
ದಿನಾಂಕ : 07 . 01 . 2019 ಕೋಲಾರ ಜಿಲ್ಲೆಯ , ಮಾಲೂರು ತಾಲ್ಲೂಕು , ಟೆಕಲ್ ಹೋಬಳಿ , ಯಲಿವಳ್ಳಿ ಗ್ರಾಮದ ನಿವಾಸಿಯೊಬ್ಬರಿಗೆ ನರೇಗಾ ಯೋಜನೆಯಡಿಯಲ್ಲಿ ಕೈಗೊಂಡಿದ್ದ ಕಾಮಗಾರಿ ಬಿಲ್ ಮೊತ್ತ ರೂ . 79 , 000 / – ಮಂಜೂರು ಮಾಡಲು ಕೋರಿರುತ್ತಾರೆ . ಶ್ರೀ . ನಾರಾಯಣಸ್ವಾಮಿ ಪಿ . ಡಿ . ಒ , ಬನಹಳ್ಳಿ ಗ್ರಾಮ ಪಂಚಾಯಿತಿ ರವರು ರೂ . 3 , 000 / – ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ . ದಿನಾಂಕ : 07 / 01 / 2019 ರಂದು ರೂ . 2 , 500 / – ಲಂಚದ ಹಣವನ್ನು ಫಿರ್ರ್ಯಾದುದಾರರಿಂದ ಪಡೆದುಕೊಳ್ಳುವ ಸಂದರ್ಭದಲ್ಲಿ ಕೋಲಾರ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ . ಇವರನ್ನು ದಸ್ತಗಿರಿ ಮಾಡಿ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ . ತನಿಖೆ ಮುಂದುವರೆದಿದೆ .
City Today News
(Tj vision media)
9341997936
