ಪರಿಶಿಷ್ಟ ಜಾತಿಯ ಛಲವಾದಿ ( ಬಲಗೈ ) ಸಮುದಾಯದವರಾದ ಶ್ರೀ. ನೆಹರು ಓಲೇಕಾರ್ ರವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಒತ್ತಾಯ

ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಛಲವಾದಿ ( ಬಲಗೈ ) ಸಮುದಯಾಕ್ಕೆ ಮುಖ್ಯಮಂತ್ರಿ ಹುದ್ದೆ ದಕ್ಕುತ್ತದೆ ಎಂಬ ಮಾತು ನಾಲ್ಕು ದಶಕಗಳಿಂದಲೂ ಕೇಳಿ ಬರುತ್ತಿದೆ , ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಸಂಖ್ಯೆ ಸುಮಾರು ಒಂದು ಕೋಟಿ ಐವತ್ತು ಲಕ್ಷ ) ಜನಸಂಖ್ಯೆ ಇದ್ದು , ಇದುವರೆಗೂ ಮುಖ್ಯಮಂತ್ರಿ ಹುದ್ದೆ ದೊರಕದೆ ಇರುವುದು ನಮ್ಮ ದುರ್ದೈವ . ರಾಜ್ಯದಲ್ಲಿ ಲಿಂಗಾಯತರು 8 ಮಂದಿ ಮುಖ್ಯಮಂತ್ರಿಗಳಾಗಿದ್ದಾರೆ ಹಾಗೇಯೆ ಒಕ್ಕಲಿಗರು 6 ಮಂದಿ ಮುಖ್ಯಮಂತ್ರಿಗಳಾಗಿದ್ದಾರೆ ಕೇವಲ 2 % ಇರುವ ಬ್ರಾಹ್ಮಣರು ಮುಖ್ಯಮಂತ್ರಿಗಳಾಗಿದ್ದಾರೆ , ಕುರುಬರು ಮತ್ತು ಹಿಂದುಳಿದವರು ಸಹ ಮುಖ್ಯಮಂತ್ರಿಗಳಾಗಿದ್ದಾರೆ . ಕಾಂಗ್ರೆಸ್ ಪಕ್ಷವು 70 ವರ್ಷಗಳಿಂದ ಆಡಳಿತ ನಡೆಸುತ್ತಾ ಬಂದಿರುತ್ತದೆ ಆ ಪಕ್ಷದಲ್ಲಿ ದಿವಂಗತ ಕೆ.ಹೆಚ್ . ರಂಗನಾಥ , ದಿವಂಗತ ಬಿ . ಬಸವಲಿಂಗಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಲಾಯಿತು ನಂತರ ಶ್ರೀ ಮಲ್ಲಿಕಾರ್ಜುನ ಖರ್ಗೆ ಮತ್ತು ಡಾ || ಜಿ . ಪರಮೇಶ್ವರ್‌ರವರು ಮುಖ್ಯಮಂತ್ರಿ ರೇಸ್‌ನಲ್ಲಿ ಬಂದು ಕೊನೆಗಳಿಗೆಯಲ್ಲಿ ಕಾಂಗ್ರೆಸ್ High command ಇವರನ್ನು ಮೂಲೆ ಗುಂಪು ಮಾಡಿದರು . ಭಾರತೀಯ ಜನತಾ ಪಾರ್ಟಿಯಲ್ಲಿ ಉಳಿದಿರುವ 20 ತಿಂಗಳು ಶ್ರೀ ನೆಹರು ಓಲೇಕಾರ್ , ಅಧ್ಯಕ್ಷರು , ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದಲ್ಲಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಇವರು ವಿದ್ಯಾವಂತ ಪದವಿದರರಾಗಿದ್ದು ಇವರನ್ನು ಮುಖ್ಯಮಂತ್ರಿ ಮಾಡಲಿ ಎಂಬುದಾಗಿ ಕರ್ನಾಟಕ ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘವು ಒತ್ತಾಯಿಸುತ್ತದೆ . ಕಾಂಗ್ರೆಸ್ ಪಕ್ಷವು 70 ವರ್ಷದಿಂದ ಮುಖ್ಯಮಂತ್ರಿ ಮಾಡಲಿಲ್ಲ , ಪ್ರಾದೇಶಿಕ ಪಕ್ಷ ಜೆ.ಡಿ.ಎಸ್ ಮೇಲೆ ನಮಗೆ ನಂಬಿಕೆ ಇಲ್ಲ ಉಳಿದಿರುವುದು , ಭಾರತೀಯ ಜನತಾ ಪಾರ್ಟಿ ಸಂವಿಧಾನದ ಮೇಲೆ ನಂಬಿಕೆ , ಸಾಮಾಜಿಕ ಬದ್ದತೆ ಇದ್ದರೆ ಶ್ರೀ ನರೇಂದ್ರ ಮೋದಿ , ಶ್ರೀ ಅಮೀತ್ ಶಾ ರವರು ಸರ್ವರಿಗೂ ಸಮಪಾಲು , ಸರ್ವರಿಗೂ ಸಮಬಾಳು ಎಂದು ಹೇಳುತ್ತಿರುತ್ತಾರೆ ಇದನ್ನು ಸಾಬೀತು ಪಡಿಸಲಿ ಮತ್ತು ಆರ್.ಎಸ್.ಎಸ್ ದಲಿತರ ಪರವಾಗಿದೆ , ಎಂದರೆ ದಲಿತ ಮುಖ್ಯಮಂತ್ರಿ ಮಾಡಿ 70 ವರ್ಷದಿಂದ ದಲಿತ ಮುಖ್ಯಮಂತ್ರಿ ಮಾಡಿಲ್ಲ ಎಂಬ ಕಪ್ಪು ಚುಕ್ಕೆ ಉಳಿದಿದೆ . ಅದನ್ನು ಬಿ.ಜೆ.ಪಿ ಪಕ್ಷವು ಅಳಿಸಿ ಸಾಮಾಜಿಕ ನ್ಯಾಯ ಮತ್ತು ಸಂವಿಧಾನಕ್ಕೆ ಗೌರವ ಕೊಡುತ್ತದೆ ಎಂದು ನಂಬಿರುತ್ತೇವೆ ಎಂದು ಪತ್ರಿಕಾಗೋಷ್ಥಿಯಲ್ಲಿ ಅಂದರು.

City Today News
9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.