ಜಾರಿ ನಿರ್ದೇಶನಾಲಯ ಮೇಲ್ಕಂಡ ಮಾಜಿ ಎಂ.ಎಲ್.ಸಿ ಪಿ.ಆರ್. ರಮೇಶ್, ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಇವರ ಪಟ್ಟಾಲಂ ಮೇಲೆ ಕಾನೂನು ರೀತ್ಯಾ ತನಿಖೆ ನಡೆಸಿ / ಕ್ರಮ ಜರುಗಿಸಿ ಸರ್ಕಾರದ ಹಣವನ್ನು ಸಮುದಾಯದ ಬಳಕೆಗೆ ಉಪಯೋಗವಾಗುವಂತೆ ಮಾಡಿ ಅನ್ಯಾಯಕ್ಕೆ, ವಂಚನೆಗೆ, ಶೋಷಣೆಗೆ ಒಳಗಾಗಿರುವ ವಕ್ನಿಕುಲ ಕ್ಷತ್ರಿಯ ಸಮುದಾಯಕ್ಕೆ ನ್ಯಾಯ ನೀಡಬೇಕು

ಕರ್ನಾಟಕ ಸರ್ಕಾರದ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಉಲ್ಲೇಖ 1 ರಿಂದ 3 ರಲ್ಲಿ ತಿಳಿಸಿರುವಂತೆ ಸುಮಾರು 120 ಕೋಟಿ ಅನುದಾನವನ್ನು ಕರ್ನಾಟಕ ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ ವಗ್ನಿಕುಲ ಕ್ಷತ್ರಿಯ ಮತ್ತು ತಿಗಳ ಜಾತಿಗೆ ಸೇರಿದ ಸಮುದಾಯಗಳು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅಂದರೆ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ ಬಡ್ಡಿ ರಹಿತ ಸಾಲ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ಗಂಗಾ ಕಲ್ಯಾಣ ನಿರಾವರಿ ಯೋಜನೆ, ಕಿರು ಸಾಲ ಯೋಜನೆ, ಸ್ವಯಂ ಉದ್ಯೋಗ ವಯಕ್ತಿಕ ಸಾಲ ಯೋಜನೆ, ಚೈತನ್ಯ ಸಹಾಯಧನ ಯೋಜನೆಗಳ ಅಡಿಯಲ್ಲಿ ಬಿಡುಗಡೆಗೊಂಡಂತಹ ಸುಮಾರು 120 ಕೋಟಿಗೂ ಅಧಿಕ ಹಣವನ್ನು ಮಾಜಿ ಕಾಂಗ್ರೆಸ್ ಎಂ.ಎಲ್.ಸಿ ಪಿ.ಆರ್. ರಮೇಶ್ ರವರು ವಗ್ನಿಕುಲ ಕ್ಷತ್ರಿಯ ಸಮುದಾಯಕ್ಕೆ ಯಾವುದೇ ಒಂದು ಶಾಲಾ ಕಾಲೇಜುಗಳಾಗಲಿ, ಸಮುದಾಯಭವನಗಳಾನ್ನಾಗಲೀ ನಿರ್ಮಿಸದೆ ತನ್ನದೇ ಆದ ಕಾಂಗ್ರೆಸ್ ಕಾರ್ಯಕರ್ತರ ಪಟ್ಟಾಲಂ ಕಟ್ಟಿಕೊಂಡು ಹಲವಾರು ವಗ್ನಿಕುಲ ಕ್ಷತ್ರಿಯ ಜಾತಿ ಹಾಗೂ ತಿಗಳ ಜಾತಿಯ ನಕಲಿ ಸಂಘ-ಸಂಸ್ಥೆಗಳ ಹಾಗೂ ನಕಲಿ ಖಾತೆಗಳನ್ನು ಹಾಗೂ ನಕಲಿ ಫಲಾನುಭವಿಗಳನ್ನು ಬಳಸಿಕೊಂಡು ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಹಾಗೂ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರಮುಖವಾಗಿ ಕಾಂಗ್ರೆಸ್ ಮುಖಂಡರುಗಳ ಖಾತೆಗಳಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವ ನಾಯಕರ ಖಾತೆಗಳಿಗೆ ಕೋಟ್ಯಾಂತರ ಹಣವನ್ನು ವರ್ಗಾಯಿಸಿಕೊಂಡು ಭ್ರಷ್ಟಚಾರವೆಸಗಿರುತ್ತಾರೆ.

ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರ 2013 -14 ರ ಅವಧಿಯಲ್ಲಿ ಸುಮಾರು 85,00,00,000/- ಗಳ ಅನುದಾನವನ್ನು ಸರ್ಕಾರದಿಂದ ಬಿಡುಗಡೆಗೊಳಿಸಿರುತ್ತಾರೆ. ಈ ಕುರಿತು ಈಗಾಗಲೇ ದಿನಾಂಕ:16-09-2022 ರಂದು ಲೋಕಾಯುಕ್ತದಲ್ಲಿ ಕೇಸ್ ಸಂಖ್ಯೆ COMPT/LOK/BCD/3553/2022 ರಂತೆ ಪ್ರಕರಣ ದಾಖಲಾಗಿರುತ್ತದೆ. ಸದರಿ ಭ್ರಷ್ಟಚಾರದಲ್ಲಿ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯಲ್ಲಿ ವಾಸಿಸುತ್ತಿರುವ ಸುಮಾರು 2 ರಿಂದ 3 ಲಕ್ಷ ಜನಸಂಖ್ಯೆ ಹೊಂದಿರುವ ತಿಗಳ ಜನಾಂಗದವರು ತಿಗಳ ಜಾತಿಯ ನಾಯಕರಾದ ಮಾಜಿ ಎಂ.ಎಲ್.ಎ ನೆ.ಲ. ನರೇಂದ್ರಬಾಬುರವರ ನಾಯಕತ್ವದಲ್ಲಿ ತುಮಕೂರು, ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಕೆಲವು ಶಾಲಾ ಕಾಲೇಜು ಮತ್ತು ಸಮುದಾಯ ಭವನಗಳನ್ನು ನಿರ್ಮಾಣ ಮಾಡಿಕೊಂಡಿರುತ್ತಾರೆ.

ಆದರೆ, ಕರ್ನಾಟಕ ರಾಜ್ಯದಲ್ಲಿ 12 ಜಿಲ್ಲೆಗಳಲ್ಲಿ ವಾಸಿಸುತ್ತಿರುವ 30 ಲಕ್ಷಕ್ಕೂ ಅಧಿಕ ಜನಸಂಖ್ಯೆವುಳ್ಳ ವಗ್ನಿಕುಲ ಕ್ಷತ್ರಿಯ ಜಾತಿಗೆ ಯಾವುದೇ ರೀತಿಯ ಶಾಲಾ-ಕಾಲೇಜುಗಳಾಗಲಿ, ಸಮುದಾಯ ಭವನಗಳನ್ನಾಗಲೀ ನಿರ್ಮಾಣ ಮಾಡದೇ ವಗ್ನಿಕುಲ ಕ್ಷತ್ರಿಯ ನಾಯಕ ಎಂದು ಬಿಂಬಿಸಿಕೊಂಡಂತಹ ಮಾಜಿ ಕಾಂಗ್ರೆಸ್ ಎಂ.ಎಲ್.ಸಿ ಪಿ.ಆರ್.ರಮೇಶ್ ರವರು ಭ್ರಷ್ಟಚಾರದಲ್ಲಿ ತೊಡಗಿದ್ದು ವಗ್ನಿಕುಲ ಕ್ಷತ್ರಿಯ ಸಮಾಜ ಇಂದು ಶೋಷಣೆಗೆ ಒಳಗಾಗಿದೆ.

ಆದ್ದರಿಂದ, ಮಾನ್ಯ ಜಾರಿ ನಿರ್ದೇಶನಾಲಯ ಮೇಲ್ಕಂಡ ಮಾಜಿ ಎಂ.ಎಲ್.ಸಿ ಪಿ.ಆರ್. ರಮೇಶ್, ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಇವರ ಪಟ್ಟಾಲಂ ಮೇಲೆ ಕಾನೂನು ರೀತ್ಯಾ ತನಿಖೆ ನಡೆಸಿ / ಕ್ರಮ ಜರುಗಿಸಿ ಸರ್ಕಾರದ ಹಣವನ್ನು ಸಮುದಾಯದ ಬಳಕೆಗೆ ಉಪಯೋಗವಾಗುವಂತೆ ಮಾಡಿ ಅನ್ಯಾಯಕ್ಕೆ, ವಂಚನೆಗೆ, ಶೋಷಣೆಗೆ ಒಳಗಾಗಿರುವ ವಕ್ನಿಕುಲ ಕ್ಷತ್ರಿಯ ಸಮುದಾಯಕ್ಕೆ ನ್ಯಾಯ ನೀಡಬೇಕು ಎಂದು ಸಂಘದ ಮುಖಂಡರುಗಳ ಉಪಸ್ಥಿತಿಯಲ್ಲಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅಧ್ಯಕ್ಷರಾದ ವರ್ತೂರು ಜೆ.ಕೆ. ಗಿರೀಶ್ ರವರು  ಕೋರಿದರು.

City Today News 9341997936

Leave a comment

This site uses Akismet to reduce spam. Learn how your comment data is processed.