ಪಾದದ ಬಣ್ಣ ಬದಲಾವಣೆ ನಿರ್ಲಕ್ಷ್ಯಿಸದಿರಿ; “ಇದು ಮಧುಮೇಹದ ಸಂಕೇತವಾಗಿರಬಹುದು”

ಬೆಂಗಳೂರು: ನಿಮ್ಮ ಕಾಲ್ಬೆರಳುಗಳ ನಡುವೆ ಫಂಗಲ್ ಸೋಂಕು ಇದೆಯೇ, ಹಲವಾರು ಔಷಧಗಳ ಹೊರತಾಗಿಯೂ ವಾಸಿಯಾಗದ ಕಾರ್ನ್ ಮತ್ತು ಕ್ಯಾಲಸ್ ಆಗಿದೆಯೆ ಅಥವಾ ನೀವು ಚರ್ಮದ ಶುಷ್ಕತೆ ಅಥವಾ ಬಣ್ಣ ಬದಲಾವಣೆಯಿಂದ ಬಳಲುತ್ತಿದ್ದೀರಾ, ನಿಮ್ಮ ಪಾದಗಳಲ್ಲಿ ಒಂದು ರೀತಿಯ ಮರಗಟ್ಟುವಿಕೆ ಮತ್ತು ಉರಿಯ ಸಂವೇದನೆಯಿಂದ ಬಳಲುತ್ತಿದ್ದೀರಾ? ಇದು ಮಧುಮೇಹ ಪಾದದ ಕಾಯಿಲೆಯ ಲಕ್ಷಣಗಳಾಗಿರಬಹುದು. ಮಧುಮೇಹ ಹೊಂದಿರುವ ಇಬ್ಬರಲ್ಲಿ ಒಬ್ಬರು, ಮೇಲೆ ತಿಳಿಸಿದ ರೋಗ ಲಕ್ಷಣಗಳಲ್ಲಿ ಒಂದನ್ನು ಹೊಂದಿರುತ್ತಾರೆ. ಒಂದು ಸರಳವಾದ ಕ್ಯಾಲಸ್, ಉಗುರಿನ ಶಿಲೀಂಧ್ರಗಳ ಸೋಂಕು, ಪಾದದಲ್ಲಿ ವಾಸಿಯಾಗದ ಹುಣ್ಣಿಗೆ ಕಾರಣವಾಗಬಹುದು, ಇದು ಅಂಗಚ್ಛೇದನಕ್ಕೆ ಕಾರಣವಾಗುತ್ತದೆ. ಇಂಥ ಲಕ್ಷಣಗಳಿದ್ದರೆ ಯಾವುದೇ ವಿಳಂಬವಿಲ್ಲದೆ, ನೀವು ಮಧುಮೇಹ ಪಾದದ ಪರೀಕ್ಷೆಗೆ ಒಳಗಾಗಬೇಕು. ಇದನ್ನು ನಿರ್ಲಕ್ಷ್ಯಿಸಿದರೆ, ಪಾದದ ಅಂಗಚ್ಛೇದನೆಗೆ ಕಾರಣವಾಗುವ ಮೂಲಕ ಜೀವಿತಾವಧಿಯಲ್ಲಿ ನಿಮ್ಮನ್ನು ನಿಷ್ಕ್ರಿಯಗೊಳಿಸಬಹುದು.

ಹೆಸರಾಂತ ಪೊಡಿಯಾಟ್ರಿಕ್ ಸರ್ಜರಿ ತಜ್ಞ, ಫೂಟ್ ಸೆಕ್ಯೂರ್ – ಫೂಟ್ & ಆಂಕಲ್ ನಿಕ್ಸ್ ಮತ್ತು ಯೋಸ್ಟ್ರಾ ಲ್ಯಾಬ್ಸ್ ಸಂಸ್ಥಾಪಕ ಡಾ. ಸಂಜಯ್ ಶರ್ಮಾ ಹೇಳುವ ಪ್ರಕಾರ “ಮಧುಮೇಹವು ವಿಶೇಷವಾಗಿ ಪಾದಗಳ ನರಗಳನ್ನು ಹಾನಿಗೊಳಿಸುತ್ತದೆ. ಮಧುಮೇಹ ಹೊಂದಿರುವ ಸುಮಾರು ಶೇ.50 ಜನರು ಡಯಾಬಿಟಿಕ್ ರಿಫೆರಲ್ ನ್ಯೂರೋಪತಿ (DPN) ಹೊಂದಿದ್ದಾರೆ. ಮತ್ತು ಅವರಲ್ಲಿ ಶೇ.15ರಷ್ಟು ಜನ ಬಾಹ್ಯ ನಾಳೀಯ ರೋಗವನ್ನು ಹೊಂದಿರುತ್ತಾರೆ. ನರಗಳ ಹಾನಿಯು ಪಾದದಲ್ಲಿ ರಚನಾತ್ಮಕ ಬದಲಾವಣೆಗಳಿಗೆ ಕಾರಣವಾಗಬಹುದು,  ಜನರ ಅರಿವನ್ನು ಕಡಿಮೆ ಮಾಡುವುದಲ್ಲದೆ ಪಾದದ ಹುಣ್ಣಿಗೆ ಕಾರಣವಾಗಬಹುದು. ಪಾದದ ಸಮಸ್ಯೆ ಮಧುಮೇಹದ ಸಾಮಾನ್ಯ ಹಾಗೂ ಬಹುನಿರ್ಲಕ್ಷ್ಯತ ಸಮಸ್ಯೆಗಳಲ್ಲಿ ಒಂದಾಗಿದೆ. ಜತೆಗೆ ಅತ್ಯಂತ ಭಯಾನಕವೂ ಆಗಿದೆ. ಪ್ರತಿ ಸೆಕೆಂಡ್ ಗೆ ಒಬ್ಬರಿಗೆ ಮಧುಮೇಹ ಪಾದದ ಹುಣ್ಣು ಉಂಟಾಗುತ್ತಿದೆ.

ಮಧುಮೇಹ ಪ್ರಕರಣಗಳ ಸಂಖ್ಯೆ ವೇಗವಾಗಿ ಏರುತ್ತಿರುವುದರಿಂದ ಆತಂಕ ಹೆಚ್ಚಾಗಿದೆ. ಪ್ರಸ್ತುತ, ಜಾಗತಿಕವಾಗಿ ಸುಮಾರು 42.5 ಕೋಟಿ ಮಧುಮೇಹಿಗಳಿದ್ದು ಈ ಪೈಕಿ ಭಾರತದಲ್ಲಿ ಸುಮಾರು 7.7 ಕೋಟಿ ಜನ ಮಧುಮೇಹಿಗಳಿದ್ದಾರೆ.

“ಮಧುಮೇಹದಿಂದಾಗಿ ಪ್ರತಿ 20 ಸೆಕೆಂಡ್ ಗಳಿಗೆ ಒಬ್ಬರು ಪಾದದ ಹಾನಿಗೆ ಒಳಗಾಗುತ್ತಾರೆ. ಈ ಪೈಕಿ  80 ಪ್ರತಿಶತದಷ್ಟು ಜನರ ಪಾದವನ್ನು ಪೊಡಿಯಾಟ್ರಿಕ್ ವಿಧಾನದಿಂದ ಉಳಿಸಬಹುದು. ಇತ್ತೀಚಿನ ವರದಿಯ ಪ್ರಕಾರ ಭಾರತದಲ್ಲಿ ಮಧುಮೇಹದಿಂದ ವರ್ಷಕ್ಕೆ 1.20 ಲಕ್ಷದಷ್ಟು ಅಂಗಚ್ಛೇದನ ಪ್ರಕರಣಗಳು ದಾಖಲಾಗುತ್ತಿವೆ.  ಕೆಲವು ಅಧ್ಯಯನಗಳ ಅಂಕಿಅಂಶಗಳನ್ನು ಅವಲೋಕಿಸಿದರೆ,  ಭಾರತದಲ್ಲಿ ವರ್ಷಕ್ಕೆ ಸುಮಾರು 14 ಲಕ್ಷ ಅಂಗಚ್ಛೇದನಗಳನ್ನು ಕಾಣಬಹುದು. ಇದಲ್ಲದೆ, ಅಂತಹ ರೋಗಿಗಳು ಅಂಗಚ್ಛೇದನದ ನಂತರ ಪಾರ್ಶ್ವವಾಯು ಮತ್ತು ಹೃದಯಾಘಾತದ ಶೇ.40ರಷ್ಟು ಹೆಚ್ಚುವರಿ ಅಪಾಯ ಹೊಂದಿರುತ್ತಾರೆ. ಅಂಗಚ್ಛೇದನದ ನಂತರದ 5 ವರ್ಷಗಳ ಅವಧಿಯಲ್ಲಿ ಸಂಭವಿಸುವ ಮರಣ ಪ್ರಮಾಣ ಶೇ.70 ರಷ್ಟಿದೆ. ಇದು ಕ್ಯಾನ್ಸರ್ ಗಿಂತ ಹೆಚ್ಚಾಗಿದೆ ಎಂದು ತಜ್ಞರು ಹೇಳುತ್ತಾರೆ.

 “ಕೆಲವು ತಿಂಗಳ ಹಿಂದೆ ಶಿವಮೊಗ್ಗದಿಂದ ಫಾರ್ಮಾಸಿಸ್ಟ್ ಒಬ್ಬರು ನನ್ನ ಕೇಂದ್ರಕ್ಕೆ ಬಂದಿದ್ದರು. ಅವರ ಪಾದದಲ್ಲಿ ಸಣ್ಣಗುಳ್ಳೆ ಕಾಣಿಸಿಕೊಂಡಿದ್ದು, ಶಿವಮೊಗ್ಗದ ಸ್ಥಳೀಯ ಆಸ್ಪತ್ರೆಯಲ್ಲಿ ಮತ್ತು ನಂತರ ದೊಡ್ಡ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹಲವಾರು ದಿನಗಳ ಚಿಕಿತ್ಸೆಯ ನಂತರ, ಹುಣ್ಣು ಮತ್ತಷ್ಟು ಹದಗೆಟ್ಟಿತು. ಅವರಲ್ಲಿ ಸೋಂಕು ಇತ್ತು. ಅವರು ಮೊಣಕಾಲಿನ ಕೆಳಗೆ ಕಾಲು ಕತ್ತರಿಸಬೇಕೆಂಬ ಸಲಹೆ ನೀಡಲಾಗಿತ್ತು. ಅವರು ನನ್ನ ಬಳಿ ಎರಡನೇ ಅಭಿಪ್ರಾಯಕ್ಕೆ ಬಂದಾಗ ಅವರನ್ನು ಪರೀಕ್ಷಿಸಿ, ಅಗತ್ಯವಿರುವ ವೈದ್ಯಕೀಯ ಸಲಹೆ ನೀಡಿ ಚಿಕಿತ್ಸೆ ಮುಂದುವರಿಸಲಾಯಿತು. ಈಗ ಎಂಟು ತಿಂಗಳ ನಂತರ ಅವರ ಹುಣ್ಣುಗಳು ವಾಸಿಯಾಗಿದೆ. ಈ ಮೂಲಕ ಮತ್ತು ದೊಡ್ಡ ಅಂಗಚ್ಛೇದನವನ್ನು ತಪ್ಪಿಸಲಾಗಿದೆ,”

ಮತ್ತೊಂದು ಪ್ರಕರಣದಲ್ಲಿ, ಬೆಂಗಳೂರಿನ ನಿವಾಸಿ 62 ವರ್ಷದ ವ್ಯಕ್ತಿಯೊಬ್ಬರು ಮತ್ತೊಂದು ಆಸ್ಪತ್ರೆಯಲ್ಲಿ ಕಾಲು ಕತ್ತರಿಸಲು ಕೇಳಿದಾಗ ಎರಡನೇ ಅಭಿಪ್ರಾಯಕ್ಕಾಗಿ ನಮ್ಮ ಬಳಿಗೆ ಬಂದಿದ್ದರು. ಅವರ ಕಾಲಿನ ಸ್ಥಿತಿ ತುಂಬಾ ಕೆಟ್ಟದಾಗಿತ್ತು. ಸೂಕ್ತ ಪರಿಶೀಲನೆ ನಂತರ ಆಂಜಿಯೋಪ್ಲ್ಯಾಸ್ಟಿ ನಡೆಸಿದೆವು. ಅದರ ನಂತರ ಅಗತ್ಯವಾದ ಚಿಕಿತ್ಸೆ ಕೂಡ ನೀಡಿದೆವು. ಅವರ ಕಾಲ್ಬೆರಳುಗಳನ್ನಷ್ಟೇ ತೆಗೆದು ಹಾಕಬೇಕಾಯಿತು.  ಸಂಪೂರ್ಣ ಪಾದಛೇದನವನ್ನು ತಡೆದಿದ್ದರಿಂದಾಗಿ ಅವರು ಸ್ವಾವಲಂಬಿಯಾಗಿ ನಡೆಯಲು ಸಶಕ್ತರಾಗಿದ್ದಾರೆ,” ಎನ್ನುತ್ತಾರೆ ಡಾ. ಸಂಜಯ್ ಶರ್ಮಾ.

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.