
ಮಾತೃ ಅಂಧರ ಮತ್ತು ಇತರೆ ಅಂಗವಿಕಲ ಮಕ್ಕಳ ಶಿಕ್ಷಣ ಸಂಸ್ಥೆ ಯಲಹಂಕ , ಬೆಂಗಳೂರು .
ಮಾತೃ ಅಂಧರ ಮತ್ತು ಇತರ ಅಂಗವಿಕಲ ಮಕ್ಕಳ ಶಿಕ್ಷಣ ಸಂಸ್ಥೆಯು ಸೆನ್ಸ್ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆಯ ಸಹಯೋಗದೊಂದಿಗೆ ಸುಮಾರು 8 ವರ್ಷಗಳಿಂದ ಶ್ರವಣಅಂಧತ್ವ ಜೊತೆಗೆ ವಿವಿಧ ನೂನ್ಯತೆಯುಳ್ಳ ಅಂಗವಿಕಲ ಮಕ್ಕಳ ಏಳಿಗೆಗೆ ಯಲಹಂಕ ಉಪನಗರ ಮತ್ತು ಡಿ.ಜೆ.ಹಳ್ಳಿ , ಬೆಂಗಳೂರಿನಲ್ಲಿ ಶ್ರಮಿಸುತ್ತಿದೆ . ಸೆನ್ಸ್ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆಯ ಸರ್ವೆಯ ಪ್ರಕಾರ ಭಾರತ ದೇಶದಲ್ಲಿ ಸುಮಾರು 5 ಲಕ್ಷ ಶ್ರವಣಅಂಧತ್ವ ಜನರಿರುವುದು ಕಂಡುಬಂದಿದೆ ಹಾಗೆಯೇ ಕರ್ನಾಟಕದಲ್ಲಿ 5 ಸಾವಿರ ಜನರಿರುವುದು ತಿಳಿದು ಬಂದಿದೆ . 2016 ರ RPWD Act ನಲ್ಲಿ ಈ ಅಂಗವಿಕಲತೆಯನ್ನು ವಿವಿಧ ಅಂಗವಿಕಲತೆಯ ಜೊತೆಗೆ ಶ್ರವಣಅಂಧತ್ವ ಎಂದು ಸೇರಿಸಿದ್ದಾರೆ ಆದರೆ ಈ Act ಬಂದು 6 ವರ್ಷ ಕಳೆಯುತ್ತಾ ಬಂದರೂ ಇಲ್ಲಿಯವರೆಗೆ ಈ ಅಂಗವಿಕಲತೆಯನ್ನು ಗುರುತಿಸುವುದಾಗಲಿ , ಅವರಿಗೆ ಬೇಕಾಗಿರುವ ಸೌಲಭ್ಯವನ್ನು ಒದಗಿಸಿ ಸಮಾಜದ ಮುಖ್ಯವಾಹಿನಿಗೆ ತುರುವಂತಹ ಕೆಲಸವನ್ನು ಯಾರೂ ಮಾಡುತ್ತಿಲ್ಲ . ಶ್ರವಣ ಅಂದತ್ವ ಎಂದರೆ ಯಾವುದೇ ಒಬ್ಬ ವ್ಯಕ್ತಿಗೆ / ಮಗುವಿಗೆ ಸಂಪೂರ್ಣವಾಗಿ ಅಥವಾ ಸ್ವಲ್ಪ ಮಟ್ಟಿಗೆ ಕಣ್ಣು ಕಾಣಿಸದೆ ಇರುವುದು ಜೊತೆಗೆ ಕಿವಿ ಕೇಳಿಸದೆ ಇರುವುದಕ್ಕೆ ಶ್ರವಣ ಅಂಧತ್ವ ಎಂದು ಕರೆಯುತ್ತಾರೆ . ಹಾಗೂ ಈ ಮಕ್ಕಳಲ್ಲಿ ಸಂವಹನ , ಬೆಳವಣಿಗೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ತೀವ್ರವಾದ ಸಮಸ್ಯೆಗಳು ಉಂಟಾಗುತ್ತದೆ . ಕರ್ನಾಟಕದಲ್ಲಿಯೇ ಪ್ರಪ್ರಥಮವಾಗಿ ಶ್ರವಣಅಂಧತ್ವದ ಜೊತೆಗೆ ವಿವಿಧ ನೂನ್ಯತೆಯುಳ್ಳ ಅಂಗವಿಕಲ ಮಕ್ಕಳ ಬಗ್ಗೆ ಕೆಲಸ ಮಾಡುತ್ತಿರುವ ಏಕೈಕ ಸಂಸ್ಥೆ ಎಂದರೆ ಅದುವೆ ಮಾತೃ ಅಂಧರ ಮತ್ತು ಇತರೆ ಅಂಗವಿಕಲ ಮಕ್ಕಳ ಶಿಕ್ಷಣ ಸಂಸ್ಥೆಯಾಗಿದೆ .
ಸಂಸ್ಥೆಯು ಈ ಅಂಗವಿಕಲ ಮಕ್ಕಳಿಗೆ ಅವರ ವಯಸ್ಸಿಗೆ ಅನುಗುಣವಾಗಿ ಹಾಗೂ ಅವರಿಗೆ ಅತಿ ಅವಶ್ಯಕವಾಗಿ ಬೇಕಾಗಿರುವ ತರಬೇತಿಯನ್ನು ಕೇಂದ್ರ ಆಧಾರಿತವಾಗಿ , ಗೃಹ ಆಧಾರಿತವಾಗಿ ಮತ್ತು ಸಹಾಯ ಆಧಾರಿತವಾಗಿ ನೀಡುತ್ತಿದೆ . ಹಾಗೆಯೇ 18 ವರ್ಷ ಮೇಲ್ಪಟ್ಟ ಯುವಕ / ಯುವತಿಯರಿಗೆ ವೃತ್ತಿಪರ ಕೌಶಲ್ಯ ತರಬೇತಿಯನ್ನು ನೀಡುವುದರ ಜೊತೆಗೆ 25000 ರೂಗಳನ್ನು ನೀಡಿ ಮುಂದಿನ ಭವಿಷ್ಯಕ್ಕೆ ಅನುವುಮಾಡಿಕೊಡುತ್ತಿದೆ .
ಕೋವಿಡ್ -19 ಸಮಯದಲ್ಲಿ ಶ್ರವಣಅಂಧತ್ವ ಜೊತೆಗೆ ವಿವಿಧ ನೂನ್ಯತೆಯುಳ್ಳ ಮಕ್ಕಳಿಗೆ ಮತ್ತು ಅವರ ಪೋಷಕರಿಗಾದ ಸಮಸ್ಯೆಗಳು.
1. ಔಷಧಿಯ ಸಮಸ್ಯೆ 2. ಪಿಂಚಣಿ ಸಮಸ್ಯೆ 3. ಶಾಲೆಗೆ ರಜೆ ನೀಡಿರುವುದರಿಂದ ನಮ್ಮ ಮಕ್ಕಳ ನಡತೆಯಲ್ಲಿ ಬದಲಾವಣೆ ಹಾಗೂ ಕಲಿಕೆಯಲ್ಲಿ ಹಿಂದುಳಿದಿರುವಿಕೆ , 4. ಆರ್ಥಿಕ ಸಮಸ್ಯೆ 5. ಸರ್ಕಾರಿ ಯೋಜನೆಗಳು ಜಾರಿಗೆ ಬರದ ಕೋವಿಡ್ -19 ಸಮಯದಲ್ಲಿ ರದ್ದಾಗಿ ಬದಲಾಗಿರುವುದು . 6. ಲಾಕ್ ಡೌನ್ ಸಮಯದಲ್ಲಿ ಸರ್ಕಾರದ ಸಹಾಯ ಸಿಗದೆ ಇರುವುದು , 7. ತುರ್ತು ಸಮಯದಲ್ಲಿ ಹೊರಗೆ ಹೋಗಲು ವಾಹನಗಳ ಸಮಸ್ಯೆ . 8. ಸುಮಾರು ದಿನಗಳವರೆಗೆ ಮಕ್ಕಳನ್ನು ಮನೆಯಲ್ಲಿಯೇ ಇರಿಸಿಕೊಳ್ಳುವಂತೆ ಆಗಿತ್ತು . 9. ಕೋವಿಡ್ -19 ಸಮಯದಲ್ಲಿ ಬೆಲೆ ಏರಿಕೆಯ ಸಮಸ್ಯೆ . 10 , ಕೋವಿಡ್ -19 ಲಸಿಕೆ ಪಡೆಯುವಲ್ಲಿ ಸಮಸ್ಯೆ . II . ಒಂದು ವೇಳೆ ಭವಿಷ್ಯದಲ್ಲಿ ಮತ್ತೆ ಲಾಕ್ ಡೌನ್ ಆದರೆ ಆ ಸಮಯದಲ್ಲಿ ಸರ್ಕಾರದ ಸಹಾಯವೇನು ?.
ಶ್ರವಣಅಂಧತ್ವ ಯುವಕನ ಸಮಸ್ಯೆಗಳು .
1. ಕೋವಿಡ್ -19 ಸಮಯದಲ್ಲಿ ಶಾಲೆ ಇರಲಿಲ್ಲ . 2. ಫೇಡ್ಸ್ ಜೊತೆಗೆ ಇರಲಿಲ್ಲ . 3. ಹೊಸ – ಹೊಸ ಕಲಿಕೆ ಇರಲಿಲ್ಲ . 4. ಏಲ್ಲಿಯೂ ಹೊರಗಡೆ ಹೊಗುವಹಾಗಿಲ್ಲ ಮತ್ತು ಒಂದೇ ಕಡೆ ಇದ್ದು ಬೇಜಾರು . 5. ಪ್ರತಿಯೋಬ್ಬರನ್ನು ಮುಟ್ಟದೆ ನಾವು ಮಾತನಾಡಿಸುವುದಿಲ್ಲ ಹಾಗಾಗಿ ಇನ್ನೊಬ್ಬರನ್ನು ಮಾತನಾಡಿಸಲು ಭಯವಾಗಿತ್ತು . 6. ಪ್ರತಿಬಾರಿಯೋ ಸ್ಯಾನಿಟೈಜರ್ ಮತ್ತು ಮಾಸ್ಕ್ ಹಾಕಿಕೊಂಡು ಇರಬೇಕು . 7. ಅತಿ ಅವಶ್ಯಕ ವಸ್ತುಗಳ ಜೋಪಾನ ಮಾಡುವುದು ಕಟ್ಟಕರ ಎಂದು ಮಾತೃ ಅಂಧರ ಮತ್ತು ಇತರ ಅಂಗವಿಕಲ ಮಕ್ಕಳ ಶಿಕ್ಷಣ ಸಂಸ್ಥೆಯು ಸೆನ್ಸ್ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆಯ ನಾರಾಯಣ, ಬಿ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದರು
City Today News
9341997936