
ಕಳೆದ 2020- ಹಾಗೂ 2021ರಲ್ಲಿ ಕೋವಿಡ್ ವೇಳೆ ಜನಜೀವನ ಅಸ್ತವ್ಯಸ್ತವಾಗಿದ್ದು ಎಲ್ಲರಿಗೂ ತಿಳಿದಿರುವ ವಿಚಾರವೆ. ಈ ವೇಳೆ ಸಮಾಜ ಸೇವೆ ನೆಪದಲ್ಲಿ ಅಗ್ರವಾಲ್ ಸಮಾಜ (ಕರ್ನಾಟಕ (ರಿ))ದ ಮುಖಂಡರು ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿ ಹಣ ಪಡೆದಿದ್ದು ಸರ್ಕಾರಕ್ಕೆ ಸುಳ್ಳು ಲೆಕ್ಕ ತೋರಿಸಿ ಮೋಸ ಮಾಡಿದ್ದಾರೆ. ಅಂದಿನ ಅಗ್ರವಾಲ್ ಸಮಾಜದ ಅಧ್ಯಕ್ಷರಾಗಿದ್ದ ಸಂಜಯ್ ಗರ್ಗ್ ಅವರೇ ಮಾಧ್ಯಮಗಳಲ್ಲಿ ಹೇಳುವಂತೆ 9,15000 ಫುಡ್ ಪ್ಯಾಕೆಟ್‌ಗಳನ್ನು ಜನರಿಗೆ ಉಚಿತವಾಗಿ ನೀಡಿದ್ದಾರೆ. 11,950 ರೇಷನ್ ಕಿಟ್ ಗಳನ್ನು ನೀಡಿದ್ದಾರೆ. 2 ಲಕ್ಷಕ್ಕೂ ಹೆಚ್ಚು ಮಾಸ್ಕ್ಗಳನ್ನು ಉಚಿತವಾಗಿ ಹಂಚಿದ್ದಾರೆ. 1200 ಲೀಟರ್ ಸ್ಯಾನಿಟೈಸರ್, 35 ಸಾವಿರ ಸೋಪ್‌ಗಳು, ೨೫ ಇನ್ನಾ ಥರ್ಮೋಮೀಟರ್, 3000 ಪಿಪಿ ಕಿಟ್‌ಗಳನ್ನು ಉಚಿತವಾಗಿ ಸಾರ್ವಜನಿಕರಿಗೆ ನೀಡಿದ್ದಾರೆ. ಅಲ್ಲದೆ ಸುಮಾರು 500 ಟನ್‌ನಷ್ಟು ತರಕಾರಿಗಳನ್ನು ರೈತರಿಂದ ಖರೀದಿಸಿ ಜನರಿಗೆ ಹಂಚಲಾಗಿದೆ. ಇದಕ್ಕಾಗಿ ಸುಮಾರು 78 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ತಮ್ಮ ವಾರ್ಷಿಕ ಲೆಕ್ಕಪತ್ರದಲ್ಲಿ ತೋರಿಸಿದ್ದಾರೆ.
ಆದರೆ ವಾಸ್ತವವಾಗಿ ನಡೆದಿರುವುದೆ ಬೇರೆಯಾಗಿದೆ. ಕೋವಿಡ್ ವೇಳೆ ಆರ್ಥಿಕವಾಗಿ ಕಷ್ಟದಲ್ಲಿರುವವರಿಗೆ ನೆರವಾಗುವ ಸಲುವಾಗಿ ಅಗ್ರವಾಲ್ ಸಮಾಜದಿಂದ ನೆರವಿನ ಅಭಿಯಾನ ನಡೆಸಲಾಗಿದೆ. ಆದರೆ ಇದನ್ನೇ ನೆಪ ಮಾಡಿಕೊಂಡು ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿಯನ್ನು ಚಂದಾದ ರೂಪದಲ್ಲಿ ಅಂದಿನ ಅಧ್ಯಕ್ಷ ಸಂಜಯ್ ಗರ್ಗ್, ಅಂದಿನ ಖಜಾಂಚಿ ಸತೀಶ್ ಗೋಯೆಲ್ ಹಾಗೂ ಅಂದಿನ ಕಾರ್ಯದರ್ಶಿ ವಿಜಯ್ ಶರಾಫ್ ಪಡೆದು ಲೂಟಿ ಹೊಡೆದಿದ್ದಾರೆ.
ಹಣವನ್ನು ನೆರವಾಗಿ ಕೆಲವರು ಸಮಾಜದ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ. ಇನ್ನು ಸಾಕಷ್ಟು ಮಂದಿ ನಗದಿನ ರೂಪದಲ್ಲಿ ನೀಡಿದ್ದಾರೆ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ. ಇವರೇ ಮಾಧ್ಯಮಗಳಲ್ಲಿ ಹೇಳಿರುವಂತೆ ಇವರು ಜನರಿಗೆ ಉಚಿತವಾಗಿ ನೀಡಿರುವ ಈ ಮೇಲಿನ ವಸ್ತುಗಳಿಗೆ ಕನಿಷ್ಠಾತಿ ಕನಿಷ್ಟ ಬೆಲೆ ನಿಗದಿ ಪಡಿಸಿದರೂ ಸುಮಾರು 10 ಕೋಟಿ ರೂಪಾಯಿಗೂ ಹೆಚ್ಚು ಖರ್ಚಾಗುತ್ತದೆ.
ಆದರೆ ಸಮಾಜದವರು ತಮ್ಮ ವಾರ್ಷಿಕ ಲೆಕ್ಕಪತ್ರದಲ್ಲಿ ಕೇವಲ 78 ಲಕ್ಷ ಖರ್ಚು ಮಾಡಿರುವುದಾಗಿ. ತೋರಿಸಿಕೊಂಡಿದ್ದಾರೆ. ಹಾಗಾದರೆ ಇವರ ಬ್ಯಾಂಕ್ ಖಾತೆಗೆ ಬಂದಿದ್ದ ಹಣವೆಷ್ಟು? ಈ ಮೇಲ್ಕಂಡ ವಸ್ತುಗಳನ್ನು ಯಾವ ವ್ಯಕ್ತಿಯಿಂದ ಅಥವಾ ಸಂಸ್ಥೆಯಿಂದ ಪಡೆದುಕೊಂಡರು? ಅದರ ಬಿಲ್‌ಗಳು ಎಲ್ಲಿವೆ? ಅದನ್ನು ಯಾಕೆ ಲೆಕ್ಕಪತ್ರದಲ್ಲಿ ತೋರಿಸಿಲ್ಲ? ಇವರು ಸುಳ್ಳು ಲೆಕ್ಕ ತೋರಿಸಿರುವುದು ಯಾಕೆ? ಪ್ರಶ್ನೆಯಾಗಿಯೇ ಉಳಿದುಕೊಂಡಿವೆ.
ನಂತರದ ದಿನಗಳಲ್ಲಿ ಸಂಜಯ್ ಗರ್ಗ್‌ನಿಂದ ಅಧಿಕಾರ ವಹಿಸಿಕೊಂಡ ಮಹಾವೀರ್ ಗುಪ್ತಾರವರು ಸಹ . ಇದರ ಬಗ್ಗೆ ಗಮನಹರಿಸದೆ ಹಳೆ ಲೆಕ್ಕವನ್ನೇ ಮುಂದುವರೆಸಿಕೊಂಡು ಹೋಗಿದ್ದಾರೆ. ಆ ಮೂಲಕ ಕೋಟ್ಯಾಂತರ ರೂಪಾಯಿ ವಂಚನೆಗೆ ಸಹಕಾರ ನೀಡಿದ್ದಾರೆ ಎಂದು ಆತ್ಮಾರಾಮ್ ಮತ್ತು ಪ್ರಶಾಂತ್ ಗೋಯೆಂಕಾ ರವರು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ತಿಳಿಸಿದರು.
