
ಬೆಂಗಳೂರು, ಜನವರಿ 13, 2023: ಐಕಿಯಾ ಇಂಡಿಯಾ ಕ್ಲಿಕ್ ಆಂಡ್ ಕಲೆಕ್ಟ್ ಆರ್ಡರ್‌ಗಳಿಗಾಗಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ತನ್ನಮೊದಲ ಬಾಹ್ಯ ಸಂಗ್ರಹ ಕೇಂದ್ರ (ಎಕ್ಸ್‌ಟರ್ನಲ್ ಕಲೆಕ್ಷನ್ ಪಾಯಿಂಟ್) ಆರಂಭಿಸಿದೆ. ಗತಿ (ಜಿಎಟಿಐ) ಇದರ ಲಾಜಿಸ್ಟಿಕ್ಸ್ ಪಾಲುದಾರ ಸಂಸ್ಥೆಯಾಗಿದೆ. ಈ ಪಾಯಿಂಟ್ ಮೂಲಕ ಗ್ರಾಹಕರು ಐಕಿಯಾ ಉತ್ಪನ್ನಗಳನ್ನು ಕೈಗೆಟಕುವ ಬೆಲೆಯಲ್ಲಿ ಅನುಕೂಲಕರವಾಗಿ ಖರೀದಿಸಬಹುದು. 2021ರ ಜೂನ್‌ನಿಂದ ಬೆಂಗಳೂರಿನಲ್ಲಿ ಆನ್‌ಲೈನ್ ಮೂಲಕ ಕಾರ್ಯನಿರ್ವಹಿಸುತ್ತಿದ್ದ ಐಕಿಯಾ 2022ರ ಜೂನ್‌ಲ್ಲಿ ನಾಗಸಂದ್ರದಲ್ಲಿ 4000,000 ಕ್ಕೂ ಹೆಚ್ಚು ಚದರ ಅಡಿ ವಿಸ್ತೀರ್ಣದ ಬೃಹತ್ ಮಳಿಗೆ ಆರಂಭಿಸಿತ್ತು.
ಗ್ರಾಹಕರು ಐಕಿಯಾ ಜಾಲತಾಣದಲ್ಲಿ ತಮ್ಮ ಇಷ್ಟದ ಉತ್ಪನ್ನಗಳಿಗೆ ಆರ್ಡರ್ ಮಾಡಿ, ಆನ್‌ಲೈನ್ ಮೂಲಕ ಹಣ ಪಾವತಿಸಬೇಕು. ಬಳಿಕ ʼಕ್ಲಿಕ್ ಆಂಡ್ ಕಲೆಕ್ಟ್ ಸರ್ವಿಸ್ʼ ಆಯ್ಕೆ ಮಾಡಿಕೊಂಡು, ಚೆಕ್ ಔಟ್ ಆಗುವ ಸಮಯದಲ್ಲಿ ʼಎಕ್ಸ್‌ಟರ್ನಲ್ ಕಲೆಕ್ಷನ್ ಪಾಯಿಂಟ್ʼ ಮೇಲೆ ಕ್ಲಿಕ್ ಮಾಡಬೇಕು. ಐಕಿಯಾ, ಗ್ರಾಹಕರ ಆಯ್ಕೆಯ ಉತ್ಪನ್ನಗಳನ್ನು ಕಲೆಕ್ಷನ್ ಪಾಯಿಂಟ್‌ನಲ್ಲಿ ಸಿದ್ಧಪಡಿಸಿರುತ್ತದೆ.
ಹೇಗೆ ಆರ್ಡರ್ ಮಾಡಬೇಕು: ಕ್ಲಿಕ್ ಆಂಡ್ ಕಲೆಕ್ಟ್ ಆರ್ಡರ್‌ಗಳನ್ನು ಯಾವುದೇ ಇ ಕಾಮರ್ಸ್ ತಾಣವನ್ನು ನಿರ್ವಹಿಸುವಂತೆಯೇ ಆರ್ಡರ್ ಮಾಡಬಹುದು.
- ಉತ್ಪನ್ನಗಳನ್ನು ಆಯ್ಕೆ ಮಾಡಿ ಕಾರ್ಟ್‌ಗೆ ಸೇರಿಸಿ
- ಶಾಪ್ಪಿಂಗ್ ಕಾರ್ಟ್ ತೆರೆಯಿರಿ
- ಆಯ್ಕೆ ಮಾಡಿದ ಉತ್ಪನ್ನಗಳನ್ನು ತಾವು ಹೇಗೆ ಪಡೆಯಲು ಬಯಸುತ್ತೀರಿ ಎಂಬುದನ್ನು ಗ್ರಾಹಕರು ಆಯ್ಕೆ ಮಾಡಬಹುದು; ಕ್ಲಿಕ್ ಆಂಡ್ ಕಲೆಕ್ಟ್ ಅಥವಾ ಡೆಲಿವರಿ
- ಕ್ಲಿಕ್ ಆಂಡ್ ಕಲೆಕ್ಟ್ ಆಯ್ಕೆ ಮಾಡಿಕೊಂಡರೆ ಗ್ರಾಹಕರು ತಾವು ಖರೀದಿಸಿದ ಉತ್ಪನ್ನಗಳ ಬೆಲೆಯ ಜೊತೆಗೆ 200 ರೂಪಾಯಿಗಳ ಶಿಪ್ಪಿಂಗ್ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು
- ಗ್ರಾಹಕರು ಹೋಮ್ ಡೆಲಿವರಿ ಆಯ್ಕೆ ಮಾಡಿದರೆ ಅವರು ಝಿಪ್ ಕೋಡ್ ನಮೂದಿಸಬೇಕು. ಉತ್ಪನ್ನಗಳ ತೂಕಕ್ಕೆ ಅನುಗುಣನವಾಗಿ ಡೆಲಿವರಿ ಸಂದರ್ಭದ ಒಟ್ಟು ಮೌಲ್ಯವನ್ನು ತೆರೆಯ ಮೇಲೆ ನೋಡಬಹುದು.
ಗ್ರಾಹಕರು ಯಾವುದೇ ಸಮಯದಲ್ಲಿಯೂ ಉತ್ಪನ್ನಗಳಿಗೆ ಆರ್ಡರ್ ಮಾಡಬಹುದು. ಸಂಜೆ 7 ಗಂಟೆಯ ಮೊದಲು ಮಾಡಿದ ಆರ್ಡರ್‌ಗಳು ಮರುದಿನ ಬೆಳಿಗ್ಗೆ 9 ರಿಂದ ರಾತ್ರಿ 9 ಗಂಟೆಯ ನಡುವೆ ಎಲೆಕ್ಟ್ರಾನಿಕ್ ಸಿಟಿಯ ಎಕ್ಸ್‌ಟರ್ನಲ್ ಕಲೆಕ್ಷನ್ ಪಾಯಿಂಟ್‌ನಲ್ಲಿ ದೊರೆಯುತ್ತದೆ. ಸಂಜೆ 7 ಗಂಟೆಯ ನಂತರ ಮಾಡಿದ ಆರ್ಡರ್‌ಗಳು ಎರಡು ದಿನಗಳೊಳಗೆ ಡೆಲಿವರಿ ಮಾಡಲಾಗುತ್ತದೆ. ಇದಕ್ಕೆ ಉತ್ಪನ್ನದ ಗಾತ್ರ ಅಥವಾ ತೂಕ ಎಷ್ಟೇ ಮತ್ತು ಹೇಗೇ ಇದ್ದರೂ ಅತಿ ಕಡಿಮೆ ಎನ್ನಬಹುದಾದ 200 ರೂಪಾಯಿಗಳ ಶುಲ್ಕ ವಿಧಿಸಲಾಗುತ್ತದೆ. ಗ್ರಾಹಕರಿಗೆ ಇದು ಬಹಳ ಅನುಕೂಲಕರ ವ್ಯವಸ್ಥೆಯಾಗಿದೆ.
ಉತ್ಪನ್ನಗಳನ್ನು ಗ್ರಾಹಕರು, ನಮ್ಮ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿ ದೃಢೀಕರಣ ಪಡೆದ ಬಳಿಕ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ, ಕ್ಲಿಕ್ ಆಂಡ್ ಕಲೆಕ್ಟ್ ಮೂಲಕವೇ ಉತ್ಪನ್ನಗಳನ್ನು ಎಕ್ಸ್‌ಟರ್ನಲ್ ಕಲೆಕ್ಷನ್ ಪಾಯಿಂಟ್‌ಗೆ ಹಿಂದಿರುಗಿಸಬಹುದು.
“ಐಕಿಯಾದಲ್ಲಿ ನಾವು ನಮ್ಮೊಂದಿಗೆ ಶಾಪ್ಪಿಂಗ್ ಮಾಡುವ ಗ್ರಾಹಕರ ಸಂತೃಪ್ತಿ ಮತ್ತು ಅನುಕೂಲಗಳಿಗೆ ಹೆಚ್ಚು ಆದ್ಯತೆ ನೀಡುತ್ತೇವೆ. ಗ್ರಾಹಕರೊಂದಿಗೆ ಹೆಚ್ಚು ನಿಕಟವಾಗಿರಲು ಮತ್ತು ಅವರಿಗೆ ಎಲ್ಲ ಮಾರ್ಗಗಳಿಂದಲೂ ಸುಲಭವಾಗಿ ದೊರೆಯಲು ಮತ್ತು ಕೈಗೆಟಕುವಂತಾಗಲು ಬಯಸುತ್ತೇವೆ. ಸ್ಥಳೀಯ ಪಾಲುದಾರರೊಂದಿಗೆ ಸೇರಿಕೊಳ್ಳಲು ನಾವು ಖುಷಿ ಪಡುತ್ತಿದ್ದು, ಗತಿ ಸಂಸ್ಥೆ ನಿರ್ವಹಿಸುವ ʼಎಕ್ಸ್‌ಟರ್ನಲ್ ಕಲೆಕ್ಷನ್ ಪಾಯಿಂಟ್ʼ ನಮ್ಮ ಗ್ರಾಹಕರಿಗೆ ತ್ವರಿತವಾಗಿ ಉತ್ಪನ್ನಗಳನ್ನು ತಲುಪಿಸಿ ಅವರ ಶಾಪ್ಪಿಂಗ್ ಅನುಭವವನ್ನು ವಿಸ್ತರಿಸಲಿದೆ ಎಂಬ ವಿಶ್ವಾಸ ನಮಗಿದೆ” ಎಂದು ಐಕಿಯಾ ಇಂಡಿಯಾದ ಸರ್ವಿಸಸ್ ಎಕ್ಸ್‌ಪೀರಿಯನ್ಸ್ ಲೀಡರ್ ಕ್ಯಾರೊಲಿನ್ ಆಡೆ ಲಾರೆನ್ಸ್ ಬೈಲಿಯರ್ ಹೇಳಿದರು.
ಐಕಿಯಾ ನಾಗಸಂದ್ರ, ಐಕಿಯಾ ಹೈದರಾಬಾದ್, ಐಕಿಯಾ ನವಿ ಮುಂಬೈ, ಐಕಿಯಾ ವೊರ್ಲಿ ಸ್ಟೋರ್ ಮತ್ತು ಐಕಿಯಾ ಆರ್ ಸಿಟಿ ಮಳಿಗೆಗಳೂ ಆಯಾ ಪ್ರದೇಶಗಳಲ್ಲಿ ಕ್ಲಿಕ್ ಆಂಡ್ ಕಲೆಕ್ಟ್ ಸೇವೆಗಳನ್ನು ಒದಗಿಸುತ್ತಿವೆ.
ಗ್ರಾಹಕರು ಕ್ಲಿಕ್ ಆಂಡ್ ಕಲೆಕ್ಟ್ ಮೂಲಕ ಶಾಪ್ಪಿಂಗ್ ನಡೆಸಬೇಕಾದ ಐಕಿಯಾ ವೆಬ್‌ಸೈಟ್ https://www.ikea.com/in/en/
City Today News – 9341997936