಸಂಸ್ಕೃತಿಗೆ ಅಪಾರ ಕೊಡುಗೆಗಳನ್ನು ಕೊಟ್ಟಿರುವ ನಾವುಗಳು ವೇದಿಕೆಗಳಲ್ಲಿ ಹೊಗಳಿಕೆಗಳಿಗಷ್ಟೇ ಸೀಮಿತವಾಗಿದ್ದೇವೆ. ಯಾವ ಸರ್ಕಾರವು ನಮ್ಮನ್ನು ಮೇಲೆತ್ತುವ ಕೆಲಸವನ್ನು ಮಾಡುತ್ತಿಲ್ಲ. ಕಳೆದ 6ನೇ ತಾರೀಖು ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರನ್ನು ಸಮಾಜದ ಸ್ವಾಮೀಜಿಗಳು ಹಾಗೂ ಮುಖಂಡರುಗಳ ನಿಯೋಗ ಸಮಾಜದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸಣ್ಣಪುಟ್ಟ ಬೇಡಿಕೆಗಳನ್ನು ಸಲ್ಲಿಸಿದ್ದೆವು. ಅವುಗಳಲ್ಲಿ ಪ್ರಮುಖವಾಗಿ ವಿಶ್ವಕರ್ಮ ಅಭಿವೃದ್ದಿ ನಿಗಮದ ಬಾಕಿ ಇರುವ ಸಾಲವನ್ನು ಮನ್ನಾ ಮಾಡುವುದು, ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 100 ಕೋಟಿ ರೂಗಳ ಅನುದಾನವನ್ನು ನೀಡುವುದು, ಎಲ್ಲಾ ಸಾಧಕರ ಮಹನೀಯರ ಪ್ರತಿಮೆಗಳು ವಿಧಾನಸೌಧದ ಆವರಣದಲ್ಲಿರುವಂತೆ ಶಿಲ್ಪಕಲೆಯ ಮೂಲಕ ನಾಡಿಗೆ ದೇಶಕ್ಕೆ ಅಪಾರ ಕೀರ್ತಿ ತರುವಂತಹ ಅಮರಶಿಲ್ಪಿ ಜಕಣಾಚಾರಿ ರವರ ಪ್ರತಿಮೆ ಸ್ಥಾಪನೆ ಮಾಡಿಕೊಡುವುದು, ವಿಶ್ವಕರ್ಮ ಅಭಿವೃದ್ಧಿ ನಿಗಮದ ಮೂಲಕ ಸಮಾಜದ ಪ್ರತಿಭಾವಂತ ವಿದಾರ್ಥಿಗಳಿಗಾಗಿ ಯುಪಿಎಸ್‌ಸಿ/ಕೆಪಿಎಸ್‌ಸಿ ತರಬೇತಿ ಕೇಂದ್ರಗಳನ್ನು ಸ್ಥಾಪನೆ ಮಾಡಿಕೊಡುವುದು. ರಾಜ್ಯದಲ್ಲಿರುವ ವಿಶ್ವಕರ್ಮ ಬಡಮಕ್ಕಳಿಗೆ ಉತ್ತರ ಮತ್ತು ದಕ್ಷಿಣ ಕರ್ನಾಟಕದಲ್ಲಿ ತಲಾ ಒಂದರಂತೆ ವಿಶ್ವಕರ್ಮ ವಸತಿ ಶಾಲೆಯನ್ನು ಸ್ಥಾಪಿಸಿಕೊಡುವುದು. ಹೀಗೆ ಒಟ್ಟು 12 ಬೇಡಿಕೆಗಳನ್ನು ಬಜೆಟ್‌ನಲ್ಲಿ ಘೋಷಣೆ ಮಾಡಿಕೊಡುವಂತೆ ಮನವಿ ಮಾಡಿದರೂ ಸಹಾ ಇವುಗಳಲ್ಲಿ ಒಂದನ್ನಾದರೂ ಮುಖ್ಯಮಂತ್ರಿಗಳು ಈಡೇರಿಸಿಕೊಟ್ಟಿಲ್ಲ. ಸಮಾಜದ ಅಭಿವೃದ್ದಿಗಾಗಿ ಸಂಘಟನಾ ಜವಾಬ್ದಾರಿಯನ್ನು ಹೊತ್ತಿರುವ ನಾವುಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸುಮ್ಮನೆ ಕೂರಲು ಸಾಧ್ಯವಿಲ್ಲ. ಸಮಾಜದ ಬಂಧುಗಳಿಗೆ ನ್ಯಾಯ ಒದಗಿಸಲು ಸ್ವಾಮೀಜಿಗಳು ಮತ್ತು ಮುಖಂಡರುಗಳ ತೀರ್ಮಾನದಂತೆ ಈ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಸಮಾಜದ ಸರ್ವ ಸ್ವಾಮಿಜಿಗಳ ನಿಯೋಗ ಮತ್ತು ಸಮಾಜದ ಮುಖಂಡರುಗಳೆಲ್ಲರೂ ದಿನಾಂಕ 04.03.2024 ರಿಂದ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಅನಿರ್ಧಿಷ್ಟಾವಧಿ ಧರಣಿಯನ್ನು ಹಮ್ಮಿಕೊಂಡಿರುತ್ತೇವೆ. ಸರ್ಕಾರವು ನಮ್ಮ ಹೋರಾಟವು ತೀಕ್ಷ್ಯಗೊಳ್ಳುವ ಮೊದಲೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸುತ್ತೇವೆ. ಒಂದು ವೇಳೆ ಸರ್ಕಾರವು ಪುನಃ ನಮ್ಮನ್ನು ನಿರ್ಲಕ್ಷಿಸಿದರೆ ಹೋರಾಟವನ್ನು ರಾಜ್ಯಾಧ್ಯಂತ ವಿಸ್ತರಿಸುವಂತೆ ನಮ್ಮ ಸಮಾಜಕ್ಕೆ ಕರೆಕೊಟ್ಟು ಬೀದಿಗಿಳಿದು ನಮ್ಮ ಹಕ್ಕಿಗಾಗಿ ನಾವು ಹೋರಾಟವನ್ನು ತೀವ್ರಗೊಳಿಸಲು ತೀರ್ಮಾನಿಸಲಾಗುವುದು ಎಂದು ತಮ್ಮ ಮುಖಾಂತರ ಸರ್ಕಾರಕ್ಕೆ ಸಂದೇಶವನ್ನು ತಿಳಿಸುತ್ತಿದ್ದೇವೆ ಎಂದು ಸಮಾಜದ ವತಿಯಿಂದ ತಿಳಿಸಲಾಯಿತು.

ಪತ್ರಿಕಾ ಗೋಷ್ಠಿ ಯಲ್ಲಿ ಶ್ರೀ ಶ್ರೀ ನೀಲಕಂಠಾಚಾರ್ಯ ಸ್ವಾಮೀಜಿ ಆದಿಲಕ್ಷ್ಮೀ ವಿಶ್ವಕರ್ಮ ಮಠ,ಮಳವಳ್ಳಿ ಶ್ರೀನಿವಾಸ್, ರಾಜ್ಯಾಧ್ಯಕ್ಷರು,ಗುರು ವಿಶ್ವಕರ್ಮ, ರಾಜ್ಯ ಕಾರ್ಯಾಧ್ಯಕ್ಷರು,ಟಿ.ಕೆಪುರುಶೋತ್ತಮ್, ರಾಜ್ಯ ಉಪಾಧ್ಯಕ್ಷರು ಮತ್ತು ಆಶಾ ಉಮೇಶ್, ರಾ.ಮ.ಉಪಾಧ್ಯಕ್ಷರು ಉಪಸ್ಥಿತರಿದ್ದರು.

City Today News 9341997936