ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ 129 ನೇ ಜನುಮದಿನ (6/6/1891)

ಕನ್ನಡ ಸಾಹಿತ್ಯದ ಸೇವೆಗೆ ಅನೇಕ ದಿಗ್ಗಜರು ತಮ್ಮದೆ ಆದ ರೀತಿಯಲ್ಲಿ ತಮ್ಮ ಸೇವೆ ಸಲ್ಲಿಸಿದ್ದಾರೆ. ಆ ಗುಂಪಿಗೆ ಸೇರುವ
ಮಹಾನ್ ವ್ಯಕ್ತಿ ಗಳಲ್ಲಿ ಶ್ರೀ ಮಾಸ್ತಿ ಅವರು
ಒಬ್ಬರು.

“ಮಾಸ್ತಿ ಕನ್ನಡದ ಆಸ್ತಿ” ಎನ್ನುವಷ್ಟು ಪ್ರಖ್ಯಾತರು. “ಶ್ರೀ ನಿವಾಸ” ಕಾವ್ಯನಾಮ,
“ಅಣ್ಣಾ” ಎಂಬುದು ಸಹಾ, ಸರಕಾರಿ ಹುದ್ದೆಯಲ್ಲಿದ್ದರು. ಅನೇಕ ಜನಪರ ಕೆಲಸಮಾಡಿದವರು ಶ್ರೀಮಾಸ್ತಿಯವರು.

ಸರಳ, ಸಜ್ಜನ, ಹಸನ್ಮುಖಿ. ತಲೇಯ ಮೇಲೆ ಟೋಪಿ, ಕೋಟು ಮುಖದಲ್ಲಿ ಶ್ರೀ ವೈಷ್ಣವ
ಲಾಂಛನವಾದ ತಿರುಮಣ್, ಶ್ರೀ ಚೂರ್ಣ. ವಯೋಮಾನ ಬೇಧವಿಲ್ಲದೆ ಎಲ್ಲರೊಡನೆಯ
ಸ್ನೇಹ ಸ್ವಭಾವ.

ಒಂದು ನೂರಕ್ಕು ಹೆಚ್ಚು ಕೃತಿಗಳನ್ನು
ಬರೆದಿದ್ದಾರೆ. ಕನ್ನಡದ ಸಣ್ಣ ಕತೆ ಜನಕ
ಎಂದು ಕರೆಯಬಹುದು.

ವಿಮರ್ಶೆ, ಐತಿಹಾಸಿಕ, ಕವಿತೆಗಳು , ಪ್ರಬಂಧ,ಕಾದಂಬರಿ ಹೀಗೆ ಸಾಗುವುದು ಅವರ ಸಾಹಿತ್ಯ ಸೇವೆ.

“ಭಾವ” ” ಕಾಕನಕೋಟೆ” “ಚಿಕ್ಕವೀರ ರಾಜೇಂದ್ರ” ‘ಜ್ಞಾನಪೀಠ’ ಪ್ರಶಸ್ತಿ
ಪಡೆದಿದ್ದು 1983.

ಅಷ್ಟೇ ಅಲ್ಲದೆ ಆಂಗ್ಲ ದಿಂದ ಹಾಮಲೆಟ್,
ಚಂಡಮಾರುತ (ಷೇಕ್ಸ್‌ಪಿಯರ್)
ಅನುವಾದ ಮಾಡಿದ್ದಾರೆ.

“ಶೇಷಮ್ಮ” “ಮೊಸರಿನ
ಮಂಗಮ್ಮ” ಸಣ್ಣಕತೆಗಳು.

ಬಸವನಗುಡಿ ಕ್ಲಬ್
ಮೆಚ್ಚುಗೆಯ ಇಸ್ಪೀಟ್
ತಾಣ.

ತಮ್ಮದೇ ಆದ “ಜೀವನ ಕಾರ್ಯಾಲಯ”
ಪ್ರಕಾಶನದಿಂದ ಅನೇಕ ಪುಸ್ತಕ ಗಳನ್ನು
ಪ್ರಕಟಿಸಿದ್ದಾರೆ.

ಇಂತಹಾ ಮಹಾನ್ ಕನ್ನಡತಾಯಿಯ ಸೇವೆ
ಮಾಡಿದವರನ್ನು ನಾವು ಸದಾ ಸ್ಮರಿಸಬೇಕು.
ಅಲ್ಲದೆ ಕನ್ನಡ ಸಾಹಿತ್ಯವನ್ನು ಮರೆಯದೆ ಓದಬೇಕು.

ಶ್ರೀ ಮಾಸ್ತಿ ಯವರು ಕಾಲವಾದದ್ದು
ಒಂದು ರೀತಿ ಕಾಕತಾಳೀಯ. 6 ಜೂನ್ 1986 (ಜನುಮ ತಳೆದ ದಿನಾಂಕವೇ ಕಾಲವಾದರು).

🙏🙏🙏

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.