ಕೆಐಎಡಿಬಿಯಲ್ಲಿಅಧಿಕಾರಿಗಳ ದರ್ಪ:
ನಕಲಿ ದಾಖಲೆ ಸೃಷ್ಟಿಸಿ ಪರಿಶಿಷ್ಟ ಜಾತಿಯ ಮೀಸಲುಹುದ್ದೆ ಕಬಳಿಕೆ; ತನಿಖೆಗೆ ಮಾವಳ್ಳಿ ಶಂಕರ್ ಆಗ್ರಹ

ಬೆಂಗಳೂರು, ಮಾ.7;
ಕರ್ನಾಟಕ ಕೈಗಾರಿಕಾಭಿವೃದ್ಧಿ ಮಂಡಳಿಯಲ್ಲಿಪರಿಶಿಷ್ಟ ಜಾತಿ ಮತ್ತು ಪಂಗಡದ ಅಧಿಕಾರಿಗಳ ಮೇಲೆ ಮಿತಿ ಮೀರಿದ ದೌರ್ಜನ್ಯ ನಡೆಯುತ್ತಿದೆ. ಇದರಿಂದ ಹಲವು ಅಧಿಕಾರಿಗಳಿಗೆ ಕಾನೂನುಬದ್ಧವಾಗಿ ಮುಂಬಡ್ತಿಗೆ ಅವಕಾಶವಿದ್ದರೂ ಮುಂಬಡ್ತಿಯಿಂದ ವಂಚಿತರಾಗುತ್ತಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಮುಖಂಡ ಮಾವಳ್ಳಿ ಶಂಕರ್ ಆರೋಪಿಸಿದ್ದಾರೆ.
ಕರ್ನಾಟಕ ಕೈಗಾರಿಕಾ ಅಭಿವೃದ್ಧಿನಿಗಮ (ಕೆಐಎಡಿಬಿ) ಪರಿಶಿಷ್ಟ ಜಾತಿ,ಪಂಗಡಕ್ಕೆ ಮೀಸಲಿರುವ ಹುದ್ದೆಗೆಕುರುಬ ಜನಾಂಗ ಎಂ. ರಾಮ ಎಂಬುವವರು ನಕಲಿ ದಾಖಲೆ ಸಲ್ಲಿಸಿ ನೇಮಕಗೊಂಡಿದ್ದಾರೆ. ಈ ಸಂಬಂಧಉನ್ನತ ಮಟ್ಟದ ತನಿಖೆ ನಡೆಸ ಬೇಕು
ಎಂದು ಸರ್ಕಾರವನ್ನು ಅವರು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಐಎಡಿಬಿಯಲ್ಲಿ ಎರಡು ಸಹಾಯಕ ಅಭಿಯಂತರ ಹುದ್ದೆಗಳನ್ನು ಪರಿಶಿಷ್ಟ ಜಾತಿ,ಪಂಗಡಕ್ಕೆ ಮೀಸಲಿರಿಸಲಾಗಿದೆ. ಆದರೆ,ಎಂ.ರಾಮ ಎಂಬುವರು ಕಾನೂನು ಬಾಹಿರವಾಗಿ ಒಂದು ಹುದ್ದೆಯನ್ನು ಪಡೆದಿದ್ದು, ಈ ಸಂಬಂಧತನಿಖೆ ನಡೆಸುವಂತೆ ಸಮಾಜಕಲ್ಯಾಣ ಇಲಾಖೆಗೆ ಮನವಿಸಲ್ಲಿಸಿದ್ದೆವು.ಆದರೆ, ಇಲ್ಲಿಯವರೆಗ ಇಲಾಖೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜೊತೆಗೆ, ಇವರು ಮಂಡಳಿಯ ಅಧಿಕಾರಿಗಳನ್ನು ಹೆದರಿಸಿ ಅಭಿವೃದ್ಧಿ ಅಧಿಕಾರಿಯಾಗಿ ಮುಂಬಡ್ತಿಪಡೆದಿದ್ದಾರೆ. ಈ ಸಂಬಂಧ ಕೆಲವರು ಲೋಕಾಯುಕ್ತ ಇಲಾಖೆಗೆ ದೂರುಸಲ್ಲಿಸಿದ್ದರು. ಲೋಕಾಯುಕ್ತರಆದೇಶದಂತೆ ವಿಚಾರಣೆ ನಡೆಸಿ,ಆರೋಪ ರುಜುವಾತಾಗಿದ್ದರೂ,ಯಾವುದೇ ಕ್ರಮ ಜರುಗಿಸಿಲ್ಲ.ಹೈಕೋರ್ಟ್ ಕೂಡ ಎಂ.ರಾಮಅವರಿಗೆ ನೀಡಿದ ಮುಂಬಡ್ತಿಯನ್ನುಅನುರ್ಜಿತಗೊಳಿಸುವಂತೆ ಆದೇಶನೀಡಿದೆ. ಅದನ್ನೂ ಕೂಡ ಇಲಾಖೆಪಾಲಿಸಿಲ್ಲ ಎಂದು ಕಿಡಿಕಾರಿದರು.
ಈ ಕೂಡಲೇ ರಾಮು ಅವರನ್ನು ಮಂಡಳಿ ಸೇವೆಯಿಂದ ವಜಾಗೊಳಿಸಿ,ಅವರು ಅಕ್ರಮವಾಗಿ ಸಂಪಾದಿಸಿದ300 ಕೋಟಿಗೂ ಹೆಚ್ಚು ಆಸ್ತಿಯವಿರುದ್ಧ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಎಂದು ಅವರು ಆಗ್ರಹಿಸಿದರು.
ರಾಷ್ಟ್ರೀಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಆಯೋಗ, ಈ ಅಕ್ರಮಗಳ ಬಗ್ಗೆ ತನಿಖೆಗೆ ಆದೇಶಿಸಿದೆ. ಮುಖ್ಯಕಾರ್ಯದರ್ಶಿ ಅವರಿಗೆ ನಕಲಿ ಜಾತಿ ಪ್ರಮಾಣ ಪತ್ರದ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದೆ. ಆದರೆ ಇದುವರೆಗೆ ತನಿಖೆ ನಡೆದಿಲ್ಲ.ಕೈಗಾರಿಕಾ ಇಲಾಖೆಯಲ್ಲಿ ಇವರ ಅಕ್ರಮ ನೇಮಕಾತಿ ಬಗ್ಗೆ ತನಿಖೆನಡೆಸಿ ನೀಡಿರುವ ವರದಿ ಮಾಯವಾಗಿರುವುದು ವಿಪರ್ಯಾಸ ಎಂದರು.

ಹಿರಿಯ ಅಧಿಕಾರಿಗಳನ್ನು ಬೆದರಿಸಿತಮಗೆ ಬೇಕಾದಂತೆ ಜೇಷ್ಠತಾ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ.ಇದಕ್ಕೆ ತಾಜಾ ಉದಾಹರಣೆ ಎಂದರೆವಿ. ಜಗನ್ನಾಥ್ ಮತ್ತು ಸಿ.ವಿ.ಶ್ರೀನಿವಾಸ ಎಂಬುವರು ಉಪಅಭಿವೃದ್ಧಿ ಅಧಿಕಾರಿಯಾಗಿ ನೇರನೇಮಕಾತಿಯಡಿ ಕೆಲಸಕ್ಕೆ ಸೇರಿದ್ದರು.ಆದರೆ ಇವರ ಹುದ್ದೆ ಇದೀಗ ಸಹಾಯಕ ಅಭಿಯಂತರ ಹುದ್ದೆಗಿಂತಮೇಲ್ಮಟ್ಟದ್ದಾಗಿದೆ ಎಂದು ಮಾವಳ್ಳಿಶಂಕರ್ ಆಪಾದಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯಸಂಚಾಲಕರಾದ ಲಕ್ಷ್ಮೀ ನಾರಾಯಣನಾಗವಾರ, ಗುರುಪ್ರಸಾದ್ಕೆರಗೋಡು, ರಾಜ್ಯ ಸಂಘಟನಾಸಂಚಾಲಕ ಸಿದ್ಧಲಿಂಗಯ್ಯಉಪಸ್ಥಿತರಿದ್ದರು.
City Today News
(citytoday.media)
9341997936
