ಪ್ರಕೃತಿಯನ್ನು ನಾವು ನಾಶ ಮಾಡಿದ ಕಾರಣ ಪ್ರಕೃತಿ ನಮ್ಮನ್ನು ನಾಶ ಮಾಡುತ್ತಿದೆ

ಅಂದು ವಾರಗಟ್ಟಲೆ ನಿರಂತರವಾಗಿ ಒಂದು ಘಳಿಗೆಯೂ ಬಿಡದೆ ಮಳೆ ಸುರಿಯುತ್ತಿದ್ದರೂನು ಮಳೆಯ ಕಾರಣದಿಂದ ಊರಿಡೀ ಮುಳುಗುವುದಾಗಲಿ, ಮನೆಗಳು ಬೀಳುವುದಾಗಲಿ, ಪ್ರಾಣ ಕಳೆದುಕೊಳ್ಳುವುದಾಗಲಿ, ಕಿಲೋಮೀಟರ್‌ಗಳಷ್ಟು ನಡೆಯುವ ದೂರ ಇದ್ದರೂ ಶಾಲೆಗಳಿಗೆ ರಜೆ ಸಿಗುವುದಾಗಲಿ ಯಾವುದೂ ಇರಲಿಲ್ಲ.ನಾವು ಶಾಲೆಗೆ ಹೋಗುವ ಸಮಯದಲ್ಲಿ ಅಂದರೆ ಸುಮಾರು ಹದಿನೈದು ಇಪ್ಪತ್ತು ವರ್ಷಗಳ ಹಿಂದೆ ಇದಕ್ಕಿಂತಲೂ ಹೆಚ್ಚು ಜೋರಾಗಿ ಮಳೆ ಬರುತ್ತಿತ್ತು. ಆದರೆ ಈಗ ಯಾಕೆ ಹೀಗೆ..? ಹತ್ತು ದಿನ ಬಂದ ಮಳೆಗೆ ಇಡೀ ಊರಿಗೆ ಊರೇ ಮುಳುಗಿ ನಾಶವಾಗಲು ಕಾರಣ ನಾವೇ ಅಲ್ಲವೇ.!
ನೀರು ನಿಲ್ಲಬೇಕಾದ ಜಾಗದಲ್ಲಿ ಗಗನಚುಂಬಿ ಕಟ್ಟಡಗಳು ನಿರ್ಮಾಣ ಮಾಡಿದೆವು, ನೀರು ಹರಿಯಬೇಕಾದ ಜಾಗವನ್ನೆಲ್ಲಾ ರಸ್ತೆಗಾಗಿ ಡಾಮರೀಕರಣ ಹಾಗೂ ಕಾಂಕ್ರೀಟ್ ಮಾಡಿದೆವು. ಮಳೆ ನೀರನ್ನು ಹೀರಿಕೊಳ್ಳುವ ಭೂಮಿಯ ಎಲ್ಲಾ ದಾರಿಗಳನ್ನು ಮನುಷ್ಯರು ಮುಚ್ಚಿದಾಗ ರಸ್ತೆಗಳು ನದಿಗಳಂತಾದವು, ಮನೆಯ ಅಂಗಳ ಈಜು ಕೊಳದ ರೂಪ ಪಡೆದು ಮನೆಯ ಒಳಗೂ ನೀರು ಹರಿದು ಬಂತು.

ಮನುಷ್ಯನ ಹೆಚ್ಚಿನ ಸೌಕರ್ಯಕ್ಕಾಗಿ ಪರಿಸರವನ್ನು ನಾಶಪಡಿಸಿದ ಪರಿಣಾಮ ಬೇಕಾದಷ್ಟು ಮಳೆ ಬರದಂತಾಯಿತು, ಮಳೆ ಬಂದರೂ ಇಡೀ ಊರೇ ಮುಳುಗಿ ಹೋಗುವಂತ ಪರಿಸ್ಥಿತಿ ನಿರ್ಮಾಣ ಮಾಡಿಟ್ಟಿದ್ದು ನಾವೇ ಅಲ್ಲವೇ.!
ಪ್ರಕೃತಿಯನ್ನು ನಾವು ನಾಶ ಮಾಡಿದ ಕಾರಣ ಪ್ರಕೃತಿ ನಮ್ಮನ್ನು ನಾಶ ಮಾಡುತ್ತಿದೆ.

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.