ಬಾಲ್ಕಿಯಲ್ಲಿ ಗೆಲ್ಲುವ ಸಾಧ್ಯತೆ ಜಾಸ್ತಿ ಇರುವುದರಿಂದ ಡಾ. ದಿನಕರ ಮೋರೆ ರವರಿಗೆ ಬಿಜೆಪಿ ಪಕ್ಷದ ಟಿಕೆಟ್ ನೀಡುವಂತೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಒಟ್ಟು ಮೂರು ಲಕ್ಷ ಮರಾಠ ಸಮುದಾದಯ ಮತದಾರರಿದ್ದಾರೆ. ಆದರೂ ಕೂಡ ಕಳೆದ 2018 ರ ಚುನಾವಣೆಯಲ್ಲಿ ಬಿಜೆಪಿ ಮರಾಠ ಸಮುದಾಯಕ್ಕೆ ಒಂದು ಟಿಕೆಟ್ ನೀಡಿರಲಿಲ್ಲ. ಬೀದರ್ ಜಿಲ್ಲೆಯ ಒಟ್ಟು ಆರು ಕ್ಷೇತ್ರಗಳ ಪೈಕಿ ಬಿಜೆಪಿ ಕೇವಲ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಐದು ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷಕ್ಕೆ ಭಾರೀ ಹಿನ್ನಡೆ ಉಂಟಾಗಿತ್ತು. ಕಳೆದ ಸಲ ಮಾಡಿರುವ ತಪ್ಪುಗಳನ್ನು ಸರಿಪಡಿಸುವ ಉದ್ದೇಶದಿಂದ ಹಾಗೂ ಮರಾಠ ಸಮುದಾಯಕ್ಕೆ ಸಮಾಜಿಕ ನ್ಯಾಯ ಕಲ್ಪಿಸುವ ಉದ್ದೇಶದಿಂದ ಬೀದರ್ ಜಿಲ್ಲೆಯ ಕರ್ನಾಟಕ ಕತೀಯ ಮರಾಠ ಪರಿಷತ್ ಬೀದರ್ ರವರ ಹಾಗೂ ಇತರೆ ಪ್ರಮುಖ ಮುಖಂಡರು ಸೇರಿ ಚರ್ಚಿಸಿ ಬಿಜೆಪಿ ಪಕ್ಷವು ಈ ಸಲ ಮರಾಠ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂದು ನಿರ್ಣಯ ಕೈಗೊಳ್ಳಲಾಯಿತು.

ಹಾಗೆಯೇ ಕಳೆದ ಬಾರಿ 1ಸ್ಥಾನದಿಂದಲೂ ಟಿಕೆಟ್ ನೀಡಿದಿದ್ದ ಬಿಜೆಪಿ ನಾಯಕರು ಈ ಬಾರಿ 2 ಸ್ಥಾನಗಳಿಗೆ ಬಿಜೆಪಿ ಪಕ್ಷದ ಟಿಕೆಟ್ ಬೇಡಿಕೆಯಿಡಲು ತೀರ್ಮಾನಿಸಿದ್ದಾರೆ. ಸಮುದಾಯವಾದ ಮರಾಠರಿಗೆ 2 ಸೀಟುಗಳನ್ನು ಬೀದರ್‌ ಜಿಲ್ಲೆಯಲ್ಲಿ ನೀಡಬೇಕು. ಈಗಾಗಲೇ ಬಿಜೆಪಿ ಪಕ್ಷಕ್ಕೆ ಬೇಡಿಕೆ ಸಲ್ಲಿಸುವ ಬಗ್ಗೆ ಚರ್ಚೆ ನಡೆದಿದೆ. ರಾಜ್ಯದಲ್ಲಿ ಈ ಬಾರಿ ಬಿಜೆಪಿ ಪಕ್ಷಕ್ಕೆ ಪುನಃ ಅಧಿಕಾರಕ್ಕೆ ಬರುವ ಅವಕಾಶ ಇದೆ. ಜಿಲ್ಲೆಯ ದೊಡ್ಡ ಮತದಾರರ ಸಮುದಾಯವಾದ ಮರಾಠರು ಈಗ ಬಿಜೆಪಿ ಕಡೆ ಇದ್ದಾರೆ. ಇವರನ್ನು ಕಾಂಗ್ರೆಸ್ ಕಡೆ ವಾಲದಂತೆ ತಡೆಯಲು ನಮ್ಮವರಿಗೆ ಹೆಚ್ಚಿನ ಅವಕಾಶ ನೀಡಬೇಕು. ಸಮುದಾಯದವರು ಅಭ್ಯರ್ಥಿಯನ್ನು ಗೆಲ್ಲಿಸಿಕೊಡುತ್ತಾರೆ. ಅದರಲ್ಲಿ ಯಾವುದೇ ಸಂಶಯ ಇಲ್ಲ. ಮತದಾರರಿಗೆ ಈ ಸಾರಿ ಬಿಜೆಪಿ ಬಗ್ಗೆ ಒಲವು ಇದೆ ಎನ್ನುವುದನ್ನು ಪಕ್ಷದ ಹೈಕಮಾಂಡ್ ವಿವರಿಸಲು ಮರಾಠ ಸಮುದಾಯದ ನಾಯಕರು ನಿರ್ಧರಿಸಿದ್ದಾರೆ.

ಮರಾಠ ಸಮುದಾಯದ ಹಲವರು ಬಿಜೆಪಿ ಪಕ್ಷದ ಆಕಾಂಕ್ಷಿಗಳಿದ್ದು, ಅದರಲ್ಲಿ ಬಾಲ್ಕಿ ಟಿಕೆಟ್ ಕ್ಷೇತ್ರದಲ್ಲಿ ಡಾ. ದಿನಕರ ಮೋರೆ ಅವರು ಪ್ರಬಲ ಅಭ್ಯರ್ಥಿಯಾಗಿದ್ದಾರೆ. ಬಾಲ್ಕಿಯಲ್ಲಿ ಗೆಲ್ಲುವ ಸಾಧ್ಯತೆ ಜಾಸ್ತಿ ಇರುವುದರಿಂದ ಡಾ. ದಿನಕರ ಮೋರೆ ರವರಿಗೆ ಬಿಜೆಪಿ ಪಕ್ಷದ ಟಿಕೆಟ್ ನೀಡುವಂತೆ ಒತ್ತು ನೀಡಲು ಚರ್ಚೆಯಾಗಿದೆ. ಎಲ್ಲಾ ಒಳಪಂಗಡಗಳನ್ನು ಸೇರಿಸಿ ಬಿಜೆಪಿಗೆ ಉತ್ತಮವಾದ ಗೆಲ್ಲುವ ವಾತಾವರಣವನ್ನು ಕಲ್ಪಿಸಿಕೊಡಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ರಾಜ್ಯ ಬಿಜೆಪಿ ನಾಯಕರ ಎದುರು ಮಹತ್ವದ ಪ್ರಮುಖ ಬೇಡಿಕೆಗಳನ್ನ ಮರಾಠ ಸಮುದಾಯದ ಮುಖಂಡರು ಇಟ್ಟಿದ್ದಾರೆ. ಬಿಜೆಪಿಯಲ್ಲಿ 2018 ರ ಚುನಾವಣೆಯಲ್ಲಿ ಬೀದರ್ ಜಿಲ್ಲೆಯಲ್ಲಿ ಒಂದು ಕ್ಷೇತ್ರದಲ್ಲಿಯೂ ಕೂಡ ಬಿಜೆಪಿ ಟಿಕೆಟ್‌ ಸಿಕ್ಕಿಲ್ಲ.

ಇನ್ನು ಎಷ್ಟು ವರ್ಷಗಳ ಕಾಲ ಮರಾಠ ಸಮುದಾಯದ ನಾಯಕರು ಬಿಜೆಪಿ ಟಿಕೆಟ್‌ಗಾಗಿ ಕಾಯಬೇಕು, ಈ ಬಾರಿಯಾದರೂ ಮರಾಠ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಇಡುವಂತೆ ಸಭೆಯಲ್ಲಿ ಭಾಗವಹಿಸಿದ್ದ ಆಕಾಂಕ್ಷಿಗಳು, ಸಮುದಾಯದ ನಾಯಕರು ಆಗ್ರಹಿಸಿದರು.

ನಾವು ಮಾಧ್ಯಮದ ಮೂಲಕ ತಿಳಿಯಪಡಿಸುವುದೇನೆಂದರೆ ನಮ್ಮ ತಾಲ್ಲೂಕಿನಲ್ಲಿ ಬರೀ ಒಂದೇ ಕುಟುಂಬ (ಖಂಡ್ರೆ) ಕುಟುಂಬದವರೇ ಅಧಿಕಾರ ನಡೆಸಿಕೊಂಡು ಬಂದಿದ್ದಾರೆ. ಇದಕ್ಕೆ ಕಾರಣ ಆಮ್ ಜನತಾಕೂ ದಿಶಾ ಭೂಲ್ ಕರನಾ ಅಂದರೆ ಸಾಮಾನ್ಯರಿಗೆ ದಾರಿ ತಪ್ಪಿಸುವುದು ಮತ್ತೆ ಒತ್ತಡ ಹೇರುವುದು ಮತ್ತು ಗುಂಡ್‌ಗರ್ದಿ ಮಾಡಿ ಅಧಿಕಾರಕ್ಕೆ ಬಂದಿರುತ್ತಾರೆ.

ಅಲ್ಲದೇ ತಮಗೆ ಬೇಕಾದ ಚೇಲಾಗಳಿಗೆ ಮಾತ್ರ ಕೆಲಸ ಮಾಡಿರುತ್ತಾರೆ. ಸಾಮಾನ್ಯರು ಇವರ ಈ ನಡೆ ನೋಡಿ ಬೇಸತ್ತಿದ್ದಾರೆ. ಆದ್ದರಿಂದ ತಾಲ್ಲೂಕಿನ ಜನರಲ್ಲಿ ನಾವು ಮನವಿ ಮಾಡಿಕೊಳ್ಳುವುದೇನೆಂದರೆ ಈ ಹುಕುಂಶಾಹಿಗಳನ್ನು ಕಿತ್ತೊಗೆದು ಒಳ್ಳೆ ವ್ಯಕ್ತಿ ಡಾ| ದಿನಕರ ಮಾರೆ ಸಾಹೇಬರಿಗೆ ಒಂದು ಒಳ್ಳೆ ಅವಕಾಶ ಕೊಟ್ಟು ಅವರನ್ನು ಆರಿಸಿ ತರೋಣ ಅಲ್ಲದೇ ನಮ್ಮ ಪಕ್ಷದ ಹೈಕಮಂಡ್ ಅಂದರೆ ಹಿರಿಯರನ್ನು ಸಹ ಈ ಮಾಧ್ಯಮದ ಮೂಲಕ ನಾನು ಮನವಿ ಮಾಡಿಕೊಳ್ಳುತ್ತೇನೆ.

ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಸುಮಾರು 1990 ರಿಂದಲೂ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಪಕ್ಷದ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಅನುಭವ ಹೊಂದಿದವನಾಗಿದ್ದೇನೆ. ಅಲ್ಲದೇ ತಾಲ್ಲೂಕಿನ ಎಲ್ಲಾ ಭಾಗಗಳಲ್ಲಿ ಓಡಾಡಿ ಜನರ ನಾಡಿಮಿಡಿತವನ್ನು ಕಂಡುಕೊಂಡಿರುತ್ತೇನೆ.

ಆದ್ದರಿಂದ ಬಂಧುಗಳೇ, ಈ ಭಾಲ್ಕಿ ತಾಲ್ಲೂಕಿನಲ್ಲಿ ಬದಲಾವಣೆ ತಂದು ಈ ಕುಟುಂಬ ರಾಜಕಾರಣಕ್ಕೆ ನಾಂದಿ ಹಾಡೋಣ ಅಂತ ಜನರಲ್ಲಿ ಹಾಗೂ ನಮ್ಮ ಹಿರಿಯರಲ್ಲಿ ಮನವಿ ಮಾಡುತ್ತೇನೆ. ಹಿರಿಯ ಮುತ್ಸದ್ದಿ ಹಾಗೂ ವಿದ್ಯಾವಂತರು, ಸರಳ ಸ್ವಭಾವದವರು, ಸಾಮಾನ್ಯರೊಂದಿಗೆ ಸರಳವಾಗಿ ಬೆರೆತು ಅವರನ್ನು ಸ್ಪಂಧಿಸುವಂತವನಾಗಿದ್ದು, ಇಂತಹ ಸಜ್ಜನರನ್ನು ನಮ್ಮ ಮುಂದಿನ ವಿಧಾನಸಭೆಗೆ ಆರಿಸಿ ಕಳಿಸೋಣ ಅಂತ ನಮ್ಮ ತಾಲ್ಲೂಕಿನ ಜನರಲ್ಲಿ ನನ್ನ ಕಳಕಳಿಯ ಮನವಿ ಎಂದು ದಿಗಂಬರ ರಾವ್ ಮಾನ್ಕರಿ, ಬೀದರ್‌ ಕರ್ನಾಟಕ ಕತೀಯ ಮರಾಠ ಪರಿಷತ್‌ ಅಧ್ಯಕ್ಷರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಡಾ. ಬಾಲಾಜಿ ಸಾವಳೀಕರ್, ಬಿಜೆಪಿ ಮುಖಂಡರು,ಯುವರಾಜ ಪಾಟೀಲ, ವಕೀಲರು,ಸುನಿಲ್ ಸಿಂದ,ಶರಣು ಕಡಗಂಚಿ,ಶಾಂತವೀರ್ ಕೇಸ್ಕ‌ರ್ & ಮಲ್ಲಿಕಾರ್ಜುನ ಸೂರಿ ಪಾಳ್ಗೊಂಡರು

City Today News – 9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.