
ಲೇಬರ್ ಆಕ್ಟ್ ಮತ್ತು ಇಂಡಸ್ಟ್ರಿಯಲ್ ಆಕ್ಟ್ ನಲ್ಲಿರುವ ಹಾಗೆ ಇ.ಸಿ.ಐ., ಪಿ.ಎಫ್ ಬೇಸಿಕ್, ಡಿ.ಎ, ವೀಕ್ಲಿ ಆಫ್, ಜಿ.ಎಸ್.ಟಿ., ಸಿ.ಎಸ್.ಟಿ. ಇಷ್ಟೂ ಸಹ ನಮ್ಮ ಕಾನೂನಿನ ಅಡಿಯಲ್ಲಿರುವ ರೀತಿ ಅಲ್ಲದೆ ಬೇರೆ ಕಾನೂನಿನ ಚೌಕಟ್ಟನ್ನು ಮೀರಿ ಹಲವು ದೊಡ್ಡ ಕಂಪನಿಗಳು ವ್ಯವಹರಿಸುತ್ತಿರುವ ಬಗ್ಗೆ ಪತ್ರಿಕಾ ಗೋಷ್ಥಿ.
ಪಿ.ಎಫ್. 25%, ಇ.ಎಸ್.ಐ.4%, ಜಿ.ಎಸ್.ಟಿ. 9ಮ ಸಿ.ಎಸ್.ಟಿ. 9% ಇವೆಲ್ಲವೂ ಸಹ ಮೇಲೆ ತಿಳಿಸಿದ ಕಾನೂನಿನ ಚೌಕಟ್ಟಿನಲ್ಲಿರುತ್ತದೆ. ಆದರೆ ಈ ಮೇಲೆ ತಿಳಿಸಿದ ಹಾಗೆ ಯಾವುದೇ ರೀತಿಯಲ್ಲಿ ವ್ಯವಹರಿಸದೆ ಅವ್ಯವಹಾರಿಕ ಅಂದರೆ ಕಾನೂನಿನ ವಿರುದ್ಧವಾಗಿ ಈಗ ನಾವು ಲೇಬರ್ ಆಕ್ಟ್ ಪ್ರಕಾರ ವ್ಯವಹರಿಸಬೇಕೆ ಅಥವಾ ದೊಡ್ಡ ಕಂಪನಿಗಳ ಪ್ರಕಾರ ವ್ಯವಹರಿಸಬೇಕೆ ಎಂದು ತೀರ್ಮಾನಿಸಲು ನನಗೆ ಗೊಂದಲಮಯವಾಗಿರುತ್ತದೆ.
ದೊಡ್ಡ ಕಂಪನಿಗಳ ಸನಿಹದಲ್ಲಿ ಸಿಲುಕಿರುವ ನಮ್ಮಂತಹ ಸಣ್ಣಪುಟ್ಟ ಸೆಕ್ಯೂರಿಟಿ ಕಂಪನಿಗಳು ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಲು ಆಗದೆ ದೊಡ್ಡ ಕಂಪನಿಗಳ ಹಿಡಿತದಲ್ಲಿ ಸಿಲುಕಿ ಒದ್ದಾಡುವಂತಾಗಿದೆ. ದೊಡ್ಡ ಕಂಪನಿಗಳ ಪ್ರಕಾರ ಕಾರ್ಯನಿರ್ವಹಿಸಲು ಪ್ರಾರಂಭಿಸಿದರೆ ನಮ್ಮಂತಹ ಸಣ್ಣ ಕಂಪನಿಗಳಿಗೆ ಹಾನಿಕರವಾಗಿರುತ್ತದೆ. ಆದ್ದರಿಂದ ಕೂಲಿ ಕಾರ್ಮಿಕರಿಗೆ ಮತ್ತು ಸೆಕ್ಯೂರಿಟಿ ಗಾರ್ಡ್‌ಗಳಿಗೆ ಯಾವುದೇ ರೀತಿಯ ಸರ್ಕಾರಿ ಸೌಲಭ್ಯಗಳು ಕಾನೂನು ರೀತಿಯಾಗಿ ಸಿಗದೆ ಅನ್ಯಾಯಗೊಳ್ಳಗಾಗುತ್ತಿದ್ದಾರೆ. ಅಂದರೆ ಓವರ್ ಟೈಂ ಡ್ಯೂಟಿ, (8 ಗಂಟೆಗಳ ಬದಲು 12 ಗಂಟೆ) ಕೆಲಸ ಮಾಡಿಸುತ್ತಿದ್ದಾರೆ.

ಇ.ಸಿ.ಐ., ಪಿ.ಎಫ್., ಸಿಗದೆ ಇರುವುದು. ಈಗ ಸದ್ಯದ ಪರಿಸ್ಥಿತಿಯಲ್ಲಿ ನಾವು ನೀಡುತ್ತಿರುವ ಟ್ಯಾಕ್ಸ್, ಜಿ.ಎಸ್.ಟಿ., ಸಿ.ಎಸ್.ಟಿ. ಅತೀ ದುಬಾರಿಯಾಗಿದ್ದು, ಜಿ.ಎಸ್.ಟಿ ಅಥವಾ ಸಿ.ಎಸ್.ಟಿಯನ್ನು ಕಡಿತಗೊಳಿಸಬೇಕೆಂದು ಅಹವಾಲು ಕೋರುತ್ತಾ ಏಕೆಂದರೆ ಕೂಲಿ ಕಾರ್ಮಿಕರು ಆಯಾ ಆಯಾ ಲೋಕಲ್ ನಲ್ಲಿರುವವರೆಂದು ಕೇಂದ್ರಕ್ಕೆ ಸಂಬಂದಿಸುವುದಿಲ್ಲವೆಂದು ತಿಳಿಸುತ್ತೇನೆ. ಅದೇ ರೀತಿ 25% ಪಿ.ಎಫ್. ಬದಲು 12% ಪಿ.ಎಫ್. ಕಟ್ಟಲು ಬದಲಾಯಿಸಿ ತರಲು ಒತ್ತಾಯಿಸುತ್ತೇವೆ.
ಹಲವು ದೊಡ್ಡ ಕಂಪನಿಗಳು ಸೆಕ್ಯೂರಿಟಿ ಒಪ್ಪಂದಗಳನ್ನು ಮಾಡಿಕೊಂಡು ಅಧೀನ ಕಂಪನಿಗಳಿಗೆ ತಿಂಗಳ ತಿಂಗಳ ಸೆಕ್ಯೂರಿಟಿ ಗಾರ್ಡ್, ಸೂಪರ್ ವೈಸರ್, ಗಾರ್ಡ್ಸ್‌ಗಳ ಸಂಬಳವನ್ನು ನೀಡಲು ನಿರಾಕರಿಸುತ್ತಾರೆ. ಹಾಗೆಯೇ ಸುಮಾರು ತಿಂಗಳುಗಳ ಬಾಕಿಯನ್ನು ಕೊಡದೆ ಸತಾಯಿಸುತ್ತಿರುತ್ತಾರೆ.ಲೇಬರ್ ಅಧಿಕಾರಿಗಳು ಇಂತಹ ದೊಡ್ಡ ಕಂಪನಿಗಳ ಮೇಲೆ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳಲು ನಿರಾಕರಿಸುತ್ತಾರೆ. ಅಂದರೆ ಪರೋಕ್ಷವಾಗಿ ಅವರು ಈ ದೊಡ್ಡ ಕಂಪನಿಗಳ ಪರವಾಗಿರುತ್ತಾರೆಂದು ತಿಳಿಯಪಡಿಸುತ್ತಿದ್ದೇನೆ.
ಯಾವುದೇ ದೊಡ್ಡ ಕಂಪನಿಗಳು ಈ ರೀತಿಯಾದಂತಹ ನಿರಂಕುಶ (ಡಿಕ್ಟೇಟರ್) ಆಡಳಿತಕ್ಕೆ ಕಡಿವಾಣ ಹಾಕುವಂತೆ ಸಂಬಂಧಿಸಿದ ಪ್ರಾಧಿಕಾರಕ್ಕೆ ನಮ್ಮ ಮನವಿಯನ್ನು ಮುಟ್ಟುವಂತೆ ಮಾಡಲು ನಮ್ಮ ಈ ಪತ್ರಿಕೋದ್ಯಮಗಳ ಸಮ್ಮುಖದಲ್ಲಿ ವಿನಂತಿಸುತ್ತೇವೆ ಎಂದು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ಭೀಮ್ಸ್ ಸೆಕ್ಯೂರಿಟಿ ಸರ್ವಿಸ್ ನ ಮ್ಯಾನೇಜಿಂಗ್ ಪಾರ್ಟ್ನರ್ ಆದ ಸಿ. ಆರ್. ಶೆಟ್ಟ್ ಯವರು ತಿಳಿಸಿದರು
City Today News 9341997936
