
ಬೆಂಗಳೂರು : ಗಿನ್ನೀಸ್ ದಾಖಲೆ ನಿರ್ಮಿಸುವ ಉದ್ದೇಶದೊಂದಿಗೆ ಅಂತರರಾಷ್ಟ್ರೀಯ ನಗೆಯೋಗ ತರಬೇತಿಗಾರ್ತಿ ರಂಗಲಕ್ಷ್ಮಿ ಶ್ರೀನಿವಾಸ್ ನೇತೃತ್ವದಲ್ಲಿ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಗೆಯೋಗ ಕಾರ್ಯಕ್ರಮಲ್ಲಿ ನಡೆಯಿತು.

ನಗೆಯೋಗ ಮಾಡುವುದರಿಂದ ಸೃಜನಶೀಲತೆ, ರೋಗನಿರೋದಕರ ಶಕ್ತಿ ಹೆಚ್ಚಾಗಿ ಮೈದಾನದಲ್ಲಿ ಆಟವಾಡಲು ಅಧಿಕ ಶಕ್ತಿ ನೀಡುವುದಲ್ಲದೆ, ಆರೋಗ್ಯವಂತ ವಾತಾವರಣ ನಿರ್ಮಾಣವಾಗಲು ಸಹಕಾರಿಯಾಗಿದೆ ವಿಶ್ವ ದಾಖಲೆ ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಿರ್ಮಿಸಲು ಪ್ರಯತ್ನಿಸುತ್ತೆದ್ದೇವೆ ಎಂದು ರಂಗಲಕ್ಷ್ಮಿ ಶ್ರೀನಿವಾಸ್ ಹೇಳಿದರು.
ತಮ್ಮ ಹಾಗೂ ಪರರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದು ಮತ್ತೆ ನಗುವುದನ್ನ ಹೆಚ್ಚು ಅಭ್ಯಾಸ ಮಾಡುವುದು ಇದರ ಆಧ್ಯತೆ. ಹಿಗಾಗಿ ವಿಶ್ವದಾದ್ಯಂತ ನಗೆಯೋಗವನ್ನು ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ನಗೆ ಯೋಗ ವಿಶ ದಾದ್ಯಂತ ಸುಮಾರು 116 ದೇಶಗಳಲ್ಲಿ ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದರು.

ಗ್ರೀನ್ಸ್ ಇನ್ನೊವೇಟರ್ ಸಂಸ್ಥೆಯು ಕ್ಯಾಮ್ ಕರ್ನಾಟಕ ಸೇರಿದಂತೆ ವಿವಿಧ ಸಂಸ್ಥೆಗಳ ಸಹಯೋಗದಿಂದ ನಡೆದ ನಗೆಯೋಗ ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ಶಿಕ್ಷಕರು ಹಾಗೂ ಮಕ್ಕಳು ಸೇರಿದಂತೆ 3 ಸಾವಿರಕ್ಕೂ ಅಧಿಕ ಜನರು ಭಾಗವಹಿಸಿದ್ದರು.

ಖ್ಯಾತ ಹೃದಯ ತಜ್ಞೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ, ಜೀವನ ಕೌಶಲ್ಯ ತಜ್ಞ ಜಯಪ್ರಕಾಶ್ ನಾಗತಿಹಳ್ಳಿ, ಗ್ರೀನ್ಸ್ ಇನ್ನೊವೇಟರ್ ಸಂಸ್ಥೆ ಅಧ್ಯಕ್ಷ ಶ್ರೀನಿವಾಸ್, ಬಿಬಿಎಂಪಿ ಸದಸ್ಯರಾದ ರಮೇಶ ಡಿ.ಎನ್, ಕಟ್ಟೆ ಸತ್ಯನಾರಾಯಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
City Today News
(citytoday.media)
9341997936
