ನಿಮ್ಮ ತ್ವಚೆಯ ಆರೈಕೆಯ ಅಗತ್ಯಗಳಿಗೆ ನೆರವಾಗಲು ಡಿಜಿಟಲ್ ಬುದ್ಧಿವಂತಿಕೆಯನ್ನು ಬಳಸಿಕೊಳ್ಳುವುದು ಈಗ ಕೇವಲ ಒಂದು ಆ್ಯಪ್ ದೂರದಲ್ಲಿದೆ !

ಆನ್ಲೈನ್ ಆಧಾರಿತ ತ್ವಚೆಯ ಮೌಲ್ವಿಕರಣಗಳ ಬಳಕೆಯ ಮೂಲಕ ಹಲವಾರು ಚರ್ಮ ಮತ್ತು ಕೂದಲು ಸ್ಥಿತಿಗಳಿಗೆ ಫಲಿತಾಂಶಚಾಲಿತ ಮತ್ತು ವೈಯಕ್ತಿಕ ಅಗತ್ಯಗಳಿಗೆ ತಕ್ಕಂತಹ ಪರಿಹಾರಗಳನ್ನು ಕ್ಯೂರ್ ಸ್ಕಿನ್ ಪೂರೈಸುತ್ತಿದ್ದು , ಈಗಾಗಲೇ 50 ಲಕ್ಷಕ್ಕೂ ಹೆಚ್ಚಿನ ಆ್ಯಪ್ ಡೌನ್‌ಲೋಡ್‌ಗಳನ್ನು ಕಂಡಿದೆ . . ಮನೆಗೆ ವಿತರಣೆಯಾಗುವ ಉತ್ಪನ್ನಗಳು ಅದರ ವೈದ್ಯರ ತಂಡದಿಂದ ಸತತ ಮೇಲ್ವಿಚಾರಣೆ ಆಹಾರಕ್ರಮ ಮೇಲ್ವಿಚಾರಣೆಗಾಗಿ ಮತ್ತು ಜೀವನಶೈಲಿ ಕುರಿತ ಸಲಹೆಗಾಗಿ ಉತ್ತಮ ತ್ವಚೆ ಮತ್ತು ಕೂದಲು ಆರೈಕೆ ಕುರಿತಂತೆ ಕಾರ್ಯಕ್ರಮಗಳು ಸಂಸ್ಥೆಯೊಳಗಿನ 20 ವೈದ್ಯರ ತಂಡದ ಮೇಲ್ವಿಚಾರಣೆ ಜೊತೆಗೆ ಛಾಯಾಚಿತ್ರವನ್ನು ಬಳಸಿ ಸಾಕ್ಷಿ ಆಧಾರಿತ ಕ್ಯೂರ್‌ಸ್ಕಿನ್ ಚಿಕಿತ್ಸೆಗಳನ್ನು ನೀಡಲಾಗುತ್ತದೆ . ಮೊಡವೆ , ಕಲೆ ಮತ್ತು ಕೂದಲು ಉದುರುವಿಕೆಯಂತಹ ತೊಂದರೆಗಳನ್ನು ಪರಿಹರಿಸಲು ಅಥವಾ ಗುರಿಯಿಂದ ಚಾಲಿತವಾದ ಚರ್ಮ ಮತ್ತು ಕೂದಲು ಸುಧಾರಣೆಗಳನ್ನು ಕೈಗೊಳ್ಳಲು ಈ ಚಿಕಿತ್ಸೆಗಳನ್ನು ಬಳಸಿಕೊಳ್ಳಬಹುದಾಗಿದೆ . ಡಿಜಿಟಲ್ ತಂತ್ರಜ್ಞಾನ ಬಳಕೆ ಚರ್ಮ ಮತ್ತು ಕೂದಲ ಆರೋಗ್ಯದ ಮೌಲೀಕರಣಕ್ಕಾಗಿ ಡಿಜಿಟಲ್ ತಂತ್ರಜ್ಞಾನವನ್ನು ಕ್ಯೂರ್‌ಸ್ಕಿನ್ ವಿಸ್ತಾರವಾಗಿ ಬಳಸಿಕೊಳ್ಳುತ್ತದೆ . ನಂತರ ಫಲಿತಾಂಶಗಳನ್ನು ವೈದ್ಯರು ಪರಿಶೀಲಿಸುತ್ತಾರೆ ಈ ಕಾರ್ಯಕ್ರಮದಲ್ಲಿ ವೈಯಕ್ತಿಕರಿಸಿದ ಚಿಕಿತ್ಸೆಗಳು ಮತ್ತು ನಂತರದ ನಿಗದಿತ ಅವಧಿಯಲ್ಲಿನ ಪರೀಕ್ಷೆಗಳನ್ನು ಕಾರ್ಯಕ್ರಮದಲ್ಲಿ ಸೇರಿಸಲಾಗಿರುತ್ತದೆ . ಕ್ಯೂರ್‌ಸ್ಕಿನ್‌ನ ಡಿಜಿಟಲ್ ತಂತ್ರಜ್ಞಾನ ಪ್ರತಿದಿನ ಸುಮಾರು 10,000 ರೋಗಿಗಳಿಗೆ ಸಹಾಯ ಮಾಡುತ್ತಿದೆ . ಆಳವಾದ ಕಲಿಕೆಯನ್ನು ಆಧರಿಸಿದ ಚಿತ್ರವನ್ನು ಗುರುತಿಸುವ ಕ್ರಮವನ್ನು ಬಳಸಿ ಕ್ಯೂರ್ ಸ್ಕಿನ್ ಫೋಟೋಗಳಿಂದ ಸ್ಥಿತಿಗಳನ್ನು ಸ್ವಯಂಚಾಲಿತವಾಗಿ ಗುರುತಿಸುತ್ತದೆ . ಪ್ಯೂರ್ ಸ್ಕಿನ್‌ನ ರೊಬೋಟ್ ಹಲವಾರು ರೀತಿಯ ಸಮಸ್ಯೆಯ ಸ್ಥಿತಿಗಳನ್ನು ಗುರುತಿಸುತ್ತದೆ . ಇವುಗಳಲ್ಲಿ ವಿಭಿನ್ನ ರೀತಿಯ ಮೊಡವೆಗಳು , ಮೊಡವೆ ನಂತರದ ತೊಂದರೆಗಳಾದ ಕಲೆಗಳು , ಗುರುತುಗಳು , ಗಾಯದ ಗುರುತುಗಳು , ಮತ್ತು ಪಿಸ್ಟೆಂಟೇಷನ್ ಮುಂತಾದವುಗಳು ಸೇರಿವೆ . ಫಿಕ್ಸೆಲ್ ಮಟ್ಟದಲ್ಲಿ ಮತ್ತು ರಂಧ್ರದ ಮಟ್ಟದಲ್ಲಿ ಗುಣಲಕ್ಷಣದ ವಿಶ್ಲೇಷಣೆಯನ್ನು ಕೈಗೊಳ್ಳುವಂತೆ ಈ ತಂತ್ರಜ್ಞಾನವನ್ನು ನಿರ್ಮಿಸಲಾಗಿದೆ . ಬೇರೆ ಬೇರೆ ರೀತಿಯ ತ್ವಚೆಗಳು , ಮುಖದ ಕೋನಗಳು ಮತ್ತು ಬೆಳಕಿನ ಸ್ಥಿತಿಗಳ ಮೇಲೆ ತಂತ್ರಜ್ಞಾನ ಕೆಲಸ ಮಾಡುತ್ತದೆ ಅಲ್ಲದೆ , ತ್ವಚೆಯ ಅತ್ಯಂತ ನಿಖರವಾದ ಪ್ರತಿನಿಧಿತ್ವವನ್ನು ಗುರುತಿಸುತ್ತದೆ . ಬ್ರಾಂಡೆಡ್ ಉತ್ಪನ್ನಗಳು ಕ್ಯೂರ್ ಸ್ಕಿನ್ ತನ್ನದೇ ಆದ ಬ್ರಾಂಡೆಡ್ ಉತ್ಪನ್ನಗಳ ಶ್ರೇಣಿ ಹೊಂದಿದೆ . ಇವುಗಳನ್ನು ತ್ವಚೆಯ ಆರೈಕೆ ಕಿಟ್‌ಗಳ ಭಾಗವಾಗಿ ಮನೆಗಳಿಗೆ ವಿತರಿಸಲಾಗುತ್ತಿದೆ . ವೈಯಕ್ತಿಕರಿಸಿದ ತ್ವಚೆ ಆರೋಗ್ಯ ಕಾರ್ಯಕ್ರಮಗಳು ಅಗ್ರಮಟ್ಟದ ಪರಿಣತಿ , ಸತತ ಆರೈಕೆ ಒಳಗೊಂಡಿದ್ದು , ನಿಮ್ಮ ಮನೆಗೆ ಅನುಕೂಲಕರವಾಗಿ ಇವುಗಳನ್ನು ವಿತರಿಸಲಾಗುತ್ತಿದೆ . ಇವುಗಳನ್ನು ನಿಮ್ಮ ಫೋಟೋಗಳನ್ನು ಆಧರಿಸಿ ಮತ್ತು ನಿಮ್ಮ ವೈಯಕ್ತಿಕ ಅಗತ್ಯಗಳನ್ನು ಆಧರಿಸಿ ಅದಕ್ಕೆ ತಕ್ಕಂತೆ ಸಾದರಪಡಿಸಲಾಗುತ್ತದೆ . ಇದುಂದ ನಿಮಗೆ ಅತ್ಯುತ್ತಮ ಫಲಿತಾಂಶಗಳನ್ನು ಕಾಣಬಹುದಲ್ಲದೆ ಅತ್ಯುತ್ತಮ ಆರೈಕೆಯ ಅನುಭವ ಪಡೆಯಬಹುದಾಗಿದೆ .

ಇದು ಯಾವ ರೀತಿಯಲ್ಲಿ ಕೆಲಸ ಮಾಡುತ್ತದೆ :
ಕ್ಯೂರ್ ಸ್ಕಿನ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ * ನಿಮ್ಮ ಮುಖದ ಚಿತ್ರ ತೆಗೆದುಕೊಳ್ಳಿ ● ಡಿಜಿಟಲ್ ತಂತ್ರಜ್ಞಾನ ತ್ವಚೆಯ ತೊಂದರೆಯನ್ನು ಗುರುತಿಸಿ ಚರ್ಮದ ಆರೈಕೆಯ ದೈನಂದಿನ ಕ್ರಮವನ್ನು ಸೃಷ್ಟಿಸುತ್ತದೆ . ತ್ವಚೆಯ ಆರೈಕೆಗೆ ಈ ಉತ್ಪನ್ನಗಳನ್ನು ಗ್ರಾಹಕರಿಗೆ ರವಾನೆ ಮಾಡುವುದಕ್ಕೆ ಮುನ್ನ ವೈದ್ಯರು ಒಪ್ಪಿಗೆ ನೀಡುತ್ತಾರೆ . ಸಾಮಾನ್ಯವಾಗಿ ಈ ಕಿಟ್‌ನಲ್ಲಿ 3-4 ಉತ್ಪನ್ನಗಳಿದ್ದು , ಇವು ನಿಮ್ಮ ತ್ವಚೆಯ ಆರೈಕೆಗೆ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತವೆ . ಗ್ರಾಹಕರ ದಾಖಲೆಗಳ ನಿರೂಪಿತ ವಿವರಗಳು ಈ ಚಿಕಿತ್ಸಾ ಕ್ರಮ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂಬುದನ್ನು ನಿರೂಪಿಸಿದೆ . ಜೊತೆಗೆ ಚಿಕಿತ್ಸೆಗಾಗಿ ವಾಪಸ್ ಬರುವ ಗ್ರಾಹಕರ ದೊಡ್ಡ ಸಂಖ್ಯೆ ಇದನ್ನು ಬೆಂಬಲಿಸುತ್ತದೆ .

ಸ್ಥಾಪಕರನ್ನು ಕುರಿತು :

ಗುಣ ಕಾಕುಲಪತಿ – ಕ್ಯೂರ್‌ಸ್ಕಿನ್‌ನ ಸಹಸ್ಥಾಪಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ : ಅವರ ಪುತ್ರ ಗಂಭೀರವಾದ ತ್ವಚೆಯ ಸ್ಥಿತಿ ಇರುವುದಾಗಿ ರೋಗನಿರ್ಣಯಕ್ಕೆ ಒಳಗಾದಾಗ ವೈಯಕ್ತಿಕ ಅಗತ್ಯಕ್ಕೆ ತಕ್ಕಂತಹ ಕ್ಯೂರ್ ಸ್ಕಿನ್ ಅಪ್ ಸಿದ್ಧವಾಗಿತ್ತು . ಈ ಪ್ರಯಾಣದಲ್ಲಿ ತ್ವಚೆಗೆ ಒಂದೇ ಬಾರಿಯ ಸಮಾಲೋಚನೆಯು ಕೆಲಸ ಮಾಡುವುದಿಲ್ಲ ಎಂಬುದು ಶೀಘ್ರವಾಗಿ ಸ್ಪಷ್ಟವಾಗಿತ್ತು . ಜೊತೆಗೆ ತ್ವಚೆಯನ್ನು ಆರೋಗ್ಯವಾಗಿಡಲು ಸತತ ಆರೈಕೆ ಮತ್ತು ಮೇಲ್ವಿಚಾರಣೆ ಅಗತ್ಯವಿತ್ತು ಎಂಬುದು ತಿಳಿದುಬಂದಿತ್ತು .

ಗುಣ ಅವರು ತಂತ್ರಜ್ಞಾನ ತಜ್ಞರಾಗಿದ್ದು , ಐಐಟಿ – ಚೆನ್ನೈನಲ್ಲಿ ಬಿ – ಟೆಕ್ ಕಂಪ್ಯೂಟರ್ ವಿಜ್ಞಾನದ ಪದವಿ ಪಡೆದು ಅನಂತರ ಅರ್ಬಾನಾ ಶಾಂಪೈನ್‌ನಲ್ಲಿನ ಇಲಿನಾಯ್ಸ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು . ಅವರು 11 ವರ್ಷಗಳಿಗೂ ಹೆಚ್ಚಿನ ಕಾಲ ಯುಎಸ್‌ನ ಉನ್ನತ ಮಟ್ಟದ ತಂತ್ರಜ್ಞಾನ ಸಂಸ್ಥೆಗಳಲ್ಲಿ ( ಗೂಗಲ್ , ಅಮೇಜಾನ್ ) ಕೆಲಸ ಮಾಡಿದ್ದರು . ಹಲವಾರು ತಂತ್ರಜ್ಞಾನ ನವೀನತೆಗಳಲ್ಲಿ ಇವರು 14 ಪೇಟೆಂಟ್‌ಗಳನ್ನು ಪಡೆದಿರುತ್ತಾರೆ . ಆಮೇಜಾನ್ ಎಡಬ್ಲ್ಯು ಎಸ್ ಆರಂಭಿಸಿದ ತಂಡದ ಭಾಗವಾಗಿದ್ದ ಅವರು ಇನ್ನು ಹಲವಾರು ಪ್ರಮುಖ ತಂತ್ರಜ್ಞಾನ ಘಟಕಗಳ ಭಾಗವಾಗಿದ್ದರು .

ರಾಮಕೃಷ್ಣ ಆರ್ . ಸಹಸ್ಥಾಪಕರು ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿ , ಕ್ಯೂರ್ ಸ್ಕಿನ್ ಇವರು ಕೃತಕ ಬುದ್ಧಿವಂತಿಕೆಯ ಬಳಕೆಯಲ್ಲಿ ಅದ್ಯಪ್ರವರ್ತಕರಾಗಿದ್ದು , ಮೊಬೈಲ್‌ ಫೋನ್‌ಗಳಲ್ಲಿ ತೆಗೆಯಲಾದ ಫೋಟೋಗಳ ಮೂಲಕ ಹಲವಾರು ತಲೆಯ ಸ್ಥಿತಿಗಳನ್ನು ಗುರುತಿಸುವ ಮತ್ತು ಫಲಿತಾಂಶಗಳ ಮೇಲ್ವಿಚಾರಣೆ ಮಾಡುವ ಕ್ರಮದ ಆದ್ಯಪ್ರವರ್ತಕರಾಗಿದ್ದಾರೆ . ಕ್ಯೂ‌ಸ್ಕಿನ್‌ನಲ್ಲಿ ಅವರು ಆಳವಾದ ಕಲಿಕಾ ಆಧಾರಿತ ಕಂಪ್ಯೂಟರ್ ದೃಷ್ಟಿಕೋನದ ಬಳಕೆಯಲ್ಲಿ ವಿಶೇಷತೆ ಪಡೆದಿರುತ್ತಾರೆ . ಚರ್ಮರೋಗ ತಜ್ಞರೊಂದಿಗೆ ಸಹಭಾಗಿತ್ವದ ಜೊತೆಗೆ ಕ್ಯೂರ್‌ಸ್ಕಿನ್ ಸಾಕ್ಷಿ ಆಧಾರಿತ ವೈಯಕ್ತಿಕ ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸಲು ಕೂಡ ತಂತ್ರಜ್ಞಾನವನ್ನು ಬಳಸುತ್ತದೆ .

ರಾಮಕೃಷ್ಣ ಅವರು ಕಂಪ್ಯೂಟರ್ ವಿಜ್ಞಾನದಲ್ಲಿ ಬಿ – ಟೆಕ್ ಪದವಿ ಪಡೆದ ನಂತರ ಮತ್ತಷ್ಟು ವಿಶೇಷತೆಯ ಅಧ್ಯಯನಕ್ಕಾಗಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಕ್ಕೆ ಹಾಜರಾಗಿದ್ದರು . ಅವರು ಭಾರತ ಮತ್ತು ಯುಎಸ್‌ಗಳಲ್ಲಿ ಗೂಗಲ್ ಸಂಸ್ಥೆಯಲ್ಲಿ 10 ವರ್ಷಕ್ಕೆ ಹೆಚ್ಚಿನ ಕಾಲ ಕೆಲಸ ಮಾಡಿರುತ್ತಾರೆ . ಹಲವಾರು ಆಳವಾದ ತಂತ್ರಜ್ಞಾನ ತಂಡಗಳೊಂದಿಗೆ ಕೆಲಸ ಮಾಡುವುದಲ್ಲದೆ , ನಾಯಕತ್ವದ ಪಾತ್ರಗಳನ್ನು ವಹಿಸಿರುತ್ತಾರೆ . ಗೂಗಲ್ ಸರ್ಚ್ , ಮ್ಯಾಪ್ಸ್ ಮತ್ತು ಸ್ಪಾಮ್‌ಗಳನ್ನು ಗುರುತಿಸುವ , ಯುಟ್ಯೂಬ್ ಇತ್ಯಾದಿಗಳಲ್ಲಿನ ಎಐ ಅಪ್ಲಿಕೇಷನ್‌ಗಳಂತಹ ಮೂಲ ಯೋಜನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿರುತ್ತಾರೆ .

ಡಾ . ಚಾರು ಶರ್ಮ , ಸಹ – ಸ್ಥಾಪಕರು ಮತ್ತು ಚರ್ಮರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥರು ಇವರು ವೈದ್ಯಕೀಯ ತಂಡದ ನೇತೃತ್ವ ವಹಿಸಿದ್ದಾರೆ . ವಿಭಿನ್ನ ರೀತಿಯ ಚರ್ಮ ಮತ್ತು ಕೂದಲು ಉದುರುವ ಪ್ರಕರಣಗಳಿಗೆ ಚಿಕಿತ್ಸೆ ನೀಡುವಲ್ಲಿ 19 ವರ್ಷಗಳಿಗೂ ಹೆಚ್ಚಿನ ಅನುಭವವನ್ನು ಹೊಂದಿರುವ ಖ್ಯಾತ ಚರ್ಮರೋಗ ತಜ್ಞರಾಗಿದ್ದಾರೆ . ಅವರು ಈ ಮುನ್ನ ವಿಎಲ್‌ಸಿಸಿನಲ್ಲಿ ಸೌಂದರ್ಯಾತ್ಮಕ ಚರ್ಮರೋಗಶಾಸ್ತ್ರ ವಿಭಾಗದ ನೇತೃತ್ವ ವಹಿಸಿದ್ದರು . ಜೊತೆಗೆ ಅವರು ಈ ಸಂಸ್ಥೆಯ ತ್ವಚೆ ಆರೈಕೆ ಉತ್ಪನ್ನಗಳ ಖಾಸಗಿ ಶ್ರೇಣಿ ಬಿಡುಗಡೆ ಮಾಡುವಲ್ಲಿ ಅನುಭವ ಹೊಂದಿದ್ದರು . ಇದಕ್ಕೂ ಮುನ್ನ ಆಕೆ ಮಣಿಪಾಲ್ ಕ್ಯೂರ್ ಮತ್ತು ಕೇರ್ ಮತ್ತು ರಿನಾಫಿಹೀಲ್ದಾ ಗುಂಪಿನ ತ್ವಚೆ ಆರೈಕೆ ಮತ್ತು ಜೀವನಶೈಲಿ ಕ್ಲಿನಿಕ್ ಗಳಲ್ಲಿ ಸಹಾಯಕ ನಿರ್ದೇಶಕರಾಗಿದ್ದರು .

City Today News – 9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.