
31 . 07 . 2019 ರಂದು ಭ್ರಷ್ಟಾಚಾರ ನಿಗ್ರಹ ದಳದ ಬೆಂಗಳೂರು ನಗರ ಠಾಣೆಯ ವಿವಿಧ ತಂಡಗಳಿಂದ ಕೆಲವು ಸರ್ಕಾರಿ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಬಿಬಿಎಂಪಿ ರಸ್ತೆ ಅಗಲೀಕರಣಕ್ಕೆ ವಶಪಡಿಸಿಕೊಳ್ಳಲಾದ ಸೈಟುಗಳು ಮತ್ತು ಬಿಂಗ್‌ಗಳ ಜಾಗಕ್ಕಿಂತ ಹೆಚ್ಚು ಜಾಗಕ್ಕೆ ಬೆಲೆ ನಿಗಧೀಕರಣ ಮಾಡಿಸಿಕೊಂಡು ಆ ಮೂಲಕ ಖಾಸಗಿ ವ್ಯಕ್ತಿಗಳಿಗೆ ಅಪಾರ ಪ್ರಮಾಣದ ಅಕ್ರಮ ಲಾಭ ಮಾಡಿಕೊಟ್ಟು ಬಿಬಿಎಂಪಿಗೆ ಮತ್ತು ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವುಂಟು ಮಾಡಿರುವುದರಿಂದ , ಬಿಬಿಎಂಪಿ ಆಯುಕ್ತರಿಂದ ತನಿಖೆ ಕೈಗೊಳ್ಳಲು ಪೂರ್ವಾನುಮತಿ ಪಡೆದು ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ . ಸದರಿ ಪ್ರಕರಣದಲ್ಲಿ ಹೊರಮಾವಿನ ಟಿಸಿ ಪಾಳ್ಯ ಮುಖ್ಯ ರಸ್ತೆ ಹಾಗೂ ವಾರಣಾಸಿ ರಸ್ತೆ ಅಗಲೀಕರಣಕ್ಕೆ ಸರ್ವೆ ನಂ . 7ಕ್ಕೆ ಸಂಬಂಧಿಸಿದ ಜಮೀನಿನಲ್ಲಿ ಅಂದಾಜು 6 , 886 ಚ . ಅಡಿ ಜಾಗ ಸ್ವಾಧೀನಪಡಿಸಿಕೊಂಡಿದ್ದು ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸದೇ , ಅಕ್ರಮವಾಗಿ ಅಂದಾಜು 1 , 57 , 961 ಚ . ಅಡಿ ಬೋಗಸ್ ಟಿ . ಡಿ . ಆರ್ ಅನ್ನು ಸೃಷ್ಟಿಸಿ ಅನ್ಯ ವ್ಯಕ್ತಿಗಳಿಗೆ ಅಕ್ರಮವಾಗಿ ದುಬಾರಿ ಬೆಲೆಗೆ ಮಾರಾಟ ಮಾಡಿರುತ್ತಾರೆ . ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ನಗರ ಠಾಣೆಯ ವಿವಿಧ ತಂಡಗಳಿಂದ ಆಪಾದಿತ ಸರ್ಕಾರಿ ನೌಕರರ ಮತ್ತು ಖಾಸಗಿ ವ್ಯಕ್ತಿಗಳಿಗೆ ಸಂಬಂಧಿಸಿದ 09 ಸ್ಥಳಗಳ ಮೇಲೆ ಶೋಧನೆ ವಾರೆಂಟ್ ಪಡೆದು ಶೋಧನೆ ನಡೆಸಲಾಗಿರುತ್ತದೆ .
ಶೋಧನಾ ಕಾರ್ಯವು ಮುಂದುವರೆದಿದ್ದು ಈವರೆಗೆ ಶೋಧನೆ ನಡೆಸಲಾದ ಜಾಗಗಳ ಮಾಹಿತಿ ಈ ಕೆಳಕಂಡಂತಿರುತ್ತವೆ .
1 . ಶ್ರೀ . ನಾಗರಾಜು , ಕಾರ್ಯಪಾಲಕ ಅಭಿಯಂತರರು , ಬಿಬಿಎಂಪಿ ಚೋಳರ ಪಾಳ್ಯ , ಬೆಂಗಳೂರು ನಲ್ಲಿನ ವಾಸದ ಮನೆ .
2 . ಶ್ರೀಮತಿ ಎಸ್ ನಂದನ , ಎ . ಆರ್ . ಓ , ಬಿಬಿಎಂಪಿ ರವರ ಬಿ . ಟಿ . ಎಂ . ಲೇಔಟ್‌ನಲ್ಲಿನ ವಾಸದ ಮನೆ ಮತ್ತು ಈ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಸಹಾಯಕ ಕಂದಾಯ ಅಧಿಕಾಗಳ ಕಛೇರಿ , ಹೊರಮಾವು ಉಪವಲಯ , ಬಿಬಿಎಂಪಿ ಬೆಂಗಳೂರು .
3 , ಶ್ರೀ ಎಂ . ಕೆ . ರೋಚನ್ ರವರ ಹೆಚ್ . ಆರ್ . ಬಿ . ಆರ್ ಲೇಔಟ್ , ಕಲ್ಯಾಣನಗರದಲ್ಲಿನ ವಾಸದ ಮನೆ .
4 . ಗುಡ್ ಹೋಂ ವೆಂಚರ್ , ಕಲ್ಕೆರೆ ಮುಖ್ಯ ರಸ್ತೆ , ಹೊರಮಾವು ಬೆಂಗಳೂರು ನಲ್ಲನ ಕಛೇರಿ ,
5 . ಶ್ರೀ ವಿ . ಗಜೇಂದ್ರ ಅವರ ಹೊರಮಾವು ಬೆಂಗಳೂರು ನಲ್ಲನ ವಾಸದ ಮನೆ .
6 . ಜಿ . ವಿ . ಕನ್‌ಸಕ್ಷನ್ ಕರೆ ಮುಖ್ಯ ರಸ್ತೆ , ಬೆಂಗಳೂರು ನಗರದಲ್ಲಿನ ಕಛೇರಿ ,
7 . ಶ್ರೀ ಗೋಪಿ , ಸರ್ಜಾಪುರ ಮುಖ್ಯರಸ್ತೆ , ಬೆಂಗಳೂರು ನಗರದಲ್ಲಿನ ವಾಸದ ಮನೆ .
8 . ಶ್ರೀಮತಿ ಆನೆಮ್ಮ , ಅಕ್ಷಯ ನಗರ ಕೌದೇನಹಳ್ಳಿ , ರಾಮಮೂರ್ತಿನಗರ ಬೆಂಗಳೂರು ನಲ್ಲನ ವಾಸದ ಮನೆ .
ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ನಗರ ಠಾಣೆಯ ವಿವಿಧ ತಂಡಗಳಿಂದ ಮೇಲ್ಕಂಡ ಸ್ಥಳಗಳಲ್ಲಿ ಶೋಧನಾ ಕಾರ್ಯ ನಡೆಸಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ . ಪ್ರಕರಣದ ತನಿಖೆ ಮುಂದುವರೆದಿದೆ .
City Today News
(citytoday.media)
9341997936
