ನಮ್ಮ ಬೇಡಿಕೆಯನ್ನು ಬಜೆಟ್ ಮುಂಚಿತವಾಗಿ ಘೋಷಣೆ ಮಾಡಬೇಕು. ಒಂದೊಮ್ಮೆ ನಮ್ಮ ಬೇಡಿಕೆಗೆ ಮಾನ್ಯ ಘನ ಸರ್ಕಾರ ಸ್ಪಂದಿಸದೇ ಇದ್ದಲ್ಲಿ ಬಜೆಟ್ ಮುಂಚಿತವಾಗಿ ಅನಿರ್ದಿಷ್ಟವಾಗಿ ಮುಷ್ಕರವನ್ನು ಹಮ್ಮಿಕೊಳ್ಳುವುದಾಗಿ ಸರಕಾರಕ್ಕೆ ಎಚ್ಚರಿಕೆ

ಕರ್ನಾಟಕ ರಾಜ್ಯ ಕಂದಾಯ ಇಲಾಖೆಯಲ್ಲಿ ಸುಮಾರು 44 ವರ್ಷಗಳಿಂದ ಗ್ರಾಮ ಸಹಾಯಕರಾಗಿ ಕೆಲಸ ಮಾಡಿಕೊಂಡು ಬಂದಿರುತ್ತೇವೆ. ನಮಗೆ ಆರಂಭದಲ್ಲಿ 100 ರೂಪಾಯಿ ವೇತನ ಕೊಟ್ಟು ಈಗ ಪ್ರಸ್ತುತ 13,000 ಸಾವಿರ ರೂಪಾಯಿ ವೇತನ ನಮಗೆ ಸರ್ಕಾರ ನೀಡುತ್ತಿದೆ. ಇಷ್ಟು ಕನಿಷ್ಠ ವೇತನದಲ್ಲಿ ನಾವು ದಿನದ 24 ತಾಸು ಕೆಲಸವನ್ನು ನಿರ್ವಹಿಸುತ್ತ ಬರುತ್ತಿದ್ದೇವೆ. ಈ ಅಲ್ಪವೇತನದಿಂದ ಈಗಿನ ಬೆಲೆ ಏರಿಕೆಯ ದಿನಮಾನದಲ್ಲಿ ಕುಟುಂಬದ ನಿರ್ವಹಣೆ ಮಾಡುವುದು ಬಹಳ ಕಷ್ಟದಾಯಕವಾಗಿರುತ್ತದೆ. ಮತ್ತು ನಮಗೆ ಯಾವುದೇ ಸೇವಾ ಭದ್ರತೆ ಇರುವುದಿಲ್ಲ. ಸರಕಾರದ ಯಾವುದೇ ಸೌಲಭ್ಯವನ್ನು ಸಹ ನಾವು ಪಡೆಯುತ್ತಿಲ್ಲ. ನಮ್ಮ ಗ್ರಾಮ ಸಹಾಯಕರು ತುಂಬಾ ಜನ ಶೇ.80% ಗ್ರಾಮ ಸಹಾಯಕರು ವಿದ್ಯಾವಂತರು ಇರುತ್ತಾರೆ. ವಿದ್ಯೆಗೆ ತಕ್ಕಂತೆ ಹುದ್ದೆಯಾಗಲಿ ಅಥವಾ ವೇತನ ಶ್ರೇಣಿಯನ್ನು ಸರ್ಕಾರ ನೀಡುತ್ತಿಲ್ಲ ನಾವು ಈ ಹಿಂದೆ ಹಲವಾರು ಸಹ ಮುಷ್ಕರ ಹೂಡಲಾಗಿ ಆ ಮುಷ್ಕರದಲ್ಲಿ ಇಲಾಖೆಗೆ ಸಂಬಂಧಪಟ್ಟ ಮಂತ್ರಿಗಳು ಹಾಗೂ ಅಧಿಕಾರಿಗಳು ಬಂದು ನಿಮಗೆ ಸೇವಾ ಭದ್ರತೆ ಕೊಡುವುದಾಗಿ ಆಶ್ವಾಸನೆ ನೀಡಿದಾಗಲೂ ಸಹ ನಮಗೆ ಇನ್ನೂ ತನಕ ಸರಕಾರ ನಮ್ಮ ಬೇಡಿಕೆ ಈಡೇರಿಸಿರುವುದಿಲ್ಲ. ಮುಂಬರುವ ಫೆಬ್ರವರಿ ಬಜೆಟ್‌ನಲ್ಲಿ ನಮಗೆ ಸೇವಾ ಭದ್ರತೆ ಒದಗಿಸಿಕೊಂಡು ನಮ್ಮನ್ನು ಸರಕಾರಿ ನೌಕರರು ಅಂತ ಪರಿಗಣಿಸಬೇಕಾಗಿ ನಮ್ಮ ಬೇಡಿಕೆ ಇರುತ್ತದೆ. ಹಾಗೂ ಈ ನಮ್ಮ ಬೇಡಿಕೆಯನ್ನು ಬಜೆಟ್ ಮುಂಚಿತವಾಗಿ ಘೋಷಣೆ ಮಾಡಬೇಕು. ಒಂದೊಮ್ಮೆ ನಮ್ಮ ಬೇಡಿಕೆಗೆ ಮಾನ್ಯ ಘನ ಸರ್ಕಾರ ಸ್ಪಂದಿಸದೇ ಇದ್ದಲ್ಲಿ ಬಜೆಟ್ ಮುಂಚಿತವಾಗಿ ಅನಿರ್ದಿಷ್ಟವಾಗಿ ಮುಷ್ಕರವನ್ನು ಹಮ್ಮಿಕೊಳ್ಳುವುದಾಗಿ ಸರಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತೇವೆ ಎಂದು ಹೆಚ್.ಎನ್.ದೇವರಾಜು- ರಾಜ್ಯಧ್ಯಕ್ಷರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News – 9341997936

Leave a comment

This site uses Akismet to reduce spam. Learn how your comment data is processed.