
ವಿಶ್ವಕರ್ಮ ಸಮಾಜ ಭಾರತೀಯ ಪರಂಪರೆಯಲ್ಲಿ ಚಿನ್ನ, ಬೆಳ್ಳಿ ಆಭರಣಗಳ ತಯಾರಿಕಾ ನಿಪುಣರು, ಕಲಾ ನೈಪುಣ್ಯತೆ, ಶಿಲ್ಪಕಲೆ, ದೇವತಾ ಮೂರ್ತಿಗಳ ಕೆತ್ತನೆ, ಗುಡಿಗೋಪುರಗಳ ನಿರ್ಮಾಣ ಮುಂತಾದ ಧಾರ್ಮಿಕ ಮತ್ತು ಆಧುನಿಕ ಜಗತ್ತಿಗೆ ಅಪಾರವಾದ ಕೊಡುಗೆ ನೀಡುತ್ತಿದೆ. ಆದರೆ, ಶೈಕ್ಷಣಣಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಹಿಂದುಳಿದ ಸಮುದಾಯವಾಗಿದೆ. ನಿರುದ್ಯೋಗ ಕೊರಳಿಗೆ ಉರುಳಾಗಿ ಕಾಡುತ್ತಿದೆ. ನಮ್ಮ ಸಮಾಜದ ಅಭಿವೃದ್ಧಿಗೆ ಸರ್ಕಾರವು ಪ್ರತಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಮುದಾಯ ಭವನ ಹಾಗೂ ವಿದ್ಯಾರ್ಥಿನಿಲಯ, ಬೆಂಗಳೂರಿನಲ್ಲಿ ವಿಶ್ವಕರ್ಮ ಭವನ ನಿರ್ಮಾಣ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ಬೆಂಗಳೂರು ಮತ್ತು ಉತ್ತರ ಕರ್ನಾಟಕದಲ್ಲಿ ತರಬೇತಿ ಕೇಂದ್ರಗಳ ಸ್ಥಾಪನೆ ಮಾಡಬೇಕು. ವಿಶ್ವಕರ್ಮ ಸಮಾಜವನ್ನು ಒಗ್ಗೂಡಿಸಲು ವಿಶ್ವಕರ್ಮ.ಕಾಂ ಮೊಬೈಲ್ ಆ್ಯಪ್ ಮೂಲಕ ಆನ್ಲೈನ್ ವೇದಿಕೆ ಕಲ್ಪಿಸಿದ್ದೇವೆ.

ಇದು ದೇಶಾದ್ಯಂತ ಹಾಗೂ ನಾಡಿನಾದ್ಯಂತ ನಮ್ಮ ಸಮಾಜವನ್ನು ಒಗ್ಗೂಡಿಸಲು ಸಹಾಯವಾಗುತ್ತದೆ. ಇದನ್ನು ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಬಿಡುಗಡೆ ಮಾಡಿದ್ದಾರೆ. ಶ್ರೀ ಚಂದ್ರಶೇಖರ ಕಂಬಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ಚಲನಚಿತ್ರ ನಟಿ ಶ್ರೀಮತಿ ಭವ್ಯ, ಮಾಜಿ ಐ.ಎ.ಎಸ್ ಅಧಿಕಾರಿಗಳಾದ ಶ್ರೀ ಕೆ.ಎಸ್.ಪ್ರಭಾಕರು, ಅನೇಕ ಗಣ್ಯ ಮಾನ್ಯ ಮಠಾಧೀಶರು, ಧಾರ್ಮಿಕ ಚಿಂತಕರು, ಸಮುದಾಯದ ಮುಖಂಡರು ಕೈಜೋಡಿಸಿ ಶುಭ ಕೋರಿದ್ದಾರೆ. ಇದರಿಂದ ಸಮಾಜ ಒಂದುಗೂಡಿಸುವುದರೊಂದಿಗೆ ಅನೇಕ ಪ್ರಸ್ತುತ ಮಾಹಿತಿಗಳು, ಕುಲಕಸುಬುಗಳ ಅಭಿವೃದ್ಧಿ, ಜನಗಣತಿಯ ಮಾಹಿತಿ, ಆರ್ಥಿಕ ಬೆಳವಣಿಗೆಗಳಿಗೆ ಪೂರಕವಾದ ಮಾಹಿತಿಗಳು ಸಿಗುವಂತೆ ಅಭಿವೃದ್ಧಿಪಡಿಸಲಾಗಿದೆ. ಇದನ್ನು ವಿಶ್ವಕರ್ಮ ಸಮಾಜ ಮಾತ್ರವಲ್ಲದೆ ಎಲ್ಲಾ ಸಮುದಾಯದವರು ಬಳಸಿಕೊಂಡರೆ ಅವರಿಗೆ ಬೇಕಾದ ತಾಂತ್ರಿಕ ಶಿಲ್ಪಿಗಳು, ಬಡಗಿ ಕೆಲಸಗಾರರು, ಚಿನ್ನ-ಬೆಳ್ಳಿ ಕೆಲಸಗಾರರು ಇವರುಗಳನ್ನು ನೇರವಾಗಿ ಸಂಪರ್ಕಿಸಬಹುದು ಹಾಗೂ ವಿಶ್ವಕರ್ಮ ಸಮಾಜ ನಿರ್ಮಿಸುವ ಎಲ್ಲಾ ಬಗೆಯ ವಸ್ತುಗಳನ್ನು ವಿಶ್ವಕರ್ಮ.ಕಾಂ ಮೊಬೈಲ್ ಆ್ಯಪ್ ಮೂಲಕ ಖರೀದಿಸಿಕೊಳ್ಳಬಹುದು. ಇದರಿಂದ ಸಮಾಜವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗಲು ನಮ್ಮ ವಿಶ್ವಕರ್ಮ.ಕಾಂ ಮೊಬೈಲ್ ಆ್ಯಪ್ ಸಹಕಾರಿಯಾಗುತ್ತದೆ ಎಂದು ಶ್ರೀ ಬಾಬು ಪತ್ತಾರ್,
ವಿಶ್ವಕರ್ಮ ಸಮಾಜದ ಅಧ್ಯಕ್ಷರು ಹಾಗೂ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ನಿಕಟಪೂರ್ವ ಅಧ್ಯಕ್ಷರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು
ಪತ್ರಿಕಾ ಗೋಷ್ಠಿಯಲ್ಲಿ ಶ್ರೀ ಬಾಬು ಪತ್ತಾರ್, ವಿಶ್ವಕರ್ಮ ನಿಗಮದ ಮಾಜಿ ಅಧ್ಯಕ್ಷರು.
ಶ್ರೀ ಶ್ರೀಧರ್ ಆಚಾರ್, ವಿಶ್ವಕರ್ಮ.ಕಾಂ ಫೌಂಡ
ಶ್ರೀ ಜಗದೀಶ್, ವಿಶ್ವಕರ್ಮ ಸಮಾಜದ ಮುಖಂಡರು
ಶ್ರೀ ವೀರಣ್ಣ ಇನಾಂದಾರ್, ಸಮಾಜ ಮುಖಂಡರು
ಶ್ರೀ ಮಧುಸೂದನ್, ಗೋಲ್ಡ್ ಸ್ಮಿತ್ ಅಸೋಸಿಯೋಷನ್ ಅಧ್ಯಕ್ಷರು
ಶ್ರೀ ಚನ್ನಕೇಶವ, ಸಮಾಜ ಮುಖಂಡರು ಉಪಸ್ತಿತರಿದ್ದರು
City Today News
9341997936