28 – 02 – 2019 ರಂದು ಶ್ರೀ . ಎಸ್ . ಎನ್ . ಚಂದ್ರಪ್ಪ , ಕಂದಾಯ ನಿರೀಕ್ಷಕರು ರವರು ದೂರುದಾರರಿಂದ ರೂ . 4 , 000 / – ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ದಾವಣಗೆರೆ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿರುತ್ತಾರೆ .

ದಿನಾಂಕ : 01 – 03 – 2019 ದಾವಣಗೆರೆ ತಾಲ್ಲೂಕು ಅಣಬೇರು ಗ್ರಾಮದ ನಿವಾಸಿಯೊಬ್ಬರು ತಮ್ಮ ಜಮೀನು ಒತ್ತುವರಿ ಆಗಿರುವ ಸಂಬಂಧ ತೆರವಿಗೆ ಅರ್ಜಿಯನ್ನು ಜಿಲ್ಲಾಧಿಕಾರಿಗಳು ದಾವಣಗೆರೆ ರವರಿಗೆ ಸಲ್ಲಿಸಿರುತ್ತಾರೆ . ಶ್ರೀ . ಎಸ್ . ಎನ್ . ಚಂದ್ರಪ್ಪ , ಕಂದಾಯ ನಿರೀಕ್ಷಕರು , ಮಾಯಕೊಂಡ ಹೋಬಳಿ , ದಾವಣಗೆರೆ ತಾಲ್ಲೂಕು ರವರು ಸದರಿ ಜಮೀನಿನ ಒತ್ತುವರಿ ಸಂಬಂಧ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲು ದೂರುದಾರರಿಂದ ರೂ . 6 , 000 / ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ . ದಿನಾಂಕ : 28 – 02 – 2019 ರಂದು ಶ್ರೀ . ಎಸ್ . ಎನ್ . ಚಂದ್ರಪ್ಪ , ಕಂದಾಯ ನಿರೀಕ್ಷಕರು ರವರು ದೂರುದಾರರಿಂದ ರೂ . 4 , 000 / – ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ದಾವಣಗೆರೆ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿರುತ್ತಾರೆ . ಇವರನ್ನು ದಸ್ತಗಿರಿ ಮಾಡಿ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ . ಪ್ರಕರಣದ ತನಿಖೆ ಮುಂದುವರೆದಿದೆ .

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.