ಸೇವಾನಿರತ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರಿಂದ * 6 – 8ನೇ ತರಗತಿ ಬೋಧನಾ ಬಹಿಷ್ಕಾರ ಹೋರಾಟ ”

ಉಲ್ಲೇಖ : 1 . ಹೊಸ ವೃಂದಬಲ ನಿರ್ಧಾರದ ಆದೇಶ ಸಂ : ಇಡಿ626PBS / 2014 ಬೆಂಗಳೂರು ದಿನಾಂಕ 19 / 05 / 2017 , 2 , ವೃಂದ ಮತ್ತು ನೇಮಕಾತಿ ನಿಯಮಗಳ ಆದೇಶ ಸಂ : ಇಡಿ626PBS / 2014 ದಿನಾಂಕ 07 / 08 / 2017 ,

ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಒಟ್ಟು ಶಿಕ್ಷಕರಲ್ಲಿ 82 , 000 ( ಎಂಭತ್ತೆರಡು ಸಾವಿರ ಶಿಕ್ಷಕರು ಉನ್ನತ ಪದವಿ ( B . A . / B . Sc . / M . A . / M . Sc . / B . Ed . / M . Ed . / M . Phil / P . H . D . ) ಹೊಂದಿದವರಾಗಿದ್ದು ಕಳೆದ 14 ವರ್ಷಗಳಿಂದ 6 – 8ನೇ ತರಗತಿಗಳನ್ನು ವಿಷಯವಾರು ಬೋಧಿಸುತ್ತಿದ್ದಾರೆ . ಉಲ್ಲೇಖ 1ರನ್ವಯ 2014ರ ಪೂರ್ವದಲ್ಲಿ ನೇಮಕವಾದ ಎಲ್ಲಾ ಶಿಕ್ಷಕರನ್ನು “ ಪ್ರಾಥಮಿಕ ಶಾಲಾ ಶಿಕ್ಷಕರು ( 1 – 5 ) ” ವೃಂದಕ್ಕೆ ಸೇರಿಸಿರುವುದರಿಂದ ಹಿಂಬಡ್ತಿ ನೀಡಿದಂತಾಗಿದೆ . ಆದ್ದರಿಂದ ಅರ್ಹ ವಿದ್ಯಾರ್ಹತೆ ಮತ್ತು 10 ರಿಂದ 25 ವರ್ಷಗಳ ಬೋಧನಾ ಅನುಭವ ಇರುವ ಎಲ್ಲಾ 82 , 000 ಶಿಕ್ಷಕರನ್ನು “ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ( 6 – 8 ) ವೃಂದಕ್ಕೆ ಸೇರ್ಪಡೆ ಮಾಡುವುದು ಹಾಗೂ ಉಲ್ಲೇಖ 2ರ ಆದೇಶ C & Rನಲ್ಲಿ ಹಲವಾರು ಮಾರಕ ಅಂಶಗಳನ್ನು ತಿದ್ದುಪಡಿ ಮಾಡಲು ಹಲವಾರು ವಿವಿಧ ಹಂತದ ಹೋರಾಟ ಮಾಡುತ್ತಾ ಸರಕಾರಕ್ಕೆ ಮನವಿ ಮಾಡಿದ್ದೇವೆ . ರಾಜ್ಯಾದ್ಯಂತ ಈಗ ಮತ್ತೆ “ 01 – 07 – 2019 ರಿಂದ 6 – 8ನೇ ತರಗತಿಗಳ ಬೋಧನಾ ಬಹಿಷ್ಕಾರ ಚಳುವಳಿ ” ಹಮ್ಮಿಕೊಂಡಿದ್ದೇವೆ .

ಅಧ್ಯಕ್ಷರು- ಎಸ್ , ವಾಯ್ , ಸೊರಟಿ

— ಪ್ರಧಾನ ಕಾರ್ಯದರ್ಶಿ- ಹೆಚ್ . ಆರ್ , ಶಶಿಕುಮಾರ

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.