ಕರ್ನಾಟಕ ಸರ್ಕಾರವು ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆ ಅಡಿ ಕಲಾವಿದರಿಗೆ ವಿವಿಧ ಯೋಜನೆಗಳಿಗಾಗಿ ಅನುದಾನ ಬಿಡುಗಡೆ

ಕರ್ನಾಟಕ ಸರ್ಕಾರವು ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆ ಅಡಿ ಕಲಾವಿದರಿಗೆ ವಿವಿಧ ಯೋಜನೆಗಳಿಗಾಗಿ ಅನುದಾನವನ್ನು ಬಿಡುಗಡೆ ಮಾಡುತ್ತದೆ . ಅಕಾಡೆಮಿಯಲ್ಲಿ ಕಳೆದ 2014 ರಿಂದ 2019 ರವರೆಗೆ ಈ ಅನುದಾನದಲ್ಲಿ ಉಳಿಕೆಯಾಗಿ ಬಂದಿದೆ . ಪ್ರಸ್ತುತ ಅಕಾಡಮಿ 2019 ರ ಅಕ್ಟೋಬರ್ ತಿಂಗಳಿನಲ್ಲಿ ಅಸ್ತಿತ್ವಕ್ಕೆ ಬಂದ ನಂತರ ಈ ಉಳಿಕೆ ಅನುದಾನವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅರ್ಹ ಕಲಾವಿದ ಫಲಾನುಭವಿಗಳಿಗೆ ದೊರೆಯುವಂತಾಗಬೇಕೆಂದು ಕಾರ್ಯತತ್ಪರವಾಯಿತು . ಇದಕ್ಕಾಗಿ ಈ ಅನುದಾನವನ್ನು ಮತ್ತೆ ಸೂಚಿಸಲಾದ ಯೋಜನೆಗಳನ್ನು ರೂಪಿಸಿ ಆಯಾ ಕಲಾವಿದರಿಗೆ ನೆರವು ಒದಗಿಸುವ ಸಲುವಾಗಿ ಸರ್ಕಾರಕ್ಕೆ ಪತ್ರ ಬರೆಯಲಾಯಿತು .

ಈ ಅನುದಾನದ ಮರು ಬಳಕೆಗೆ ಅನುಮತಿ ದೊರೆತಿರುವ ಹಿನ್ನಲೆಯಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ಇದೀಗ ಈ ವರ್ಗಕ್ಕೆ ಅನೇಕ ಕಾರ್ಯ ಚಟುವಟಿಕೆಗಳನ್ನು ಆಯೋಜಿಸಿದೆ . ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನ ಒಟ್ಟು ಉಳಿಕೆಯಾದ ಮೊತ್ತ 1,10,86,357 ರೂಪಾಯಿಗಳು . ಬಹುಶಃ ದೇಶದಲ್ಲೇ ಮೊದಲ ಬಾರಿಗೆ ಇಷ್ಟು ಪ್ರಮಾಣದ ಬೃಹತ್ ಮೊತ್ತದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲಾವಿದರಿಗಾಗಿ ಯೋಜನೆಗಳು ರೂಪಿತವಾಗುತ್ತಿದೆ . ಕೊರೋನಾ ಸಾಂಕ್ರಮಿಕ ಸಂಕಷ್ಟದಲ್ಲಿ ಆರ್ಥಿಕವಾಗಿ ತೊಂದರೆಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಲಾವಿದರಿಗೆ ಅನುದಾನವನ್ನು ಯೋಜನ ಅನುಷ್ಠಾನಗೊಳಿಸುತ್ತಿರುವುದು ಅತ್ಯಂತ ಅಗತ್ಯವಾಗಿದೆ .

ಈ ಅನುದಾನ ಬಳಕೆಗೆ ಸಮ್ಮತಿಸಿದ ಮಾನ್ಯ ಮುಖ್ಯಮಂತ್ರಿಗಳಿಗೆ , ಇಲಾಖೆಗೆ ಕರ್ನಾಟಕ ಲಲಿತಕಲಾ ಅಕಾಡೆಮಿ ಧನ್ಯವಾದಗಳನ್ನು ಸಲ್ಲಿಸುತ್ತದೆ .

ಈ ಅನುದಾನದಡಿ ಹಲವು ಕಾರ್ಯಕ್ರಮಗಳ ಯೋಜಿಸಲಾಗಿದ್ದು ಆ ಪೈಕಿ ವಿಶೇಷ ಘಟಕದ ಕಲಾಶಿಬಿರ , ಕಮ್ಮಟ , ಕಾರ್ಯಾಗಾರ , ಫೆಲೋಶಿಪ್ , ಸಾಕ್ಷಚಿತ್ರ ನಿರ್ಮಾಣ , ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ , ವಿಶೇಷ ಪರಣಿತಿ ತರಬೇತಿಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಅಕಾಡಮಿ ರೂಪಿಸಿದೆ . ಈ ಎಲ್ಲ ಯೋಜನೆಗಳ ರಾಜ್ಯದ ಬೇರೆ ಬೇರೆ ಕಡೆ ಹಮ್ಮಿಕೊಳ್ಳುವ ಮೂಲಕ ರಾಜ್ಯಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಫಲಾನುಭವಿ ಕಲಾವಿದರನ್ನು ವಿದ್ಯಾರ್ಥಿಗಳನ್ನು ತಲುಪುವ ಗುರಿ ಅಕಾಡೆಮಿ ಹೊಂದಿದೆ .

ಇದೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಶ್ರೀ ಅರವಿಂದ ಲಿಂಬಾವಳಿಯವರು ನೂತನ ಸಚಿವರಾಗಿದ್ದಾರೆ . ಅವರಿಗೆ ಅಭಿನಂದನೆಗಳನ್ನು ಅಕಾಡೆಮಿ ಸಲ್ಲಿಸುತ್ತದೆ . ಈ ಅನುದಾನದಡಿ ರೂಪಿತಗೊಂಡಿರುವ ಎಲ್ಲ ಕಾರ್ಯಕ್ರಮಗಳನ್ನು ಅವರ ನೇತೃತ್ವದಲ್ಲಿ ಕಾರ್ಯರೂಪಕ್ಕೆ ತರುವ ವಿಚಾರ ಅಕಾಡೆಮಿಯಾಗಿದೆ .

D.Mahendra

President

ಕರ್ನಾಟಕ ಲಲಿತಕಲಾ ಅಕಾಡೆಮಿ

City Today News
9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.