“ ಬೂದಾಳು ( ಬೂದಿಹಾಳ್ ) ಗೊಲ್ಲಸಿರಿಉಮನ ಕ್ಷೇತ್ರ ಉತ್ಖನನ ಅಗತ್ಯ ” – ಬಾಗೂರು ಆರ್ . ನಾಗರಾಜಪ್ಪ ಸಾಹಿತಿ ಹಾಗೂ ಸಂಶೋಧಕ , ಹೊಸದುರ್ಗ.

ಚಿತ್ರದುರ್ಗ ಜಿಲ್ಲೆಯ ಪ್ರಮೂಖ ಐತಿಹಾಸಿಕ ಸ್ಥಳಗಳಲ್ಲಿ ಹೊಸದುರ್ಗ ತಾಲ್ಲೂಕಿನ ಬೂದಿಹಾಳು ಪಾಳೆಯಗಾರ ಗೊಲ್ಲಸಿರುಮನ ಕ್ಷೇತ್ರದ ಬೀಡಾದ ಇಂದಿನ ಶ್ರೀರಾಂಪುರವು ತನ್ನದೇ ಆಗಿರುವ ಮಹತ್ವವನ್ನು ಪಡೆದಿದೆ ಕ್ರಿ . ಶ . 15ನೇ ಶ . ಮಾ . ದಲ್ಲಿ ಇಲ್ಲಿ ಆಳ್ವಿಕೆ ನಡೆಸಿದ ಗೊಲ್ಲಸಿರುಮ ನಾಯಕನು , ತನ್ನ ಮೇಲೆರಗಿದ ವಿಜಯನಗರದ ಸಾಳ ನರಸಿಂಗರಾಯನ ವಿರುದ್ಧ ಪರಾಕ್ರಮದಿಂದ ಹೋರಾಡಿ , ಇವನ ತಂದೆ ಕಾಚನು ಕ್ರಿ . ಶ . 1435 ರಿಂದ 1460 ರವರೆಗೆ ( 25 ವರ್ಷಗಳ ಕಾಲ ) ಮೊದಲಿಗೆ ಸೂಜಿಕಲ್ಲುದುರ್ಗ ದಿಂದ ಆಳ್ವಿಕೆ ನಡೆಸಿದರೆ , ಕ್ರಿ . ಶ . 1460 ರಿಂದ 1479 ರವರೆಗೆ ( 19 ವರ್ಷಗಳ ) ಗೊಲ್ಲಸಿರುವ ನಾಯಕನು . ಬೂದಿಹಾಳು ಕೋಟೆ ಯಿಂದ ಸಮರ್ಥವಾಗಿ ಆಳಿಧನು ಸಿರುಮನ ತಮ್ಮನಾದ ಮಲ್ಲನಾಯಕನು . ಹೆಗ್ಡೆರೆವಳಿತವನ್ನು ನೋಡಿಕೊಳ್ಳುತ್ತಿದ್ದನು . ಇವನ ಪತ್ನಿ ಚಿಕಾಯಿಯ ತಮ್ಮನಾದ ಭೈರನಾಯಕನು ಹತ್ತಿರದ ಬೆಲಗೂರು ಕೋಟೆಯ ವಜೀರನಾಗಿದ್ದನು .

ಅಭೇದ್ಯ ಕೋಟೆಯಾಗಿದ್ದ ಬೂದಿಹಾಳುಕೋಟೆಯ ಮೇಲೆ ಅನೇಕ ಶತೃಪಾಳೆಯಗಾರರ ಕಣ್ಣಿದ್ದಿತು ( ಹಿರಿಯೂರಿನ ಕಸವಿನಾಯಕ , ಹೊನ್ನವಳ್ಳಿ ವೇದರಾಜ , ಹಾಲ್ಕುರಿಕೆ ರುದ್ರರಾಜ , ಎಕ್ಕಟೆ ಗಂಗಯ್ಯ ಇತ್ಯಾದಿ ) ಅವರೆಲ್ಲ ಇರುಮನ ವಿರುದ್ದ ಸಾಳ್ವ ನರಸಿಂಗರಾಯನಿಗೆ ಹೇಳದ ಶತೃ ಅಕ್ರಮಣಕ್ಕೆ ಬಲಿಯಾಗಿ ಸಿರುಮನ ಆಳ್ವಿಕೆ ಪತನಗೊಂಡ ರೋಚಕ ಇತಿಹಾಸವನ್ನು ಸಾರುವ ದೊಡ್ಡ ಸಂಗತಿಯಾಗಿದೆ .

ಪರಾಕ್ರಮಿ ಗೊಲ್ಲಸಿರುಮನ ವೀರಗಾಥೆಯು ರೋಮಾಂಚಕಾರಿಯಾದುದು ಸಿರುಮನ ಮಗ ಕುಮಾರಮಲ್ಲನ ಶೌರಕ್ಕೆ ಮೆಚ್ಚಿದ ವಿಜಯನಗರದ ಸಾಳ್ವ ನರಸಿಂಗರಾಯನು , ಯುದ್ದದಲ್ಲಿ ಪರಾಕ್ರಮದಿಂದ ಹೋರಾಡಿ ಮಡಿದ ಕುಮಾರಮಲ್ಲನ ರುಂಡವನ್ನು ಪುರದೊಳಗೆ ಮೆರವಣಿಗೆ ಮಾಡಿಸಿ ಅವನ ಸಮಾಧಿಯ ಮೇಲೆ ವಿರಗಲ್ಲ ಕೆತ್ತಿಸಿ ಸಾಳವನರಸಿಂಹ ಮಮ್ಮಲಮರುಣಿ ಗುಡಿ ಕಟ್ಟಿಸಿರುವುದು ಇತಿಹಾಸದಲ್ಲೇ ಅಪರೂಪದ ಘಟನೆಯಾಗಿದೆ .

ಇಂದಿಗೂ ಕುಮಾರಮಲ್ಲನ ಗುಡಿಯನ್ನು ಶ್ರೀರಾಂಪುರದಲ್ಲಿ ಕಾಣಬಹುದಾಗಿದ್ದು , ಕುಮಾರಮನ ವೀರಗಲ್ಲುಗಳು ಹಾಗೂ ಕಟ್ಟಿಗೆಯ ರುಂಡ ಅಲ್ಲವೆ . ಪ್ರತಿವರ್ಷ ವಿಜಯ ದಶಮಿ ಸಂದರ್ಭದಲ್ಲಿ ಜರುಗುವ ಕುಮಾರಮಲ್ಲನ ಅಂಬು ಇತಿಹಾಸದ ದೃಷ್ಟಿಯಿಂದ ಹಾಗೂ ಜಾನಪದದ ದೃಷ್ಟಿಯಿಂದ ಅಧ್ಯಯನಾರ್ಹವದುದಾಗಿದೆ .

ಸಿರುಮನ ಸಾಂಗತ್ಯಗಳೇ ಅಲ್ಲದೆ , ಕನ್ನಡದ ‘ ಬೆಟ್ಟವರ್ಧನ ಚರಿತ್ರೆ ‘ ‘ ಸಿಂಗಿರಾಜ ಪುರಾಣ ‘ ತೆಲುಗಿನ ‘ ವರಾಹ ಪುರಾಣ ‘ , ‘ ಬಾಲ ಭಾಗವತ ‘ ಹಾಗೂ ಪ್ರಾನ್ಸಿಸ್ ಬುಕೌಸಿಸ್ ನ ‘ ಎ ಜರ್ನಿ ಫ್ರಂ ಮದ್ರಾಸ್ . . . . . . . ‘ ಮುಂತಾದ ಕೃತಿಗಳಲ್ಲ ಬೂದಿಹಳು ಕೋಟೆಯ ಗೊಲ್ಲಸಿರುಮನ ಉಲ್ಲೇಖಗಳನ್ನು ಕಾಣಬಹುದಾಗಿದೆ .

ಬೂದಿಹಾಳು ಕೋಟೆಯ ಗೊಲ್ಲಸಿರುಮನನ್ನು ಕುರಿತು ಮೊದಅಗೆ ಬರೆದ ಕೀರ್ತಿ ಹುಲ್ಲೂರು ಶ್ರೀನಿವಾಸ ಹೋಯಿಸರಿಗೆ ಸಲ್ಲುತ್ತದೆ ( 1951 ರಲ್ಲ , ‘ ಕನ್ನಡ ಕಲ ಸಿರುಮನ ಚರಿತ್ರೆ ‘ ಗದ್ಯದಲ್ಲಿ ಬರೆದಿದ್ದಾರೆ ) , ತದನಂತರ ಡಾ | | ಎಂ . ಎಂ . ಕಲಬುರ್ಗಿ ಯವರು ಮೂರು ಸಾಂಗತ್ಯ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ ( 1983 – 1994 ) .

ಕರ್ನಾಟಕದಲ್ಲಿಯೇ ಅತ್ಯಂತ ಮಹತ್ವವಾದ ಇತಿಹಾಸವನ್ನು ಹೊಂದಿರುವ ಬೂದಿಹಾಳು ಪಾಳೆಯಪಟ್ಟಿನ ವ್ಯಾಪತಿಯಲ್ಲಿ ಸರ್ಕಾರವು ಉತ್ಕನನ ಕಾರ್ಯವನ್ನು ನಡೆಸುವ ಹಾಗೂ ಇಲ್ಲಿನ ಕುಮಾರಮಲ್ಲನ ಗುಡಿ , ಲಕ್ಷಮೀಕಾಂತ ದೇವಾಲಯ ಮುಂತಾದ ಅಮೂಲ್ಯ ಸ್ಮಾರಕಗಳನ್ನು ಜೀರ್ಣೋದ್ದಾರಗೊಳಿಸಿ ಐತಿಹಾಸಿಕ ಸ್ಮಾರಕಗಳು ಭವ್ಯಕೋಟಿಯ ಬುರ್ಜ ಭವ್ಯ ಶಿಲ್ಪಕ ಹೊಸ್ಥಳ ವಾಸ್ತು ಶಿಲ್ಪಕಲೆ ಹೊಸ್ತಳ ಸೀಮೆಯಲ್ಲಿಯೇ ಅತ್ಯಂತ ಶ್ರೀಮಂತ ಸಂಪತ್ತು ಬರಿತ ಸುಂದರ ನಗರವಾಗಿತ್ತೆದು ಸಾಂಗತ್ಯದಲ್ಲಿ ವರ್ಣನೆಯಾಗಿದೆ ಇಲ್ಲಿ ಕುರ್ಮ ಅವತಾರದ ಮಹಾವಿಷ್ಣು ಹಾಗೂ ಅನಂತಪದ್ಘಾನಾಭ ಸ್ವಾಮಿ ಮಂದಿರಗಳು ಉಚ್ಚಸೀತಿಗೆ ತಲುಪಿದ್ದ ಗೊಲ್ಲಸಿರುಮನ ಬೂದಿಹಾಳ ಭವ್ಯ ಮಂದಿರಗಳದ್ದ ಪರಂಪರೆಗೆ ಸಾಕ್ಷಿ ಪ್ರಮೋಸೋಧ್ಯಮ ದೃಷ್ಟಿಯಿಂದ ಐತಿಹಾಸಿಕವಾಗಿ ತನ್ನದೇ ಆದ ಮಹತ್ವವನ್ನು ಪಡೆದಿರುವ ಈ ಕ್ಷೇತ್ರವನ್ನು ಉತ್ತನನ ಮಾಡಿ ಹಾಗೂ ಜೀರ್ಣೋದ್ದಾರ ಮಾಡಬೇಕೆಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಗಮನಹರಿಸಬೇಕಾಗಿದೆ .

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ( ಬೂದಿಹಾಳು ) ವು ಕ್ರಿ . ಶ . 15ನೇ ಶತಮಾನದಲ್ಲಿ ‘ ಗೊಲ್ಲಪಾಳೆಯಗಾರರ ‘ ಕಾಲದಲ್ಲಿ ಪ್ರಸಿದ್ಧ ರಾಜಧಾನಿಯಾಗಿ ಅತ್ಯಂತ ವೈಭವದಿಂದ ಕೂಡಿದ್ದಿತು . ಇವರನ್ನು ಚರಿತ್ರೆಯಲ್ಲಿ ಬೂದಿಹಾಳು ಪಾಳೆಯಗಾರು ಎಂದು ಕರೆದಿದ್ದಾರೆ . ಈ ಅರಸರ ಕಾಲದಲ್ಲಿ ಪ್ರಸಿದ್ದ ದೊರೆಯೆ ‘ ಗೊಲ್ಲಸಿರುವ ನಾಯಕ ‘ ಈ ಅರಸನನ್ನು ಕುರಿತು ಸಿದ್ದಕವಿಯ ಸಿರುಮಣ ನಾಯಕನ ಸಾಂಗತ್ಯ , ಮಲ್ಲಕವಿಯು ಗೊಲ್ಲಸಿರುಮನ ಚರಿತೆ , ರಾಮ ಕವಿಯು ಸಿರುಮನ ಚರಿತೆ ಎಂಬ ಮೂರು ಸಾಂಗತ್ಯ ಕಾವ್ಯಗಳನ್ನು ರಚಿಸಿದ್ದಾರೆ . ಈ ಕಾವ್ಯಗಳಲ್ಲಿ ಕವಿಗಳು ಬೂದಿಹಾಳು ಸಂಸ್ಥಾನದ ಪ್ರಾರಂಭ , ವೈಭವ , ವಿಸ್ತಾರ ಹಾಗೂ ಸಾಂಸ್ಕೃತಿಕ ಸಂಗತಿಗಳನ್ನು ಬಹುವಿಶೇಷವಾಗಿ ವರ್ಣಿಸಿರುವರು . ಅಲ್ಲದೆ ಸಿರುಮನಾಯಕನ ಶೌರ – ಪರಾಕ್ರಮ ವೀರತೆ – ಧೀರತೆ – ಅವನ ಯುದ್ಧ ಪ್ರಸಂಗಗಳು , ವಿಜಯನಗರದ ಮಂಡಳೇಶ್ವರ ಸಾಳುವ ನರಸಿಂಹರಾಯನ ವಿರುದ್ಧ ನಡೆದ ಯುದ್ಧ , ಸಿರುಮನ ಕೊನೆ , ಬೂದಿಹಾಳು ಪಥನ – ಹೀಗೆ ಇಡಿ ರಾಜ್ಯವನ್ನು ಕುರಿತು ಅತ್ಯಂತ ವಿಷದವಾಗಿ ಬರೆದಿರುವರು .

ಪತ್ರಿಕಾ ಗೋಷ್ಠಿ ವಿಚಾರ _ ದಿನಾಂಕ : 27 – 01 – 2020

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಶ್ರೀರಾಂಪುರ ( ಬೂದಿಹಾಳು ) ವು ಕ್ರಿ . ಶ . 15ನೇ ಶತಮಾನದಲ್ಲಿ ‘ ಗೊಲ್ಲಪಾಳೆಯಗಾರರ ‘ ಕಾಲದಲ್ಲಿ ಪ್ರಸಿದ್ಧ ರಾಜಧಾನಿಯಾಗಿ ಅತ್ಯಂತ ವೈಭವದಿಂದ ಕೂಡಿದ್ದಿತು . ಇವರನ್ನು ಚರಿತ್ರೆಯಲ್ಲಿ ಬೂದಿಹಾಳು ಪಾಳೆಯಗಾರು ಎಂದು ಕರೆದಿದ್ದಾರೆ . ಈ ಅರಸರ ಕಾಲದಲ್ಲಿ ಪ್ರಸಿದ್ದ ದೊರೆಯೆ ‘ ಗೊಲ್ಲಸಿರುವ ನಾಯಕ ‘ ಈ ಅರಸನನ್ನು ಕುರಿತು ಸಿದ್ದಕವಿಯ ಸಿರುಮಣ ನಾಯಕನ ಸಾಂಗತ್ಯ , ಮಲ್ಲಕವಿಯು ಗೊಲ್ಲಸಿರುಮನ ಚರಿತೆ , ರಾಮ ಕವಿಯು ಸಿರುಮನ ಚರಿತೆ ಎಂಬ ಮೂರು ಸಾಂಗತ್ಯ ಕಾವ್ಯಗಳನ್ನು ರಚಿಸಿದ್ದಾರೆ . ಈ ಕಾವ್ಯಗಳಲ್ಲಿ ಕವಿಗಳು ಬೂದಿಹಾಳು ಸಂಸ್ಥಾನದ ಪ್ರಾರಂಭ , ವೈಭವ , ವಿಸ್ತಾರ ಹಾಗೂ ಸಾಂಸ್ಕೃತಿಕ ಸಂಗತಿಗಳನ್ನು ಬಹುವಿಶೇಷವಾಗಿ ವರ್ಣಿಸಿರುವರು . ಅಲ್ಲದೆ ಸಿರುಮನಾಯಕನ ಶೌರ – ಪರಾಕ್ರಮ ವೀರತೆ – ಧೀರತೆ – ಅವನ ಯುದ್ಧ ಪ್ರಸಂಗಗಳು , ವಿಜಯನಗರದ ಮಂಡಳೇಶ್ವರ ಸಾಳುವ ನರಸಿಂಹರಾಯನ ವಿರುದ್ಧ ನಡೆದ ಯುದ್ಧ , ಸಿರುಮನ ಕೊನೆ , ಬೂದಿಹಾಳು ಪಥನ – ಹೀಗೆ ಇಡಿ ರಾಜ್ಯವನ್ನು ಕುರಿತು ಅತ್ಯಂತ ವಿಷದವಾಗಿ ಬರೆದಿರುವರು . ಗೊಲ್ಲಸಿರುಮನ ಸಂಸ್ಥಾನವು ಹೊಸದುರ್ಗ ತಾಲ್ಲೂಕು , ಸಿರಾ ತಾಲ್ಲೂಕಿನ ಬಹುಭಾಗವನ್ನು ಒಳಗೊಂಡಿದ್ದು ಅತ್ಯಂತ ಶ್ರೀಮಂತಿಕೆಯಿಂದ ಕೊಡಿದ್ದೆಂದು ಹೇಳಲಾಗಿದೆ .

ಇಂತಹ ಸಂಸ್ಥಾನದಲ್ಲಿ ಅತ್ಯಂತ ಪ್ರಸಿದ್ಧ ಸ್ಥಳವಾಗಿ ದಶರಥರಾಮೇಶ್ವರ ಕಂಡುಬರುವುದು . ಅಂದು ಕಾವ್ಯದಲ್ಲಿ ದಶರಥರಾಮೇಶ್ವರ ಕುರಿತು ವರ್ಣಿಸಲಾಗಿದೆ . ಇಂದಿಗೂ ದಶರಥರಾಮೇಶ್ವರ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿ ಕಂಡು ಬುರುವುದುಂಟು . ಇದರ ಸುತ್ತಮುತ್ತ ಪರಿಸರವು ಇತಿಹಾಸದ ದೃಷ್ಟಿಯಿಂದ ಮಹತ್ವದ್ದಾಗಿದ್ದು . ಹೆಚ್ಚಿನ ಅನ್ವೇಷಣೆ , ಸಂಶೋಧನೆ ಹಾಗೂ ಉತ್ಕನನದ ಅವಶ್ಯಕತೆ ಬಹುವಾಗಿ ಕಂಡು ಬರುತ್ತದೆ . ಈ ಹಿನ್ನೆಲೆಯಲ್ಲಿ ಸರ್ಕಾರ , ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆಗಳು ವೈಜ್ಞಾನಿಕವಾಗಿ ಉತ್ಕನನ ಮಾಡಬೇಕಾದ ಅವಶ್ಯಕತೆ ಇದೆ ಎಂದು ಈ ಮೂಲಕ ನಾನು ಮನವಿ ಮಾಡುತ್ತೇನೆ .

ಡಾ | | ಎನ್ . ಎಸ್ . ಮಹಂತೇಶ ಇತಿಹಾಸ ಸಂಶೋಧಕರು ಚಿತ್ರದುರ್ಗ

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.