MPL ನಿಂದ PUBG ಗೆ ಠಕ್ಕರ್ ಭಾರತದ ಪ್ರಥಮ ದೇಶೀಯ ಶೂಟರ್ ಗೇಮ್

ಭಾರತ, ಮೇ 19, 2020: ಭಾರತದ ಅತ್ಯಂತ ದೊಡ್ಡ ಮೊಬೈಲ್ ಗೇಮಿಂಗ್ ಪ್ಲಾಟ್‍ಫಾರಂ ಮೊಬೈಲ್ ಪ್ರೀಮಿಯರ್ ಲೀಗ್(MPL) ಮುಂಬೈ ಮೂಲದ ಗೇಮ್ ಡೆವಲಪರ್ ಲೈಫ್‍ಲೈಕ್ ಸ್ಟುಡಿಯೋಸ್ ಜೊತೆ ಸಹಯೋಗ ಹೊಂದಿದ್ದು ಭಾರತದ ಪ್ರಥಮ ದೇಸಿ ಮಲ್ಟಿ-ಪ್ಲೇಯರ್ ಆನ್‍ಲೈನ್ ಶೂಟರ್ ಗೇಮ್ ರೋಗ್ ಹೀಸ್ಟ್, ಅನ್ನು ಎಂಪಿಎಲ್ ಆ್ಯಪ್‍ನಲ್ಲಿ ಇತರೆ ಪ್ಲಾಟ್‍ಫಾರಂಗಿಂತಲೂ ಮುಂಚೆ ವಿಶೇಷವಾಗಿ ಬಿಡುಗಡೆ ಮಾಡಿದೆ. ರೋಗ್ ಹೀಸ್ಟ್ ಅನ್ನು ಲೈಫ್‍ಲೈಕ್ ಸ್ಟುಡಿಯೋಸ್ ಅಭಿವೃದ್ಧಿಪಡಿಸಿದೆ ಮತ್ತು ಬಾಲಿವುಡ್ ನಟ ಮತ್ತು ನಿರ್ಮಾಪಕ ಅರ್ಬಾಜ್ ಖಾನ್ ಹಾಗೂ ಟೈಮ್2ಪ್ಲೇ ಗೇಮಿಂಗ್ ಸ್ಟುಡಿಯೋಸ್ ಬೆಂಬಲಿಸಿದ್ದಾರೆ.

ರೋಗ್ ಹೀಸ್ಟ್, ಎಂಪಿಎಲ್ ಪ್ಲಾಟ್‍ಫಾರಂನಲ್ಲಿ ಮೊದಲ ಮಲ್ಟಿ-ಪ್ಲೇಯರ್ ಇಸ್ಪೋಟ್ರ್ಸ್‍ನಲ್ಲಿ ಒಂದಾಗಿದೆ ಮತ್ತು ಬಳಕೆದಾರರು ಪರಸ್ಪರ ಮುಖಾಮುಖಿಯಾಗುವುದನ್ನು ಕಾಣುತ್ತದೆ, ಪ್ರತಿ ಯುದ್ಧ ಹಾಗೂ ಟೂರ್ನಮೆಂಟ್‍ನಲ್ಲಿ ನಗದು ಬಹುಮಾನ ಗೆಲ್ಲುವ ಅವಕಾಶ ನೀಡುತ್ತದೆ. ಎಂಪಿಎಲ್ ಪ್ರಸ್ತುತ ತನ್ನ ಪ್ಲಾಟ್‍ಫಾರಂನಲ್ಲಿ 40ಕ್ಕೂ ಹೆಚ್ಚು ಗೇಮ್ಸ್ ಹೊಂದಿದೆ.

ರೋಗ್ ಹೀಸ್ಟ್, ಹಿಂದಿನ ಆಲೋಚನೆ ಹೀಸ್ಟ್‍ನ ವಿಶಿಷ್ಟ ಅನುಭವ ಸೃಷ್ಟಿಸುವುದಾಗಿದ್ದು ಅದು ತೀವ್ರ, ಸಕ್ರಿಯಗೊಳಿಸುವ ಮತ್ತು ವಿನೋದಮಯವಾಗಿದ್ದು ನಿಜಕ್ಕೂ ಸ್ಪರ್ಧಾತ್ಮಕ ರಿಯಲ್-ಟೈಮ್ ಮಲ್ಟಿ-ಪ್ಲೇಯರ್ ಪರಿಸರದಲ್ಲಿದೆ.

ಎಂಪಿಎಲ್‍ನಲ್ಲಿ ಗೇಮ್ ಮೋಡ್ ರೋಗ್ ಹೀಸ್ಟ್-ಬ್ರಾವ್ಲ್- ಸೂಪರ್ ಫಾಸ್ಟ್, ಆ್ಯಕ್ಷನ್-ಪ್ಯಾಕ್ಡ್ ಇಸ್ಪೋರ್ಟ್ ಮೋಡ್ ಆಗಿದೆ. ಪ್ರತಿ ಗೇಮ್ ಕೂಡಾ ಕೇವಲ 7 ನಿಮಿಷಗಳಿದ್ದು ಅದರಲ್ಲಿ 10 ಆಟಗಾರರು ಪರಸ್ಪರ ಗರಿಷ್ಠ ಪ್ರಮಾಣದ ಹಣವನ್ನು ಕದಿಯಲು ಮುಖಾಮುಖಿಯಾಗುತ್ತಾರೆ. ಇಲ್ಲಿ ಆಟಗಾರರು ದರೋಡೆಯ ನೈಜ ಭಾವನೆ ಹೊಂದುತ್ತಾರೆ, ಅವರ ವೈಯಕ್ತಿಕ ಸಾಧನೆ ಆಧರಿಸಿ ಹೆಚ್ಚಿನ ಗಳಿಕೆ ಪಡೆಯುತ್ತಾರೆ. ಲೀಡರ್‍ಬೋರ್ಡ್ ಆಧರಿಸಿದ್ದು ಶ್ರೇಷ್ಠ ಆಟಗಾರರು ಎಂಪಿಎಲ್‍ನಲ್ಲಿ ನಗದು ಬಹುಮಾನಗಳನ್ನು ಗೆಲ್ಲುವ ಮೂಲಕ ವರ್ಚುಯಲ್ ಹಣದ ದರೋಡೆಯನ್ನು ನಿಜ ಜೀವನದ ಗಳಿಕೆಯಾಗಿಸುತ್ತಾರೆ.

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.