ವಿಶ್ವ ತಲೆ ಗಾಯ ತಿಳುವಳಿಕೆ ದಿನಾಚರಣೆಯಂದು ಹೊಸ ಸವಾರರು #pledgetoridesafely ಮಾಡಬೇಕೆಂದು ಫೋರ್ಟೀಸ್ ಬೆಂಗಳೂರು ವಿನಂತಿಸಿಕೊಂಡಿದೆ

55 ಹೊಸ ಸವಾರರಿಗೆ ಹೆಲ್ಮೆಟ್‌ಗಳನ್ನು ವಿತರಿಸಲಾಯಿತು ಮತ್ತು ಸುರಕ್ಷಿತ ಸವಾರಿಗಾಗಿ ಪ್ರತಿಜ್ಞೆ ಮಾಡಲು ಪ್ರತಿಜ್ಞೆ
ಪ್ರಮಾಣಪತ್ರವನ್ನು ವಿತರಿಸಲಾಯಿತು

ಬೆಂಗಳೂರು, ಮಾರ್ಚ್ 18, 2021: ವಿಶ್ವ ತಲೆ ಗಾಯ ತಿಳುವಳಿಕೆ ದಿನಾಚರಣೆ ಪೂರ್ವವಾಗಿ ಬೆಂಗಳೂರಿನ ಫೋರ್ಟೀಸ್ ಆಸ್ಪತ್ರೆ Gaadilicence.com ಸಹಯೋಗದೊಂದಿಗೆ ಹೊಸ ಸವಾರರಿಗೆ ಸುರಕ್ಷಿತವಾಗಿ ಸವಾರಿ ಮಾಡುವ ಪ್ರತಿಜ್ಞೆ ಮಾಡಿರುವ ಹೊಸ ಕ್ರಮವನ್ನು ಚಾಲನೆಗೊಳಿಸಿದೆ. ಈ ಕ್ರಮದ ಅಂಗವಾಗಿ ಶ್ರೀ ಎಮ್.ನಾರಾಯಣ್, ಡಿಸಿಪಿ ಸಂಚಾರ (ಪೂರ್ವ) ಹಾಗೂ ಫೋರ್ಟೀಸ್ ಆಸ್ಪತ್ರೆಯ ಪ್ಯಾನಲಿಸ್ಟ್‌ಗಳಾದ ನ್ಯೂರೋ ಸರ್ಜರಿ ಹೆಚ್ಚುವರಿ ನಿರ್ದೇಶಕ – ಡಾ. ಸತೀಶ್ ಎಸ್, (ಫೋರ್ಟೀಸ್ ಆಸ್ಪತ್ರೆ, ಬನ್ನೇರ್‌ಘಟ್ಟ ರಸ್ತೆ) ಮತ್ತು ಫೋರ್ಟೀಸ್ ಆಸ್ಪತ್ರೆ ಬೆಂಗಳೂರಿನ ಜೋನಲ್ ಡೈರೆಕ್ಟರ್ ಡಾ. ಮನೀಶ್ ಮಾಟ್ಟೂ ಹಾಗೂ ಗಾಡಿಲೈಸನ್ಸ್ ಸಹ-ಸಂಸ್ಥಾಪಕ ಸಾಗರ್ ಜಲಿಹಾಳಮಠ ಅವರುಗಳು ಜೊತೆ ಸೇರಿ ಪತ್ರಿಕಾ ಗೋಷ್ಠಿಯೊಂದನ್ನು ಏರ್ಪಡಿಸಿದ್ದರು.

ಹೆಲ್ಮೆಟ್ ಧರಿಸದವರಿಗೆ ಉಚಿತ ಹೆಲ್ಮೆಟ್ ಒದಗಿಸುತ್ತಾ ಹೆಲ್ಮೆಟ್ ಧರಿಸುವ ಪ್ರಾಮುಖ್ಯತೆಯನ್ನು ಇದೀಗ ನಾಲ್ಕನೇ ವರ್ಷದಂದು ಸತತವಾಗಿ ಫೋರ್ಟೀಸ್ ಆಸ್ಪತ್ರೆ ಜನರಿಗೆ ಮಾರ್ಗದರ್ಶನ ನೀಡುತ್ತಿದೆ. ಗುರುವಾರದಂದು ತಮ್ಮ ಡ್ರೈವಿಂಗ್ ಲೈಸನ್ಸ್ ಪಡೆದಿರುವ ಸುಮಾರು 55 ಅಭ್ಯರ್ಥಿಗಳಿಗೆ #pledgetoridesafely ಪೂರ್ತಿಗೊಳಿಸುವುದಕ್ಕಾಗಿ ಪ್ರತಿಜ್ಞಾ ಪ್ರಮಾಣಪತ್ರ ಜೊತೆಗೆ ಹೆಲ್ಮೆಟ್‌ಗಳನ್ನು ನೀಡಲಾಯಿತು. ಡ್ರೈವಿಂಗ್ ಸ್ಕೂಲ್ ಸಂಚಾಲಕರಾದ GaadiLicense.com ಜೊತೆಗೆ ಸಹಯೋಗ ಮಾಡಿಕೊಳ್ಳುತ್ತಾ ಈ ಪ್ರಚಾರ ಆಂಧೋಲನವನ್ನು ಜಾರಿಗೊಳಿಸಲಾಗಿದೆ. ಹೆಲ್ಮೆಟ್ ಧರಿಸುವ ಪ್ರಾಮುಖ್ಯತೆ ಮತ್ತು ಸುರಕ್ಷಿತವಾಗಿ ಸವಾರಿ ಮಾಡುವುದರ ಕುರಿತಾಗಿ ಜನರಲ್ಲಿ ತಿಳುವಳಿಕೆ ಹೆಚ್ಚಿಸುವುದಕ್ಕಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ನ್ಯೂರೋ ಸರ್ಜರಿ – ಹೆಚ್ಚುವರಿ ನಿರ್ದೇಶಕ ಡಾ. ಸತೀಶ್ ಹೀಗೆ ಹೇಳಿದ್ದಾರೆ, “ಜಗತ್ತಿನಲ್ಲೇ ಅತಿ ಹೆಚ್ಚು ತಲೆ ಗಾಯಗಳು ಭಾರತದಲ್ಲಿ ಆಗುತ್ತಿವೆ ಎಂದು ತಿಳಿದು ಬಂದಿದೆ. ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋದ ಇತ್ತೀಚಿನ ಮಾಹಿತಿಗಳ ಪ್ರಕಾರ ಅತಿ ವೇಗದ ಕಾರಣದಿಂದಾಗಿ ರಸ್ತೆ ಅಪಘಾತ ಮರಣಗಳು ಉಂಟಾಗುವ ಪಟ್ಟಿಯಲ್ಲಿ ಕರ್ನಾಟಕ ಪ್ರಪ್ರಥಮ ಸ್ಥಾನದಲ್ಲಿದೆ. ರಸ್ತೆ ಅಪಘಾತದಿಂದಾಗಿ ತಲೆಗೆ ಗಾಯವಾಗುತ್ತಿರುವುದು ತಂಬಾ ಚಿಂತೆಯ ವಿಚಾರವಾಗಿದೆ. ಪ್ರತಿ 6 ರಲ್ಲಿ 1 ರೋಗಿ ತಲೆ ಗಾಯದಿಂದಾಗಿ ಸಾಯುತ್ತಾನೆ ಎಂದು ತಿಳಿದು ಬಂದಿದೆ. ಒಂದು ವೇಳೆ ಸವಾರರು ಹೆಲ್ಮೆಟ್ ಧರಿಸಿದಲ್ಲಿ ತಲೆ ಗಾಯದಿಂದಾಗಿ ಉಂಟಾಗುವ ಅನೇಕ ಮರಣಗಳನ್ನು ತಡೆಗಟ್ಟಬಹುದು ಎಂದು ಕಂಡು ಬಂದಿದೆ. ಆದ್ದರಿಂದ, ಹೆಲ್ಮೆಟ್ ಧರಿಸುವ ಪ್ರಾಮುಖ್ಯತೆ ಬಗ್ಗೆ ತಿಳಿವಳಿಕೆ ಹೆಚ್ಚಿಸುವುದು ಅತ್ಯಂತ ಅಗತ್ಯವಾಗಿದೆ. ಇದರಿಂದಾಗಿ ಜನರು ತಮ್ಮ ತಲೆಗೆ ಗಾಯವಾಗುವುದನ್ನು ತಪ್ಪಿಸಬಹುದು ಮತ್ತು ಸುರಕ್ಷಿತವಾಗಿ ಸವಾರಿ ಮಾಡಬಹುದಾಗಿದೆ.”

ಬೆಂಗಳೂರಿನ ಫೋರ್ಟೀಸ್ ಆಸ್ಪತ್ರೆಯ ಜೋನಲ್ ಡೈರೆಕ್ಟರ್ ಡಾ. ಮನಿಶ್ ಮಾಟ್ಟೂ ಅವರು ಹೀಗೆ ಹೇಳಿದ್ದಾರೆ, “ಫೋರ್ಟೀಸ್ ಆಸ್ಪತ್ರೆಯಲ್ಲಿ ನಾವು ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ರಸ್ತೆ ಸುರಕ್ಷೆ ಬಗ್ಗೆ ಸಂದೇಶ ಸಾರುತ್ತಿದ್ದೇವೆ. ಈ ಕ್ರಮದ ಮೂಲಕ ಜನರು ಸುರಕ್ಷಿತವಾಗಿ ಸವಾರಿ ಮಾಡುತ್ತಾ ತಮ್ಮ ತಲೆಗೆ ಗಾಯವಾಗುವುದನ್ನು ತಪ್ಪಿಸುವುದಕ್ಕಾಗಿ ಹೆಲ್ಮೆಟ್ ಧರಿಸುವ ಪ್ರಾಮುಖ್ಯತೆ ಬಗ್ಗೆ ನಾವು ಜನರಿಗೆ ಶಿಕ್ಷಣ ನೀಡಲು ಬಯಸುತ್ತೇವೆ. ಈ ಆಂಧೋಲನವು ಹೊಸ ಸವಾರರಿಗೆ ಪ್ರಭಾವ ಬೀರಬಹುದು ಮತ್ತು ಅವರು ರಸ್ತೆ ಸುರಕ್ಷೆ ಮಾರ್ಗದರ್ಶನಗಳನ್ನು ಇನ್ನಷ್ಟು ಉತ್ತಮವಾಗಿ ಪಾಲಿಸಬಹುದು ಎಂದು ನಾನು ನಂಬಿದ್ದೇನೆ.”

City Today News
9341997936