
ಬೆಂಗಳೂರು, ಫೆಬ್ರವರಿ 04, 2021: ವಿಶ್ವ ಕ್ಯಾನ್ಸರ್ ದಿನಾಚರಣೆ ದಿನದಂದು (ಫೆಬ್ರವರಿ 4 ರಂದು) ಫೋರ್ಟೀಸ್ ಕ್ಯಾನ್ಸರ್ ಇನ್ಸ್‌ಸ್ಟಿಟ್ಯೂಟ್ ಒಂದು ವಿಶಿಷ್ಟ ಕಾರ್ಯಕ್ರಮವನ್ನು ಏರ್ಪಡಿಸಿದೆ. ಪ್ರಸಕ್ತವಾಗಿ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗಾಗಿ ಕ್ಯಾನ್ಸರ್‌ನಿಂದ ಗುಣಮುಖ ಹೊಂದಿರುವವರ ಸಂಭ್ರಮವನ್ನಾಚರಿಸಿದೆ. ಕ್ಯಾನ್ಸ್‌ನಿಂದ ಗುಣಮುಖ ಹೊಂದಿದವರಿಗಾಗಿ ಮತ್ತು ಅವರಿಗೆ ಆರೈಕೆ ನೀಡಿದ ಸಹಾಯಕರಿಗಾಗಿ ಅನೇಕ ಚಟುವಟಿಕೆಗಳನ್ನು ಏರ್ಪಡಿಸಲಾಯಿತು. ಬೆಂಗಳೂರಿನ ಫೋರ್ಟೀಸ್ ಕ್ಯಾನ್ಸರ್ ಸಂಸ್ಥೆ ಪ್ರಾರಂಭಿಸಿರುವ ಬೆಂಬಲಿತ ಗುಂಪಿನ ಕೇಂದ್ರ ಆಶಾದಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಯಿತು.
ಕ್ಯಾನ್ಸರ್ ವಿರುದ್ಧ ಹೋರಾಡಿ ಧೈರ್ಯ ತೋರಿಸಿದವರನ್ನು ಸಂಭ್ರಮಿಸುವ ಸ್ಥಳವೇ ಆಶಾ ಆಗಿದೆ ಮತ್ತು ಹೊಸತಾಗಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುವವರಿಗೆ ಇಲ್ಲಿ ಪ್ರೇರಣೆ ಸಿಗುತ್ತದೆ. ಆಶಾದಲ್ಲಿ ಡಾಕ್ಟರರು, ಬೆಂಬಲಿತ ಗುಂಪು ಮತ್ತು ರೋಗ ಚಿಕಿತ್ಸೆ ಪಡೆದು ಗೆದ್ದವರ ನಡುವೆ 90 ನಿಮಿಷಗಳ ಪರಸ್ಪರ ಸ್ಪಂಧನಾತ್ಮಕ ಅಧಿವೇಶನವೊಂದನ್ನು ಏರ್ಪಡಿಸಲಾಯಿತು. ಇದಾದ ಬಳಿಕ ಯೋಗ ಅಧಿವೇಶನ ಮತ್ತು ಆರೋಗ್ಯಕರ ಆಹಾರ ಸೇವನೆ ಅಭ್ಯಾಸ ಕುರಿತಂತೆ ಮಾರ್ಗದರ್ಶನ ಕಾರ್ಯಕ್ರಮ ಏರ್ಪಡಿಸಲಾಯಿತು. ಕೊನೆಯದಾಗಿ ಕೆಲವೊಂದು ಸಂಗೀತ ಚಿಕಿತ್ಸೆ ಕ್ರಮವನ್ನು ಕೂಡಾ ಏರ್ಪಡಿಸಲಾಯಿತು. ಆ ಅಧಿವೇಶನದ ಅಂಗವಾಗಿ ಬೆಂಬಲಿತ ಗುಂಪು ಮತ್ತು ರೋಗ ಚಿಕಿತ್ಸೆ ಪಡೆದು ಗೆದ್ದವರು ಯಾವ ರೀತಿಯಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡಿದ್ದಾರೆ ಎಂದು ತಮ್ಮ ಅನುಭವ ನೀಡಿದರು ಮತ್ತು ಇತ್ತೀಚೆಗೆ ಕ್ಯಾನ್ಸರ್ ಚಿಕಿತ್ಸೆ ಪಡೆಯುವವರಿಗೆ ಪ್ರೇರಣೆ ನೀಡುವಂತಾಗಿತ್ತು. ಆಶಾದಲ್ಲಿ ಮಾಸಿಕ ಆಧಾರದಂತೆ ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು ಮತ್ತು ಪ್ರತಿ ತಿಂಗಳೂ ಬೇರೆ ಬೇರೆ ರೋಗಿಗಳನ್ನು ಕರೆಸಲಾಗುವುದು ಮತ್ತು ಅವರಿಗಾಗಿ ಯೋಗ/ಮ್ಯೂಸಿಕ್ ಸೆಶನ್‌ಗಳನ್ನು ಏರ್ಪಡಿಸಲಾಗುವುದು.
ಫೋರ್ಟೀಸ್ ಕ್ಯಾನ್ಸರ್ ಇನ್ಸ್‌ಸ್ಟಿಟ್ಯೂಟ್‌ನ ಮೆಡಿಕಲ್ ಓಂಕೋಲಜಿ ಮತ್ತು ಹೆಮಾಟೋ-ಓಂಕೋಲಜಿಯ ನಿರ್ದೇಶಕರಾದ ಡಾ. ನೀತಿ ರಾಯಿಜಾದಾ ಅವರು ಹೀಗೆ ಹೇಳಿದ್ದಾರೆ “ವಿಶ್ವ ಕ್ಯಾನ್ಸರ್ ದಿನಾಚರಣೆಯ ಸಂದರ್ಭದಲ್ಲಿ ಫೋರ್ಟೀಸ್ ಕ್ಯಾನ್ಸರ್ ಸಂಸ್ಥೆ ಪ್ರಾರಂಭಿಸಿರುವ ಆಶಾ ಕಾರ್ಯಕ್ರವನ್ನು ಪರಿಚಯಿಸಲು ನನಗೆ ಅತ್ಯಂತ ಸಂತೋಷವಾಗುತ್ತಿದೆ. ಕ್ಯಾನ್ಸರ್ ನಿವಾರಣೆಗೆ ಬೆಂಬಲಿಸುವ ಈ ಗ್ರೂಪ್ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದವರು ಮತ್ತು ಹೊಸತಾಗಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವವರಿಗಾಗಿ ಒಂದು ವೇದಿಕೆಯಂತೆ ಪಾತ್ರ ವಹಿಸುತ್ತದೆ. ಯೋಗ ಸೆಶನ್ ಮತ್ತು ಆರೋಗ್ಯಕರ ಆಹಾರ ಸೇವನೆ ಮಾರ್ಗದರ್ಶನ ಸೆಶನ್‌ಗಳ ಮೂಲಕ ಕ್ಯಾನ್ಸರ್ ರೋಗಿಗಳಿಗೆ ಆರೋಗ್ಯಕರವಾಗಿ ಜೀವಿಸಬೇಕಾಗಿರುವ ಪ್ರಾಮುಖ್ಯತೆಯನ್ನು ವಿವರಿಸಲಾಗುವುದು. ಇದಲ್ಲದೆ, ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದು ಗುಣಮುಖ ಹೊಂದಿರುವವರು ತಮ್ಮ ಅನುಭವವನ್ನು ತಿಳಿಸಬೇಕು ಮತ್ತು ಪ್ರಸಕ್ತವಾಗಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾನ್ಸರ್ ರೋಗಿಗಳು ಮತ್ತು ಅವರ ಆರೈಕೆ ಸಹಾಯಕರಿದೆ ಸ್ಪೂರ್ತಿ ಮತ್ತು ಪ್ರೇರಣೆ ನೀಡಬೇಕೆಂದು ನಾವು ವಿನಂತಿಸುತ್ತೇವೆ.”
ಈ ಹೊಸ ಕ್ರಮದ ಬಗ್ಗೆ ಮಾತನಾಡುತ್ತಾ ಡಿಪಾರ್ಟ್‌ಮೆಂಟ್ ಆಫ್ ಯೂರೋಲಜಿ, ಯೂರೋಲಜಿ, ಯೂರೋ-ಓಂಕೋಲಜಿ, ಅಂಡ್ರೋಲಜಿ – ಟ್ರಾನ್ಸ್‌ಪ್ಲಾಂಟ್ ಮತ್ತು ರೋಬೋಟಿಕ್ ಸರ್ಜರಿಯ ನಿರ್ದೇಶಕರಾದ ಡಾ ಮೋಹನ್ ಕೇಶವಮೂರ್ತಿ ಅವರು ಹೀಗೆ ಹೇಳಿದ್ದಾರೆ. “ನಮ್ಮ ರೋಗಿಗಳು ಸಂಪೂರ್ಣ ಗುಣಮುಖರಾಗಿದ್ದಾರೆ ಮತ್ತು ಆರೋಗ್ಯಕರ ಜೀವನವನ್ನು ನಡೆಸುತ್ತಿದ್ದಾರೆ ಎಂಬುದನ್ನು ತಿಳಿದು ತುಂಬಾ ಸಂತೋಷವಾಗುತ್ತಿದೆ. ಆಶಾ ಮೂಲಕ ನಾವು ನಮ್ಮ ರೋಗಿಗಳನ್ನು ಮತ್ತೆ ಭೇಟಿಯಾಗುವುದು ಮತ್ತು ಅವರುಗಳು ಕ್ಯಾನ್ಸರ್ ಮುಕ್ತವಾದ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ ಎಂಬುದನ್ನು ತಿಳಿಯುವುದು ಸಾಧ್ಯವಾಗಿದೆ. ನಾವು ಕ್ಯಾನ್ಸರ್ ರೋಗಿಗಳು ಮತ್ತು ರೋಗದಿಂದ ಗುಣಮುಖರಾದವರಲ್ಲು ಒಂದೇ ವೇದಿಕೆಯಲ್ಲಿ ಸೇರಿಸುತ್ತಿರುವ ಕಾರಣದಿಂದಾಗಿ, ಇತ್ತೀಚೆಗೆ ಕ್ಯಾನ್ಸರ್ ಪಡೆದವರಿಗೆ ಇದು ಪ್ರೇರಣೆಯಾಗಲಿದೆ ಮತ್ತು ಅವರಿಗೆ ಕ್ಯಾನ್ಸರ್ ವಿರುದ್ಧ ಹೋರಾಡಲು ಇನ್ನಷ್ಟು ಸ್ಪೂರ್ತಿ ಸಿಗುತ್ತದೆ.”
ಯೋಗ ಮತ್ತು ಸಂಗೀತ ಚಿಕಿತ್ಸೆಯ ಪ್ರಾಮುಖ್ಯತೆಯನ್ನು ಎತ್ತಿ ಹೇಳುವುದು ಕೂಡಾ ಈ ಸೆಶನ್‌ನ ಅಂಗವಾಗಿದೆ.
City Today News
9341997936


You must be logged in to post a comment.