ರಾಜಗೋಪಾಲನಗರ ಪೊಲೀಸ್ ಠಾಣೆಯ ಕುಖ್ಯಾತ ರೌಡಿ ಆಸಾಮಿಯಾದ ಶಿವ ಜಿ @ ಕರಿಯಾ ಶಿವು ಎಂಬುವನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ .

ರಾಜಗೋಪಾಲನಗರ ಪೊಲೀಸ್ ಠಾಣೆಯ ಕುಖ್ಯಾತ ರೌಡಿ ಆಸಾಮಿಯಾದ ಶಿವ ಜಿ @ ಕರಿಯಾ ಶಿವು ಎಂಬುವನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ . ರಾಜಗೋಪಾಲನಗರ ಪೊಲೀಸ್ ಠಾಣೆಯ ಕುಖ್ಯಾತ ರೌಡಿ ಆಸಾಮಿಯಾದ ಶಿವ ಜಿ @ ಕರಿಯಾ ಶಿವು ಬಿನ್ ಲೇಟ್ ಗೋವಿಂದರಾಜು , 31 ವರ್ಷ , ದುಗ್ಗಲಮ್ಮ ದೇವಸ್ಥಾನ ಹತ್ತಿರ , ಬಸಪ್ಪನಕಟ್ಟೆ , ರಾಜಗೋಪಾಲನಗರ , ಬೆಂಗಳೂರುನಗರ ಈತನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ . ಈತನು ಬೆಂಗಳೂರು ನಗರದ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಸಕ್ರಿಯವಾಗಿ ರೌಡಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದು , ಈತನ ವಿರುದ್ಧ ದರೋಡೆ ಸಂಚು , ಕೊಲೆ ಪ್ರಯತ್ನ , ಕೊಲೆ ಬೆದರಿಕೆ , ವಾಹನಗಳಿಗೆ ಬೆಂಕಿ ಹಚ್ಚಿ ಸಾರ್ವಜನಿಕ ಆಸ್ತಿ ನಾಶಪಡಿಸುವುದು , ಅಪರಾಧ ಕೃತ್ಯಗಳಲ್ಲಿ ಶಸ್ತ್ರ ಬಳಕೆ , ಹಲ್ಲೆಯಂತಹ ಅಪರಾಧ ಪ್ರಕರಣಗಳು ದಾಖಲಾಗಿರುತ್ತವೆ . ಈತನು 2013 ನೇ ಸಾಲಿನಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದು , ಈತನ ವಿರುದ್ಧ ಮೇಲ್ಕಂಡ ಪೊಲೀಸ್ ಠಾಣೆಯಲ್ಲಿ 2013 ರಿಂದ 2021 ನೇ ಸಾಲಿನ ಅಕ್ಟೋಬರ್ ವರೆಗೆ ದರೋಡೆ ಸಂಚು , ಕೊಲೆ ಪ್ರಯತ್ನ , ಕೊಲೆ ಬೆದರಿಕೆ , ವಾಹನಗಳಿಗೆ ಬೆಂಕಿ ಹಚ್ಚಿ ಸಾರ್ವಜನಿಕ ಆಸ್ತಿ ನಾಶಪಡಿಸುವುದು , ಅಪರಾಧ ಕೃತ್ಯಗಳಲ್ಲಿ ಶಸ್ತ್ರ ಬಳಕೆ , ಹಲ್ಲೆಯಂತಹ ಒಟ್ಟು 10 ಪ್ರಕರಣಗಳು ದಾಖಲಾಗಿರುತ್ತವೆ . ರಾಜಗೋಪಾಲನಗರ ಪೊಲೀಸ್ ಠಾಣೆಯ 2018 ನೇ ಸಾಲಿನ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದು , ದಿನಾಂಕ 16-02-2022 ರಂದು ಈ ಪ್ರಕರಣದಲ್ಲಿ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೊಪಿಸಲಾಗಿದೆ . ಆರೋಪಿಯು ಈ ಹಿಂದೆ ಭಾಗಿಯಾಗಿದ್ದ ಪ್ರಕರಣಗಳಲ್ಲಿ ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿರುತ್ತಾನೆ . ಈತನು ರೌಡಿ ಚಟುವಟಿಕೆ ಮತ್ತು ಅಪರಾಧ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬಂದು ಸಾರ್ವಜನಿಕರಲ್ಲಿ ಭಯ ಭೀತಿಯನ್ನುಂಟು ಮಾಡುತ್ತಿರುವುದರಿಂದ ಈತನನ್ನು ಗೂಂಡಾ ಕಾಯ್ದೆಯಡಿಯಲ್ಲಿ ಬಂಧನದಲ್ಲಿಡಲಾಗಿದೆ . ಈತನನ್ನು ಗೂಂಡಾಕಾಯ್ದೆಯಡಿಯಲ್ಲಿ ಬಂಧಿಸಲು ಶ್ರೀ ಬಿ.ಆರ್ . ಜಗದೀಶ್ , ಪೊಲೀಸ್ ಇನ್ಸ್‌ಪೆಕ್ಟರ್ , ರಾಜಗೋಪಾಲನಗರ ಪೊಲೀಸ್ ಠಾಣೆ ರವರು ವರದಿಯನ್ನು ಸಲ್ಲಿಸಿದ್ದು , ಸದರಿ ವರದಿಯನ್ನು ಪರಿಶೀಲಿಸಿ ಮಾನ್ಯ ಪೊಲೀಸ್ ಆಯುಕ್ತರು , ಬೆಂಗಳೂರು ನಗರ ರವರು ಈತನನ್ನು ಗೂಂಡಾಕಾಯ್ದೆಯಡಿಯಲ್ಲಿ ಬಂಧಿಸಲು ಆದೇಶ ಮಾಡಿರುತ್ತಾರೆ .

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.