‘ಬನ್ನೇರುಘಟ್ಟದ ಕಲ್ಲುಬಾಳು ಗ್ರಾಮದ ಬಡಾವಣೆಗಳಲ್ಲಿ ಅಕ್ರಮವಾಗಿ ಪಾರ್ಕ್‌ ಸಿಎ ನಿವೇಶನಗಳ ಮಾರಾಟ: ನೂರಾರು ಕೋಟಿ ರೂ ಅವ್ಯವಹಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ

ಆನೇಕಲ್ ಕಲ್ಲು ಬಾಳು ಗ್ರಾಮದ ನಿಸರ್ಗ,ನಂದನವನ, ಸೇರಿದಂತೆ ಬಡಾವಣೆಗಳಲ್ಲಿ ಅಕ್ರಮವಾಗಿ ಪಾರ್ಕ್, ಸಿಎ ನಿವೇಶನಗಳ ಮಾರಾಟ: ನೂರಾರು ಕೋಟಿ ರೂ ಅವ್ಯವಹಾರ ಸಮಗ್ರ ತನಿಖೆಗೆ ಒತ್ತಾಯ ನಿರ್ಮಲ ನಗದ

ಬೆಂಗಳೂರು,ನ,3, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್‌ ತಾಲ್ಲೂಕಿನ ಕಲ್ಲು ಬಾಳು ಗ್ರಾಮಪಂಚಾಯತ್ ನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಉದ್ಯಾನವನ ಮತ್ತು ಸಾರ್ವಜನಿಕ ಉದ್ದೇಶಕ್ಕೆ ಮೀಸಲಾದ ನಿವೇಶಗಳನ್ನು (10.5ಎಕರೆ) ನಿರ್ಮಾಣ್ ಶೆಲ್ಕರ್ ರಿಯಲ್ ಎಸ್ಟೇಟ್ ಸಂಸ್ಥೆ ಭಾರೀ ಪ್ರಮಾಣದಲ್ಲಿ ಮಾರಾಟ ಮಾಡಿದೆ. ನಿವೇಶನ ಖರೀದಿಸಿದವರಿಗೆ 150 ಕೋಟಿ ರೂಪಾಯಿಗೂ ಹೆಚ್ಚಿನ ನಷ್ಟವಾಗಿದೆ ಎಂದು ವಂಚನೆಗೊಳಗಾದವರು ಆರೋಪಿಸಿದ್ದಾರೆ.

“ನೂರಾರು ಕೋಟಿ ರೂಪಾಯಿ ಅಕ್ರಮ ನಡೆದಿರುವ ಪ್ರಕರಣದ ಬಗ್ಗೆ ತಕ್ಷಣವೇ ಬಿ.ಎಂ.ಆರ್.ಡಿ.ಎ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕೂಡಲೇ ಎಫ್.ಐ.ಆರ್. ದಾಖಲಿಸಿ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಲ್ಲುಬಾಳು ಗ್ರಾಮ ಪಂಚಾಯತ್‌ ಸದಸ್ಯ, ಸದಾನಂದ ಮತ್ತು ವಂಚನೆಗೊಳಗಾದ ನಿವೇಶನ ಮಾಲೀಕರು, ಸರ್ಕಾರದ ಉನ್ನತ ಅಧಿಕಾರಿಗಳು, ಇಡೀ ಆಡಳಿತ ವ್ಯವಸ್ಥೆ ಬಿಲ್ಕರ್ಸ್ ಗಳ ಜೊತೆ ಶಾಮೀಲಾಗಿದೆ. ಇದರಿಂದ ಜೀವನ ಪರ್ಯಂತ ಗಳಿಸಿದ ಸಾಮಾನ್ಯ ಜನತೆ ಇವರಿಂದ ಮೋಸ ಹೋಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ದೂರಿದರು.

ನಿಸರ್ಗ, ನಂದನವನ, ನಿರ್ಮಲ ನಗರ ಸೇರಿದಂತೆ ಐದು ಬಡಾವಣೆಗಳಲ್ಲಿ ಇಂತಹ ಭಾರೀ ವಂಚನೆ ನಡೆದಿದ್ದು, ಪ್ರತಿಯೊಂದು ಬಡಾವಣೆಗಳಲ್ಲಿ ಕನಿಷ್ಠ 25 ರಿಂದ 50 ಕೋಟಿ ರೂಪಾಯಿಯಷ್ಟು ವಂಚನೆಯಾಗಿದೆ. ಸರ್ವಮಾಡಿದ್ದು, ಒತ್ತುವರಿಯಾಗಿ, ಬಿಎಂಆರ್.ಡಿಎ ಪಂಚಾಯತ್ ಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಖಾತೆಗಳನ್ನು ಮಾಡಲಾಗಿದೆ. ಈ ಬಗ್ಗೆ ಗ್ರಾಮೀಣಾಭಿವೃದಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು, ಉಮಾ ಮಹದೇವ್ ಮತ್ತು ಅತೀಕ್ ಅವರು ತನಿಖೆಗೆ ಆದೇಶ ನೀಡಿದ್ದು, ಇದರಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದರು.

ಬಡಾವಣೆಗಳ ಉದ್ಯಾನವನ ಮತ್ತು ಸಾರ್ವಜನಿಕ ಉದ್ದೇಶದ ಸ್ಥಳಗಳನ್ನು ನಿವೇಶನಗಳನ್ನಾಗಿ ಮಾಡಿ ಮಾರಾಟ ಮಾಡಲಾಗಿದೆ. ಇಂತಹ ಸುಮಾರು 10.5 ಎಕರೆ ಪ್ರದೇಶವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಆನೇಕಲ್ ಕಾರ್ಯನಿರ್ವಾಹಕ ಅಧಿಕಾರಿ ಅವರಿಗೆ ಇಂತಹ ನಿವೇಶನಗಳ ಖಾತೆ ವಜಾಗೊಳಿಸುವಂತೆ ಮನವಿ, ಇಂತಹ ನಿವೇಶನಗಳನ್ನು ಖರೀದಿಸಿರುವವರು ಬಹುತೇಕ ಮಂದಿ ಅಮಾಯಕರಾಗಿದ್ದು, ಇನ್ನೂ ಕೆಲವರು ವಿದೇಶದಲ್ಲಿದ್ದಾರೆ. ಸಿಎ ನಿವೇಶನ ಮಾರಾಟ ಮಾಡಿದ್ದಾರೆ. ಆದರೆ ಈ ಅಕ್ರಮದ ಬಗ್ಗೆ ತಾಲ್ಲೂಕು ಪಂಚಾಯತ್‌ ಇಒ ಅವರು ತಡೆಯಾಜ್ಞೆ ನೀಡಿ ಪ್ರಕರಣವನ್ನು ಪದೇ ಪದೇ ಮುಂದೂಡುತ್ತಿದ್ದರು. ಆದರೆ ಇದೀಗ ತಡೆಯಾಜ್ಞೆ ತೆರವುಗೊಂಡಿದೆ. ಇಂತಹ ಅಕ್ರಮದಿಂದ ಸರ್ಕಾರದ ಬೊಕ್ಕಸಕ್ಕೂ ಸಹ ಭಾರೀ ನಷ್ಟವಾಗಿದೆ. ನಿಜವಾಗಿ ಶೋಷಣೆಗೆ ಒಳಗಾದವರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಸದಾನಂದ – ಎಂದು ಸಧಸ್ಯರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು .

City Today News – 9341997936

ಗುಲಬರ್ಗಾ ವಿಶ್ವ ವಿದ್ಯಾಲಯ ಕಲಬುರಗಿಯ ಕುಲಪತಿಗಳು ಹಾಗೂ ಕುಲಸಚಿವರನ್ನು ಅಮಾನತ್ತು ಮಾಡಬೇಕು ಮತ್ತು ಕಲಬುರಗಿ ಜಿಲ್ಲೆಯ ಜನರ ಸಮಸ್ಯೆಗೆ ಸ್ಪಂದಿಸದೇ ಭ್ರಷ್ಟ ಅಧಿಕಾರಿಗಳ ರಕ್ಷಣೆಯಲ್ಲಿ ನಿಂತಿರುವ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಬೇಕು

ಕರ್ನಾಟಕ ರಾಜ್ಯದಲ್ಲಿ ಹೈದ್ರಾಬಾದ ಕರ್ನಾಟಕವು ಹಿಂದುಳಿದ ಆರ್ಥಿಕವಾಗಿ ಪ್ರದೇಶವಾಗಿದ್ದು ಭಾಗದ ಜನರು ಶೈಕ್ಷಣಿಕವಾಗಿ ಹಾಗೂ ಹಿಂದುಳಿದಿರುತ್ತಾರೆ . ಅಲ್ಲದೇ ಸರ್ಕಾರವು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಾಕಷ್ಟು ಪ್ರಯತ್ನಿಸುತ್ತಿದ್ದು , ಆದರೇ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಮತ್ತು ಕುಲ ಸಚಿವರ ವಿಶ್ವವಿದ್ಯಾಲಯವನ್ನು ಅಕ್ರಮಗಳ ಹೋರಟಿದ್ದು ವಿಷಾದಕರ ತಾಣ ಮಾಡಲು ಸಂಗತಿಯಗಿದೆ .

ಗುಲಬರ್ಗಾ ವಿಶ್ವವಿದ್ಯಾಲಯವು ಮೌಲ್ಯಾಧಾರಿತ ಶಿಕ್ಷಣ ನೀಡುವಲ್ಲಿ ವಿಫಲವಾಗಿರುವುದಂತು ನೈಜ ಸಂಗತಿಯಾಗಿದೆ . ವಿಶ್ವವಿದ್ಯಾಲಯದ ಆಡಳಿತ ಹದಗೆಟ್ಟು ಹೋಗಿದ್ದು ಪರೀಕ್ಷಾ ಕೋಠಡಿ ನೀಡಲು ಲಂಚ ಪಡೆದುಕೊಳ್ಳುತ್ತಿದ್ದು , ಪಾಸ್ | ತೇರ್ಗಡೆ ಮಾಡಲು ಹಣ ನೀಡುವುದು ಹೀಗೆ ಹಲವಾರು ಕೃತ್ಯಗಳು ನಡೆಸುತ್ತಿದ್ದಾರೆ . ಉದಾ : 27 ಡಿಸೆಂಬರ್ -2021 ದಿಂದ 05 – ಜನೇವರಿ -2022 ರ ಬಿಎಡ್ ಪರೀಕ್ಷೆಯಲ್ಲಿ ಕುಲಪತಿಗಳು ಮತ್ತು ಕುಲಸಚಿವರು ಲಕ್ಷ್ಮೀಬಾಯಿ ಕಮಠಾಣೆ , ಶಿಕ್ಷಣ ಮಹಾವಿದ್ಯಾಲಯ ಬೀದರೆ , ಇವರಿಗೆ ಪರೀಕ್ಷೆ ನಡೆಸಲು ಅನುಮತಿ ನೀಡಲು ರೂ . 25,000 / – ಗಳನ್ನು ಮತ್ತು ಸಾರಾಯಿ ಬಾಟಲಿಯನ್ನು ಕೇಳಿರುವುದಾಗಿ ಲಕ್ಷ್ಮೀಬಾಯಿ ಕಮಠಾಣೆ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ / ಪ್ರಾಂಶುಪಾಲರು ಸ್ವತಃ ಹೇಳಿಕೆ ನೀಡಿದ್ದು ಮತ್ತು ಪರೀಕ್ಷಾ ಮೇಲ್ವಿಚಾರಕಿಯಾದ ಡಾ || ವಿದ್ಯಾ ವಾಡೇಕರ ಅವರು ಸಾಮೂಹಿಕ ನಕಲು ಮಾಡಿರುವ ವಿಡಿಯೋ | ಚಿತ್ರೀಕರಣ ದಿನಾಂಕ : 04.01.2022 ಕ್ಕೆ ಕುಲಪತಿಗಳು , ಗುಲಬರ್ಗಾ ವಿಶ್ವವಿದ್ಯಾಲಯ , ಇವರಿಗೆ ಸಲ್ಲಿಸಿದ್ದರು . ಸಹ ಅವರು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಆದರೆ ನಾವು ಪ್ರತಿ ಭಟನೆ ಮೂಲಕ ರಾಜ್ಯ ಪಾಲರ ಗಮನಕ್ಕೆ ತಂದ ನಂತರ ಅಂದರೆ , ದಿನಾಂಕ18.01.2022 ಕ್ಕೆ ವರದಿ ಕೇಳಿ ಪತ್ರ ಬರೆದಿರುತ್ತಾರೆ . ಮೇಲ್ನೋಟಕ್ಕೆ ಇವರುಗಳು ಶಾಮಿಲಾಗಿ ಪ್ರಕರಣವನ್ನು ಮುಚ್ಚು ಹಾಕುವ ಪ್ರಯತ್ನದಲ್ಲಿದ್ದರು ಅದಕ್ಕಾಗಿ ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ , ರಾಜ್ಯದ ಗಮನಕ್ಕೆ ತಂದು ಇಂತಹ ಭ್ರಷ್ಟ ಅಧಿಕಾರಿಗಳನ್ನು ವಜಾ ಮಾಡುವಂತೆ ಮಾನ್ಯ ಉನ್ನತ ಶಿಕ್ಷಣ ಸಚಿವರು ಹಾಗೂ ಗೌರವಾನ್ವಿತ ರಾಜ್ಯ ಪಾಲರಿಗೆ ಮನವಿ ಮಾಡುತ್ತೇವೆ . ಮಾನ್ಯರೇ , ಕಲಬುರಗಿ ಜಿಲ್ಲೆಯಲ್ಲಿ ಹಲವಾರು ಇಲಾಖೆಗಳಲ್ಲಿ ಬ್ರಷ್ಟಾಚಾರ ತಾಂಡವ ಆಡುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ದೂರು ನೀಡಿದರು ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದೆ ಅಧಿಕಾರಿಗಳ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲಾಧಿಕಾರಿಯನ್ನು ಈ ಕೂಡಲೆ ಕಲಬುರಗಿ ಜಿಲ್ಲೆಯಿಂದ ಕೈ ಬಿಡಬೇಕು ಎಂದು ಈ ಮೂಲಕ ಆಗ್ರಹಿಸುತ್ತವೆ .

ನಮ್ಮ ಬೇಡಿಕೆಗಳು : 1. ಕಲಬುರಗಿ ವಿಭಾಗದಲ್ಲಿ ಜಿ.ಎನ್.ಎಮ್ ಮತ್ತು ನರ್ಸಿಂಗ್ ಪರಿಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಲಾಗಿದ್ದು ಈ ಕೂಡಲೇ ಮರು ಪರೀಕ್ಷೆ ಮಾಡಬೇಕು . 2. ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ವಿಧವಾ ಪುನರ್ ವಿವಾಹ ಯೋಜನೆಯಲ್ಲಿ ಅಕ್ರಮ ಮಾಡಿರುವ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು . 3. ಕಲಬುರಗಿ ಜಿಲ್ಲಾಡಳಿತ ಸಾರ್ವಜನಿಕರ ಕುಂದು ಕೋರತೆಗಳಿಗೆ ಸ್ಪಂದಿಸುತ್ತಿಲ್ಲ .. ಈ ಜಿಲ್ಲೆಯ ಆಡಳಿತ ಯಂತ್ರ ಕುಸಿದು ಬಿದ್ದಿದೆ ಈ ಕೂಡಲೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಬೇಕು . 4. ಕಲಬುರಗಿ ಮಹಾನಗರ ಪಾಲಿಕೆ ಮತ್ತು ಕೋಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಗಳು ರಾಜೀವ್ ಆವಾಜ್ ಯೋಜನೆ ಮನೆಗಳ ಹಂಚಿಕೆಯಲ್ಲಿ ಅಕ್ರಮ ಮಾಡಿದ್ದು ಅವರುಗಳನ್ನು ವಜಾ ಮಾಡಿ ಅರ್ಹ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಬೇಕು . ಮತ್ತು ಕಲಬುರಗಿ ನಗರದಲ್ಲಿ ಅಕ್ರಮವಾಗಿ ಉದ್ಯಾನ ವನದ ಜಾಗದಲ್ಲಿ ಪೆಟ್ರೊಲ್ ಬಂಕ್ ಮನೆಗಳು ನಿರ್ಮಿಸಿದ್ದು ಅವುಗಳನ್ನು ತೇರೆವುಗೋಳಿಸಬೇಕು .

ಈ ಮೇಲಿನ ನಮ್ಮ ಎಲ್ಲಾ ಬೇಡಿಕೆಗಳನ್ನು ಸರಕಾರ ಈ ಕೂಡಲೆ ಇಡೆರಿಸಬೇಕು ಎಂದು ಈ ಮೂಲಕ ಆಗ್ರಹಿಸುತ್ತವೆ . ಇಲ್ಲವಾದರೆ ರಾಜ್ಯ ಸರಕಾರದ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸುತ್ತವೆ .

– ಸೈಬಣ್ಣಾ ಜಮಾದಾರ

ಶಿವರಾಜ ಶಖಾಪೂರ

City Today News

9341997936

ಸಮುದಾಯ ಭವನ ಕಟ್ಟುತ್ತಿರುವುದಾಗಿ ಹೇಳಿ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಅನುವಾನ ಮಂಜೂರಿ ಮಾಡಿಕೊಂಡು ದುರುಪಯೋಗ

ಹಳಿಯಾಳ ತಾಲೂಕಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಸಮಾಜದ ಹೆಸರಿನಲ್ಲಿ ವಿವಿಧ ಸಂಘಟನೆಗಳನ್ನು ಹುಟ್ಟು ಹಾಕಿ ಸಮುದಾಯ ಭವನ ಕಟ್ಟುತ್ತಿರುವುದಾಗಿ ಹೇಳಿ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಅನುವಾನ ಮಂಜೂರಿ ಮಾಡಿಕೊಂಡು ದುರುಪಯೋಗ ಆಗುತ್ತಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿ ನಾನು ಜಿಲ್ಲಾಧಿಕಾರಿಗಳಿಗೆ ದಿನಾಂಕ : 02-01-2019ರಂದು ದೂರು ಸಲ್ಲಿಸಿದ್ದೆ . ನನ್ನ ದೂರಿನ ಪ್ರಕಾರ ಮಾನ್ಯ ಜಿಲ್ಲಾಧಿಕಾರಿ , ಕಾರವಾರರವರು ತನಿಖಾಧಿಕಾರಿಗಳನ್ನಾಗಿ ಉಪವಿಭಾಗಾಧಿಕಾರಿ , ಕಾರವಾರವರು ನೇಮಿಸಿ ವರದಿಯನ್ನು ಪಡೆದುಕೊಂಡ ಪ್ರಕಾರ ನನ್ನ ದೂರಿನಲ್ಲಿ ನಿಜಾಂಶವಿರುವುದಾಗಿ ಹಾಗು ಅನುದಾನ ದುರ್ಬಳಕೆ ಆಗುತ್ತಿರುವುದಾಗಿ ವಿಸ್ತ್ರತ ವರದಿ ನೀಡಿರುತ್ತಾರೆ . ವರದಿ ಆಧಾರದಲ್ಲಿ ನಾನು ದಿನಾಂಕ : 14-03-2019 ರಂದು ಮಾನ್ಯ ಲೋಕಾಯುಕ್ತರು ಬೆಂಗಳೂರುರವರಿಗೆ ದೂರನ್ನು ಸಲ್ಲಿಸಿದ್ದೆ . ಸದರಿ ದೂರನ್ನು ಸೂಪರಿಂಟೆಂಡಟ್ ಆಫ್ ಪೋಲಿಸ್ ( ಎಸ್.ಪಿ. ) ಕಾರವಾರರವರು ಕೂಲಂಕೂಷ ತನಿಖೆ ಕೈಗೊಂಡು ಮಾನ್ಯ ಲೋಕಾಯುಕ್ತರಿಗೆ ತನಿಖಾ ವರದಿಯನ್ನು ಸಲ್ಲಿಸಿದ ಪ್ರಕಾರ ವಿಚಾರಣೆಗಾಗಿ ಮಾನ್ಯ ಲೋಕಾಯುಕ್ತರು ಎದುರುದಾರ ವಿಧಾನ ಪರಿಷತ್ ಸದಸ್ಯ ಎಸ್.ಎಲ್ . ಘೋಟೋಕರ ಹಾಗೂ ಶ್ರೀ ರಾಯಣ್ಣ ಅರಸಿನಗೇರಿ , ಅಧ್ಯಕ್ಷರು , ಶ್ರೀ ಶಿವಾಜಿ ಎಜ್ಯುಕೇಷನ್ ಹಾಗೂ ಸ ೦ ಬ ೦ ಧಪಟ್ಟ ಅಧಿಕಾರಿಗಳಿಗೆ ನೋಟಿಸ್ ವಿಚಾರಣೆಗೊಳಪಡಿಸಿ ವಾದ ವಿವಾದ ಆಲಿಸಿದ ನಂತರ ಸದರಿ ಪ್ರಕರಣದಲ್ಲಿ ವಿಧಾನ ಪರಿಷತ್‌ ಸದಸ್ಯ ಎಸ್.ಎಲ್ . ಘೋಟೇಕರ ಮತ್ತು ರಾಯಣ್ಣ ಅರಶಿಣಗೇರಿ , ಅಧ್ಯಕ್ಷರು ಶ್ರೀ ಶಿವಾಜಿ ಎಜುಕೇಷನ್ ಟ್ರಸ್ಟ ಹಾಗೂ ಈ ಪ್ರಕರಣದಲ್ಲಿ ಕೆಲವು ಅಧಿಕಾರಿಗಳು ತಪ್ಪಿತಸ್ಥರೆಂದು ತೀರ್ಮಾನಿಸಿ ಸರಕಾರಕ್ಕೆ ಮತ್ತು ಸಂಬಂಧಪಟ್ಟ ಇಲಾಖೆಯವರಿಗೆ ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 12 ( 1 ) ಮತ್ತು 12 ( 3 ) ಪ್ರಕಾರ ವರದಿಯನ್ನು ನೀಡಿರುತ್ತಾರೆ . ಮಾನ್ಯ ಲೋಕಾಯುಕ್ತರ ವರದಿಯ ಪ್ರಕಾರ ( 1 ) , ವಿಧಾನ ಪರಿಷತ್ ಸದಸ್ಯ ಎಸ್.ಎಲ್ . ಘೋಟೇಕರ ಹಾಗೂ ಶ್ರೀ ರಾಯಣ್ಣ ಅರಸಿಣಗೇರಿ , ಅಧ್ಯಕ್ಷರು , ಶ್ರೀ ಶಿವಾಜಿ ಎಜುಕೇಷನ್ ಟ್ರಸ್ಟ್ , ರವರ ವಿರುದ್ಧ 5.00 ಲಕ್ಷ ಹಾಗೂ 36.25 ಲಕ್ಷ ರೂಪಾಯಿಗಳನ ಅವರು ಯಾವ ದಿನಾಂಕ ಪಡೆದಿದ್ದಾರೆ ಅಲ್ಲಿಂದ 10 % ಬಡ್ಡಿ ಸೇರಿಸಿ ವಸೂಲಿ ಮಾಡಲು ಕ್ರಮ ಕೈಗೊಳ್ಳಬೇಕು .

( 2 ) ವಿಧಾನ ಪರಿಷತ್ ಸದಸ್ಯ ಎಸ್.ಎಲ್ . ಘೋಟೇಕರ ಹಾಗೂ ಶ್ರೀ ರಾಯಣ್ಣ ಅರಸಿಣಗೇರಿ , ಅಧ್ಯಕ್ಷರು , ಶ್ರೀ ಶಿವಾಜಿ ಎಜುಕೇಷನ್ ಟ್ರಸ್ಟ್ , ರವರ ವಿರುದ್ಧ ಭಾರತ ದಂಡ ಸಂಹಿತೆ ಸೆಕ್ಷನ್ 120 ಬಿ , 403 406 ಹಾಗೂ ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988 ರ ಸೆಕ್ಷನ್ 13 ( 1 ) ( ಎ ) ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲು ಕ್ರಮಕೈಗೊಳ್ಳಬೇಕು . ( 3 ) ವಿಧಾನ ಪರಿಷತ್ ಸದಸ್ಯ ಎಸ್.ಎಲ್ . ಘಟೇಕರರವರು ಪ್ರತಿನಿಧಿಸುವ ಯಾವುದೇ ಸಂಘ ಹಾಗೂ ಶ್ರೀ ಶಿವಾಜಿ ಎಜ್ಯುಕೇಷನ್ ಟ್ರಸ್ಟಿಗೆ ಅವರು ದುರುಪಯೋಗ ಪಡಿಸಿಕೊಂಡ ಅನುದಾನ ವಾಪಸ ಭರಣಾ ಮಾಡಿದ ದಿನಾಂಕದಿಂದ 5 ವರ್ಷಗಳ ಅವಧಿಗೆ ಯಾವುದೇ ಸರಕಾರದ ಅನುದಾನ ನೀಡದಿರಲು ಕ್ರಮ ಕೈಗೊಳ್ಳಲು ತಿಳಿದ್ದಾರೆ , ಕಳೆದ 12 ವರ್ಷಗಳಿಂದ 2 ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿ ಸುದೀರ್ಘ ಅವಧಿಗೆ ಇದ್ದರೂ ಒಂದು ನೈಯಾಪೈಸೆ ಅವರು ಪ್ರತಿನಿಧಿಸುವ ಸಮಾಜಕ್ಕೆ ನೀಡದ ಇವರು ಸಮಾಜದ ಅಭಿವೃದ್ಧಿಗೆ ಸರಕಾರದಿಂದ ಬಂದಂತಹ ಹಣವನ್ನು ತಾವು ಹುಟ್ಟುಹಾಕಿರುವ ಶ್ರೀ ಶಿವಾಜಿ ಎಜುಕೇಷನ್ ಟ್ರಸ್ಟ್‌ನ ಎಸ್.ಎಲ್ . ಘೋಟೆಕರ್ , ಆಂಗ್ಲ ಮಾಧ್ಯಮಿಕ ಶಾಲೆ , ಬಳಸಿರುವುದು ಅಕ್ಷಮ್ಯ ಅಪರಾಧ ಇದನ್ನು ನಾವು ಖಂಡಿಸುತ್ತೇವೆ . ದಿನಾಂಕ : 02-01-2019ರಂದು ನಾನು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ನಂತರ ಸದರಿ ಎಸ್.ಎಸ್ . ಫೋಟೆಕರ ತವರು ನಾನು ಯಾವುದೇ ಅನುದಾನವನ್ನು ದುರುಪಯೋಗಪಡಿಸಿಕೊಂಡಿಲ್ಲ . ಒಂದು ವೇಳೆ ಸಾಬೀತಾದರ ರಾಜಕೀಯ ನಿವೃತ್ತಿ ಪಡೆಯುತ್ತೇನೆಂದು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದರು . ಅದರಂತೆ ಅವರು ತಮ್ಮ ರಾಜಕೀಯ ನಿವೃತ್ತಿಯನ್ನು ಘೋಷಿಸಬೇಕೆಂದು ನನ್ನ ಸವಾಲು ,

ನಾಗೇಂದ್ರ ಜೀವೋಜಿ

ಉಪಾಧ್ಯಕ್ಷರು – ಕರ್ನಾಟಕ ಕೃತಿಯ ಮರಾಠ ಪರಿಷತ್

City Today News

9341997936

ನೆಲಮಂಗಲ ಕ್ಷೇತ್ರದ ಹಾಲಿ ಜೆ.ಡಿ.ಎಸ್ . ಶಾಸಕರಾದ ಡಾ || ಕೆ.ಶ್ರೀನಿವಾಸಮೂರ್ತಿ ರವರು ತನ್ನ ರಾಜಕೀಯ ಪ್ರಭಾವವನ್ನು ಉಪಯೋಗಿಸಿಕೊಂಡು ದೀನ ದಲಿತರ ಇನಾಂತಿ ಜಮೀನನ್ನು ನಕಲಿ ದಾಖಲೆಗಳು ಸೃಷ್ಟಿಸಿ ಕೈಬದಲಾವಣೆ ಮಾಡಿಸಿ , ಡಾ || ಕೆ.ಶ್ರೀನಿವಾಸಮೂರ್ತಿ ರವರ ಹೆಸರಿಗೆ ನೋಂದಣಿ ಮಾಡಿಸಿಕೊಂಡು , ದಲಿತರಿಗೆ ಅನ್ಯಾಯ

ನೆಲಮಂಗಲ ಕ್ಷೇತ್ರದ ಹಾಲಿ ಜೆ.ಡಿ.ಎಸ್ . ಶಾಸಕರಾದ ಡಾ || ಕೆ.ಶ್ರೀನಿವಾಸಮೂರ್ತಿ ರವರು ತನ್ನ ರಾಜಕೀಯ ಪ್ರಭಾವವನ್ನು ಉಪಯೋಗಿಸಿಕೊಂಡು ದೀನ ದಲಿತರ ಇನಾಂತಿ ಜಮೀನನ್ನು ನಕಲಿ ದಾಖಲೆಗಳು ಸೃಷ್ಟಿಸಿ ಕೈಬದಲಾವಣೆ ಮಾಡಿಸಿ , ಡಾ || ಕೆ.ಶ್ರೀನಿವಾಸಮೂರ್ತಿ ರವರ ಹೆಸರಿಗೆ ನೋಂದಣಿ ಮಾಡಿಸಿಕೊಂಡು , ದಲಿತರಿಗೆ ಅನ್ಯಾಯ ಮಾಡುತ್ತಿರುವ ಬಗ್ಗೆ . +++++++ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ , ನೆಲಮಂಗಲ ಕ್ಷೇತ್ರದ ಹಾಲಿ ಜೆ.ಡಿ.ಎಸ್ , ಶಾಸಕರಾದ ಡಾ || ಕೆ.ಶ್ರೀನಿವಾಸಮೂರ್ತಿ ರವರು ಕೆಂಪಲಿಂಗನಹಳ್ಳಿ ಗ್ರಾಮದ ಸರ್ವೆ ನಂ .53 , ಹೊಸ ಸರ್ವೆ ನಂ .53 / 1 ರ ಇನಾಂತಿ ಜಮೀನು ಮೂಲ ಮಂಜೂರಾತಿದಾರರ ಹೆಸರನ್ನು ಕೈಬಿಟ್ಟು ಬೇರೆ ನಕಲಿ ಹೆಸರುಗಳನ್ನು ಸೃಷ್ಟಿಸಿ 3-37 ಎ / ಗುಂಟೆ ಜಮೀನನ್ನು ಕಬಳಿಸಿರುತ್ತಾರೆ . ಈ ವಿಚಾರವಾಗಿ ಮಾನ್ಯ ಮುಖ್ಯ ಮಂತ್ರಿಗಳು ಕರ್ನಾಟಕ ಸರ್ಕಾರ , ಮಾನ್ಯ ಗೃಹ ಸಚಿವರು , ಕರ್ನಾಟಕ ಸರ್ಕಾರ , ಮಾನ್ಯ ಕಂದಾಯ ಸಚಿವರು , ಕರ್ನಾಟಕ ಸರ್ಕಾರ , ಮಾನ್ಯ ಸಿದ್ದರಾಮಯ್ಯ ರವರು , ವಿರೋಧ ಪಕ್ಷದ ನಾಯಕರು ( ಮಾಜಿ ಮುಖ್ಯಮಂತ್ರಿಗಳು ) ಇವರುಗಳಿಗೆ ಪತ್ರದ ಮುಖಾಂತರ ಮೂಲ ದಾಖಲೆಗಳನ್ನು ಲಗತ್ತಿಸಿ , ತುರ್ತು ಅಂಚೆ ಮೂಲಕ ರವರುಗಳ ಗಮನಕ್ಕೆ ಮಾಹಿತಿಯನ್ನು ರವಾನಿಸಿದ್ದು , ಪತ್ರ ತಲುಪಿದ 10-15 ದಿನಗಳ ಒಳಗೆ ನಮ್ಮ ಪತ್ರಗಳನ್ನು ಕೂಲಕುಂಷವಾಗಿ ಪರಿಶೀಲಿಸಿ , ಸಂಬಂಧಪಟ್ಟ ಇಲಾಖೆಗಳಿಂದ ಸೂಕ್ತ ತನಿಖೆ ನಡೆಸಿ , ಮೂಲ ಖಾತೆದಾರರಿಗೆ ಯಾವುದೇ ತೊಂದರೆಯಾಗದಂತೆ ಇನಾಂತಿ ಜಮೀನನ್ನು ನಮಗೆ ಸರಿಯಾದ ರೀತಿಯಲ್ಲಿ ಖಾತೆದಾರರ ಕುಟುಂಬಗಳಿಗೆ ಸಲ್ಲುವಂತೆ ಹಾಗೂ ಪ್ರಭಾವಿ ರಾಜಕಾರಣಿಯಾಗಿರುವ ಈ ಹಾಲಿ ಶಾಸಕರು ಹಾಗೂ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸದಿದ್ದರೆ , ರೈತ ಪರ ಸಂಘಟನೆ , ದಲಿತ ಪರ ಸಂಘಟನೆ , ಕನ್ನಡ ಪರ ಸಂಘಟನೆ , ಕಾರ್ಮಿಕರ ಪರ ಸಂಘಟನೆ , ಚಾಲಕರ ಪರ ಸಂಘಟನೆ , ಟ್ಯಾಕ್ಸಿ ಚಾಲಕರ ಪರ ಸಂಘಟನೆ , ಕನ್ನಡ ಒಕ್ಕೂಟ , ದಲಿತ ಒಕ್ಕೂಟ , ರೈತರ ಒಕ್ಕೂಟ , ಇತರೆ ಸಂಘಟನೆಗಳೊಂದಿಗೆ “ ವಿಧಾನ ಸೌಧ ಮುತ್ತಿಗೆ ಹಾಕಿ ನ್ಯಾಯ ಸಿಗುವವರೆಗೂ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಾಡಲಾಗುವುದು . ಸದರಿ ಕೆಂಪಲಿಂಗನಹಳ್ಳಿ ಸರ್ವೆ ನಂ .53 ( ಹೊಸ ಸರ್ವೆ ನಂ .53 / 1 ) ರ ಓಡುವ ಜಮೀನಿಗೆ ಸಂಬಂಧಪಟ್ಟಂತೆ ನಮ್ಮಗಳ ಮೂಲ ದಾಖಲಾತಿಗಳು ಈ ಪತ್ರದೊಂದಿಗೆ ಲಗತ್ತಿಸಿ , ನೀಡಲಾಗಿದೆ . ಮೂಲ ರೈತರುಗಳಾದ ನಾವುಗಳು ಸುಮಾರು 50 ವರ್ಷಗಳಿಂದ ಉಳುಮೆ ಮಾಡಿಕೊಂಡು ಈಗಲೂ ಸಹ ಸ್ವಾಧೀನದಲ್ಲಿ ನಾವೇ ಇದ್ದು , ನಮಗೆ ತಿಳಿಯದ ಹಾಗೇ ಇನಾಂತಿ ಜಮೀನಿನ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು , ನಮ್ಮ ಕುಟುಂಬಗಳಿಗೆ ಅನ್ಯಾಯವೆಸಗಿರುತ್ತಾರೆ . ಇನಾಂತಿ ಜಮೀನಿಗೆ ಸಂಬಂಧಪಟ್ಟಂತೆ ಯಾವ ಯಾವ ಅಧಿಕಾರಿಗಳು ಹಾಗೂ ರಾಜಕೀಯ ವ್ಯಕ್ತಿಗಳು , ಭೂಗಳ್ಳರು ಶಾಮೀಲಾಗಿರುವವರ ವಿರುದ್ಧ ಸಂಬಂಧಪಟ್ಟ ಮಂತ್ರಿಗಳಾಗಲೀ , ಇಲಾಖೆಗಳಾಗಲೀ , ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸದಿದ್ದರೆ , ಯಾವುದೇ ಕಾರಣಕ್ಕೂ ನಮ್ಮ ಪ್ರಾಣ ಹೋದರೂ ಸಹ ನಮ್ಮ 50 ವರ್ಷಗಳಿಂದ ಉಳುಮೆ ಮಾಡಿಕೊಂಡು ಜಮೀನನ್ನು ಬಿಡುವುದಿಲ್ಲ . ಹಾಗೂ ಈ ವಿಚಾರವಾಗಿ ರಾಜ್ಯದ ಮೂಲೆ – ಮೂಲೆಗಳಲ್ಲಿಯೂ ಉಗ್ರವಾದ ಹೋರಾಟವನ್ನು ಮಾಡಲಾಗುವುದು .

-ನೋಂದ ರೈತ ಕುಟುಂಬದವರಿಂದ ,

ಮುನಿರಾಜು , 8197622853

City Today News

9341997936

” ಕದ್ದವರೆ ಕಳ್ಳರಲ್ಲಾ ಕದಿಯಲು ಸಹಕರಿಸಿದವರು ಸಹ ಕಾನೂನಿನ ದೃಷ್ಟಿಯಲ್ಲಿ ಕಳ್ಳರು “

ಪತ್ರಿಕಾ ಹೇಳಿಕೆ

ವಾರಸುದಾರರಿಲ್ಲದ ಅನಾಥ ಶವಗಳನ್ನು ಬಿಡದೆ ಕದಿಯುವ ಕಿರಾತಕರು ಸಂಸದರಾದ ಬಿ.ಎಸ್.ವೈ.ರಾಘವೇಂದ್ರರವರೆ , ಈ ಆಸ್ಪತ್ರೆಯ ಕಿರಾತಕ ಮುಖ್ಯಸ್ಥನೊಂದಿಗೆ ( ತಪೋವನ , ಮಲ್ಟಿ ಸ್ಪೆಷಲಿಟಿ ಆಸ್ಪತ್ರೆ ದಾವಣಗೆರೆ ) ನಿಮಗಿರುವ ವಿಶ್ವಾಸ ಮತ್ತು ಸಂಬಂಧವನ್ನು ಸಾರ್ವಜನಿಕರ ಮುಂದೆ ಬಹಿರಂಗ ಗೊಳಿಸಿ ” ಕದ್ದವರೆ ಕಳ್ಳರಲ್ಲಾ ಕದಿಯಲು ಸಹಕರಿಸಿದವರು ಸಹ ಕಾನೂನಿನ ದೃಷ್ಟಿಯಲ್ಲಿ ಕಳ್ಳರು ” ಸತ್ಯ ಹೊರಬರಬೇಕಾದರೆ ಸರ್ಕಾರವು ಸಿ.ಬಿ.ಐ. ತನಿಖೆಗೆ ನೀಡಲಿ . ಕರ್ನಾಟಕದ ವೈದ್ಯಕೀಯ ಸಚಿವರು ಮತ್ತು ಗೃಹ ಸಚಿವರ ವಿರುದ್ಧ ದೂರು ದಾಖಲು . ವಾಸ್ತವ ವಿಷಯ ಕರ್ನಾಟಕ ಪೋಲಿಸ್ ಇಲಾಖೆಯ ದಾಖಲೆಗಳಲ್ಲಿ ವಾರಸುದಾರರು ಇಲ್ಲದೆ ಇರುವ ಶವಗಳ ಶವಸಂಸ್ಕಾರಗಳ ಸಂಖ್ಯೆ ಸರಿ ಇರುತ್ತದೆ . ಆದರೆ ಇದರ ನಿಜ ವಾಸ್ತವವೇ ಬೇರೆ ಇರುತ್ತದೆ . ಇದರ ಮೊದಲ ಭಾಗವಾಗಿ ಈ ದಾಖಲೆಗಳೊಂದಿಗೆ ನಿಮ್ಮ ಮುಂದೆ ಕರ್ನಾಟಕದ ಖಾಸಗಿ ವೈದ್ಯಕೀಯ ಕಾಲೇಜುಗಳು ಮತ್ತು ರಿಸರ್ಚ್ ಸೆಂಟರಗಳು ತಮ್ಮಲ್ಲಿ ವಿದ್ಯಾಭ್ಯಾಸ ಮಾಡುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮನುಷನ ನರಕೋಶ ಮತ್ತು ಅಂಗಾಂಗಗಳ ಪರಿಚಯ ಮತ್ತು ಪರೀಕ್ಷಾ ವಿಧಾನಗಳನ್ನು ತಿಳಿಸಲು ಕಾಲೇಜಿನ ಮುಖ್ಯಸ್ಥರು ಕೆಲ ಖಾಸಗಿ ವ್ಯಕ್ತಿಗಳು ಮತ್ತು ಇಲಾಖಾವಾರು ಅಧಿಕಾರಿಗಳೊಂದಿಗೆ , ಕಾನೂನು ಬಾಹಿರವಾಗಿ ಕದ್ದು ( ಕರ್ನಾಟಕ ಅನಾಟಮಿ ಆಕ್ಟ್ ೧೯೫೭ ) ಉಲ್ಲಂಘಿಸಿ ಕಾಲೇಜುಗಳು ಮತ್ತು ರಿಸರ್ಚ್ ಸೆಂಟರಗಳಲ್ಲಿ ಇಟ್ಟುಕೊಳ್ಳುವ ಪ್ರವೃತ್ತಿ ಅತಿ ಜಾಣತನದಿಂದ ನಡೆದು ಬಂದಿರುತ್ತದೆ . ಇದು ಕೆಲ ಅಧಿಕಾರಿ ವರ್ಗಕ್ಕೆ ತಿಳಿದರೂ ಸಹ ಕೆಲ ಗಣ್ಯ ವ್ಯಕ್ತಿಗಳ ಕಾಣದ ಕೈಗಳ ಒತ್ತಡಕ್ಕೆ ಮಣಿದು ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿದ್ದಾರೆ . ಇದಕ್ಕೆ ಒಂದು ಉತ್ತಮ ತಾಜಾ ಉದಾಹರಣೆ ಮತ್ತು ಸಾಕ್ಷಿಯನ್ನು ಈ ಪತ್ರಿಕಾಗೋಷ್ಠಿ ಮೂಲಕ ತಮ್ಮ ಮುಂದೆ ಬಯಲಿಗೆ ಇಡುತ್ತಿದ್ದೇವೆ . ಸಂಸದರಾದ ಮಾನ್ಯ ಬಿ.ಎಸ್.ವೈ.ರಾಘವೇಂದ್ರರವರೆ ದಾವಣಗೆರೆ ಜಿಲ್ಲೆಯ ತಪೋವನ ಮಲ್ಲಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ವೈದ್ಯಕೀಯ ವಿದ್ಯಾಲಯದ ಮುಖ್ಯಸ್ಥರಾದ ” ಶಶಿಕುಮಾರ್ ಮೆಹರವಾಡಿ ವಸುದೇವ ರೊಂದಿಗೆ ನಿಮ್ಮ ವಿಶ್ವಾಸ ಮತ್ತು ಸಂಬಂಧವು ಯಾವ ರೀತಿ ಮತ್ತು ರೂಪವೆಂಬುವದನ್ನು ಸಾರ್ವನಿಕರ ಮುಂದ ನೇರವಾಗಿ ಬಹಿರಂಗಪಡಿಸಿ . ಇದಕ್ಕೆ ಕಾರಣವಿಷ್ಟೆ.

ಈ ಸಂಸ್ಥೆಯ ಮುಖ್ಯಸ್ಥನು , ದಾವಣಗೆರೆ ಗಾಂಧಿನಗರದ ರುದ್ರಭೂಮಿಯಿಂದ ದಿನಾಂಕ ೨೯.೫.೨೦೧೯ ರಂದು ವಾರಸುದಾರರು ಇಲ್ಲದ ಅನಾಥ ಶವ ಮತ್ತು ಶವದ ಅಂಗಾಂಗಗಳನ್ನು ಖಾಸಗಿ ವ್ಯಕ್ತಿಗಳೊಂದಿಗೆ ಸೇರಿ ಕಾನೂನು ಬಾಹಿರವಾಗಿ ಕದ್ದು ತನ್ನ ವೈದ್ಯಕೀಯ ಸಂಸ್ಥೆಯಲ್ಲಿ ಇಟ್ಟುಕೊಂಡಿರುತ್ತಾರೆ . ಕರ್ನಾಟಕ ಅನಾಟಮಿ ಕಾಯ್ದೆಯನ್ವಯ ೫ ಇಲಾಖೆಯ ಪೂರ್ವ ನಿರಾಕ್ಷೇಪಣ ಪ್ರಮಾಣಪತ್ರ ಪಡೆಯದೆ ಅಕ್ರಮವಾಗಿ ಕದ್ದು ಇಟ್ಟುಕೊಂಡಿರುತ್ತಾರೆಂದು ಸಾಕ್ಷಿ ಸಮೇತ ಸಲ್ಲಿಸಿದ ದೂರು ಇದುವರೆಗೂ ಸೂಕ್ತ ರೀತಿ ತನಿಖೆ ನಡೆಸದೆ ಹಿಂಬರಹಗಳನ್ನು ನೀಡಿರುವುದು ಬಹುದೊಡ್ಡ ಅನುಮಾನಕ್ಕೆ ಆಸ್ಪದವಾಗಿರುತ್ತದೆ . ಇಲಾಖಾವಾರು ಅಧಿಕಾರಿಗಳು ದ್ವಂದ್ವ ನಿಲುವಿನ ದೃಢೀಕೃತ ದಾಖಲೆಗಳನ್ನು ನೀಡುತ್ತಿದ್ದಾರೆ . ಮಾನ್ಯ ಬಿ.ಎಸ್.ವೈ. ರಾಘವೇಂದ್ರರವರೆ , ಮೇಲ್ಕಂಡ ಸಂಸ್ಥೆಯ ಮುಖ್ಯಸ್ಥರು ತಮ್ಮ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ . ಮತ್ತು ಒತ್ತಡ ಹೇರುತ್ತಿದ್ದಾರೆ ಎನ್ನುವ ನೇರ ಆರೋಪಗಳು ಕೇಳಿ ಬರುತ್ತಿದ್ದು ಇದಕ್ಕೆ ಪೂರಕವೆಂಬಂತೆ ಘಟನಾವಳಿಗಳೂ ಸಹ ನಡೆಯುತ್ತಿರುವುದು ವಾಸ್ತವ ವಿಷಯಕ್ಕೆ ಪುಷ್ಟಿ ನೀಡಿದಂತಿರುತ್ತದೆ . ದಿನಾಂಕ ೨೦/೦೧/೨೦೨೧ ರಂದು ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಸಿ.ಬಿ.ಐ.ರವರಿಗೆ ದೂರು ಸಲ್ಲಿಸಿರುತ್ತೇವೆ . ಇದರ ಮರುದಿನವೆ ದಿನಾಂಕ ೨೩/೦೧/೨೦೨೧ ರಂದು ತಾವುಗಳು ಶಿವಮೊಗ್ಗದ ಖಾಸಗಿ ಜಾಗ ಒದರಲ್ಲಿ ಗಂಟೆಗಟ್ಟಲೆ ನಿರಂತರವಾಗಿ ಸಂಸದರೆಂಬುವುದನ್ನು ಮರೆತು ಮೇಲ್ಕಡ ಸಂಸ್ಥೆಯ ಆರೋಪ ಹೊತ್ತ ಮುಖ್ಯಸ್ಥನೊಂದಿಗೆ ಚರ್ಚೆಯಲ್ಲಿ ಭಾಗಿದಾರರಾಗಿರುತ್ತೀರಿ . ಇದಕ್ಕೆ ತಾವುಗಳು ಸ್ಪಷ್ಟನೆಯನ್ನು ಸಾರ್ವಜನಿಕವಾಗಿ ಮತ್ತು ಸಂಸ್ಥೆಯ ಮುಖ್ಯಸ್ಥನ ವಿಶ್ವಾಸ ಹಾಗೂ ಸಂಬಂಧದ ಬಗ್ಗೆ ಬಹಿರಂಗವಾಗಿ ಸಾರ್ವಜನಿಕರ ಮುಂದೆ ಹೇಳಿಕೆ ನೀಡುವಂತೆ ಆಗ್ರಹಿಸುತ್ತೇವೆ . ಈ ಪತ್ರಿಕಾ ಮತ್ತು ಮಾಧ್ಯಮಗೋಷ್ಟಿಯಲ್ಲಿ ಮೊದಲ ಭಾಗವಾಗಿ ಅನಾಥ ಶವಗಳನ್ನು ಮತ್ತು ಅಂಗಾಂಗಗಳನ್ನು ಯಾವ ರೀತಿ ಕಳ್ಳ ಮಾರ್ಗದಲ್ಲಿ ಸಾಗಾಣಿಕೆ ನಡೆಯುತ್ತದೆ ಎಂಬುವುದರ ಬಗ್ಗೆ ವಿಸ್ಕೃತ ಹೇಳಿಕೆಯನ್ನು ನೀಡುವುದರ ಜೊತೆಗೆ ಕೆಲ ದಾಖಲಾತಿಗಳನು ( ಇಲಾಖಾವಾರು ನೀಡಿರುವ ದಾಖಲಾತಿಗಳು ) ತಮ್ಮ ಮುಂದೆ ಇಡುತ್ತಾ , ಮುಂದುವರೆದು ಹೇಳುವುದೇನೆಂದರೆ ಬಹುತೇಕ ಕರ್ನಾಟಕದ ವೈದ್ಯಕೀಯ ಕಾಲೇಜುಗಳು ಮತ್ತು ರಿಸರ್ಚ್ ಸೆಂಟರ್‌ಗಳಿಗೆ ಯಾವ ಯಾವ ಅಧಿಕಾರಿಗಳ ಮತ್ತು ರಾಜಕಾರಣಿಗಳ ಮತ್ತು ಕಾಣದ ಕೈಗಳು ಕಾಣದ ರೀತಿ ಕಾನೂನು ನಿಯಮವಾಳಿಗಳನ್ನು ಉಲ್ಲಂಘಿಸಿ ವೈದ್ಯಕೀಯ ಕಾಲೇಜುಗಳಿಗೆ ಮತ್ತು ರಿಸರ್ಚ್ ಸೆಂಟರ್‌ಗಳಿಗೆ ಪರವಾನಿಗೆ ಮತ್ತು ಪರವಾನಿಗೆ ನವೀಕರಣಕ್ಕೆ ತಮ್ಮ ಕೃಪಾ ಕಟಾಕ್ಷವಿದೆ ಎಂಬುವುದನ್ನು ದಾಖಲೆ ಸಮೇತ ಮುಂದಿನ ಭಾಗದಲ್ಲಿ ದೃಡೀಕೃತ ದಾಖಲಾತಿಗಳೊಂದಿಗೆ ತಮ್ಮ ಮುಂದೆ ಬಹಿರಂಗಗೊಳಿಸುತ್ತೇವೆ ಎಂದು ಹೇಳಲು ಬಯಸುತ್ತೇವೆ .

– ವೀರಾಚಾರ್ ಬಿ.ಯು-ಅಧ್ಯಕ್ಷರು ವಿ.ಕೆ.ಎಸ್.ಎಸ್. ಹರೀಶ್‌ಹಳ್ಳಿ – ಸಮಾಜ ಕಾರ್ಯಕರ್ತರು,         ಪವನರಾಜ್ ಪವರ್, 

City Today News
9341997936