
ಪಿ.ಸಿ.ಎಲ್ : ಪತ್ರಿಕಾ ಪ್ರಕಟಣೆ.
ನಮ್ಮ ಅಧಿಕೃತ ಪ್ರಾಯೋಜಕತ್ವ ವಹಿಸಿರುವ WFS (ವರ್ಡ್ವೈಡ್ ಫ್ಲೈಟ್ ಸರ್ವೀಸಸ್) ಈ ಪರಿಕ್ರಮ ಚಾಂಪಿಯನ್ಸ್ ಲೀಗ್ ಟೂರ್ನಮೆಂಟನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಕ್ಕೆ ನಮ್ಮ ಹೃದಯಪೂರ್ವಕ ಧನ್ಯವಾದ ಹೇಳಲು ಬಯಸುತ್ತೇವೆ.
3 ದಿನದಿಂದ ನಡೆದ ಪಂದ್ಯದ ವಿವರ: :

1 ನೆಯ ದಿನ :
ಹೆಸರಾಂತ ಮಾಜಿ ಕ್ರಿಕೆಟ್ ಆಟಗಾರರಾದ ಶ್ರೀಯುತ ರಾಹುಲ್ ದ್ರಾವಿಡ್ ರವರು ಪರಿಕ್ರಮ ಚಾಂಪಿಯನ್ ಲೀಗ್ ಪಂದ್ಯವನ್ನು ಉದ್ಘಾಟಿಸಿ ಮಾತನಾಡುತ್ತಾ “ ಅಂತರ್ ಶಾಲಾ ಮಟ್ಟದ ಟೂರ್ನಮೆಂಟನ್ನು ಆಯೋಜಿಸಿ ಕ್ರೀಡೆಯನ್ನು ಪ್ರೋತ್ಸಾಹಿಸಿದರೆ ಅದು ಒಂದು ದೊಡ್ಡ ಸಾಧನೆ ಮಾಡಿದಂತಾಗುತ್ತದೆ. ಮಕ್ಕಳಿಗೆ ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ಆಟಗಳ ಬಗ್ಗೆ ಅರಿವು ಮೂಡುತ್ತದೆ” ಎಂದು ಹೇಳಿದರು
ಮೊದಲ ದಿನ ಒಟ್ಟು 16 ತಂಡಗಳು (ಸರ್ಕಾರೀ ಶಾಲೆಗಳು ಮತ್ತು ಅಂತರ್ ರಾಷ್ಟ್ರೀಯ ಶಾಲೆಗಳು ಮತ್ತು ಗೋವ, ಬೆಳಗಾಂ ಮತ್ತು ಉದಯಪುರ್ ಹಾಗೂ ದುಬೈ ತಂಡಗಳು) ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದವು.

2 ನೆಯ ದಿನ:
ಮೊದಲ ದಿನ ಗೆಲುವು ಸಾದಿಸಿದ ಒಟ್ಟು 8 ತಂಡಗಳು ಈ ದಿನ ತಮ್ಮ ಪಂದ್ಯಗಳನ್ನು ಆಡಿ ಸೆಮಿ ಫೈನಲ್ ಪ್ರವೇಶಿಸಿದರು. ಇದರೊಂದಿಗೆ, ಬೆಂಗಳೂರು ವಾರಿಯರ್ಸ್ ತಂಡ ಮತ್ತು ಪರಿಕ್ರಮ ಬಾಲಕಿಯರ ತಂಡದೊಂದಿಗೆ ಪ್ರದರ್ಶನ ಪಂದ್ಯವು ನಡೆಯಿತು. ಈ ಪಂದ್ಯವು ಡ್ರಾ ನಲ್ಲಿ ಅಂತ್ಯವಾಯಿತು.ಎರಡನೆಯ ಪಂದ್ಯವು ಸ್ಟೋನ್ ಹಿಲ್ ಇಂಟರ್ ನ್ಯಾಷನಲ್ ತಂಡ ಮತ್ತು ಪರಿಕ್ರಮ ತಂಡಗಳ ನಡುವೆ ನಡೆದು, ಇದರಲ್ಲಿ ಪರಿಕ್ರಮ ತಂಡವು 4 – 1 ಗೋಲುಗಳಿಂದ ಗೆದ್ದು ಬೀಗಿತು.

ಇದೇ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ನ ಲಯನ್ ವೈಷ್ಣವಿಯವರ ನೆರವಿನಿಂದ ‘ಶಾಂತಿ ಸಂದೇಶದ ವಿಷಯ ವಸ್ತುವುಳ್ಳ ಚಿತ್ರ ಕಲಾ ಸ್ಪರ್ಧೆ ನಡೆಯಿತು. ಯೂರೋ ಸ್ಕೂಲ್ ಮತ್ತು ಶಿವಾಜಿ ನಗರದ ಸರ್ಕಾರೀ ಪ್ರಾಥಮಿಕ ಶಾಲೆ ಸೇರಿದಂತೆ ವಿವಿಧ ಶಾಲೆಯ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
3 ನೆಯ ದಿನ :
ಮೊದಲನೆಯ ಸೆಮಿ ಫೈನಲ್ ಪಂದ್ಯವು ಕೇಂದ್ರೀಯ ವಿದ್ಯಾಲಯ, ಹೆಬ್ಬಾಳ ಮತ್ತು ಹೆಡ್ ಸ್ಟಾರ್ಟ್ ಬೆಂಗಳೂರು ತಂಡಗಳ ನಡುವೆ ನಡೆಯಿತು. 2 ನೆಯ ಸೆಮಿ ಫೈನಲ್ ಪಂದ್ಯವು ಡೆಲ್ಲಿ ಪಬ್ಲಿಕ್ ಸ್ಕೂಲ್, ಬೆಂಗಳೂರು ಉತ್ತರ ಮತ್ತು ಇನ್ವೆಂಚರ್ ಅಕಾಡೆಮಿ, ಬೆಂಗಳೂರುತಂಡಗಳ ನಡುವೆ ನಡೆಯಿತು.
ಫೈನಲ್ ಪ್ರವೇಶಿಸಿದ ಕೇಂದ್ರೀಯ ವಿದ್ಯಾಲಯ, ಹೆಬ್ಬಾಳ ಮತ್ತು ಡೆಲ್ಲಿ ಪಬ್ಲಿಕ್ ಸ್ಕೂಲ್, ಬೆಂಗಳೂರು ತಂಡಗಳ ನಡುವೆ ನಡೆಯಿತು.
ಈ ವರ್ಷದ ಪಿ.ಸಿ.ಎಲ್ – 2019 ಕಪ್
ವಿಜೆತ ತಂಡ:
ಡೆಲ್ಲಿ ಪಬ್ಲಿಕ್ ಸ್ಕೂಲ್, ಬೆಂಗಳೂರು
ದ್ವಿತೀಯ ಸ್ಥಾನ ಗಳಿಸಿದ ತಂಡ : ಕೇಂದ್ರೀಯ ವಿದ್ಯಾಲಯ, ಹೆಬ್ಬಾಳ
ಪ್ರತಿ ವರ್ಷದಂತೆ, ನಮ್ಮ ದೇಶದ ಪ್ರತಿಷ್ಟಿತ ಉದ್ಯಮಗಳ CEO ಗಳನ್ನೊಳಗೊಂಡ ತಂಡವು ಪರಿಕ್ರಮ ವಿದ್ಯಾರ್ಥಿಗಳ ತಂಡದೊಂದಿಗೆ ಫುಟ್ ಬಾಲ್ ಪಂದ್ಯವನ್ನು ಆಡಿ ಆನಂದ ಪಟ್ಟರು.

ಸಮಾರೋಪ ಸಮಾರಂಭದ ಮುಖ್ಯ ಅಥಿತಿಗಳಾಗಿ ಭಾಗವಹಿಸಿದವರು:
ಶ್ರೀ ಜೆರೋಮ್ ಬೋವಿ- ಸೈಂಟಿಫಿಕ್ ಅಟಾಚಿ ಫ್ರೆಂಚ್ ಎಂಬಸ್ಸಿ.
ಶ್ರೀ ಸಂತೋಷ್ ಶೆಟ್ಟಿ : ಭಾರತೀಯ ಸ್ಟೇಟ್ ಬ್ಯಾಂಕ್ CSR ಮುಖ್ಯಸ್ಥರು.
ಶ್ರೀ ಸತ್ಯನಾರಾಯಣ್ : ಕರ್ನಾಟಕ ರಾಜ್ಯ ಫುಟ್ ಬಾಲ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ.
ಶ್ರೀ ಹುಮಾಯೂನ್ : ಭಾರಾತೀಯ ವಿನ್ಯಾಸ ಸಂಸ್ಥೆಯ ಎಂ. ಡಿ.
ಶ್ರೀ ಭೂಪಾಲ್ : ಬೆಂಗಳೂರು ಜಿಲ್ಲಾ ಫುಟ್ ಬಾಲ್ ಅಸೋಸಿಯೇಷನ್.
City Today News
(citytoday.media)
9341997936
