ಕಿದ್ವಾಯಿ ರಕ್ತನಿಧಿಯಲ್ಲಿ ರಕ್ತದಾನ ದಿನಾಚರಣೆ

ಕಿದ್ವಾಯಿ ರಕ್ತನಿಧಿಯಲ್ಲಿ ರಕ್ತದಾನ ದಿನಾಚರಣೆ

ಬೆಂಗಳೂರು, ಅ.1: ಕಿದ್ವಾಯಿ ಸ್ಮಾರಕ ಆಂಕಾಲಜಿ ಸಂಸ್ಥೆಯ ಕಿದ್ವಾಯಿ ರಕ್ತನಿಧಿಯಲ್ಲಿ ಅಕ್ಟೋಬರ್ 1ರಂದು ರಕ್ತದಾನ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಿದ್ವಾಯಿ ಸ್ಮಾರಕ ಆಂಕಾಲಜಿ ಸಂಸ್ಥೆಯ ಹಿರಿಯ ವೈದ್ಯಾಧಿಕಾರಿ ಡಾ. ಎ.ಎಸ್. ಮಹಾಂತೇಶ್ ಅವರು ಸ್ವತಃ ರಕ್ತದಾನ ಮಾಡುವ ಮೂಲಕ ಸಾರ್ವಜನಿಕರಿಗೆ ಮಾದರಿಯಾದರು.

ದಿನದ ಅಂಗವಾಗಿ ನಡೆದ ರಕ್ತದಾನ ಶಿಬಿರದಲ್ಲಿ ಒಟ್ಟು 48 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ಸಂಗ್ರಹಿಸಲಾದ ರಕ್ತವನ್ನು ಬಡತನ ರೇಖೆಗಿಂತ ಕೆಳಗಿನ (BPL) ವರ್ಗಕ್ಕೆ ಸೇರಿದ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಉಚಿತವಾಗಿ ವಿತರಿಸಲಾಗುವುದು ಎಂದು ತಿಳಿಸಲಾಯಿತು.

ಕ್ಯಾನ್ಸರ್ ರೋಗಿಗಳ ಚಿಕಿತ್ಸೆಯಲ್ಲಿ ರಕ್ತದ ಅಗತ್ಯತೆ ಮಹತ್ವದ್ದಾಗಿದ್ದು, ರಕ್ತದಾನಿಗಳ ಅಮೂಲ್ಯ ಕೊಡುಗೆ ಅಗತ್ಯವಿರುವ ರೋಗಿಗಳಿಗೆ ನೆರವಾಗುವುದರ ಜೊತೆಗೆ ಜೀವ ಉಳಿಸುವ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಸಂಸ್ಥೆ ತಿಳಿಸಿದೆ.

ರಕ್ತದಾನ ಮಾಡಿ, ಜೀವ ಉಳಿಸಿ ಎಂಬ ಸಂದೇಶದೊಂದಿಗೆ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.

City Today News 9341997936

Leave a comment

This site uses Akismet to reduce spam. Learn how your comment data is processed.