ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಕಲಿ ಹಂಚಿಕೆ ಪತ್ರಗಳನ್ನು ಸೃಷ್ಟಿಸಿ , ಹಂಚಿಕೆ ಮಾಡುತ್ತಿರುವ ಜಾಲ ಪತ್ತೆ

ಬಿಡಿಎ ಕಾರ್ಯಾಚರಣೆ : ಪ್ರಾಧಿಕಾರದ ನಕಲಿ ಹಂಚಿಕೆ ಪತ್ರಗಳನ್ನು ಸೃಷ್ಟಿಸಿ , ಹಂಚಿಕೆ ಮಾಡುತ್ತಿರುವ ಜಾಲ ಪತ್ತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಹೆಸರನ್ನು ದುರುಪಯೋಗಪಡಿಸಿಕೊಂಡು ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿನ ನಿವೇಶನಗಳಿಗೆ ನಕಲಿ ಹಕ್ಕು ಪತ್ರಗಳನ್ನು ಸೃಷ್ಟಿಸಿಕೊಂಡು ಸಾರ್ವಜನಿಕರಿಗೆ ಹಂಚಿಕೆ ಮಾಡುತ್ತಿರುವ ಜಾಲವೊಂದನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ . ವಿಜಯಾನಂದಸ್ವಾಮಿ , ರಾಜ್ಯಾಧ್ಯಕ್ಷ , ಉತ್ತರ ಕರ್ನಾಟಕ ಪ್ರದೇಶ ರೈತ ಸಂಘ ( ರಿ ) , ನಂ . 69 , 4 ನೇ ಮುಖ್ಯರಸ್ತೆ , 5 ನೇ ಅಡ್ಡರಸ್ತೆ , ಚಾಮರಾಜಪೇಟೆ , ಬೆಂಗಳೂರು -560 018 ಎಂಬುವನು ಬೆಂಗಳೂರು ಮೂಲಕ ರಮೇಶ್ ಎಂಬಾತನೊಂದಿಗೆ ಸೇರಿಕೊಂಡು ತಾನು ನೋಂದಣಿ ಮಾಡಿಸಿಕೊಂಡಿದ್ದ ಉತ್ತರ ಕರ್ನಾಟಕ ಪ್ರದೇಶ ರೈತರ ಸಂಘ ( ರಿ ) ಸಂಸ್ಥೆಯ ಮೂಲಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ರಚಿಸಿರುವ ನಿವೇಶನಗಳನ್ನು ರಿಯಾಯಿತಿ ದರದಲ್ಲಿ ಹಂಚಿಕೆ ಮಾಡಿಸಿಕೊಡುತ್ತೇನೆಂದು ನಂಬಿಸಿ , ತನ್ನ ಸಂಘದ ಹೆಸರಿನಲ್ಲಿ ಸದಸ್ಯರನ್ನಾಗಿ ನೊಂದಾಯಿಸಿಕೊಳ್ಳುವುದಾಗಿ ಪ್ರತಿಯೊಬ್ಬರಿಂದ ರೂ . 15,000 / -ಗಳನ್ನು ಪಡೆದುಕೊಂಡು ಸುಮಾರು 1000 ಜನರನ್ನು ಸದಸ್ಯರನ್ನಾಗಿ ನೊಂದಾಯಿಸಿಕೊಂಡಿರುತ್ತಾರೆ . ಸಾರ್ವಜನಿಕರಿಗೆ ತಾನೇ ತಯಾರಿಸಿದ್ದ ಫಲಾನುಭವಿಯ ಮನವಿಯಲ್ಲಿ ಮಾಹಿತಿ ಪಡೆದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಹೆಸರಿನಲ್ಲಿ ನಕಲಿಯಾಗಿ ತಯಾರಿಸುವ ನಿವೇಶನದ ಹಂಚಿಕೆ ಹಕ್ಕು ಪತ್ರದಲ್ಲಿ ಬಿ.ಡಿ.ಎ. ನಕಲಿ ರಬ್ಬರ್ ಸ್ಟಾಂಪ್ ಹಾಕಿ , ಬಿ.ಡಿ.ಎ. ಆಯುಕ್ತರ ನಕಲಿ ಸಹಿಯನ್ನು ಮಾಡಿ , ಈಗಾಗಲೇ 50 ಕ್ಕೂ ಹೆಚ್ಚು ಜನರಿಗೆ ನಿವೇಶನದ ಹಕ್ಕು ಪತ್ರಗಳನ್ನು ನೀಡಿ ರೂ . 50,000 / – ಗಳಿಂದ ರೂ . 3,00,000 / – ಗಳವರೆಗೆ ಹಣವನ್ನು ವಸೂಲಿ ಮಾಡಿಕೊಂಡು ಸಾರ್ವಜನಿಕರಿಗೆ ವಂಚನೆ ಮಾಡಿರುತ್ತಾರೆ . ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಸುಮಾರು 3000 ಜನರಿಗೆ ಸದಸ್ಯತ್ವವನ್ನು ಮಾಡಿಕೊಂಡು , ನಿವೇಶನದ ನಕಲಿ ಹಕ್ಕು ಪತ್ರಗಳನ್ನು ವಿತರಿಸುವ ಯೋಜನೆ ಹೊಂದಲಾಗಿತ್ತು ಎಂದು ಒಪ್ಪಿಕೊಂಡಿರುತ್ತಾರೆ . ಈ ಸಂಬಂಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಕ್ರಮಕೈಗೊಳ್ಳಲಾಗಿದೆ .

ಪ್ರಕರಣ ಬೆಳಕಿಗೆ ಬಂದಿದ್ದು ಹೀಗೆ : ರೂ . 3,00,000 ಗಳನ್ನು ಪಾವತಿಸಿ , ಒಟ್ಟು ಆರು ನಿವೇಶನದ ನಕಲಿ ಹಕ್ಕು ಪತ್ರಗಳನ್ನು ಪಡೆದಿದ್ದ ವ್ಯಕ್ತಿಯೊಬ್ಬರು ಹಕ್ಕು ಪತ್ರದ ಅಸಲೀತನವನ್ನು ತಿಳಿಯಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಭೇಟಿ ನೀಡಿ , ಉಪ ಕಾರ್ಯದರ್ಶಿ -1 ರ ವಿಭಾಗದಲ್ಲಿ ವಿಚಾರಿಸಲ್ಪಟ್ಟಿರುತ್ತಾರೆ . ಈ ಬಗ್ಗೆ ತಕ್ಷಣವೇ ಜಾಗೃತಗೊಂಡ ಉಪ ಕಾರ್ಯದರ್ಶಿ -1 ರವರು ಸದರಿ ವಿಷಯವನ್ನು ಮಾನ್ಯ ಆಯುಕ್ತರಾದ ಡಾ . ಹೆಚ್.ಆರ್ . ಮಹದೇವ್ ಅವರ ಗಮನಕ್ಕೆ ತರಲಾಗಿ , ಮಾನ್ಯ ಆಯುಕ್ತರು ತಕ್ಷಣವೇ ಪ್ರಾಧಿಕಾರದ ಆರಕ್ಷಕ ಅಧೀಕ್ಷಕರಾದ ಶ್ರೀ ಶಿವಕುಮಾರ್ ಗುನಾರೆಯವರಿಗೆ ಈ ಬಗ್ಗೆ ಗೌಪ್ಯವಾಗಿ ತನಿಖೆಯನ್ನು ನಡೆಸಿ , ಮುಂದಿನ ಅಗತ್ಯ ಕಾನೂನು ಕ್ರಮವಹಿಸುವಂತೆ ತಿಳಿಸಿದ್ದರು . ಈ ಬಗ್ಗೆ ಕಳೆದ ಎರಡು ದಿನಗಳಿಂದ ತನಿಖೆ ನಡೆಸಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಜಾಗೃತ ದಳದ ಅಧಿಕಾರಿ / ಸಿಬ್ಬಂದಿಯವರು ಆರೋಪಿಯಾದ ವಿಜಯಾನಂದಸ್ವಾಮಿ ನಡೆಸುತ್ತಿದ್ದ ಕಚೇರಿಯ ಮೇಲೆ ದಾಳಿ ನಡೆಸಿ , ಕಚೇರಿಯಲ್ಲಿದ್ದ ಬಿ.ಡಿ.ಎ. ಹೆಸರಿನ ನಿವೇಶನದ ನಕಲಿ ಹಂಚಿಕೆ ಪತ್ರಗಳು , ಸಂಘದ ಹೆಸರಿನ ಮೊಹರುಗಳು , ಬಿ.ಡಿ.ಎ. ಹೆಸರಿನಲ್ಲಿರುವ ರಬ್ಬರ್ ಸ್ಟಾಂಪ್‌ಗಳನ್ನು ವಶಪಡಿಸಿಕೊಂಡು , ವಿಜಯಾನಂದಸ್ವಾಮಿಯನ್ನು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿರುತ್ತದೆ . ವಿಜಯಾನಂದಸ್ವಾಮಿ ಅವರ ತಂಡದವರಿಂದ ವಂಚನೆಗೆ ಒಳಗಾದವರು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸುವಂತೆ ಸೂಚಿಸಲಾಗಿದೆ . ಇಂತಹ ವಂಚನೆ ಪ್ರಕರಣಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಪ್ರಾಧಿಕಾರದ ಆಯುಕ್ತರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿರುತ್ತಾರೆ .

-ಸಾರ್ವಜನಿಕ ಸಂಪರ್ಕಾಧಿಕಾರಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.