ಸಮುದಾಯದ ಒಳಗೆ ಇರುವ ಬಂಧಗಳನ್ನು ಬಲಪಡಿಸಲು ಹಾಗೂ ಹಿರಿಯರ ಆರೈಕೆಯ ಬಗ್ಗೆ ಸಲಹೆ ಪಡೆಯುವುದನ್ನು ಕೇಂದ್ರೀಕರಿಸಿ, 500 ಜನರು ಅತುಲ್ಯ ಸೀನಿಯರ್ ಕೇರ್ ಅವರು ಆಯೋಜಿಸಿರುವ “ಕೇರಿಂಗ್ ಫಾರ್ ಎ ಸೀನಿಯರ್” ವಾಕ್-ಎ-ಥಾನ್ ನಲ್ಲಿ ಭಾಗವಹಿಸಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 2024 – ಭಾರತದಲ್ಲಿ ಮುಪ್ಪಿನ ಕಾಲದಲ್ಲಿ ಜೀವನವನ್ನು ನಡೆಸುವ ಸಲುವಾಗಿ ಸಹಾಯ ಮಾಡುವುದು ಹಾಗೂ ಅಂತಹ ಹಿರಿಯರ ಆರೈಕೆಯನ್ನು ಮಾಡುವಲ್ಲಿ ಪ್ರಮುಖ ಹೆಸರನ್ನು ಹೊಂದಿರುವ ಅತುಲ್ಯ ಸೀನಿಯರ್ ಕೇರ್, ಇಂದು ಬೆಂಗಳೂರಿನ ವಿಧಾನಸೌಧದ ಅಂಬೇಡ್ಕರ್ ವೀಧಿಯಲ್ಲಿ “ಕೇರಿಂಗ್ ಫಾರ್ ಎ ಸೀನಿಯರ್” ವಾಕ್-ಎ-ಥಾನ್ ಅನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವು ಸುಮಾರು 500 ಹಿರಿಯ ವ್ಯಕ್ತಿಗಳ ಉತ್ಸಾಹಪೂರ್ಣ ಭಾಗವಹಿಸುವಿಕೆಗೆ ಸಾಕ್ಷಿಯಾಗಿದ್ದು, ಎಲ್ಲರೂ ಹಿರಿಯ ನಾಗರಿಕರ ಕಲ್ಯಾಣ ಮತ್ತು ಘನತೆಯನ್ನು ಪ್ರತಿಪಾದಿಸಲು ಒಗ್ಗೂಡಿದ್ದರು. ವೈವಿಧ್ಯಮಯ ಸ್ವಯಂಸೇವಕರು, ಕಾರ್ಪೊರೇಟ್ ಉದ್ಯೋಗಿಗಳು, ಕಾಲೇಜು ವಿದ್ಯಾರ್ಥಿಗಳು ಮತ್ತು ಸಮುದಾಯದ ಸದಸ್ಯರನ್ನು ಒಟ್ಟುಗೂಡಿಸಿದ್ದ ಈ ವಾಕ್-ಎ-ಥಾನ್ ಕಾರ್ಯಕ್ರಮವು ಬೆಳಿಗ್ಗೆ 6:00 ಗಂಟೆಗೆ ಪ್ರಾರಂಭವಾಗಿ ಅದ್ಭುತ ಯಶಸ್ಸನ್ನು ಕಂಡಿತು ಹಾಗೂ ಎಲ್ಲರೂ ‘ಹಿರಿಯರ ಆರೈಕೆ’ ಎನ್ನುವ ಒಂದೇ ಹಂಚಿಕೊಂಡ ಉದ್ದೇಶವನ್ನು ಹೊಂದಿ ನಡಿಗೆಯಲ್ಲಿ.ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಹೆಮ್ಮೆಯಿಂದ ಸ್ಮರಣಾರ್ಥ ಟಿ-ಶರ್ಟ್‌ಗಳು ಮತ್ತು ಕ್ಯಾಪ್‌ಗಳನ್ನು ಧರಿಸಿ, ಬೆಂಗಳೂರಿನ ರಮಣೀಯ ಮಾರ್ಗಗಳ ಹಾದಿಗಳಲ್ಲಿ ನಡಿಗೆಯ ಪ್ರಯಾಣವನ್ನು ಪ್ರಾರಂಭಿಸಿದರು. ಈ ಕಾರ್ಯಕ್ರಮವು ಕೇವಲ ದೈಹಿಕ ಚಟುವಟಿಕೆಗಿಂತ ಹೆಚ್ಚಿನ ಉದ್ದೇಶವನ್ನು ಹೊಂದಿತ್ತು; ಇದು ಐಕಮತ್ಯ, ಸಹಾನುಭೂತಿ ಮತ್ತು ಸಮುದಾಯ ಮನೋಭಾವದ ಪ್ರಬಲ ಪ್ರದರ್ಶನವಾಗಿತ್ತು. ಹಿರಿಯ ನಾಗರಿಕರು ಎದುರಿಸುತ್ತಿರುವ ಅನನ್ಯ ಅಗತ್ಯತೆಗಳು ಮತ್ತು ಸವಾಲುಗಳನ್ನು ಪರಿಗಣಿಸಲು ವಾಕ್-ಎ-ಥಾನಿನಲ್ಲಿ ಭಾಗವಹಿಸುವವರು ಮತ್ತು ನೋಡುಗರನ್ನು ಸಮಾನವಾಗಿ ಒತ್ತಾಯಿಸಿ, ಹಿರಿಯರ ಆರೈಕೆಯ ಪ್ರಾಮುಖ್ಯತೆಯನ್ನು ನಮಗೆ ನೆನಪಿಸಲು ಸಹಾಯ ಮಾಡಿತು.
ಹಮ್ಮಿಕೊಂಡಿದ್ದ ನಡಿಗೆಯ ಜೊತೆಗೆ, ಕಾರ್ಯಕ್ರಮವು ಸದರಿ ಅನುಭವವನ್ನು ಸ್ಮರಣೀಯ ಮತ್ತು ಪ್ರಭಾವಶಾಲಿಯಾಗಿ ಮಾಡುವ ಗುರಿಯನ್ನು ಹೊಂದಿರುವ ಹಲವಾರು ಮುಖ್ಯಾಂಶಗಳನ್ನು ಒಳಗೊಂಡಿತ್ತು. ಅವರ ಅಮೂಲ್ಯ ಕೊಡುಗೆಯ ಕಾರಣಕ್ಕಾಗಿ ಗುರುತಿಸಿ, ಪ್ರತಿಯೊಬ್ಬ ಭಾಗವಹಿಸಿದವರಿಗೂ ಮೆಚ್ಚುಗೆಯ ಪ್ರಮಾಣಪತ್ರವನ್ನು ನೀಡಲಾಯಿತು. ಇದರಲ್ಲಿ ಭಾಗವಹಿಸಿದ್ದವರು ಶಕ್ತಿಯುತವಾಗಿರುವಂತೆ ಹಾಗೂ ತಮ್ಮನ್ನು ನಡಿಗೆಯಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮದ ಉದ್ದಕ್ಕೂ ಪೂರಕ ಉಪಹಾರಗಳು ಲಭ್ಯವಿದ್ದವು, ಇದರಿಂದಾಗಿ ಭಾಗವಹಿಸುವವರ ನಡುವೆ ಸೌಹಾರ್ದತೆ ಕಂಡಿದ್ದು ಹಂಚಿಕೆಯ ಉದ್ದೇಶವಾದ ಹಿರಿಯ ಸದಸ್ಯರ ಯೋಗಕ್ಷೇಮದ ಬಗ್ಗೆ ಸಮುದಾಯವು ಹೊಂದಿರುವ ಕಾಳಜಿಯ ಮೇಲೆ ಬೆಳಕು ಚೆಲ್ಲುತ್ತದೆ.

ಸದರಿ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ತಿಳಿಸುತ್ತಾ, ಅತುಲ್ಯ ಸಂಸ್ಥೆಯ ಹಿರಿಯ ಆರೈಕೆಯ ಸಂಸ್ಥಾಪಕಿ ಹಾಗೂ ನಿರ್ದೇಶಕಿಯಾದ ಶ್ರೀಮತಿ ಜೆ ಕೃಷ್ಣ ಕಾವ್ಯ ಅವರು ತಮ್ಮ ಆಲೋಚನೆಗಳನ್ನು ಹಂಚಿಕೊಂಡರು: “ಇಂದಿನ ವಾಕ್-ಎ-ಥಾನ್‌ನಲ್ಲಿ ಕಂಡಿರುವ ಅಗಾಧ ಭಾಗವಹಿಸುವಿಕೆಯು ನಮ್ಮ ಸಮುದಾಯದಲ್ಲಿ ವೃದ್ಧರ ಆರೈಕೆಯ ಬಗ್ಗೆ ಹೆಚ್ಚುತ್ತಿರುವ ಜಾಗೃತಿ ಮತ್ತು ಕಾಳಜಿಯನ್ನು ತೋರಿಸುತ್ತದೆ. ಇಂದಿನ ಕಾರ್ಯಕ್ರಮವು ಅತುಲ್ಯ ಸಂಸ್ಥೆಯಲ್ಲಿ ಹಿರಿಯರ ವಿಮರ್ಶಾತ್ಮಕ ಅಗತ್ಯತೆಗಳ ಬಗ್ಗೆ ಜಾಗೃತಿ ಮೂಡಿಸಿ ಮತ್ತು ಸಮುದಾಯದ ಕ್ರಿಯೆಯ ಶಕ್ತಿಯನ್ನು ಎತ್ತಿ ತೋರಿಸಿದ್ದು ಅದರಿಂದಾಗಿ ಜನರನ್ನು ಒಟ್ಟುಗೂಡಿಸುವ ವೇದಿಕೆಗಳನ್ನು ರಚಿಸುವಲ್ಲಿ ನಾವು ನಂಬುತ್ತೇವೆ.
ಅತುಲ್ಯ ಸಂಸ್ಥೆಯವರಾದ ನಾವು ಸಮುದಾಯದ ಯೋಗಕ್ಷೇಮದ ಬಗ್ಗೆ ಆಳವಾದ ಕಾಳಜಿಯನ್ನು ಹೊಂದಿದ್ದೇವೆ, ವಿಶೇಷವಾಗಿ ನಮ್ಮ ಹಿರಿಯ ನಾಗರಿಕರಿಗಾಗಿ. ಅವರು ನಮ್ಮ ಕಾಳಜಿ ಮತ್ತು ಗೌರವಕ್ಕೆ ಅರ್ಹರು. ಈ ವಾಕ್-ಎ-ಥಾನ್ ಅನ್ನು ಹಮ್ಮಿಕೊಂಡಿರುವುದು ಕಾಳಜಿ ಮತ್ತು ಸಹಾನುಭೂತಿಯ ಸಂಸ್ಕೃತಿಯನ್ನು ಬೆಳೆಸಲು ನಾವು ಕೆಲಸ ಮಾಡುತ್ತಿರುವ ಹಲವಾರು ಮಾರ್ಗಗಳಲ್ಲಿ ಒಂದಾಗಿದೆ.
ಇದರಿಂದಾಗಿ ನಮ್ಮ ಹಿರಿಯರನ್ನು ಕೇವಲ ಕಾಳಜಿ ಮಾಡುವುದಕ್ಕಾಗಿ ಮಾತ್ರವಲ್ಲ, ಆದರೆ ಅವರನ್ನು ಗೌರವಿಸುವುದು ಹಾಗೂ ಅವರ ಮೌಲ್ಯತೆಯ ಬಗ್ಗೆ ವ್ಯಕ್ತಪಡಿಸುವುದು ಆಗಿರುತ್ತದೆ.”
ಅತುಲ್ಯ ಸೀನಿಯರ್ ಕೇರ್ ಅವರು ಸಮುದಾಯದ ಬಗ್ಗೆ ಹೊಂದಿರುವ ಹಾಗೂ ಆಳವಾಗಿ ಬೇರೂರಿರುವ ಕಾಳಜಿಯು, ಹಿರಿಯರು ಎದುರಿಸುತ್ತಿರುವ ವಿಶಿಷ್ಟ ಸವಾಲುಗಳನ್ನು ಪರಿಹರಿಸಲು ನಡೆಯುತ್ತಿರುವ ಪ್ರಯತ್ನಗಳಲ್ಲಿ ಪ್ರತಿಫಲಿಸುತ್ತದೆ. “ಕೇರಿಂಗ್ ಫಾರ್ ಎ ಸೀನಿಯರ್” ವಾಕ್-ಎ-ಥಾನ್ ಎಂಬುದು ಅತುಲ್ಯ ಅವರ ವಿಶಾಲ ಉಪಕ್ರಮದ ಒಂದು ಭಾಗವಾಗಿದ್ದು, ಸಮುದಾಯದ ಬಗ್ಗೆ ಅರಿವು ಮೂಡಿಸುವುದು, ಒಳಗೊಳ್ಳಿಸುವಿಕೆ ಹಾಗೂ ವೃದ್ಧರಿಗೆ ಬೆಂಬಲವನ್ನು ಉತ್ತೇಜಿಸುವ ಅರ್ಥಪೂರ್ಣ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ, ಅತುಲ್ಯ ಸಂಸ್ಥೆಯು ಬಲವಾದ ಸಮುದಾಯ ಬಂಧಗಳನ್ನು ನಿರ್ಮಿಸುವ ಹಾಗೂ ಹಿರಿಯರನ್ನು ಬೆಂಬಲಿಸುವ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದ್ದು ಸಮುದಾಯ ಜೀವನದ ಅವಿಭಾಜ್ಯ ಅಂಗವಾಗಿದೆ.
ಅತುಲ್ಯ ಸಂಸ್ಥೆಯ ಬದ್ಧತೆಯು ಈ ರೀತಿಯ ಕಾರ್ಯಕ್ರಮಗಳನ್ನು ಮೀರಿ ವಿಸ್ತರಿಸಿದೆ, ಏಕೆಂದರೆ ಸಂಸ್ಥೆಯು ಹಿರಿಯರಿಗೆ ಸಮಗ್ರ ಮತ್ತು ಸಹಾನುಭೂತಿಯ ಆರೈಕೆಯನ್ನು ನೀಡುವಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ವೈಯಕ್ತೀಕರಿಸಿದ ಆರೈಕೆ ಯೋಜನೆಗಳು, ನವೀನ ರೀತಿಯ ನೆರವನ್ನು ನೀಡುವ ಜೀವನ ಸೌಲಭ್ಯಗಳು ಹಾಗೂ ಆರೈಕೆ ಮಾಡುವವರ ಸಮರ್ಪಿತ ತಂಡವನ್ನು ಗಮನದಲ್ಲಿಟ್ಟುಕೊಂಡು, ಅತುಲ್ಯ ಸೀನಿಯರ್ ಕೇರ್ ಭಾರತದಲ್ಲಿ ಹಿರಿಯರ ಆರೈಕೆ ಮಾಡುವಲ್ಲಿ ಮುಂಚೂಣಿಯಲ್ಲಿದೆ. ಇಂದು ನಾವು ಕಂಡಿರುವ ವಾಕ್-ಎ-ಥಾನ್‌ನ ಅಭೂತಪೂರ್ವ ಯಶಸ್ಸು ಸಾಮೂಹಿಕ ಕ್ರಿಯೆಯು ಬೀರಬಹುದಾದ ಪ್ರಭಾವದ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ಹಿರಿಯರ ಜೀವನದ ಗುಣಮಟ್ಟವನ್ನು ಸುಧಾರಿಸುವ ತನ್ನ ಪ್ರಯತ್ನಗಳನ್ನು ಮುಂದುವರೆಸಲು ಅತುಲ್ಯ ಸಂಸ್ಥೆಯು ಸಮರ್ಪಿಸಿಕೊಂಡಿರುವುದನ್ನು ತೋರಿಸುತ್ತದೆ.
City Today News 9341997936

You must be logged in to post a comment.