
“ಸಂರ್ಕಿತ ಚಲನಶೀಲತೆಗಾಗಿ ಐಸ್ಮಾರ್ಟ್ ನೆಕ್ಸ್ಟ್ ಜನ್ ಅನ್ನು ಅಭಿವೃದ್ಧಿ ಪಡಿಸಲು ಜಾಗತಿಕ ತಂತ್ರಜ್ಞಾನ ಮುಂದಾಳುಗಳೊಂದಿಗೆ ಕೈಜೋಡಿಸಿದೆ“

Bengaluru : ಬೃಹತ್ ಬ್ರಿಟಿಷ್ ವಾಹನತ ಯಾರಕರಾದ ಎಂ.ಜಿ. ಮೋಟಾರ್ (ಮೋರಿಸ್ ಗ್ಯಾರೇಜಸ್) ಭಾರತದ ಕಾರು ತಂತ್ರಜ್ಞಾನ ಕ್ಷೇತ್ರದಲ್ಲಿ ಹಿಂದೆಂದೂ ನೋಡಿರದ ಐಸ್ಮಾರ್ಟ್ ನೆಕ್ಸ್ಟ್ ಜೆನ್ ಅನ್ನು ಜಾಗತಿಕ ತಂತ್ರಜ್ಞಾನ ಪಾಲುದಾರರ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದೆ. ಈ ವರ್ಷದ ಜೂನ್ ವೇಳೆಗೆ ಮಾರಾಟಕ್ಕೆ ಲಭ್ಯವಾಗುವ ಎಂ.ಜಿ. ಹೆಕ್ಟರ್ ಐಸ್ಮಾರ್ಟ್ ನೆಕ್ಸ್ಟ್ ಜೆನ್ ಸಂಪರ್ಕಿತ ಚಲನಶೀಲತೆಯನ್ನು ಮರುವ್ಯಾಖ್ಯಾನಿಸುವ ಭಾರತದ ಮೊದಲ ಇಂಟರ್ನೆಟ್ ಕಾರ್ ಆಗಲಿದೆ.
ಮೈಕ್ರೋಸಾಫ್ಟ್, ಅಡೋಬ್, ಅನ್‌ಲಿಮಿಟ್, ಎಸ್ಎಪಿ, ಸಿಸ್ಕೋ, ಗಾನಾ, ಟಾಮ್‌ಟಾಮ್ ಮತ್ತು ನುವಾನ್ಸ್ ಗಳನ್ನು ಒಳಗೊಂಡ ಜಾಗತಿಕ ತಂತ್ರಜ್ಞಾನ ಪಾಲುದಾರರ ಬಲವಾದ ಸಹಯೋಗದೊಂದಿಗೆ, ಈ ಕಾರು ತಯಾರಕರು ಎಂ.ಎಂ. ಹೆಕ್ಟರ್‌ನಲ್ಲಿ ಲಭ್ಯವಿರುವ ಅಂತರ್ಜಾಲ-ಸಕ್ರಿಯ ಕಾರುಗಳ ಹಲವಾರು ಉದ್ಯಮ-ಪ್ರಥಮ ವೈಶಿಷ್ಟ್ಯಗಳನ್ನು ಅನಾವರಣಗೊಳಿಸಿದರು.
ಐಸ್ಮಾರ್ಟ್ ನೆಕ್ಸ್ಟ್ ಜೆನ್‌ನ ಮಿದುಳನ್ನು ಒಂದು 10.4 “ಹೆಡ್ ಯುನಿಟ್‌ನಲ್ಲಿ ಇರಿಲಾಗುತ್ತದೆ. ಪರದೆಯನ್ನು ಒಂದು ವರ್ಟಿಕಲ್ ಇಂಟರ್‌ಫೇಸ್‌ನಲ್ಲಿ ವಿನ್ಯಾಸಗೊಳಿಸಲಾಗುತ್ತದೆ, ಹಾಗೂ ಅದು ಚಾಲಕರು ಸಂಪೂರ್ಣ ಕಾರ್ ಸಿಸ್ಟಮ್ ಅನ್ನು ಕೇವಲ ಸ್ಪರ್ಶ ಅಥವಾ ಧ್ವನಿ ಆಜ್ಞೆಯೊಂದಿಗೆ ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ. ಈ ಹೆಡ್ ಯೂನಿಟ್ ಅನ್ನು ಭಾರತದ ತೀವ್ರ ಹವಾಮಾನ ಪರಿಸ್ಥಿತಿಯನ್ನು ತಡೆದುಕೊಳ್ಳಲು ನಿರ್ಮಿಸಲಾಗಿದೆ. ಇದು ಮನರಂಜನಾ ವಿಷಯದೊಂದಿಗೆ ಪ್ರಿ-ಲೋಡ್ ಆಗಿರುತ್ತದೆ.
ಎಮ್‌ಜಿ ಹೆಕ್ಟರ್ ಐಸ್ಮಾರ್ಟ್ ನೆಕ್ಸ್ಟ್ ಜನ್ ಒಂದು ಉದ್ಯಮದ ಮೊದಲ ಎಂಬೆಡೆಡ್ M2M ಸಿಮ್‌ನೊಂದಿಗೆ ಬರುತ್ತಿದ್ದು, ಇದು ಕಾರ್ ಸಂಪರ್ಕ ಹೊಂದಿರುವುದನ್ನು ಖಚಿತಪಡಿಸಿಕೊಳ್ಳುತ್ತದೆ. ಈ ಗ್ರಾಹಕೀಕರಣಗೊಳಿಸಿದ ಪರಿಹಾರವನ್ನು ಅನ್ಲಿಮಿಟ್ ಅವರು ಸಿಸ್ಕೋ ಮತ್ತು ಏರ್‌ಟೆಲ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿದ್ದು ಅವರು ಅನುಕ್ರಮವಾಗಿ ತಮ್ಮ ಜಾಸ್ಪರ್ ಪ್ಲ್ಯಾಟ್ಫಾರ್ಮ್ ಮತ್ತು ಟೆಲಿಕಮ್ಯುನಿಕೇಶನ್ ನೆಟ್ವರ್ಕ್ನೊಂದಿಗೆ ಸಹಕರಿಸಿದ್ದಾರೆ. ಎಮ್‌ಜಿ ಹೆಕ್ಟರ್‌ನ ಸಂಪರ್ಕದ ಚಲನಶೀಲತೆ ಪರಿಹಾರವು 5Gಗಾಗಿ ಇಂಟರ್ನೆಟ್ ಪ್ರೋಟೋಕಾಲ್ ಆವೃತ್ತಿ 6 (IPV6) ಸಿದ್ಧವಾಗಿದೆ.
ಈ ತಡೆರಹಿತ ಸಂಪರ್ಕವು ಬಳಕೆದಾರರಿಗೆ ನೈಜ-ಸಮಯದ ಸಾಫ್ಟ್ ವೇರ್, ಮನರಂಜನಾ ವಿಷಯಗಳು ಮತ್ತು ಅಪ್ಲಿಕೇಶನ್ ಅಪ್‌ಡೇಟ್‌ಗಳನ್ನು ಸ್ವೀಕರಿಸಲು ಅನುವು ಮಾಡಿಕೊಡುತ್ತದೆ. ಗ್ರಾಹಕರು ತಕ್ಷಣವೇ ಸಾಫ್ಟ್ ವೇರ್ ನವೀಕರಣಗಳನ್ನು ಡೌನ್ಲೋಡ್ ಮಾಡಲು ಅಥವಾ ಸ್ಮಾರ್ಟ್ಫೋನ್‌ಗಳಲ್ಲಿರುವಂತೆ ನಂತರ ಅವುಗಳನ್ನು ಕಾರ್ಯಗತಗೊಳಿಸಲು ಸಾಧ್ಯವಾಗುತ್ತದೆ. ಇದು ಎಮ್‌ಜಿಯನ್ನು ಕ್ರಾಂತಿಕಾರಿ ಓವರ್ ದಿ ಏರ್ (ಓಟಿಎ) ತಂತ್ರಜ್ಞಾನವನ್ನು ಕಾರುಗಳಲ್ಲಿ ಪರಿಚಯಿಸಿದ ಜಾಗತಿಕ ಮುಖಂಡರಲ್ಲಿ ಮೊದಲನೆಯವರಲ್ಲಿ ಒಬ್ಬರು ಹಾಗೂ ಭಾರತದಲ್ಲಿ ಸರ್ವಪ್ರಥಮರನ್ನಾಗಿಸುತ್ತದೆ. ಎಮ್‌ಜಿ ಹೆಕ್ಟರ್ ಎಸ್‌ಯುವಿಯಿಂದ ಪ್ರಾರಂಭವಾಗುವ ಐಸ್ಮಾರ್ಟ್ ನೆಕ್ಸ್ಟ್ ಜೆನ್ ತಂತ್ರಜ್ಞಾನವು ಸಂಪರ್ಕಿತ ಚಲನಶೀಲತೆಗಾಗಿ ಸಕ್ರಿಯಗೊಳಿಸಿದ ಎಲ್ಲಾ ಎಮ್‌ಜಿ ಕಾರುಗಳಲ್ಲಿ ಕಾಣಸಿಗುತ್ತದೆ.

“ಕಾರುಗಳ ಜೊತೆಗೆ ಅಂತರ್ಜಾಲದ ಏಕೀಕರಣವು ಭಾರತದ ಎಂಜಿ ಗ್ರಾಹಕರುಗಳಿಗೆ ಮಿತಿಯಿಲ್ಲದ ಮತ್ತು ನವೀಕರಿಸಿದ ಮಾಲೀಕತ್ವದ ಅನುಭವವನ್ನು ಖಾತ್ರಿಪಡಿಸಿಕೊಳ್ಳುವ ವೈಶಿಷ್ಟ್ಯಗಳ ಒಂದು ಗುಚ್ಛವನ್ನುತೆರೆಯುತ್ತದೆ. ಎಂಬೆಡೆಡ್ ಸಿಮ್ ಕಾರ್ಡ್ ಮತ್ತು ಓಟಿಎಯೊಂದಿಗೆ, ಎಂಜಿ ಹೆಕ್ಟರ್ ಕಾಲಾನಂತರದಲ್ಲಿ ಹೆಚ್ಚು ನಿರಂತರವಾದವಿಸ್ತರಣಾ ಸಾಮರ್ಥ್ಯದೊಂದಿಗೆ ಇನ್ನೂ ಹಲವು ಕಾರ್ಯಗಳನ್ನು ಮಾಡುವ ಭರವಸೆ ನೀಡುತ್ತದೆ, ಹಾಗೂ ಇದುಕಾರಿನ ಜೀವಿತಾವಧಿಯುದ್ದಕ್ಕೂ ಮಿತಿಯಿಲ್ಲದ ಚಾಲನಾ ಅನುಭವವನ್ನುನೀಡುವ ಭರವಸೆ ನೀಡುತ್ತದೆ “ ಎಂದುಎಂ.ಜಿ ಮೋಟಾರ್ ಇಂಡಿಯಾದಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ರಾಜೀವ್ ಚಬ್ಬಾ ಹೇಳಿದರು. “ ಇದಲ್ಲದೆ, ಭಾರತದಲ್ಲಿ 5Gಸಂಪರ್ಕದ ಆಗಮನದೊಂದಿಗೆ, ಎಂಜಿ ಕಾರುಗಳು ಕಾರು ಚಾಲನೆ ಅನುಭವವನ್ನು ಮತ್ತಷ್ಟು ಉತ್ಕೃಷ್ಟಗೊಳಿಸಲು ಹೊಸ, ಪ್ರಗತಿಪೂರ್ಣ ವೈಶಿಷ್ಟ್ಯಗಳನ್ನು ಸೇರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. , ” ಎಂದೂ ಚಬ್ಬಾ ಹೇಳಿದರು.
City Today News
(citytoday.media)
9341997936
