ಬೆಂಗಳೂರಿನಲ್ಲಿಂದು ನಡೆದ ನ್ಯೂ ಇಂಡಿಯಾ ಟ್ರಾವೆಲ್ ಸಮ್ಮೇಳನ ಉದ್ಘಾಟಿಸಿದ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್

ಕೋವಿಡ್ ಹಿನ್ನಲೆ; ಪ್ರವಾಸಿಗರನ್ನು ಸೆಳೆಯಲು ನೂತನ ನೀತಿ ಜಾರಿ- ಆನಂದ್ ಸಿಂಗ್.

ಬೆಂಗಳೂರಿನಲ್ಲಿ ನ್ಯೂ ಇಂಡಿಯಾ ಟ್ರಾವೆಲ್ ಸಮ್ಮೇಳನ.

ಬೆಂಗಳೂರು- ಪ್ರವಾಸಿಗರನ್ನು ಸೆಳೆಯಲು ನೂತನ ಪ್ರವಾಸೋದ್ಯಮ ನೀತಿಯನ್ನು ಜಾರಿ ತರಲು ರಾಜ್ಯ ಸರ್ಕಾರ ಪ್ರಯತ್ನ ನಡೆಸಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ನಡೆದ ನ್ಯೂ ಇಂಡಿಯಾ ಟ್ರಾವೆಲ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು,

ಪ್ರವಾಸಿಗರು ಯಾವುದೇ ಸ್ಥಳಕ್ಕೆ ಬೇಟಿ ನೀಡಿದ್ದಾಗ ಅವರನ್ನು ಆಕರ್ಷಿಸುವ ರೀತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಕಳೆದ ಎರಡು ಮೂರು ದಿನಗಳಂದು ಅಧಿಕಾರಿಗಳ ಜೊತೆ ಸಭೆ ನಡೆಸಲಾಗುತ್ತದೆ. ಪ್ರವಾಸದ್ಯೋಮ ಸೇರಿದಂತೆ ಎಲ್ಲ ಕ್ಷೇತ್ರಗಳು ಸಂಕಷ್ಟದಲ್ಲಿವೆ. ಅವುಗಳ ವೃದ್ದಿಗೆ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ ಎಂದು ಹೇಳಿದರು.

ಸೆಪ್ಟೆಂಬರ್ ತಿಂಗಳಲ್ಲಿ ಮೂರನೇ ಅಲೆ ಬರುವ ಸಾಧ್ಯತೆ ಬಗ್ಗೆ ತಜ್ಞರು ತಮ್ಮದೇ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರು ಲಸಿಕೆ ಹೊಂದುವುದು ಅಗತ್ಯವಾಗಿದೆ. ಇದರ ಜೊತೆ ಪ್ರವಾಸಿ ಸ್ಥಳಗಳಲ್ಲಿ ಕೋವಿಡ್ ಸುರಕ್ಷಾ ಮಾರ್ಗಗಳನ್ನು ಅನುಸರಿಸುವ ಬಗ್ಗೆ ಮಾರ್ಗದರ್ಶಿ ಸೂತ್ರ ರೂಪಿಸಿ ಈ ಕ್ಷೇತ್ರದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನ್ಯೂ ಇಂಡಿಯಾ ಟ್ರಾವೆಲ್ ನ ಆಯೋಜಕ ಅನುರಾಗ್ ಗುಪ್ತಾ ಮಾತನಾಡಿ, ಪ್ರತಿಯೊಬ್ಬ ಪ್ರವಾಸಿಗರು ಕೋವಿಡ್ ಸುರಕ್ಷಾ ನಿಯಮಗಳನ್ನು ಅನುಸರಿಸುವ ಮೂಲಕ ಪ್ರವಾಸಿ ಸ್ಥಳಗಳಿಗೆ ಬೇಟಿ ನೀಡ ಬಹುದು ಎಂದು ಹೇಳಿದರು.

ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ.ಅಸೋಚಾಮ್ ಅಧ್ಯಕ್ಷ ವಿನೀತ್ ಅಗರ್ ವಾಲ್, ಅಸೋಚಾಮ್ ಪ್ರಧಾನ ಕಾರ್ಯದರ್ಶಿ ದೀಪಕ್ ಸೂದ್ ಮತ್ತಿತರರು ಹಾಜರಿದ್ದರು.

City Today News

9341997936

Leave a comment

This site uses Akismet to reduce spam. Learn how your comment data is processed.