
ಜ್ಯೋತಿ ವಿದ್ಯಾ ಸಂಸ್ಥೆಯ ಸಮೂಹದ ಸದಸ್ಯರುಗಳು ಹಾಗೂ ಹಿತೈಶಿಗಳಿಂದ ತಮಗೆ ಹಾರ್ದಿಕ ಶುಭಾಶಯಗಳು . ನಮ್ಮ ವಿದ್ಯಾಸಂಸ್ಥೆಯು ಜ್ಯೋತಿ ಇಂಡಸ್ಟ್ರೀಸ್ ಎಂಬ ತಾಯಿ ಬೇರಿನಿಂದ ಪ್ರಾರಂಭವಾಗಿ 1989 ರಲ್ಲಿ ಜ್ಯೋತಿ ಕೇಂದ್ರೀಯ ವಿದ್ಯಾಲಯ ಎಂಬ ನಾಮಾಂಕಿತದಿಂದ ಮುನ್ನಡೆದು 2011ರ ಹೊತ್ತಿಗೆ ಜ್ಯೋತಿ ತಾಂತ್ರಿಕ ಮಹಾವಿದ್ಯಾಲಯ ಸ್ಥಾಪನೆಯಾಗಿ ಇಲ್ಲಿಯ ತನಕ ಹಂತ ಹಂತವಾಗಿ ಬೆಳವಣಿಗೆಹೊಂದಿ ಈಗ ತಾಂತ್ರಿಕ ಕ್ಷೇತ್ರದಲ್ಲಿ ಒಂದು ಹೊಸ ಮೈಲುಗಲ್ಲನ್ನೇ ಹುಟ್ಟುಹಾಕಿ ಹೆಮ್ಮರವಾಗಿ ಬೆಳೆದು ಅನೇಕ ತಾಂತ್ರಿಕ ಮಹೋದಯರನ್ನೇ ನಾಡಿಗೆ ಅರ್ಪಿಸುತ್ತಿದೆ ಎಂದು ತಿಳಿಸಲು ನಮಗೆ ಹೆಮ್ಮೆಯಾಗುತ್ತದೆ .

ನಮ್ಮ ವಿದ್ಯಾಸಂಸ್ಥೆಯ ಸೂರಿನಡಿಯಲ್ಲಿ ಜ್ಯೋತಿ ಚಾರಿಟಬಲ್ ಟ್ರಸ್ಟ್‌ನ ಸಂಸ್ಥಾಪಕರಾದ ಕೀರ್ತಿಶೇಷ ಧಾರ್ಮಿಕ ಪ್ರವರ ಡಾ | ಬಿ . ಎನ್ . ವಿ . ಸುಬ್ರಹ್ಮಣ್ಯರವರು ಅನೇಕಾನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುತ್ತಾರೆ . ಇದರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ( 1991 ) ಮತ್ತು ತುಮಕೂರು ವಿಶ್ವವಿದ್ಯಾಲಯ ನೀಡಿರುವ ಗೌರವ ಡಾಕ್ಟರೇಟ್ ಅತಿ ಮುಖ್ಯವಾದವು . ಇದಲ್ಲದೆ 5 ಬಾರಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಗೆ ಅಧ್ಯಕ್ಷರಾಗಿ ಅವಿರತ ಸೇವೆ ಸಲ್ಲಿಸಿರುವುದನ್ನು ನಾವು ಇಲ್ಲಿ ಸ್ಮರಿಸಬಹುದು . ಅವರ ಸಾಧನೆಗಳು , ಜೀವನ ಶೈಲಿ ಹಾಗು ಮಾರ್ಗದರ್ಶನವೇ ನಮ್ಮ ಜ್ಯೋತಿ ಸಮೂಹದ ವಿದ್ಯಾಸಂಸ್ಥೆಗಳ ಮುನ್ನಡಿಗೆ ನಾಂದಿಯಾಗಿದೆ .

ಇನ್ನು ನಮ್ಮ ಜ್ಯೋತಿ ತಾಂತ್ರಿಕ ಮಹಾವಿದ್ಯಾಲಯದ ಬಗ್ಗೆ ಪರಿಚಯಿಸುವುದಾದರೆ ಜ್ಯೋತಿ ತಾಂತ್ರಿಕ ಮಹಾವಿದ್ಯಾಲಯವು ಈಗ ಶೈಶವಾವಸ್ಥೆಯಿಂದ ಯುವ / ಪ್ರೌಢಾವಸ್ಥೆಗೆ ಕಾಲಿಟ್ಟು ಇಂದಿನ ಯುವಪೀಳಿಗೆಯನ್ನು ಹುರಿದುಂಬಿಸಿ ಒಳ್ಳೆಯ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಮುಂದುವರೆದಿರುವುದು ನಮಗೆ ಹರ್ಷದಾಯಕವಾಗಿರುತ್ತದೆ . ಈ ವಿದ್ಯಾಸಂಸ್ಥೆಯು ಕೇವಲ ತನ್ನ 8 ವರ್ಷಗಳ ಅವಧಿಯೊಳಗೆ ಎನ್ . ಬಿ . ಎ . ಮಾನ್ಯತೆಯನ್ನು ಪಡೆಯುವುದರ ಜೊತೆಗೆ ಸ್ವಂತ ಸೂರಿನ ಅಡಿಯಲ್ಲಿ ಒಂದು ಸುಸಜ್ಜಿತ ದೊಡ್ಡಮಟ್ಟದ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿ ಜಗತ್ ಮನ್ನಣೆಗೆ ಪಾತ್ರವಾಗಿದೆ . ಇದೆಲ್ಲದರ ಜೊತೆಗೆ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಪ್ರತಿಬಿಂಬಿಸುವ ಸಲುವಾಗಿ ಮಲ್ಲಿಕಾರ್ಜುನ ಸಂಸ್ಕೃತ – ವೇದ ಪಾಠಶಾಲೆಯನ್ನು 1985ರಲ್ಲಿ ಪ್ರಾರಂಭಿಸಿ ಇಂದಿಗೂ ಸಹಾ ಅಲ್ಲಿ 30ಕ್ಕೂ ಅಧಿಕ ವಿದ್ಯಾರ್ಥಿಗಳು ವೇದಾಧ್ಯಯನವನ್ನು ಉಚಿತವಾಗಿ ಮಾಡಿಕೊಂಡಿರುವುದು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮೈಲಿಗಲ್ಲು . ಜ್ಯೋತಿ ಚಾರಿಟಬಲ್ ಟ್ರಸ್ಟ್ ಕೃಷ್ಣಯಜುರ್ವೇದವನ್ನು ಕನ್ನಡಕ್ಕೆ ಭಾಷಾಂತರಿಸಿ . | ಸಂಪುಟಗಳ ಹೊತ್ತಿಗೆಗಳನ್ನು ಬಿಡುಗಡೆ ಮಾಡುವುದರ ಜೊತೆಗೆ ಇನ್ನೂ 3 ಸಂಪುಟಗಳನ್ನು ಲೋಕಾರ್ಪಣೆ ಮಾಡಲು ತಯಾರಿ ನಡೆಸಿದೆ .

ಜ್ಯೋತಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸುತ್ತಿರುವುದಲ್ಲದೆ ಬಡವರಿಗೆ ವೈದ್ಯಕೀಯ ನೆರವನ್ನು ಸಹಾ ನೀಡುತ್ತಿದೆ . ಜ್ಯೋತಿ ಸಮೂಹ ಸಂಸ್ಥೆಯ ಸ್ಥಾಪಕರ ಸ್ಫೂರ್ತಿಯ ಪ್ರತೀಕವಾಗಿ ಜ್ಯೋತಿ ತಾಂತ್ರಿಕ ಮಹಾವಿದ್ಯಾಲಯವು ತಾತಗುಣಿ ಸಮೀಪದಲ್ಲೇ ಒಂದು ಗ್ರಾಮವನ್ನು ದತ್ತು ತೆಗೆದುಕೊಂಡು ಅಲ್ಲಿನ ಗ್ರಾಮಸ್ಥರಿಗೆ ಸಕಲ ಸವಲತ್ತುಗಳನ್ನು ನೀಡುತ್ತಾ ಬಂದಿದೆ ಹಾಗೂ 5 ವರ್ಷಗಳಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗ್ರಾಮದ ಅಭಿವೃದ್ಧಿಗೆ ಹಾಗು ಅಲ್ಲಿನ ಜನರ ಆಶೋತ್ತರಗಳನ್ನು ಪೂರೈಸುವುದಕ್ಕೆ ನೆರವಾಗುತ್ತಿದೆ . ಎಲ್ಲರಿಗೂ ತಿಳಿದಿರುವಂತೆ ಕಳೆದ ವರ್ಷ ಕೊಡಗಿನಾದ್ಯಂತ ವರ್ಷಧಾರೆ ಸುರಿದು ಅಲ್ಲಿನ ಜನರ ಆಸ್ತಿಪಾಸ್ತಿಗಳು ನಷ್ಟವಾಗಿ ಅನೇಕ ಜನರು ತಮ್ಮ ಮನೆಮಠಗಳನ್ನು ಕಳೆದುಕೊಂಡು ಚೆಂತಾಕ್ರಾಂತರಾಗಿರುವಾಗ ನಮ್ಮ ಜ್ಯೋತಿ ತಾಂತ್ರಿಕ ಮಹಾವಿದ್ಯಾಲಯವು ಕೊಡಗಿನ ಎರಡನೇ ಮೊಣ್ಣಂಗೇರಿ ಗ್ರಾಮವನ್ನು ಕಳೆದ ವರ್ಷ ದತ್ತು ಪಡೆದು ದುರಂತದಲ್ಲಿ ಮನೆಗಳನ್ನು ಕಳೆದುಕೊಂಡ ಆ ಹಳ್ಳಿಯ ಜನರಿಗೆ ಮನೆಗಳನ್ನು ನಿರ್ಮಿಸಿಕೊಡುವ ಹಾಗೂ ವೈದ್ಯಕೀಯ ಸವಲತ್ತುಗಳನ್ನು ಒದಗಿಸಿಕೊಡುವ ಸಲುವಾಗಿ ಕೊಡಗಿಗಾಗಿ ಓಟ ” ( RUN FOR COORG ) ಎಂಬ ನಿಧಿ ಸಂಗ್ರಹಣಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಸ್ವಲ್ಪ ಮಟ್ಟಿಗೆ ಸಹಾಯಹಸ್ತವನ್ನು ಕೊಡಗಿನ ಜನರಿಗೆ ನೀಡಿದೆ .

ಅದರ ಮುಂದುವರೆದ ಭಾಗವಾಗಿ ಮತ್ತಷ್ಟು ಕೊಡಗಿನ ಪುನರ್‌ನಿರ್ಮಾಣಕ್ಕಾಗಿ ನಿಧಿ ಸಂಗ್ರಹಿಸುವ ಸಲುವಾಗಿ ಖ್ಯಾತ ಹಿನ್ನೆಲೆಗಾಯಕ ಶ್ರೀ ವಿಜಯಪ್ರಕಾಶ್ ರವರ ಸಂಗೀತ ರಸಸಂಜೆಯನ್ನು ಮಾರ್ಚ್ 16 2019ರಂದು ಏರ್ಪಡಿಸಲಾಗಿದೆ . ಇದರ ಜೊತೆಗೆ ನಮ್ಮ ವಿದ್ಯಾಸಂಸ್ಥೆಯು ಪ್ರತಿ ವರ್ಷ ಆಚರಿಸುವ ಅಂತರ ಕಾಲೇಜು ಸಾಂಸ್ಕೃತಿಕ

ಉತ್ಸವ “ ಪ್ರಣತಿ 2019³ ” ರ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ . ಈ ಕಾರ್ಯಕ್ರಮದ ಉದ್ಘಾಟನೆ ಮಾಡಲು ಶ್ರೀ ಜಿ . ಟಿ . ದೇವೇಗೌಡರವರು , ಉನ್ನತ ಶಿಕ್ಷಣ ಸಚಿವರು ಒಪ್ಪಿರುತ್ತಾರೆ . ಅದರಂತೆ ನಮ್ಮ ವಿದ್ಯಾಸಂಸ್ಥೆಯ ಸಾಂಸ್ಕೃತಿಕ ಉತ್ಸವ 14ನೇ ಮಾರ್ಚ್ 2019ರ ಸಂಜೆ 4 ಗಂಟೆಗೆ ಮಾನ್ಯ ಉನ್ನತ ಶಿಕ್ಷಣ ಸಚಿವರ ಸ್ವಹಸ್ತದಿಂದ ಉದ್ಘಾಟಿಸಲ್ಪಟ್ಟು 16ನೇ ಮಾರ್ಚ್ 2019ರ ವರೆವಿಗೆ ಅವಿರತವಾಗಿ ಜರುಗಿ 16ನೇ ಮಾರ್ಚ್ 2019ರಂದು ಖ್ಯಾತ ಗಾಯಕ ಶ್ರೀ ವಿಜಯ ಪ್ರಕಾಶ್‌ರವರ ಸಂಗೀತ ರಸಸಂಜೆಯೊಂದಿಗೆ ಮುಕ್ತಾಯವಾಗಲಿದೆ . ಈ ಕಾರ್ಯಕ್ರಮಕ್ಕೆ ಮಾನ್ಯ ಶಾಸಕರುಗಳಾದ ಶ್ರೀ ಎಸ್ . ಟಿ . ಸೋಮಶೇಖರ್ , ಶ್ರೀ ರವಿ ಸುಬ್ರಮಣ್ಯ , ಡಾ | | ಉದಯ್ ಬಿ . ಗರುಡಾಚಾರ್ , ಅದಮ್ಯ ಚೇತನ ಸಂಸ್ಥಾಪಕರಾದ ಡಾ | ತೇಜಸ್ವಿನಿ ಅನಂತಕುಮಾರ್ , ಶ್ರೀ ಭಾಸ್ಕರ್ ರಾವ್ , ಎ . ಡಿ . ಜಿ . ಪಿ , ಶ್ರೀ ಕೆ . ಅನ್ನಾಮಲೈ , ಡಿ . ಸಿ . ಪಿ . , ಬೆಂಗಳೂರು ದಕ್ಷಿಣ , ಪದ್ಮಶ್ರೀ ಡಾ | ವಿ . ಆರ್ . ಗೌರೀಶಂಕರ್ , ಆಡಳಿತಾಧಿಕಾರಿಗಳು , ಶೃಂಗೇರಿ ಶಾರದಾ ಪೀಠಂ , ಚಲನಚಿತ್ರರಂಗದ ಶ್ರೀ ಚಿನ್ನೇಗೌಡ , ಅಧ್ಯಕ್ಷರು , ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ , ನಟ – ನಿರ್ದೆಶಕರಾದ ಶ್ರೀ ಉಪೇಂದ್ರ ಮತ್ತು ರಾಜ್ . ಬಿ . ಶೆಟ್ಟಿ , ನಿರ್ದೇಶಕರಾದ ಶ್ರೀ ಯೋಗರಾಜ ಭಟ್ , ಚೇತನ್ ಕುಮಾರ್ , ಶ್ರೀ ರಘುರಾಮ್ ಮತ್ತು ಶ್ರೀ ಮಹೇಶ್ ಗೌಡ , ನಿರ್ದೇಶಕ – ಗೀತ ರಚನೆಕಾರ ಶ್ರೀ ಡಾ | | ವಿ . ನಾಗೇಂದ್ರ ಪ್ರಸಾದ್ , ಖ್ಯಾತ ನಟರಾದ ಶ್ರೀಮುರಳಿ , ಗಾಯಕರಾದ ಶ್ರೀಹರ್ಷ , ನಟಿಯರಾದ ಚೈತ್ರಾ ಆಚಾರ್ , ನಟ ಛಾಯಾಗ್ರಾಹಕರಾದ ಶ್ರೀ ಬಾಲಾಜಿ ಮನೋಹರ್ , ನಟರಾದ ಶ್ರೀ ಗೋಪಾಲಕೃಷ್ಣ ದೇಶಪಾಂಡೆ , ಶ್ರೀ ಗುರುನಂದನ್ , ಅರ್ಚನಾ ಜೈಕೃಷ್ಣನ್ , ಶ್ರೀ ರವಿಶಂಕರ್ ಗೌಡ , ಶ್ರೀ ರಂಗಾಯಣ ರಘು , ನಿಹಾಲ್ ರಜಪೂತ್ , ಸೊನಾಲ್ ಎಮ್ , ನಿರ್ದೇಶಕ – ಸಂಯೋಜನೆ ಶ್ರೀ ರವಿ ಬಸೂರ್ ಅಲ್ಲದೆ ಇನ್ನೂ ಅನೇಕ ರಾಜಕೀಯ ನಾಯಕರು , ಚಲನಚಿತ್ರ ರಂಗದ ಕಲಾವಿದರು , ನಿರ್ದೇಶಕರುಗಳು , ಹಿನ್ನೆಲೆ ಗಾಯಕರು , ಸಮಾಜದ ಪ್ರತಿಷ್ಟಿತ ವ್ಯಕ್ತಿಗಳು ಭಾಗವಹಿಸಲಿದ್ದಾರೆ .
City Today News
(citytoday.media)
9341997936
