ದಿನಾಂಕ 22-11-2023 ರಂದು ಬೆಳಿಗ್ಗೆ 11:00ಗೆ ಕರ್ನಾಟಕದ ಪ್ರಜ್ಞಾವಂತರ ಅನುಭವ ಮಂಟಪ ವೇದಿಕೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಕಾರ್ಯಕ್ರಮ

ದಿನಾಂಕ 02.11.2023 ರಂದು ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನಾ ಸಮಯದಲ್ಲಿ ಶಿವಧ್ವಜಾರೋಹಣ ಮಾಡಿ ತಮ್ಮ ಆಶೀರ್ವಚನ ನೀಡಿದ ಸಾಣೇಹಳ್ಳಿ ಮಠಾಧೀಶರಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು “ವೇದಿಕೆ ಕಾರ್ಯಕ್ರಮಗಳಲ್ಲಿ ಅಥವಾ ಮನೆಗಳಲ್ಲಿ ಗಣೇಶನನ್ನು ವಿಘ್ನ ನಿವಾರಕನನ್ನಾಗಿ ಪೂಜಿಸುವುದು, ಪ್ರಾರ್ಥನೆ ಸಲ್ಲಿಸುವುದು ನಮ್ಮ ಸಂಸ್ಕೃತಿಯಲ್ಲ, ಅದರ ಬದಲು ವಾಸ್ತವಕ್ಕೆ ತಕ್ಕುದಾದ ವಚನಗಳನ್ನು ಪಠಿಸಬೇಕು” ಎಂದು ಕರೆಕೊಟ್ಟಿದ್ದರು. ಮುಂದುವರಿದು “ಗಣಪತಿಯನ್ನು ಸ್ತುತಿಸುವುದು ಮೌಡ್ಯದ ಆಚರಣೆ, ವಚನಗಳನ್ನು ಪ್ರಸ್ತುತಪಡಿಸುವುದು ನಿಜವಾದ ಪ್ರಾರ್ಥನೆ. ಕಾರ್ಯಕ್ರಮಗಳ ಆರಂಭದಲ್ಲಿ ವಚನಗಳನ್ನೂ ಹಾಡಬಹುದು ಎಂದು ತೋರಿಸಿದವರು ಶಿವಕುಮಾರ ಸ್ವಾಮೀಜಿ” ಎಂದು ತಿಳಿಸಿದ್ದರು. ಅಲ್ಲದೆ, “ಶರಣರ ಪ್ರಕಾರ ಸ್ವಸಾಮರ್ಥ್ಯ. ಉತ್ತಮ ನಡವಳಿಕೆ ಹೊಂದಿದವರೇ ನಿಜವಾದ ದೇವರು. ನಮ್ಮನ್ನು ನಾವು ನಂಬಬೇಕು. ಶರಣರ ಆಶಯಗಳಂತೆ ಬದುಕಬೇಕು. ಈ ನಿಟ್ಟಿನಲ್ಲಿ ಆತ್ಮಾವಲೋಕನ ಅಗತ್ಯ” ಎಂದು ಬಸವಾನುಯಾಯಿಗಳಿಗೆ ಮತ್ತು ಲಿಂಗಾಯತ ಧರ್ಮೀಯರಿಗೆ ಅರಿವು ಮೂಡಿಸುವ ಮತ್ತು ಶರಣರ ಹಾಗೂ ಅವರು ರಚಿಸಿದ ವಚನ ಸಾಹಿತ್ಯದ ಆಶೋತ್ತರಗಳನ್ನು ಪಾಲಿಸಲು ಕರೆಕೊಟ್ಟಿದ್ದರು.

ಶ್ರೀಗಳು ಶರಣ ಸಮೂಹಕ್ಕೆ ಕೊಟ್ಟ ಕರೆಯನ್ನು ತಪ್ಪಾಗಿ ಅರ್ಥೈಸಿ ವಿಶ್ವವಾಣಿ ದಿನಪತ್ರಿಕೆಯ ಸಂಪಾದಕರಾದ ಮಾನ್ಯ ವಿಶ್ವೇಶ್ವರ ಭಟ್ಟರು “ಉಪದ್ಯಾಪಿ, ಅನರ್ಥಕಾರೀ ಹೇಳಿಕೆ, ದೇವರ ಗೊಡವೆಗೆ ಹೋಗಬೇಡಿ, ಎಡಬಿಡಂಗಿ ಹೇಳಿಕೆ, ಚಲಾವಣೆಗೆ ಬರಲು ಈ ತರಹದ ಹೇಳಿಕೆ, ನಾಟಕ ಮಾಡಿಕೊಂಡಿರಿ ಇಂತಹ ಅಸಭ್ಯ ಮತ್ತು ಕೀಳು ಅಭಿರುಚಿಯ ಶಬ್ದಗಳನ್ನು ಉಪಯೋಗಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ತಾವು ಸಂಪಾದಿಸುವ ವಿಶ್ವವಾಣಿ ದಿನಪತ್ರಿಕೆಯಲ್ಲಿ ಬರಹಗಳನ್ನು ಪ್ರಕಟಿಸುವುದರ ಜೊತೆಗೆ ಮತ್ತೊಬ್ಬ ತಾನೇ ಅಪ್ಪಟ ಹಿಂದೂ ಕಾರ್ಯಕರ್ತನೆಂದು ಹೇಳಿಕೊಳ್ಳುವ ಶ್ರೀ ಪ್ರಶಾಂತ ಸಂಬರ್ಗಿ ಎನ್ನುವವರು ಸ್ವಾಮಿಗಳ ವಿರುದ್ಧ ಅನಗತ್ಯ ಪೋಲಿಸ್ ದೂರು ದಾಖಲಿಸಿ ಸಾಣೆ ಹಳ್ಳಿ ಶ್ರೀಗಳಿಗೆ ಜೀವ ಭಯವನ್ನುಂಟುಮಾಡುವ ಉದ್ಧಟತನವನ್ನು ಮಾಡಿರುತ್ತಾನೆ. ಈ ಇಬ್ಬರೂ ಮಹನೀಯರಿಗೆ ಲಿಂಗಾಯತ ಧರ್ಮದ ತತ್ವಾದರ್ಶಗಳ ಅರಿವು ಇದ್ದಂತಿಲ್ಲ. ಲಿಂಗಾಯತರ ಶಿವನಿಗೂ ಹಿಂದೂ ಧರ್ಮದಲ್ಲಿನ ಶಿವನಿಗೂ ಇರುವ ಮೂಲ ವ್ಯತ್ಯಾಸವೇ ತಿಳಿದಿಲ್ಲ ಮತ್ತು ತಿಳಿಯುವ ಪ್ರಯತ್ನವನ್ನೂ ಮಾಡದೆ ತಮಗೆ ತಿಳಿದಂತ ಹಾಗೂ ಮನಬಂದಂತೆ ಹೇಳಿಕೆ, ಅಂಕಣ ಬರಹ ಮತ್ತು ದೂರದರ್ಶನದಲ್ಲಿ ಹೇಳಿಕೆ ಕೊಡುವುದರ ಮೂಲಕ ಬಸವತತ್ವಾಧಾರಿತ ಲಿಂಗಾಯತ ಧರ್ಮದ ಗುರುಗಳಾದ ಹಾಗೂ ತಮ್ಮ ಧರ್ಮ ಪ್ರಸಾರದಲ್ಲಿ ತೊಡಗಿದ್ದ ಸಾಣೆಹಳ್ಳಿ ಮಠದ ಮಠಾಧೀಶರಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಘನತೆಗೆ ಕುಂದುಂಟು ಮಾಡಿದ್ದು, ಸಾರ್ವಜನಿಕವಾಗಿ ಅಪಮಾನಿಸಿದ್ದು ಅವರು

ಹೇಳದ ಮತ್ತು ಹೇಳಿದ ಮಾತುಗಳನ್ನು ತಿರುಚುವುದರ ಮೂಲಕ ಜನಸಾಮಾನ್ಯರಲ್ಲಿ ತಪ್ಪು ಅಭಿಪ್ರಾಯ ಉಂಟುಮಾಡುವ ಪ್ರಯತ್ನ ಮಾಡಿದ್ದಾರೆ, ಅಲ್ಲದೆ ಧರ್ಮಗಳ ಮಧ್ಯೆ ವೈಮನಸ್ಯ ಉಂಟಾಗುವಂತೆ ಪ್ರೇರೇಪಣೆ ಮಾಡುವ ಪ್ರಯತ್ನ ಮಾಡಿದ್ದಾರೆ. ಇವೆಲ್ಲವುಗಳ ಹೊರತಾಗಿ ಸಂವಿಧಾನಿಕ ಹಕ್ಕಾಗಿರುವ ತಮ್ಮ ಧರ್ಮದ ಪ್ರಚಾರದಲ್ಲಿದ್ದ ಸ್ವಾಮೀಜಿಗಳಿಗೆ ಅಡಚಣೆ ಮಾಡಿದ್ದಾರೆ. ಈ ಕಾರಣಕ್ಕಾಗಿ ಲಿಂಗಾಯತ ಧರ್ಮೀಯರು ಹಾಗೂ ಬಸವತತ್ವಾನುಯಾಯಿಗಳು ಘಾಸಿಗೊಂಡಿದ್ದಾರೆ. ಆದುದರಿಂದ ನಾವುಗಳು ಇವರ ಈ ಹೇಳಿಕೆ ಮತ್ತು ಬರಹಗಳನ್ನು ಖಂಡಿಸುವುದರ ಜೊತೆಗೆ ಶ್ರೀ ವಿಶ್ವೇಶ್ವರ ಭಟ್ಟರು ಮತ್ತು ಶ್ರೀ ಪ್ರಶಾಂತ ಸಂಬರ್ಗಿ ಅವರುಗಳು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತಿದ್ದೇವೆ. ಅಲ್ಲದೆ, ನಮ್ಮ ರಾಜ್ಯ ಸರ್ಕಾರಕ್ಕೆ ಮನವಿ ಮಾಡುವುದೇನೆಂದರೆ, ಒಂದು ಧರ್ಮದ ಗುರುಗಳಿಗೆ ಅವಮಾನ ಮಾಡುವುದರ ಮೂಲಕ ಇಡೀ ಲಿಂಗಾಯತ ಸಮಾಜಕ್ಕೆ ಹಾಗೂ ಬಸವತತ್ವಕ್ಕೆ ಮಾಡಿರುವ ಇವರ ಈ ನಡವಳಿಕೆಯ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ.

ವಿಶೇಷ ಸೂಚನೆ:- ಬಸವ ತತ್ವದ ಮೇಲೆ ಮುಂದುವರೆದ ದಾಳಿಯನ್ನು ವಿರೋಧಿಸಿ ದಿನಾಂಕ 22-11-2023 ರಂದು ಬೆಳಿಗ್ಗೆ 11:00ಗೆ ಕರ್ನಾಟಕದ ಪ್ರಜ್ಞಾವಂತರ ಅನುಭವ ಮಂಟಪ ವೇದಿಕೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಗತಿಪರರು ಮತ್ತು ಬಸವಪರ ಸಂಘಟನೆಗಳ ಸದಸ್ಯರು ಭಾಗವಹಿಸಬೇಕಾಗಿ ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ವಿನಂತಿಸಿದರು.

City Today News 9341997936

ಕರ್ನಾಟಕದಾದ್ಯಂತ 2023-24 ನೇ ಸಾಲಿನ ಆಮ್ ಆದ್ಮ ಪಕ್ಷದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ದೆ ಮಾಡಿರುವಂತಹ 100 ಕ್ಕೂ ಹೆಚ್ಚು ಅಭ್ಯರ್ಥಿಗಳು ಆಮ್‌ ಆದ್ಮ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಕರ್ನಾಟಕದಾದ್ಯಂತ 2023-24 ನೇ ಸಾಲಿನ ಆಮ್ ಆದ್ಮ ಪಕ್ಷದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ದೆ ಮಾಡಿರುವಂತಹ 100 ಕ್ಕೂ ಹೆಚ್ಚು ಅಭ್ಯರ್ಥಿಗಳು ಆಮ್‌ ಆದ್ಮ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವ ಬಗ್ಗೆ ಪತ್ರಿಕಾ ಗೋಷ್ಠಿ

ಕರ್ನಾಟಕದಾದ್ಯಂತ 2023-24 ನೇ ಸಾಲಿನ ಆಮ್ ಆದ್ಮ ಪಕ್ಷದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ದೆ ಮಾಡಿರುವಂತಹ 100 ಕ್ಕೂ ಹೆಚ್ಚು ಅಭ್ಯರ್ಥಿಗಳು ಆಮ್‌ ಆದ್ಮ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವ ಬಗ್ಗೆ ಪತ್ರಿಕಾ ಗೋಷ್ಠಿ ಕರ್ನಾಟಕದಾದ್ಯಂತ ಆಮ್‌ಆದ್ಮ ಪಕ್ಷದಿಂದ 2023-24 ನೇ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವಂತಹ ಸುಮಾರು 100 ಕ್ಕೂ ಅಧಿಕ ಅಭ್ಯರ್ಥಿಗಳು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಮತ್ತು ಪ್ರಣಾಳಿಕೆಯನ್ನು ಒಪ್ಪಿ ಆಮ್‌ ಆದ್ಮ ಪಕ್ಷವನ್ನು ತೊರೆದು ಬೆಂಗಳೂರಿನ ಕಾಂಗ್ರೆಸ್ ಪಕ್ಷದ ಕೆ.ಪಿ.ಸಿ.ಸಿ ಪ್ರಧಾನ ಕಛೇರಿಯಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಮತ್ತು ಮಾನ್ಯ ಕೆ.ಪಿ.ಸಿ.ಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ರವರ ಅಧ್ಯಕ್ಷತೆಯಲ್ಲಿ ಹಾಗೂಚನ್ನಪಟ್ಟಣ ಕ್ಷೇತ್ರದ ಆಮ್‌ ಆದ್ಮ ಪಕ್ಷದಿಂದ ಸ್ಪರ್ಧೆ ಮಾಡಿದಂತಹ ಶ್ರೀ ಸಿ.ಪಿ. ಶರತ್‌ಚಂದ್ರ ನೇತೃತ್ವದಲ್ಲಿ ಆಮ್‌ಆದ್ಮ ಪಕ್ಷದ 100 ಕ್ಕೂ ಹೆಚ್ಚು ಎಂ.ಎಲ್.ಎ ಅಭ್ಯಥಿಗಳು ಮತ್ತು ಪಕ್ಷದ ಕಾರ್ಯಕರ್ತರು ಸ್ವ-ಇಚ್ಛೆಯಿಂದ ದಿನಾಂಕ: 19.11.2023 ಭಾನುವಾರದಂದು ಮಧ್ಯಾಹ್ನ 1.00 ಗಂಟೆಗೆ ಬೆಂಗಳೂರಿನ ಕೆ.ಪಿ.ಸಿ.ಸಿ ಪ್ರಧಾನ ಕಛೇರಿ, ಕ್ಲೀನ್ಸ್‌ ರೋಡ್‌ನಲ್ಲಿ ಅಧಿಕೃತವಾಗಿ ಪಕ್ಷ ಸೇರ್ಪಡೆಗಿಳ್ಳುತಿರುವುದಾಗಿ ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಲಾಯಿತು.

1) ಸಿ.ಪಿ. ಶರತ್ ಚಂದ್ರ- ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ – 185

2) ನೂರಅಹಮ್ಮದ್ ಕುತುಬುದ್ದಿನ್ ಮುಲ್ಲಾ – ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರ-12

3) ಮಲ್ಲಿಕ್‌ಜಾನ್ ಎಚ್. ನದಾಫ್ – ರಾಮದುರ್ಗ ವಿಧಾನಸಭಾ ಕ್ಷೇತ್ರ- 18

4) ನೇತ್ರಾವತಿ .ಟಿ – ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ- 113

5) ಡಾ. ಸುಭಾಷ್‌ಚಂದ್ರ ಸಂಬಾಜಿ – ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರ- 53

6) ರಜಾಕ್ ದಸ್ತಗೀರ್‌ಸಾಬ ಮುಲ್ಲಾ – ಕಾಗವಾಡ ವಿಧಾನಸಭಾ ಕ್ಷೇತ್ರ- 04

7) ಮಂಜುನಾಥ್ ಎಸ್.ಎಸ್ – ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ- 111

8) ರಾಮಣ್ಣ ಹೂವಣ್ಣನವರ – ನರಗುಂದ ವಿಧಾನಸಭಾ ಕ್ಷೇತ್ರ- 68

9) ಮಹಂತೇಶ ಸಿ.ಯು – ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ- 102

City Today News 9341997936

Harshavardhan is the driving force behind several projects in Nanjungud

Nanjangud: For Nanjungud taluk, November 28 is going to be a historical day. No fewer than seven development projects that would give the taluk a new dimension will get a big push when the Chief Minister, Mr. Basavaraj Bommai, formally lays the foundation for some and inaugurates others.

A team of ministers, along with Mr. Bommai, is expected to attend the programme on Monday, which is jointly organised by the Endowment Department, Water Resources Department, Karnataka Neeravari Nigama Limited, Social Welfare Department, Energy Department, and Directorate of Municipal Administration. The programme is set to begin at 10.30 a.m. on the premises of Srikanteshwara Temple in Nanjungud. The projects total around Rs 200 crore, according to Nanjungud MLA B Harshavardhan. Plans have been made to accommodate 8,000 people to witness the event. 

Some of the programmes scheduled are the groundbreaking ceremony for constructing a guesthouse with 75 rooms at a cost of Rs 16.52 crore for the benefit of visitors to the temple; Silver weighing 250 kgs will be purchased from a bank by the deputy commissioner towards constructing a silver chariot to the temple; the Rs 30 crore Yediyala project, which aims at filling 13 tanks; a 66/11 kV power sub-station worth Rs 8 crore in Goluru; and the inauguration of Nayaka Samudaya Bhavan and Maharshi Valmiki Samudaya Bhavan in the town.

However, the key project that would get a boost is the Nugu Lift Irrigation Project. The project had remained on paper for 35 years. With MLA Harshavardhan’s understanding of the project’s importance, he pursued it tenaciously at the government level. The MLA has accomplished a task that could not be done even by seasoned politicians in the area.

“It is my dream to see that the villages that are lacking drinking water get the basic facility through the Nugu project. The tail-end area of about 10,000 acres and tanks in 40 villages would get drinking water facilities once the project is completed,” he says.

Harshavardhan, soon after assuming office in 2018, began pursuing the project. He had gotten a blueprint ready for the Nugu project and had requested the then chief minister, Mr. H. D. Kumaraswamy, to approve it. The funds were allocated in the 2019–20 budget. However, the funds were withdrawn during adverse situations like the floods and the COVID-19 pandemic period. But later, Harshavardhan was able to convince the then chief minister, Mr. BS Yediyurappa, to revive the project and also get Rs 80 crore sanctioned. The tender process for allocating the work has been completed. When Mr. Bommai formally launched the project, the work on the ground would begin.

City Today News – 9341997936

ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಬದಲ್ಲಿ ಸುಮಾರು 25 ಲಕ್ಷ ಕುಟುಂಭಗಳ ಸಾಲ ಮನ್ನಾ ಮಾಡಿರುತ್ತಾರೆ – ಕೂಡ್ಲಿಗೆರೆ ಟಿ. ಚಂದ್ರಶೇಖರ್

ರಾಜ್ಯದ ಪ್ರತಿ ವಿಧಾನ್ಸಭಾ ಕ್ಷೇತ್ರಗಳಲ್ಲಿ ಪ್ರತಿ ಗ್ರಾಮ ಪಂಚಾಯತಿ ಘಟ್ಟದಲ್ಲಿ ಯುವಕರನ್ನು ಪಕ್ಷಕ್ಕೆ ಕರೆ ತರುವುದು. ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಸಂಘಟಣೆ ವಿಸ್ತಾರ ಮಾಡುವುದು ಪತ್ಷದ ಯೋಜನೆಗಳನ್ನು ಪ್ರತಿ ಮನೆ ಮನೆಗೂ ತಲುಪಿಸುವುದು, ಎಲ್ಲಾ ವರ್ಗದ ಜನರಿಗೆ ನ್ಯಾಯ ದೊರಕಿಸುವುದು.

ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಬದಲ್ಲಿ ಸುಮಾರು 25 ಲಕ್ಷ ಕುಟುಂಭಗಳ ಸಾಲ ಮನ್ನಾ ಮಾಡಿರುತ್ತಾರೆ. ಇನ್ನೂ ಹಲವಾರು ಯೋಜನೆಗಳನ್ನು ಸಂಘಟಣೆ ಹಮ್ಮಿಕೊಂಡಿದ್ದು ಮುಂದಿನ ದಿನಗಳಲ್ಲಿ ಕುಮಾರಸ್ವಾಮಿಯವರು ಹಾಗೂ ಪಕ್ಷಕ್ಕೆ ಪ್ರಬಲವಾಗಿ ಷಕ್ತಿ ತುಂಬುವ ಕೆಲಸವನ್ನು ಮಾಡುವುದು.
170 ವಿಧಾನಸಭಾ ಕ್ಷೇತ್ರಗಳಲ್ಲಿ ಅಧ್ಯಕ್ಷರ ಆಯ್ಕೆ ನಡೆದಿದ್ದು ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿ ವಿಧಾನ್ಸಭಾ ಕ್ಷೇತ್ರಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ . ತದನಂತರ ಕಾರ್ಯಗಾರ ಸಭೆ ಎಲ್ಲಾ 225 ವಿಧಾನಸಭಾ ಕ್ಷೇತ್ರ ಅಧ್ಯಕ್ಷರನ್ನು ಕರೆಸಿ ನಡೆದಲಾಗುವುದು. ಎಂದು ಕೂಡ್ಲಿಗೆರೆ ಟಿ. ಚಂದ್ರಶೇಖರ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು

City Today News – 9341997936