ಮಕ್ಕಳಿಂದ ಕನ್ನಡ ನುಡಿಗೀತೆಗಳ ವಾಚನ, ಗಾಯನ ಹಾಗೂ ನೃತ್ಯ ನೀರಾಜನ, ರಂಗನಮನಮತ್ತುದೇಶಭಕ್ತಿಗೀತೆಗಳ ವಾಚನ ಸ್ಪರ್ಧೆಯ ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳ ವಿತರಣೆ

ಪರಂಪರಾ ಕಲ್ಚರಲ್‌ ಫೌಂಡೇಶನ್‌ (ರಿ.)

ನಾಡದೇವಿಗೆ ನಮನ
ಮಕ್ಕಳಿಂದ ಕನ್ನಡ ನುಡಿಗೀತೆಗಳ ವಾಚನ, ಗಾಯನ ಹಾಗೂ ನೃತ್ಯ ನೀರಾಜನ, ರಂಗನಮನ
ಮತ್ತು
ದೇಶಭಕ್ತಿಗೀತೆಗಳ ವಾಚನ ಸ್ಪರ್ಧೆಯ ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳ ವಿತರಣೆ

25 ನವೆಂಬರ್‌ 2023 ಶನಿವಾರ ಅಪರಾಹ್ನ 2.30ರಿಮದ ರಿಂದ 7.30
ನಯನ ಸಭಾಂಗಣ, ರವೀಂದ್ರ ಕಲಾಕ್ಷೇತ್ರದ ಆವರಣ, ಬೆಂಗಳೂರು

ವೇದಿಕೆಯಲ್ಲಿ
ಡಾ.ನಂದಿ ಸುಬ್ರಮಣಿ, ಮಾಲೀಕರು, ನಂದಿ ಪ್ರಿಂಟ್ಸ್‌, ಜಯನಗರ
ವೀರಕಪುತ್ರ ಶ್ರೀನಿವಾಸ್‌, ಎಂ.ಡಿ., ವೀರಲೋಕ ಬುಕ್ಸ್‌
ಡಿ.ಕೆ.ಸಣ್ಣಾನಾಯಕ್‌, ವಕೀಲರು
ಶ್ರೀ ಸಿ.ಲಕ್ಷ್ಮಣಮೂರ್ತಿ ಕಲ್ಕೆರೆ, ಸಮಾಜ ಸೇವಕರು
ಜಿ.ಎಸ್.ನಂಜುಂಡಸ್ವಾಮಿ, ಮಹಾಪೋಷಕರು, ಪರಂಪರಾ ಕಲ್ಚರಲ್‌ ಫೌಂಡೇಶನ್‌ (ರಿ.)
ಜಿ.ಪಿ.ರಾಮಣ್ಣ, ಅಧ್ಯಕ್ಷರು, ಪರಂಪರಾ ಕಲ್ಚರಲ್‌ ಫೌಂಡೇಶನ್‌ (ರಿ.)

ಭಾಗವಹಿಸುವ ಮಕ್ಕಳು
ವಸುಂಧರಾ ಡಿ.ಎಂ., ಮಂಗಳೂರು
ಮನಸ್ವಿ ಬಿ.ಎಂ., ತೀರ್ಥಹಳ್ಳಿ
ಪ್ರಥಮ್‌ ವಿ.ಶರ್ಮ., ಬೆಂಗಳೂರು
ಆದ್ಯಾ ನಾಡಿಗ್‌, ಬರೋಡಾ
ತನುಶ್ರೀ.ಪಿ., ಕುಂಸಿ, ಶಿವಮೊಗ್ಗ
ಶಮ್ಯ ಕೆ., ಕಾಸರಗೋಡು
ಅನನ್ಯ ವದನ. ಯು., ಬೆಂಗಳೂರು
ಸಂವೇದ್ಯಾ ಡಿ.ಭಟ್.‌, ಬೆಂಗಳೂರು
ಸಾನ್ವಿ ಎಸ್.ಜೋಯಿಸ್.‌, ಬೆಂಗಳೂರು
ವಿಶ್ರುತ್‌ ಎ.ಧನ್ಯ., ಮೈಸೂರು
ರಾಶಿ ಆರ್.ಪ್ರಭು., ತೀರ್ಥಹಳ್ಳಿ
ತೇಜಸ್ವಿನಿ ಜಿ., ಕುಂಸಿ, ಶಿವಮೊಗ್ಗ
ಸಿರಿ ಕೆ.ಪಿ., ಹಗರಿಬೊಮ್ಮನಹಳ್ಳಿ ಹಾಗೂ
ವಿದುಷಿ ಶ್ರೀಮತಿ ವಸುಂಧರಾ ಎನ್. ದೇವರಾಜ್‌ ಅವರ ರಾಜರಾಜೇಶ್ವರಿ ನಾಟ್ಯಶಾಲಾ ವಿದ್ಯಾರ್ಥಿಗಳು

ಪ್ರಸ್ತುತಿ : ಜಿ.ಮಧುಸೂದನ ನಾಯಕ

ಕಾರ್ಯಕ್ರಮದ ನಂತರ 6.30ಕ್ಕೆ
ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್‌ ಅರ್ಪಿಸುವ
ಡಾ.ಎಂ.ಬೈರೇಗೌಡ ಅಭಿನಯಿಸುವ
ಯಕ್ಷಾಲಾಪ
ಏಕವ್ಯಕ್ತಿ ನಾಟಕ ಪ್ರದರ್ಶನ

ನಿರ್ವಹಣೆ : ಏಣಗಿ ಪ್ರಭಾಕರ್‌

ಸಹಯೋಗ : ನಂದಿ ಪ್ರಿಂಟ್ಸ್‌, ನೀಲಿಮಾ ಪ್ರಕಾಶನ
ಸಹಕಾರ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಿಡುವು ಮಾಡಿಕೊಂಡು ಬನ್ನಿ

ಪರಂಪರಾ ಪರಿವಾರ
ಕೆ.ಪರಮಶಿವಂ, ಎಂ.ಶಶಿಧರ್ ಹೆಬ್ಸೂರ್, ಟಿ.ಎನ್.ಸಾಯಿಕುಮಾರ್, ಟಿ.ಆರ್.ರಮೇಶ್, ಪಿ.ಎಲ್.ರಮೇಶ್, ಎಸ್.ಆರ್.ಚಿದಾನಂದ, ಜಿ.ಮಧುಸೂಧನ ನಾಯಕ, ಎ.ಪ್ರಭಾಕರ್, ಡಾ.ಎಂ.ಭರತ್ ಭೂಷಣ್, ಬಿ.ಗಜೇಂದ್ರ, ಎಸ್.ಸುಧಾಕರ್, ಸಿ.ಪ್ರಸನ್ನ ಕುಮಾರ್, ಯು.ಬಿ.ಗಿರೀಶ್

ಜಿ ಪಿ ರಾಮಣ್ಣ
ಅಧ್ಯಕ್ಷರು

City Today News 9341997936

ಕರುನಾಡ ಜನಸ್ಪಂದನ ವೇದಿಕೆ ವತಿಯಿಂದ ಹೃದಯಸ್ಪರ್ಶಿ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಶಿಕ್ಷಕರ ಹಾಗೂ ಅಭಿಯಂತರರ ದಿನಾಚರಣೆ

ಕರುನಾಡ ಜನಸ್ಪಂದನ ವೇದಿಕೆ ವತಿಯಿಂದ ಹೃದಯಸ್ಪರ್ಶಿ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಶಿಕ್ಷಕರ ಹಾಗೂ ಅಭಿಯಂತರರ ದಿನಾಚರಣೆ ಅಂಗವಾಗಿ ಶಿಕ್ಷಕರಿಗೆ, ಅಭಿಯಂತರರಿಗೆ ಹಾಗೂ ಸಮಾಜ ಸೇವೆ ಮಾಡುತ್ತಿರುವ ಹಲವು ಗಣ್ಯರಿಗೆ ಅಭಿನಂದನಾ ಕಾರ್ಯಕ್ರಮವನ್ನು ನಗರದ ಜ್ಞಾನ ಸೌಧ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಬಿಬಿಎಂಪಿ ಮಾಜಿ ಸದಸ್ಯರಾದ ವಾಗೀಶ್, ಸಂಜೆ ಸಮಾಚಾರ್ ಪತ್ರಿಕೆಯ ಸಂಪಾದಕರಾದ ಬಿ.ಎ ಮಹೇಂದ್ರ ಹಾಗೂ ಆರ್ ಆರ್ ಪ್ರಸಾದ್ ರವರು ಉದ್ಘಾಟಿಸಿ ನಂತರ ಸನ್ಮಾನಿತರಿಗೆ ಸನ್ಮಾನಿಸಿ ಅಭಿನಂದಿಸಿದರು.

ಈ ವೇಳೆ ಮಾಜಿ ಬಿಬಿಎಂಪಿ ಸದಸ್ಯರಾದ ವಾಗೀಶ್ ಮಾತನಾಡಿ ಈ ಸಂಸ್ಥೆಗಳು ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸಲು ಈ ಸಂಸ್ಥೆಗಳ ಜೊತೆ ಸದಾ ನಾವು ಕೈಜೋಡಿಸುತ್ತೇವೆ ಎಂದು ಹೇಳಿದರು.

ಬಳಿಕ ಸಂಜೆ ಸಮಾಚಾರ್ ಪತ್ರಿಕೆಯ ಸಂಪಾದಕರಾದ ಬಿ.ಎ. ಮಹೇಂದ್ರ ಮಾತನಾಡಿ ಕರುನಾಡ ಜನಸ್ಪಂದನ ವೇದಿಕೆ ಈ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡು ಶಿಕ್ಷಕರು ಹಾಗೂ ಸಮಾಜಮುಖಿ ಕಾರ್ಯನಿರ್ವಹಿಸುತ್ತಿರುವ ಗಣ್ಯರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. 

ಮುಂಬರುವ ದಿನಗಳಲ್ಲಿ ಈ ಸಂಸ್ಥೆ ಉನ್ನತ ಮಟ್ಟಕ್ಕೆ ಏರಿ ಇನ್ನೂ ಹೆಚ್ಚು ಸಮಾಜಮುಖಿ ಕಾರ್ಯಗಳನ್ನು ನಿರ್ವಹಿಸಲಿ ಎಂದು ಹೇಳಿದರು.

ನಂತರ ಸಮಾಜ ಸೇವಕರಾದ ಆರ್.ಆರ್. ಪ್ರಸಾದ್ ಮಾತನಾಡಿ ಈ ಸಂಸ್ಥೆಗಳ ಕಾರ್ಯವೈಖರಿ ನಿಜಕ್ಕೂ ವಿಭಿನ್ನವಾಗಿದ್ದು ಪರಿಸರ ಸಂರಕ್ಷಣೆ, ಶಿಕ್ಷಣ ಹಾಗೂ ಸಮಾಜಮುಖಿ ಕಾರ್ಯಗಳ ಬಗ್ಗೆ ಒತ್ತು ನೀಡುತ್ತಿರುವುದು ನಿಜಕ್ಕೂ ಸಂತಸದ ವಿಷಯ ಎಂದು ಹೇಳಿದರು.

ಕರುನಾಡ ಜನಸ್ಪಂದನೆ ವೇದಿಕೆಯ ರಾಜ್ಯಾಧ್ಯಕ್ಷರಾದ ನಟರಾಜ್ ಬಿ.ಪಿ ಮಾತನಾಡಿ ಯಾರೇ ಒಬ್ಬ ವ್ಯಕ್ತಿಯ ಹಿಂದೆ ಗುರುವಿನ ಪರಿಶ್ರಮ ಇದ್ದೇ ಇರುತ್ತದೆ ತಾವೇನಾದರೂ ಇಂದು ಸಾಧಿಸುತ್ತಿದ್ದೇವೆ ಎಂದರೆ ಅದಕ್ಕೆ ಮೂಲಕಾರಣ ಶಿಕ್ಷಕರು ಅಂತಹ ಶಿಕ್ಷಕರನ್ನು ಸನ್ಮಾನಿಸಿ ಅಭಿನಂದಿಸುತ್ತಿರುವುದು ನಿಜಕ್ಕೂ ನಮಗೆ ಸಂತೋಷ ತಂದಿದೆ ಎಂದು ಹೇಳಿದರು.
ಹಿರಿಯ ಪತ್ರಕರ್ತರಾದ ಮೋಹನ್ ಕುಲಕರ್ಣಿ ಮಾತನಾಡಿ ಸಂಸ್ಥೆಗಳು ಹಲವು ಒಳ್ಳೆಯ ನಿರ್ವಹಿಸುತ್ತಿದ್ದು ಮುಂಬರುವ ದಿನಗಳಲ್ಲಿ ಈ ಸಂಸ್ಥೆಗಳೊಡನೆ ಕೈಜೋಡಿಸಿ ಕಾರ್ಯ ನಿರ್ವಹಿಸಲು ನಾನು ಸದಾ ಸಿದ್ಧನಾಗಿದ್ದೇನೆ ಎಂದು ಹೇಳಿದರು

ಈ ಕಾರ್ಯಕ್ರಮದಲ್ಲಿ ಕರುನಾಡ ಜನಸ್ಪಂದನ ವೇದಿಕೆ ಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ದಿಲೀಪ್ .ಆರ್, ಹೃದಯಸ್ಪರ್ಶಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷರಾದ ಸುರೇಶ್, ಹಿರಿಯ ಪತ್ರಕರ್ತರಾದ ಮೋಹನ್ ಕುಲಕರ್ಣಿ, ಖ್ಯಾತ ವಕೀಲರಾದ ಹರಿಪ್ರಸಾದ್, ಸಮಾಜ ಸೇವಕರಾದ ಗೀತಾ, ಭರತನಾಟ್ಯ ಶಿಕ್ಷಕರಾದ ಕಾವ್ಯ ದಿಲೀಪ್ ಸೇರಿದಂತೆ ಹಲವರು ಭಾಗವಹಿಸಿದ್ದರು.

City Today News

9341997936

72ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಸ್. ಸಿ. ಪಾಟೀಲ ವಕೀಲರು ನೆರವೇರಿಸಿದರು

ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ತಂತ್ರಜ್ಞಾನದ ನಿದೇ೯ಶಕರು ಹಾಗೂ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ಐಟಿಬಿಟಿ ಘಟಕದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲನಗೌಡ ಎಸ್. ಪಾಟೀಲ( M.Tech) ಕೋರವಾರ ಇವರು ಸುಧೀಘ೯ವಾಗಿ ಎಳೆ ಎಳೆಯಾಗಿ ಸವ೯ತಂತ್ರ ಸ್ವಾತಂತ್ರ್ಯ ಭಾರತದ ಸಂವಿಧಾನ ರಚನೆ ಹಾಗೂ ಅದರ ಮಹತ್ವವನ್ನು ಕುರಿತು ಮಾತನಾಡಿ ಸಮಸ್ತ ದೇಶದ ಜನತೆಗೆ 72ನೇ ಗಣರಾಜ್ಯೋತ್ಸವದ ಹಾದಿ೯ಕ ಶುಭಾಶಯಗಳನ್ನು ಕೋರಿದರು

ಮಂಗಳವಾರ ಬೆಳಿಗ್ಗೆ, ದಿನಾಂಕ 26ನೇ ಜನೇವರಿ 2021 ರಂದು, ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮದ ಶ್ರೀ ಹನುಮಾನ್ ವಿದ್ಯಾವರ್ಧಕ ಸಂಘದ ಶ್ರೀ ಎನ್. ಎಸ್. ಢವಳಗಿ ಸಂಯುಕ್ತ ಪದವಿ ಪೂವ೯ ಮಹಾವಿದ್ಯಾಲಯದಲ್ಲಿ, 72ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಸ್. ಸಿ. ಪಾಟೀಲ ವಕೀಲರು ನೆರವೇರಿಸಿದರು. ಸಭೆಯನ್ನು ಉದ್ದೇಶಿಸಿ ಗಣರಾಜ್ಯೋತ್ಸವವನ್ನು ಕುರಿತು, ಸಂಸ್ಥೆಯ ನಿದೇ೯ಶಕರು, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ತಂತ್ರಜ್ಞಾನದ ನಿದೇ೯ಶಕರು ಹಾಗೂ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ಐಟಿಬಿಟಿ ಘಟಕದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲನಗೌಡ ಎಸ್. ಪಾಟೀಲ( M.Tech) ಕೋರವಾರ ಇವರು ಸುಧೀಘ೯ವಾಗಿ ಎಳೆ ಎಳೆಯಾಗಿ ಸವ೯ತಂತ್ರ ಸ್ವಾತಂತ್ರ್ಯ ಭಾರತದ ಸಂವಿಧಾನ ರಚನೆ ಹಾಗೂ ಅದರ ಮಹತ್ವವನ್ನು ಕುರಿತು ಮಾತನಾಡಿ ಸಮಸ್ತ ದೇಶದ ಜನತೆಗೆ 72ನೇ ಗಣರಾಜ್ಯೋತ್ಸವದ ಹಾದಿ೯ಕ ಶುಭಾಶಯಗಳನ್ನು ಕೋರಿದರು.

ಶ್ರೀ ಹನುಮಾನ ವಿದ್ಯಾವರ್ಧಕ ಸಂಘದ ಶ್ರೀ ಎನ್. ಎಸ್. ಢವಳಗಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಆಡಳಿತ ಮಂಡಳಿ ಹಾಗೂ ಸಂಸ್ಥೆಯ ಸಿಬ್ಬಂದಿ ವಗ೯ ಅಧ್ಯಕ್ಷರ ನೇತ್ರೃತ್ವದಲ್ಲಿ ಮಲ್ಲನಗೌಡರಿಗೆ ಗೌರವ ಪೂರ್ವಕವಾದ ಸನ್ಮಾನ ವನ್ನು ಮಾಡಿದರು.

ಸಭೆಯಲ್ಲಿ ಸಂಸ್ಥೆಯ ನಿದೇ೯ಶಕರುಗಳಾದ ನಿಂಗನಗೌಡ ಸಿ ಪಾಟೀಲ ಹಾಗೂ ಹಿರಿಯರಾದ ನಿವ್ರೃತ್ತ ಶಿಕ್ಷಕ ನಾನಾಗೌಡ ಎಸ್ ಪಾಟೀಲ್, ಸಂಸ್ಥೆಯ ಕಾಯ೯ದಶಿ೯ ಶಿವಕಾಂತ ಎಸ್. ಚವ್ಹಾಣ, ಕಾಲೇಜಿನ ಪ್ರಾಚಾರ್ಯ ಎಸ್. ಜಿ. ಬಿರಾದಾರ, ಪ್ರೌಢಶಾಲೆ ನಿವ್ರೃತ್ತ ಮುಖ್ಯೋಪಾಧ್ಯಾಯ ಎಮ್. ಆರ್ ಚಿಂಚೋಳಿ, ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಎಸ್. ವಿ. ಜೋಶಿಯವರು ಸ್ವಾಗತಿಸಿದರು. ಉಪನ್ಯಾಸಕ ರಾದ ಎಮ್. ಆರ್. ಸಿರಸಂಗೀಮಠ ವಂದನಾಪ೯ಣೆ ಮಾಡಿದರು. ಉಪನ್ಯಾಸಕರುಗಳಾದ ಆಯ್. ಎಸ್. ವೀರಘಂಟೀಮಠ, ಎಸ್. ಎಸ್. ಮೋರಟಗಿ, ಎಸ್. ಬಿ. ಮಠ, ಅತಿಥಿ ಶಿಕ್ಷಕರುಗಳಾದ ಆರ್. ಎಚ್. ರಾಮನಳ್ಳಿ, ಎಮ್. ಆರ್. ಗುಂಡದ ಹಾಗೂ ಇನ್ನುಳಿದ ಸಿಬ್ಬಂದಿ ವಗ೯ & ಗ್ರಾಮದ ಮುಖಂಡರು, ವಿಧ್ಯಾರ್ಥಿಗಳು ಗಣರಾಜ್ಯೋತ್ಸವ ಆಚರಣೆಯಲ್ಲಿ ಉಪಸ್ಥಿತರಿದ್ದರು.

ಪ್ರತಿಭಾವಂತ ವಿದ್ದಾಥಿ೯ಗಳಿಗೆ ಪ್ರತಿಭಾ ಪುರಸ್ಕಾರವನ್ನು ಕೈಗೊಂಡರು.

City Today News
9341997936