
ಪರಿಸರ ದಿನಾಚರಣೆಯ ಅಂಗವಾಗಿ ಕರುನಾಡ ಜನ ಸ್ಪಂದನ ವೇದಿಕೆ ವತಿಯಿಂದ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಮೇಘ ಸಿಟಿ ಹಾಗೂ ಎಸ್.ಜೆ.ಆರ್. ಮಹಿಳಾ ಕಾಲೇಜ್ ಸಹಯೋಗದೊಂದಿಗೆ ಕಾಲೇಜ್ ಆವರಣದಲ್ಲಿ ಆಯೋಜಿಸಲಾಗಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ನಟರಾಜ್ ಬಿ.ಪಿ ರವರು ಮಾತನಾಡಿ ಉದ್ಯಾನ ನಗರಿ ಎಂದು ಪ್ರಖ್ಯಾತಿ ಹೊಂದಿರುವ ಬೆಂಗಳೂರು ಇಂದು ಕಾಂಕ್ರೀಟ್ ನಗರಿ ಎಂಬ ಕುಖ್ಯಾತಿ ಒಂದಿದೆ. ಅದಕ್ಕೆ ಮೂಲ ಕಾರಣ ಮನುಷ್ಯರು. ಮರ ಗಿಡಗಳನ್ನು ಕಡೆದು ಕಟ್ಟಡಗಳನ್ನು ನಿರ್ಮಿಸುತ್ತ ಇರುವುದರಿಂದ ಪ್ರಕೃತಿ ಕಲುಷಿತಗೊಳ್ಳುತ್ತಿದೆ. ಮುಂದಿನ ಪೀಳಿಗೆಗೆ ಕಲುಷಿತ ಪರಿಸರ ನೀಡದೆ ಸ್ವಚ್ಛ ಪರಿಸರ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಹಾಗೂ ಜನತೆ ಪರಿಸರ ಸಂರಕ್ಷಣೆ ನಮ್ಮ ಆಧ್ಯ ಕರ್ತವ್ಯ ಎಂಬ ಮನೋಭಾವನೆಯಲ್ಲಿ ಬದುಕಬೇಕು ಎಂದರು.
ಬಳಿಕ ಪರಿಸರ ಸಂರಕ್ಷಕರಾದ ಬಿ. ಎನ್. ಆನಂದ ರವರು ಮಾತನಾಡಿ ಗಿಡ ನೆಡುವ ಕಾರ್ಯಕ್ರಮ ಬರೀ ಪರಿಸರ ದಿನಾಚರಣೆಗೆ ಸ್ಥಿಮಿತವಾಗದೆ ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯದಲ್ಲಿ ಗಿಡಗಳನ್ನು ಪೋಷಿಸುವ ಕಾರ್ಯದಲ್ಲಿ ತೊಡಗಿದರೆ ಮುಂದೊಂದು ದಿನ ನಮ್ಮ ಪರಿಸರ ಕಲುಷಿತಗೊಳ್ಳದೆ ಸ್ವಚ್ಛ ಪರಿಸರದಿಂದ ಮುಂದಿನ ಪೀಳಿಗೆಯ ಆರೋಗ್ಯ ಹಾಗೂ ಮನಸ್ಥಿತಿ ಉತ್ತಮವಾಗಿರುತ್ತದೆ. ಗಿಡ ನೆಡುವುದರ ಜೊತೆಗೆ ನಮ್ಮ ಸುತ್ತಲಿನ ಪರಿಸರಗಳನ್ನು ಕೂಡ ಸ್ವಚ್ಛವಾಗಿ ಇಡುವುದನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಒಗ್ಗೂಡಿಸಿಕೊಳ್ಳಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೇಮ ಸಿದ್ದರಾಜುರವರು ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರನ್ನು ಹಾಗೂ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು ಹಾಗೂ ತಮ್ಮ ಕಾಲೇಜಿನಿಂದ ಆಯೋಜಿಸಲಾಗುತ್ತಿರುವ ಕಾರ್ಯಕ್ರಮಗಳ ಹಾಗೂ ಅದರ ಉಪಯೋಗಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ವೇಳೆ ಪರಿಸರ ಸಂರಕ್ಷಕರಾದ ಬಿ. ಎನ್. ಆನಂದ ಕರುನಾಡ ಜನಸ್ಪಂದನ ವೇದಿಕೆಯ ರಾಜ್ಯಾಧ್ಯಕ್ಷರಾದ ನಟರಾಜ್ ಬಿ.ಪಿ, ಉಪಾಧ್ಯಕ್ಷರಾದ ಮಹೇಶ್ ದೇವ್, ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಮೆಗಾ ಸಿಟಿಯ ಅಧ್ಯಕ್ಷರಾದ ವಿ. ಕೃಷ್ಣಮೂರ್ತಿ, ವಲಯ ಅಧ್ಯಕ್ಷರಾದ ಕೆ. ಕೃಷ್ಣಮೂರ್ತಿ, ಕಾಲೇಜಿನ ಪ್ರಾಂಶುಪಾಲರಾದ ಪ್ರೇಮಸಿದ್ದರಾಜು ಹಾಗೂ ಪ್ರೊ. ಟಿ.ಎಸ್. ಕಲ್ಪನಾ ರವರು ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಕಾಲೇಜು ಆವರಣದಲ್ಲಿ ಗಿಡ ನೆಡುವ ಮುಖೇನ ಪರಿಸರ ದಿನಾಚರಣೆಯನ್ನು ಆಚರಿಸಿದರು.
City Today News 9341997936
