ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ಅಧ್ಯಕ್ಷ ಎಸ್.ಕೃಷ್ಣಮೂರ್ತಿ, ಖಜಾಂಜಿ ಸೋಮಶೇಖರಯ್ಯ ಸ್ಪರ್ಧಿಸಿರುವ ಅಭ್ಯರ್ಥಿಗಳನ್ನು ಬೆಂಬಲಿಸಲು ಮನವಿ.

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಸಂಘದ ಉಪಾಧ್ಯಕ್ಷ ಎಸ್.ಕೃಷ್ಣಮೂರ್ತಿ ಮತ್ತು ಖಜಾಂಜಿ ಅಭ್ಯರ್ಥಿ ಸೋಮಶೇಖರಯ್ಯರವರಿಗೆ ಬೆಂಬಲ ನೀಡುವಂತೆ ಸಂಘ ಮಾಜಿ ಅಧ್ಯಕ್ಷ ಬಿ.ಪಿ.ಮಂಜೇಗೌಡ ತಿಳಿಸಿದರು.

ಸರ್ಕಾರಿ ನೌಕರರ ಸಂಘಕ್ಕೆ 2019-24 ನೇ ಸಾಲಿನ ಅಧ್ಯಕ್ಷರು ಹಾಗೂ ಖಜಾಂಚಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಎಸ್. ಕೃಷ್ಣಮೂರ್ತಿ ಮತ್ತು ಸೋಮಶೇಖರಯ್ಯ ಅವರು ಸಂಘದ ವಿವಿಧ ಅಭಿವೃದ್ಧಿ ಅಂಶಗಳನ್ನು ಒಳಗೊಂಡಿದ್ದು ಅವರಿಗೆ ಬೆಂಬಲ ಸೂಚಿಸಬೇಕು ಎಂದರು.

ಎನ್.ಪಿ.ಎಸ್. ಸ್ಕೀಂ ರದ್ದುಪಡಿಸಿ ಒಪಿಎಸ್ ಜಾರಿಮಾಡಲು ಪ್ರಥಮ ಆದ್ಯತೆ 6 ನೇ ವೇತನ ಆಯೋಗದ 2 ನೇ ವರದಿಯಲ್ಲಿರುವ ಶಿಫಾರಸ್ಸುಗಳನ್ನು ಜರೂರು ಅನುಷ್ಠಾನ 7 ನೇ ವೇತನ ಆಯೋಗದ ರಚನೆಗೆ ಶ್ರಮಿಸುವುದು ಸೇರಿದಂತೆ ವಿವಿಧ ಆಶ್ವಾಸನೆಗಳನ್ನು ಹೊಂದಿದ್ದು ಚುನಾವಣೆಯಲ್ಲಿ ಬೆಂಬಲ ನೀಡುವಂತೆ ತಿಳಿಸಿದರು.

ಸಿ ಅಂಡ್ ಆರ್ ತಿದ್ದುಪಡಿ, ಬೆಂಗಳೂರಿನಲ್ಲಿ ನೌಕರರ ಸಂಘಕ್ಕೆ ಬೆಂಗಳೂರಿನಲ್ಲಿ ಮಂಜೂರಾತಿ ಹಂತದಲ್ಲಿರುವ ನಿವೇಶನ ಮಂಜೂರು, ಸಮುಚ್ಛಯಗಳ ನಿರ್ಮಾಣ, ಜಿಲ್ಲಾ ಸಮುದಾಯ ಭವನಗಳಿಗೆ ಪ್ರೋತ್ಸಹ ಧನ, ಸೇರಿದಂತೆ ಇನ್ನಿತರ ನೌಕರರ ಸಂಬಂಧ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಹೆಚ್ಚು ಒತ್ತು ನೀಡಲಾಗುವುದು.

ನಮ್ಮ ತಂಡದಿಂದ ಅಧ್ಯಕ್ಷರು ಹಾಗೂ ಖಜಾಂಚಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಎಸ್. ಕೃಷ್ಣಮೂರ್ತಿ ಮತ್ತು ಸೋಮಶೇಖರಯ್ಯ ಅವರನ್ನು ಬೆಂಬಲಿಸುವ ಉದ್ದೇಶದಿಂದ ಅಧ್ಯಕ್ಷರು ಹಾಗೂ ಖಜಾಂಚಿ ಸ್ಥಾನಕ್ಕೆ ಸಲ್ಲಿಸಿದ್ದ ಇ.ಸಿ. ದ್ವಿತೀಯಾ, ಮಧುಸೂಧನ್ ರೆಡ್ಡಿ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ ಎಂದು ತಿಳಿಸಿದರು.

ಚುನಾವಣೆಗೆ ಸ್ಪರ್ಧಿಸುತ್ತಿರುವ ಎಸ್. ಕೃಷ್ಣಮೂರ್ತಿ ಮತ್ತು ಸೋಮಶೇಖರಯ್ಯ ನೌಕರರ ಸಂಘದ ಉಪಾಧ್ಯಕ್ಷರಾದ ಬಿ.ಕೆ. ಗಿರಿಗೌಡ, ಇ.ಸಿ. ದ್ವಿತೀಯಾ, ಮಧುಸೂಧನ್ ರೆಡ್ಡಿ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದ್ದರು.

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.