
ಮೋದಿ ನೇತೃತ್ವದ , ಕೇಂದ್ರ ಸರ್ಕಾರ ಪೌರತ್ವ ( ತಿದ್ದುಪಡಿ ) ಕಾಯಿದೆ 2019ರನ್ನು ಜಾರಿಗೆ ತಂದ ನಂತರ , ಕಾಯಿದೆಯನ್ನು ವಿರೋಧಿಸಿ , ವಿರೋಧ ಪಕ್ಷಗಳು , ಸಾಮಾಜಿಕ ಸಂಘಟನೆಗಳು ಪ್ರತಿಭಟನೆ ಮಾಡುವ ಮುಖಾಂತರ ಎನ್ . ಆರ್ . ಸಿ . ಕಾಯಿದೆ ವಾಪಸ್ಸು ಪಡೆಯಬೇಕೆಂಬ ಒತ್ತಡ ಹೆಚ್ಚುತ್ತಿರುವುದು ದೇಶದಲ್ಲಿ ಕಾಣಬಹುದು .
ಈ ಮಧ್ಯೆ , ಕರ್ನಾಟಕ ರಾಜ್ಯದಲ್ಲಿ ಎಸ್ . ಡಿ . ಪಿ . ಐ , ಪಕ್ಷವನ್ನು ನಿಷೇಧಿಸಬೇಕು . ಇದರಿಂದಲೇ ಕೋಮುಗಲಭೆಗಳು ನಡೆಯುತ್ತಿವೆ ಎಂದು ರಾಜ್ಯಸರ್ಕಾರ ಆಪಾದನೆ ಮಾಡುತ್ತಿದೆ . ಒಂದು ವಿಚಾರವನ್ನು ಇಲ್ಲಿ ನೋಡಬೇಕು . 1948 , ಜನವರಿ – 30 ರಂದು ಗಾಂಧೀಜಿಯನ್ನು ಕೊಂದ ಕಾರಣದಿಂದ ಆರ್ . ಎಸ್ . ಎಸ್ . ನ್ನು ನಿಷೇದಿಸಿದ್ದು ಇತಿಹಾಸ . ಆದರೆ , ಸಂವಿಧಾನಬದ್ಧವಾಗಿ ರಾಷ್ಟ್ರೀಯ ಚುನಾವಣಾ ಆಯೋಗದಿಂದ ನೋಂದಾವಣೆ ಹೊಂದಿರುವ ರಾಜಕೀಯ ಪಕ್ಷವನ್ನು ನಿಷೇದಿಸಲು ‘ ಇವರಿಗೆ ಏನು ಅಧಿಕಾರವಿದೆ ? ಏನೇ ಆದರೂ ನಿಷೇದಿಸುವ ಪ್ರಕ್ರಿಯೆಯಿಂದ ಸರ್ಕಾರಗಳು ಹೊರಬರಬೇಕು . ಏಕೆಂದರೆ , ಗೋದ್ರಾ ಹತ್ಕಾಖಂಡಕ್ಕೆ ಕಾರಣ ಯಾರು ? ಬಾಬರಿ ಮಸೀದಿ ಧ್ವಂಸಕ್ಕೆ ಕಾರಣರು ಯಾರು ? ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿರುವ ಈ ಪಕ್ಷಗಳನ್ನು ನಿಷೇದ ಮಾಡಲಿಕ್ಕೆ ಸಾಧ್ಯವಾಗುತ್ತದೆಯೇ ಯೋಚಿಸಿ ನೋಡಿ . ಈ ಹಿನ್ನೆಲೆಯಲ್ಲಿ ಯಾವುದೇ ಸಂಘಟನೆ / ರಾಜಕೀಯ ಪಕ್ಷವನ್ನು ನಿಷೇದಿಸುವುದಕ್ಕೆ ಆರ್ . ಪಿ . ಐ . ಕೆ . ಪಕ್ಷವು ವಿರೋಧಿಸುತ್ತದೆ . ಸರ್ಕಾರಗಳು ಇಂತಹ ನಿಲುವುಗಳಿಂದ ಕೂಡಲೇ ಹೊರಬರಬೇಕೆಂದು ಒತ್ತಾಯಿಸುತ್ತೇವೆ .
– ಡಾ | | ಆರ್ . ಮೋಹನ್‌ರಾಜು
ರಾಜ್ಯಾಧ್ಯಕ್ಷರು
ಆರ್ . ಪಿ . ಐ . – ಕೆ
ಎಂ . ನಾರಾಯಣ್
ರಾಜ್ಯ ಸll ಸಂಚಾಲಕರು
ಡಿ . ಎಸ್ . ಎಸ್ . ಭೀಮವಾದ
ಸಿದ್ದಪ್ಪ
ರಾಜ್ಯ ಸಮಿತಿ ಸದಸ್ಯರು
ಡಿ . ಎಸ್ . ಎಸ್ . ಭೀಮವಾದ
City Today News
(citytoday.media)
9341997946
