
ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಪ್ರಯುಕ್ತ ಗೋಕಾಕ್ ನಗರದಲ್ಲಿರುವ ಹಿಂದೂ ಹೃದಯ ಸಾಮ್ರಾಟ್ ಶಿವಾಜಿ ಮಹಾರಾಜರ ಪ್ರತಿಮೆ ಗೆ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಅವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಂತರ ಮಾತನಾಡಿದ ಅವರು ಶಿವಾಜಿಯ ಧೈರ್ಯ, ಶೌರ್ಯ, ಸಾಹಸದ ಕಥೆಗಳನ್ನು ನಮ್ಮ ಶಾಲಾಮಕ್ಕಳಿಗೆ ಹೇಳಿಕೊಡಬೇಕು ಎಂದರು. ಎಲ್ಲಾ ತಾಯಂದಿರೂ ಜೀಜಾಮಾತಾ ಮತ್ತು ಎಲ್ಲಾ ಶಿಕ್ಷಕರು ದಾದಾಜಿ ಕೊಂಡದೇವರ ತರಹ ಮಕ್ಕಳಿಗೆ ಶಿಕ್ಷಣ ಕೊಟ್ಟಾಗ ಮನೆಮನೆಯಲ್ಲಿಯೂ ಶಿವಾಜಿಯಂತಹ ಶಿಸ್ತಿನ ಮಕ್ಕಳಿರುತ್ತಾರೆ. ಭಾರತದ ಭವ್ಯ ಭವಿಷ್ಯ ಈ ಮಕ್ಕಳ ಕೈಲಿದೆ. ಆದ್ದರಿಂದ ಮಕ್ಕಳನ್ನು ಶಿಸ್ತಿನ ಸಿಪಾಯಿಗಳಾಗಿ ಬೆಳೆಸಬೇಕು ಎಂದು ಕರೆನೀಡಿದರು.
City Today News
(citytoday.media)
9341997936
