ಬೆಂಗಳೂರಿನ ನಿಮಾನ್ಸ್ ಕನ್‌ವೆಷನ್‌ ಸೆಂಟರ್‌ನಲ್ಲಿ ಜೈನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ಮತ್ತು ಐ.ಟಿ. ವತಿಯಿಂದ ಇಗ್‌ನಿಟ್ಸ್ (IGNITUS) ಸಮಾವೇಶ

ಬೆಂಗಳೂರು : ಜೈನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ಮತ್ತು ಐ.ಟಿ. ವತಿಯಿಂದ ಇಗ್‌ನಿಟ್ಸ್ (IGNITUS) ಸಮಾವೇಶವನ್ನು ಬೆಂಗಳೂರಿನ ನಿಮಾನ್ಸ್ ಕನ್‌ವೆಷನ್‌ ಸೆಂಟರ್‌ನಲ್ಲಿ ಆಯೋಜಿಸಲಾಗಿತ್ತು.

ಈ ಸಮಾವೇಶವನ್ನು ಜಿ.ಇ ಹೆಲ್ತ್ ಕೇರ್ ನ ನಿರ್ದೇಶಕರಾದ ರಾಮ್ ಕುಮಾರ್ ರಾಮಚಂದ್ರನ್, ಜೈನ್ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಚನ್ನರಾಜ್ ರಾಯ್ ಚಂದ್, ಜೈನ್ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ.ರಾಜ್ ಸಿಂಗ್, ಕ್ಯಾಪ್ ಜಿಮಿನಿ ಹಿರಿಯ ನಿರ್ದೇಶಕರಾದ ಮೈಕ್ ಮುರಳಿ, ಜೈನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ಮತ್ತು ಐ.ಟಿ. ವಿಭಾಗದ ಮುಖ್ಯಸ್ಥರಾದ ಡಾ ಅರ್. ಸುಚಿತ್ರ, ರಾಪರ್ ಚಂದನ್ ಶೆಟ್ಟಿ ರವರು ಉದ್ಘಾಟಿಸಿದರು. ಈ ವೇಳೆ 15 ಅತ್ಯಂತ ಪ್ರಭಾವಶಾಲಿ ಶಿಕ್ಷಣ ತಜ್ಞರು, ಸಿಇಓಗಳು ಸಹ ಸಂಸ್ಥಾಪಕರು ಮತ್ತು ಸೆಲೆಬ್ರಿಟಿಗಳು ತಮ್ಮ ಜ್ಞಾನ ಮತ್ತು ಅನುಭವಗಳನ್ನು ಈ ಸಮಾವೇಶದಲ್ಲಿ ಹಂಚಿಕೊಂಡರು. ಈ ವೇಳೆ ಜೈನ್ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಚನ್ನರಾಜ್ ರಾಯ್ ಚಂದ್ ರವರು ಮಾತನಾಡಿ ವಿದ್ಯಾರ್ಥಿಗಳಲ್ಲಿರುವ ಕೌಶಲ್ಯಗಳನ್ನು ಹೆಚ್ಚಿಸಿ ಅವರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು. ನಂತರ ಮೈಕ್ ಮುರಳಿ ರವರು ಮಾತನಾಡಿ ಈ ಸಮಾವೇಶದಲ್ಲಿ ನಾನು ಭಾಗವಹಿಸಿರುವುದು ನಿಜಕ್ಕೂ ಸಂತೋಷವಾಗಿದೆ ಏಕೆಂದರೆ ಇದು ಬರೀ ಸಮಾವೇಶವಲ್ಲ ಒಳ್ಳೆಯ ಅನುಭವ ನೀಡುವ ವೇದಿಕೆಯಾಗಿದ್ದು ವಿದ್ಯಾರ್ಥಿಗಳೊಂದಿಗೆ ನಾನು ಕೂಡ ಹೊಸ ವಿಷಯಗಳನ್ನು ಕಲಿಯುವ ಸಂದರ್ಭ ದೊರೆತಿದೆ. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹಾಗೂ ಕಿಚ್ಚನ್ನು ಹೊರಹೊಂಬುವ ಒಂದು ಒಳ್ಳೆಯ ಕಾರ್ಯಕ್ರಮವನ್ನು ಜೈನ್ ವಿಶ್ವವಿದ್ಯಾಲಯ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಬಳಿಕ ಡಾ ಅರ್. ಸುಚಿತ್ರ ರವರು ಮಾತನಾಡಿ ಈ ಸಮಾವೇಶದ ಮೂಲ ಉದ್ದೇಶವೇನೆಂದರೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರು ಈ ವೇದಿಕೆ ಮುಖೇನ ತಮ್ಮ ಸಾಧನೆಯ ಸ್ಪೂರ್ತಿದಾಯಕ ಅನುಭವಗಳನ್ನು ಹಂಚಿಕೊಳ್ಳುವುದರಿಂದ  ವಿದ್ಯಾರ್ಥಿಗಳು ತಮ್ಮ ಜೀವವನ್ನು ರೂಪಿಸಿಕೊಳ್ಳಲು ನೆರವಾಗಲಿದೆ ಎಂದರು.

City Today News – 9341997936

ಧಾರವಾಡದಲ್ಲಿ ರಾಜ್ಯಮಟ್ಟದ ಅತಿಥಿ ಉಪನ್ಯಾಸಕರ ಶೈಕ್ಷಣಿಕ ಸಮಾವೇಶ ಮತ್ತು ಅಭಿನಂದನಾ ಸಮಾರಂಭ

ಬೆಂಗಳೂರು 28/11/2022: ಧಾರವಾಡದ ಕೆಸಿಡಿ ಆವರಣದಲ್ಲಿ ದಿನಾಂಕ 30 ನವೆಂಬರ್ 2022 ರಂದು ರಾಜ್ಯ ಮಟ್ಟದ ಅತಿಥಿ ಉಪನ್ಯಾಸಕರ ಶೈಕ್ಷಣಿಕ ಸಮಾವೇಶ ಮತ್ತು ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸ.ಪ್ರದ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ (ರಿ)ಬೆಂಗಳೂರು ರಾಜ್ಯಾಧ್ಯಕ್ಷರಾದ ಡಾ.ಹನುಮಂತಗೌಡ ಆರ್.ಕಲ್ಮನಿ ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಶೈಕ್ಷಣಿಕ ಸಮಾವೇಶದ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರಾದ ಮಾನ್ಯ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಉದ್ಘಾಟಕರಾಗಿ ಆಗಮಿಸುವರು, ಮಾಜಿ ಸಭಾಪತಿಗಳು, ವಿಧಾನ ಪರಿಷತ್ತಿನ ಹಿರಿಯ ಸದಸ್ಯರಾದ ಮಾನ್ಯ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿಗಳು ಶಾಸಕರಾದ ಜಗದೀಶ್ ಶೆಟ್ಟರ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ, ಶಾಸಕ ಅರವಿಂದ ಬೆಲ್ಲದ, ಶಾಸಕ ಅಮೃತ್ ದೇಸಾಯಿ, ಶಾಸಕ ಪ್ರಸಾದ ಅಬ್ಬಯ್ಯ ವಿಶೇಷ ಆಮಂತ್ರಿತರಾಗಿ ಪಾಲ್ಗೊಳ್ಳುವರು.ಸ.ಪ್ರದ.ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷರಾದ ಡಾ.ಹನುಮಂತಗೌಡ ಆರ್.ಕಲ್ಮನಿ ಸಮಾವೇಶದ ಆಶಯ ನುಡಿ ಹೇಳುವರು.

ಸಮಾವೇಶದಲ್ಲಿ, ವಿಧಾನ ಪರಿಷತ್ತಿನ ಹಿರಿಯ ಸದಸ್ಯರಾದ ಅಯನೂ‌ರ್ ಮಂಜುನಾಥ, ಪ್ರಕಾಶ ಹುಕ್ಕೇರಿ, ಪುಟ್ಟಣ್ಣನವರು, ಎಸ್‌.ವಿ.ಸಂಕನೂರು, ಹನಮಂತ ಆರ್.ನಿರಾಣಿ, ಮರಿತಿಬ್ಬೆಗೌಡರು, ವಾಯ್.ಎ.ನಾರಾಯಣಸ್ವಾಮಿ, ಶಶಿಲ ಜಿ.ನಮೋಶಿ, ಎಸ್.ಎಲ್.ಮೋಜಿಗೌಡ, ಚಿದಾನಂದ ಎಂ.ಗೌಡ, ಚಂದ್ರಶೇಖರ ಪಾಟೀಲ, ಮಧು ಮಾದೇಗೌಡ, ಎ.ದೇವೆಗೌಡ, ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ರಶ್ಮಿ ಮಹೇಶ್ ಭಾ.ಆ.ಸೇ, ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರಾದ ಪ್ರದೀಪ್.ಪಿ ಭಾ.ಆ.ಸೇ, ಕವಿವಿ ಕುಲಪತಿಗಳಾದ ಡಾ.ಕೆ.ಬಿ.ಗುಡಿಸಿ, ಕೆಸಿಡಿ. ಕಾಲೇಜಿನ ಪ್ರಾಚಾರ್ಯ ಡಾ.ಡಿ.ಬಿ. ಕರಿಡೋಣಿ, ಧಾರವಾಡ, ಕಸಾಪ ಜಿಲ್ಲಾಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಹಿರಿಯ ಶಿಕ್ಷಣ ತಜ್ಞರಾದ ಡಾ.ಆರ್.ಎಂ.ಕುಬೇರಪ್ಪನವರು, ಬಸವರಾಜ ಗುರಿಕಾರ, ರಾಘು ಅಕ್ಕಂಜಿ, ರಾಜ್ಯ ಸಪ್ರದ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಗೌರವಾಧ್ಯಕ್ಷರಾದ ಡಾ.ಟಿ.ದುರಗಪ್ಪ ಮತ್ತು ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಘಟಕದ ಎಲ್ಲಾ ಪದಾಧಿಕಾರಿಗಳು ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು, ರಾಜ್ಯದ ಸಮಸ್ತ ಅತಿಥಿ ಉಪನ್ಯಾಸಕರು ಶೈಕ್ಷಣಿಕ ಸಮಾವೇಶದಲ್ಲಿ ಪಾಲ್ಗೊಳ್ಳುವರೆಂದು ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷರಾದ ಡಾ.ಹನುಂತಗೌಡ ಆರ್.ಕಲ್ಮನಿ ಹೇಳಿದರು.

ಪ್ರಧಾನ ಕಾರ್ಯದರ್ಶಿ ಡಾ.ಪೀಟರ್ ವಿನೋದ ಚಂದ, ಡಾ.ಚಂದ್ರಶೇಖರ್, ಹಾಳನ್ನವರ್ ಮತ್ತು ಡಾ.ಚನ್ನಬಸಪ್ಪ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತಿಯಿದ್ದರು .

City Today News – 9341997936