
ದೇಶದ ಉಚ್ಛ ನ್ಯಾಯಾಲಯವು ಇಂದು ಅಯೋಧ್ಯೆ ಬಾಬ್ರಿ ಮಸೀದಿ ಧ್ವಂಸದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಯುತವಾದ ತೀರ್ಪು ನೀಡಿರುತ್ತದೆ. ಸುಮಾರು ಇಪ್ಪತ್ತೆಂಟು ವರ್ಷದ ನಂತರದ ಈ ತೀರ್ಪು ಬಂದಿದ್ದು, ಲಕ್ನೋ ವಿಶೇಷ ಸಿ.ಬಿ.ಐ ಕೋರ್ಟಿನ ನ್ಯಾಯಾಧೀಶರಾದ ಶ್ರೀ ಎಸ್.ಕೆ.ಯಾದವ್ ರವರು ಪರಿಪೂರ್ಣವಾಗಿ ಎಲ್ಲಾ ಅಂಶಗಳನ್ನು ಸುಧೀರ್ಘವಾಗಿ ಅವಲೋಕನೆ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಯಾವುದೇ ಸಾಕ್ಷಿಗಳು ಲಭ್ಯವಿಲ್ಲವೆಂದು ಹಾಗೂ ಅಂದು ನಡೆದಿರುವ ಘಟನೆಗಳು ಪೂರ್ವ ಯೋಜಿತವಲ್ಲವೆಂದು ತಿಳಿಸಿದ್ದು, ಎಲ್ಲರನ್ನೂ ನ್ಯಾಯಾಲಯವೇ ಆರೋಪದಿಂದ ಮುಕ್ತಗೊಳಿಸಿದ ಈ ತೀರ್ಪನ್ನು ನಾನು ಮನಃ ಪೂರ್ವಕವಾಗಿ ಸ್ವಾಗತಿಸುತ್ತೇನೆ.
ವಿಶ್ವೇಶ್ವರ ಹೆಗಡೆ, ಕಾಗೇರಿ,
ಸಭಾಧ್ಯಕ್ಷರು,
ಕರ್ನಾಟಕ ವಿಧಾನ ಸಭೆ.
City Today News
(citytoday.media)
9341997936