ಬೆಂಗಳೂರಿನ ಯಾವುದೇ ಖಾಸಗಿ ಪ್ರತಿಷ್ಢಿತ ಕಚೇರಿಗಳು ಮಾಡದ ಕಾರ್ಯವನ್ನು ಡಿ.ಎಸ್.ಮ್ಯಾಕ್ಸ್ ನ ಉತ್ತರ ಕರ್ನಾಟಕದ ದಯಾನಂದ ಮಾಡಿ ತೋರಿಸಿದ್ದಾರೆ.

ವಸತಿ ನಿರ್ಮಾಣದಲ್ಲಿ ಮುಂಚೂಣಿಯಲ್ಲಿದ್ದ ಡಿ.ಎಸ್.ಮ್ಯಾಕ್ಸ್ ನಿಂದ ಆಸ್ಪತ್ರೆ  ಸೇವೆ ಆರಂಭ.

ಬೆಂಗಳೂರು – ಬಡವರು ಹಾಗೂ ಮಧ್ಯಮ ವರ್ಗದವರಿಗೆ ಡಿ ಎಸ್ ಮ್ಯಾಕ್ಸ್ ಎಂಬ ಸಂಸ್ಥೆಯ ಮೂಲಕ  ಕಡಿಮೆ ದರದಲ್ಲಿ ಸೂರು ಒದಗಿಸಿದ್ದ ಉತ್ತರ ಕರ್ನಾಟಕದ ದಯಾನಂದ ಪ್ರತಿ ವರ್ಷ ನಾಡಿನ ಹಬ್ಬ,ದಿನಾಚರಣೆ ಗಳನ್ನು ವಿಶಿಷ್ಢವಾಗಿ ಆಚರಿಸುತ್ತಾರೆ. ಬೆಂಗಳೂರಿನ ಯಾವುದೇ ಖಾಸಗಿ ಪ್ರತಿಷ್ಢಿತ ಕಚೇರಿಗಳು ಮಾಡದ ಕಾರ್ಯವನ್ನು ಇವರು ಮಾಡಿ ತೋರಿಸಿದ್ದಾರೆ.

ಬೆಂಗಳೂರಿನ ಹೆಚ್. ಬಿ. ಆರ್. ಲೇ ಔಟ್ ನಲ್ಲಿರುವ ಕಚೇರಿಯಲ್ಲಿ 73ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಕೋವಿಡ್ ಹಿನ್ನಲೆಯಲ್ಲಿ ಸರಳವಾಗಿ ಆಚರಿಸಿದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಡಿ ಮ್ಯಾಕ್ಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ್,  ಡಿ ಎಸ್ ಮ್ಯಾಕ್ಸ್ ಸಂಸ್ಥೆ ಕಳೆದ ಅನೇಕ ವರ್ಷಗಳಿಂದ ವಸತಿ ಸಮುಚ್ಚಯ ನಿರ್ಮಾಣದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು. ಇದುವರೆಗೂ 16 ಸಾವಿರ ಮನೆಗಳನ್ನು ನಿರ್ಮಿಸಿದ ಕೀರ್ತಿ ಹೊಂದಿದೆ. ಮಧ್ಯಮ ಹಾಗೂ ಬಡವರಿಗೆ ಅತ್ಯಂತ ಕಡಿಮೆ ದರದಲ್ಲಿ ಮನೆಗಳನ್ನು( ಅಪಾರ್ಟ್ ಮೆಂಟ್) ಒದಗಿಸಿದೆ. ಮುಂಬರುವ ದಿನಗಳಲ್ಲಿ ಬೆಂಗಳೂರಿನ ನಾಲ್ಕೈದು ಕಡೆ ವ್ಯವಸ್ಥಿತ ಆಸ್ಪತ್ರೆಗಳನ್ನು ಸ್ಥಾಪಿಸಿ ಕಡಿಮೆ ದರದಲ್ಲಿ ಸೇವೆ ಒದಗಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು..

ಯಾವುದೇ ಹಬ್ಬ, ರಾಷ್ಟ್ರೀಯ ಹಬ್ಬಗಳನ್ನು ಸಿಬ್ಬಂದಿಯೊಂದಿಗೆ ಆಚರಿಸುವುದು ನಮ್ಮ ಉದ್ದೇಶವಾಗಿದೆ. ಅದೇ ರೀತಿ ಸಿಬ್ಬಂದಿಯೊಂದಿಗೆ ಗಣರಾಜ್ಯೋತ್ಸವ ಆಚರಣೆಯನ್ನು ಆಚರಿಸಲಾಗಿದೆ ಎಂದು ತಿಳಿಸಿದರು.

City Today News

9341997935