ಕುಮಾರಸ್ವಾಮಿ ಹೇಳಿಕೆಗೆ ಬಸವರಾಜ ಬೊಮ್ಮಾಯಿ ತಿರುಗೇಟು,ಯಾರು ಸಲಹೆ ಕೊಡ್ತಾರೆ ಅನ್ನೋದು‌ ಮುಖ್ಯ ಅಲ್ಲ. ಆವತ್ತಿನ‌ ಸಂದರ್ಭದಲ್ಲಿ ಆರೋಪಿಗಳನ್ನು ಜೈಲಲ್ಲಿ ಇಡುವುದು ಉಚಿತವಾಗಿತ್ತು.

ರಾಮನಗರ ಜಿಲ್ಲೆಯ ಜನರು ಭಯ ಪಡುವ ಅಗತ್ಯತೆ ಇಲ್ಲ. ಈಗಾಗಲೇ ಆ ಕೈದಿಗಳನ್ನು ಸ್ಥಳಾಂತರ ಮಾಡಲಾಗ್ತಿದೆ. ಅವರಿಂದ ಸೋಂಕು ಹರಡದಂತೆ ಕ್ರಮ ವಹಿಸಲಾಗಿದೆ. ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ವಹಿಸಲಾಗಿದೆ, ಹೀಗಾಗಿ ಯಾರು ಭಯ ಪಡಬೇಡಿ

ರಾಮನಗರ ಜಿಲ್ಲೆಯ ಜನರಿಗೆ ಗೃಹ ಸಚಿವ ಬೊಮ್ಮಾಯಿ ಅಭಯ

ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ…

ಪಾದರಾಯನಪುರ ಆರೋಪಿಗಳನ್ನು ಬೆಂಗಳೂರಿನ‌ ಹಜ್ ಭವನಕ್ಕೆ ಶಿಫ್ಟ್ ಮಾಡ್ತೇವೆ. ಇದಕ್ಕಾಗಿ ಎಲ್ಲ ಅಗತ್ಯ ತಯಾರಿ ಮಾಡಿಕೊಳ್ತಿದ್ದೇವೆ.

ಜೈಲ್ ಸಿಬ್ಬಂದಿಗೂ ಪರೀಕ್ಷೆ ಮಾಡಿ ಕ್ವಾರಂಟೈನ್,ಇಲ್ಲೂ ಪೊಲೀಸರಿಗೆ ತಪಾಸಣೆ ಮಾಡಿ ಅಗತ್ಯವುದ್ರೆ ಕ್ವಾರಂಟೈನ್ ಮಾಡ್ತೇವೆ

ಕುಮಾರಸ್ವಾಮಿ ಹೇಳಿಕೆಗೆ ಬಸವರಾಜ ಬೊಮ್ಮಾಯಿ ತಿರುಗೇಟು

ಯಾರು ಸಲಹೆ ಕೊಡ್ತಾರೆ ಅನ್ನೋದು‌ ಮುಖ್ಯ ಅಲ್ಲ. ಆವತ್ತಿನ‌ ಸಂದರ್ಭದಲ್ಲಿ ಆರೋಪಿಗಳನ್ನು ಜೈಲಲ್ಲಿ ಇಡುವುದು ಉಚಿತವಾಗಿತ್ತು.

ಏನೇ ಮಾಡಿದರೂ ಆಪಾದನೆ ಬಂದೇ ಬರುತ್ತೆ,ಆರೋಪಿಗಳನ್ನು ಜೈಲಿನ ಬದಲು ಆಸ್ಪತ್ರೆಯಲ್ಲಿಡ್ತಿದ್ರೂ ಟೀಕೆ ಬರ್ತಿತ್ತು. ಹೀಗೇ ಮಾಡಬೇಕು ಹಾಗೇ ಮಾಡಬೇಕು ಅಂತ ನೋಡುವ ಕಾಲ ಅಲ್ಲ, ಇದು ಸಂದರ್ಭ, ಸಮಯ‌ ನೋಡಿಕೊಂಡು ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ರಾಮನಗರದ ಜೈಲಿನಲ್ಲಿ ಆರೋಪಿಗಳಿಗೆ ಸೋಂಕು ಕಂಡು ಬಂದರೆ ಶಿಫ್ಟ್ ಮಾಡ್ತೀವಿ ಅಂತ ಮೊದಲೇ ನಾವು ಹೇಳಿದ್ವಿ, ಇದನ್ನು ಕುಮಾರಸ್ವಾಮಿ ಅವರಿಗೂ ಹೇಳಿದ್ವಿ.

ರಾಮನಗರದ ಜೈಲಿನಲ್ಲಿರುವ ಎಲ್ಲರನ್ನೂ ಪರೀಕ್ಷೆ ಮಾಡ್ತೇವೆ,ರಾಮನಗರದ ಜನ ಹೆದರಬೇಕಿಲ್ಲ, ಆತಂಕ ಪಡಬೇಕಿಲ್ಲ

ರಾಮನಗರದ ಜನರಿಗೆ ಬೊಮ್ಮಾಯಿ ಅಭಯ

ರಾಮನಗರಕ್ಕೆ ಆರೋಪಗಳನ್ನು ಶಿಫ್ಟ್ ಮಾಡಿದ್ದರಲ್ಲಿ ತಪ್ಪಾಗಿಲ್ಲ,ಯಾರದ್ದೂ ತಪ್ಪಿಲ್ಲ,

ಕೊರೋನಾ ಹೋರಾಟದಲ್ಲಿ ಬೇರೆ ಬೇರೆ ಆಯಾಮಗಳು ಬರ್ತಿರುತ್ತವೆ,ಸಂದರ್ಭಕ್ಕೆ ತಕ್ಕಂತೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.