ಭಾರತದಲ್ಲೇ ಗರ್ಭಕಂಠ ಕ್ಯಾನ್ಸರ್‌ನಿಂದ ಅಧಿಕ ಮಹಿಳೆಯರ ಸಾವು

ರಾಧಕೃಷ್ಣ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್‌ನ ಫರ್ಟಿಲಿಟಿ ಸ್ಪೆಷಲಿಸ್ಟ್ & ಮೆಡಿಕಲ್ ಡೈರೆಕ್ಟರ್ ಡಾ.ವಿದ್ಯಾ ವಿ.ಭಟ್ ಅವರ ಪ್ರಕಾರ , ಬೆಂಗಳೂರಿನಲ್ಲಿ ಗರ್ಭಕಂಠ ಕ್ಯಾನ್ಸರ್ ಪ್ರಮಾಣದಲ್ಲಿ ಪ್ರತಿವರ್ಷ ಶೇ .9 ರಷ್ಟು ಕಡಿಮೆಯಾಗುತ್ತಿದೆ . ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪ್ರಮಾಣ ಹೆಚ್ಚಾಗುತ್ತಿದೆ .

ಬೆಂಗಳೂರು , ಜನವರಿ 23 , 2021 : ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಗರ್ಭಕಂಠ ಕ್ಯಾನ್ಸರ್‌ಗೆ ಹೆಚ್ಚಿನ ಮಹಿಳೆಯರು ಬಲಿಯಾಗುತ್ತಿದ್ದಾರೆ . ಪ್ರತಿ ವರ್ಷ ವಿಶ್ವದಲ್ಲಿ ಈ ಗರ್ಭಕಂಠದ 6 ಲಕ್ಷಕ್ಕೂ ಅಧಿಕ ಹೊಸ ಪ್ರಕರಣಗಳು ದಾಖಲಾಗುತ್ತಿವೆ . ಇದರಲ್ಲಿ ಭಾರತದಲ್ಲಿ 96,900 ಪ್ರಕರಣಗಳು ದಾಖಲಾಗುತ್ತಿವೆ . ಪ್ರತಿವರ್ಷ ಗರ್ಭಕಂಠದಿಂದ ವಿಶ್ವದಲ್ಲಿ 3,41,೦೦೦ ಸಾವುಗಳು ಸಂಭವಿಸುತ್ತಿದ್ದು , ಭಾರತದಲ್ಲಿ ಇವುಗಳ ಸಂಖ್ಯೆ 60,೦೦೦ ದಷ್ಟಿದೆ ಎಂದು ರಾಧಕೃಷ್ಣ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್‌ನ ಫರ್ಟಿಲಿಟಿ ಸ್ಪೆಷಲಿಸ್ಟ್ & ಮೆಡಿಕಲ್ ಡೈರೆಕ್ಟರ್ ಡಾ.ವಿದ್ಯಾ ವಿ.ಭಟ್ ಹೇಳುತ್ತಾರೆ .

ಗರ್ಭಕಂಠ ಕ್ಯಾನ್ಸರ್ ತಡೆ ಸಪ್ತಾಹದಲ್ಲಿ ಮಾತನಾಡಿದ ಅವರು , ಗರ್ಭಕಂಠ ಕ್ಯಾನ್ಸರ್‌ಗಳಲ್ಲಿ ಶೇ.90 ರಷ್ಟು ಕಾಮನ್ ಮ್ಯೂಮನ್ ಪೆಪಿಲೋಮಾವೈರಸ್ ( ಎಚ್ ಪಿವಿ ) ಯ ಸೋಂಕಿನಿಂದ ಬರುತ್ತದೆ ಎಂದು ಅವರು ತಿಳಿಸಿದರು . “ ಸ್ತನ ಕ್ಯಾನ್ಸರ್ ನಂತರದಲ್ಲಿ ಮಹಿಳೆಯರಲ್ಲಿ ಕಂಡುಬರುವ ಎರಡನೇ ಹೆಚ್ಚು ಕ್ಯಾನ್ಸರ್ ಎಂದರೆ ಗರ್ಭಕಂಠದ ಕ್ಯಾನ್ಸರ್ , ಇದು ಸ್ವಲ್ಪ ನಿಧಾನವಾಗಿ ಆರಂಭವಾಗುತ್ತದೆ ಮತ್ತು ಡೈಾಸಿಯಾ ಎಂದು ಕರೆಯಲಾಗುವ ಪ್ರೀಕ್ಯಾನ್ಸರಿಯಸ್ ಆಗಿ ಬೆಳವಣಿಗೆ ಆಗುತ್ತದೆ . ಇದನ್ನು ರೊಟೀನ್ ಪ್ಯಾಪ್ ಸ್ಮಿಯರ್‌ನಿಂದ ಸುಲಭವಾಗಿ ಪತ್ತೆ ಮಾಡಬಹುದಾಗಿದೆ . ಈ ಹಂತದಲ್ಲಿ ಇದನ್ನು ಶೇ.100 ರಷ್ಟು ವಾಸಿ ಮಾಡಬಹುದಾಗಿದೆ . ಆದರೆ , ನಾಲ್ಕನೇ ಹಂತದಲ್ಲಿ ಜೀವಂತವಾಗಿ ಉಳಿಯುವ ಪ್ರಮಾಣವನ್ನು ಶೇ.20 ಕ್ಕಿಂತ ಕಡಿಮೆಗೆ ಇಳಿಯುವಂತೆ ಮಾಡುತ್ತದೆ . ಈ ಹಂತದಲ್ಲಿ ಬೇಗನೇ ಪತ್ತೆ ಮಾಡುವುದು ಅಗತ್ಯವಾಗಿದೆ ‘ ‘ ಎಂದು ಅವರು ಸಲಹೆ ನೀಡಿದರು . “ ಭಾರತದಲ್ಲಿ ದಶಕದಿಂದ ಸ್ತನ ಕ್ಯಾನ್ಸರ್ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದ್ದರೆ , ಗರ್ಭಕಂಠ ಕ್ಯಾನ್ಸರ್ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ . ಈ ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳು ಕಳೆದ 10 ವರ್ಷಗಳಲ್ಲಿ ಶೇ .28 ರಿಂದ ಶೇ.14 ಕ್ಕೆ ಇಳಿದಿವೆ . ಇದಕ್ಕೆ ಪ್ರಮುಖ ಕಾರಣಗಳೆಂದರೆ , 2008 ರಲ್ಲಿ ಭಾರತದಲ್ಲಿ ಲಸಿಕೆ ಪರಿಚಯಿಸಿರುವುದಾಗಿದೆ . ಬೆಂಗಳೂರಿನಲ್ಲಿ ಗರ್ಭಕಂಠ ಕ್ಯಾನ್ಸರ್‌ ಪ್ರಮಾಣ ಪ್ರತಿವರ್ಷ ಶೇ.1.9 ರಷ್ಟು ಕಡಿಮೆ ಆಗುತ್ತಿದೆ . ಆದಾಗ್ಯೂ , ಮಹಿಳೆಯರು ಇದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ . ಏಕೆಂದರೆ 30 ವರ್ಷದ ನಂತರ ಈ ಗರ್ಭಕಂಠ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ . ಸಾಮಾಜಿಕ ಆರ್ಥಿಕ ಪರಿಸ್ಥಿತಿಯಲ್ಲಿರುವ ವಿಶೇಷವಾಗಿ ನೈರ್ಮಲ್ಯದ ಕಾರಣದಿಂದಾಗಿ ಅಪಾಯಕ್ಕೆ ಒಳಗಾಗುತ್ತಾರೆ . ಗರ್ಭಕಂಠದ ಕ್ಯಾನ್ಸರ್ ಇರುವ ಕುಟುಂಬದ ಇತಿಹಾಸ , ಮೂರು ಮಕ್ಕಳನ್ನು ಹೊಂದಿರುವ ಮಹಿಳೆಯರು , ಜನನ ನಿಯಂತ್ರಣ ಮಾತ್ರೆಗಳ ದೀರ್ಘಕಾಲೀನ ಬಳಕೆ , ಬಹು ಲೈಂಗಿಕ ಪಾಲುದಾರರನ್ನು ಹೊಂದಿರುವುದು , ಚಿಕ್ಕ ವಯಸ್ಸಿನಲ್ಲಿ ಲೈಂಗಿಕವಾಗಿ ಸಕ್ರಿಯವಾಗಿರುವವರು ಮತ್ತು ಧೂಮಪಾನ ಹಾಗೂ ಬೊಜ್ಜು ಇರುವುದು ಇತರೆ ಅಪಾಯಕಾರಿ ಅಂಶಗಳಲ್ಲಿ ಸೇರಿವೆ ‘ ‘ ಎಂದು ಅವರು ಎಚ್ಚರಿಕೆ ನೀಡಿದರು . “ ಗರ್ಭಕಂಠದ ಕ್ಯಾನ್ಸರ್‌ನ ರೋಗಲಕ್ಷಣಗಳಾದ ನಿಯಮಿತ ಮುಟ್ಟಿನ ನಡುವೆ ಸಂಭವಿಸುವಂತಹ ರಕ್ತಸ್ರಾವ , ಅಸಹಜ ಯೋನಿ ರಕ್ತಸ್ರಾವ ಅಥವಾ ವಿಸರ್ಜನೆ , ಲೈಂಗಿಕ ಸಂಭೋಗದ ನಂತರ ರಕ್ತಸ್ರಾವ , ಋತುಬಂಧದ ನಂತರ ರಕ್ತಸ್ರಾವ ಮತ್ತು ಮುಟ್ಟಿನ ಅವಧಿ ಹೆಚ್ಚು ಕಾಲ ಉಳಿಯುತ್ತದೆ ಹಾಗೂ ಮೊದಲಿಗಿಂತಲೂ ‘ ಭಾರವಾಗಿರುತ್ತದೆ . ಮೂತ್ರ ವಿಸರ್ಜನೆ ವೇಳೆ ಉಂಟಾಗುವ ಅಸ್ವಸ್ಥತೆ , ಪ್ರೋಣಿಯ ನೋವು , ಕಾಲು ನೋವು , ತೂಕ ನಷ್ಟ , ನಿರಂತರ ಆಯಾಸ ಹಾಗೂ ಗರ್ಭಕಂಠವನ್ನು ಸ್ಥಿರಗೊಳಿಸುವ ಮೂಲಕ ಅದರ ಚಲನಶೀಲತೆಯನ್ನು ಕಳೆದುಕೊಂಡಿರುವುದು ಅಥವಾ ಸ್ಪರ್ಶದಲ್ಲಿ ರಕ್ತಸ್ರಾವವಾಗುವುದು ಗರ್ಭಕಂಠದ ಕ್ಯಾನ್ಸರ್‌ನ ಇತರೆ ಲಕ್ಷಣಗಳಾಗಿವೆ ” ಎಂದು ವಿದ್ಯಾ ವಿ.ಭಟ್ ಹೇಳಿದರು . ಗರ್ಭಕಂಠದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಮಹಿಳೆಯರು ಅನೇಕ ಕೆಲಸಗಳನ್ನು ಮಾಡಬಹುದು ಎಂದು ಅವರು ತಿಳಿಸಿದರು . ವಯಸ್ಸಿಗಿಂತ ಮುಂಚೆ ವಿವಾಹಗಳು , ಚಿಕ್ಕ ವಯಸ್ಸಿನಲ್ಲಿ ಲೈಂಗಿಕತೆ , ಬಹುಪತ್ನಿ ಸಂಬಂಧಗಳು , ಧೂಮಪಾನ ಮತ್ತು ಮೂರಕ್ಕೂ ಹೆಚ್ಚು ಮಕ್ಕಳಿಗೆ ಜನ್ಮ ನೀಡುವಂತಹ ಅಂಶಗಳನ್ನು ತಪ್ಪಿಸುವುದು ಇದರಲ್ಲಿ ಸೇರಿದೆ . ಮಕ್ಕಳ ಸಂಖ್ಯೆಯಲ್ಲಿ ನಿರ್ಬಂಧ ಮತ್ತು ಜನನಾಂಗದ ನೈರ್ಮಲ್ಯದ ಸುಧಾರಣೆಯೂ ಅಗತ್ಯವಾಗಿದೆ . ನಿಯಮಿತವಾಗಿ ಪ್ಯಾಪ್ ಸ್ಮಿಯರ್ ಮತ್ತು ಎಚ್ ಪಿವಿ ಪರೀಕ್ಷೆಗಳಿಗೆ ಒಳಗಾಗುವುದು ಅತ್ಯಂತ ಮುಖ್ಯವಾಗಿರುತ್ತದೆ ಮತ್ತು ಮಹಿಳೆಯರಿಗೆ ( ಆರು ತಿಂಗಳಲ್ಲಿ ಮೂರು ) ತಮ್ಮ ಹದಿಹರೆಯದ ವರ್ಷಗಳಲ್ಲಿ ಅಥವಾ 20 ರ ವಯೋಮಾನದ ಆರಂಭದಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕಾಗುತ್ತದೆ . ಮೊದಲ ಹಂತದಲ್ಲಿ ಕ್ಯಾನ್ಸರ್‌ ಗರ್ಭಕಂಠಕ್ಕೆ ಸೀಮಿತವಾಗಿರುತ್ತದೆ . ಎರಡನೇ ಹಂತದಲ್ಲಿ ಇದು ಗರ್ಭಕಂಠ ಮತ್ತು ಗರ್ಭಾಶಯವನ್ನು ಒಳಗೊಂಡಿರುತ್ತದೆ . ಮೂರನೇ ಹಂತದಲ್ಲಿ ಕ್ಯಾನ್ಸರ್‌ ಗರ್ಭಕಂಠ ಮತ್ತು ಗರ್ಭಾಶಯವನ್ನು ಮೀರಿ ಶ್ರೇಣಿಯ ಗೋಡೆ ಅಥವಾ ಯೋನಿಯ ಕೆಳ ಭಾಗಕ್ಕೆ ಸಾಗುತ್ತದೆ . ನಾಲ್ಕನೇ ಹಂತದಲ್ಲಿ ಇದು ಹತ್ತಿರದ ಅಂಗಗಳಾದ ಒರೆಕ್ಟಮ್ ಅಥವಾ ಶ್ವಾಸಕೋಶ , ಯಕೃತ್ತು ಅಥವಾ ಮೂಳೆಗಳಂತಹ ದೇಹದ ಇತರೆ ಪ್ರದೇಶಗಳಿಗೆ ವ್ಯಾಪಿಸುತ್ತದೆ . ಇದರ ಗುಣಪಡಿಸುವಿಕೆಯ ಪ್ರಮಾಣವು ಒಂದನೇ ಹಂತದಲ್ಲಿ ಸುಮಾರು ಶೇ.100 ರಷ್ಟಿದ್ದರೆ , ಮೂರನೇ ಹಂತದಲ್ಲಿ ಶೇ.40 ಹಾಗೂ ನಾಲ್ಕನೇ ಹಂತದಲ್ಲಿ ಶೇ.20 ಕ್ಕೆ ಇಳಿಯುತ್ತದೆ .

City Today News
9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.