ಏರ್‌ಟೆಲ್ ಗ್ರಾಹಕರಿಗೆ ₹30,000ಕ್ಕೂ ಹೆಚ್ಚು ಮೌಲ್ಯದ ರಿವಾರ್ಡ್‌ಗಳ ಕೊಡುಗೆ

ಪ್ರೀಮಿಯಂ ಚಂದಾದಾರಿಕೆ, ಶಾಪಿಂಗ್, ಮನರಂಜನೆ, ಪ್ರಯಾಣ ಮತ್ತು ಆಹಾರ ಸೇವೆಗಳ ಮೇಲೆ ವಿಶೇಷ ಆಫರ್‌ಗಳು

ಬೆಂಗಳೂರು: ಗ್ರಾಹಕರಿಗೆ ಕೇವಲ ದೂರಸಂಪರ್ಕ ಸೇವೆ ಮಾತ್ರವಲ್ಲದೆ, ಹೆಚ್ಚುವರಿ ಪ್ರಯೋಜನಗಳನ್ನು ಒದಗಿಸುವ ಉದ್ದೇಶದಿಂದ ಏರ್‌ಟೆಲ್ ತನ್ನ ‘ಏರ್‌ಟೆಲ್ ಇನ್‌ಸೈಡರ್’ ವೇದಿಕೆಯ ಮೂಲಕ ₹30,000ಕ್ಕೂ ಹೆಚ್ಚು ಮೌಲ್ಯದ ರಿವಾರ್ಡ್‌ಗಳು ಮತ್ತು ವಿಶೇಷ ಕೊಡುಗೆಗಳನ್ನು ಪರಿಚಯಿಸಿದೆ.

ಈ ವೇದಿಕೆಯಲ್ಲಿ ಕಲಿಕೆ, ಶಾಪಿಂಗ್, ಮನರಂಜನೆ, ಆಹಾರ ಮತ್ತು ಆರೋಗ್ಯ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖ ಬ್ರ್ಯಾಂಡ್‌ಗಳ ಆಫರ್‌ಗಳನ್ನು ಒಂದೇ ಸ್ಥಳದಲ್ಲಿ ಪಡೆಯಬಹುದು.

ಡುಯೋಲಿಂಗೋ ಮೂಲಕ 12 ತಿಂಗಳ ಸೂಪರ್ ಚಂದಾದಾರಿಕೆ (₹3,120 ಮೌಲ್ಯ), ಆಯ್ದ ಐಫೋನ್ ಮಾದರಿಗಳ ಖರೀದಿಗೆ ಕ್ರೋಮಾ ಮೂಲಕ ₹23,000ವರೆಗೆ ಉಳಿತಾಯ, ಪಾಕೆಟ್ ಎಫ್‌ಎಂ ಪ್ರೀಮಿಯಂನ ಮೂರು ತಿಂಗಳ ಚಂದಾದಾರಿಕೆ ಹಾಗೂ ಸಿನೆಪೊಲಿಸ್‌ನಲ್ಲಿ ಎರಡು ಸಿನಿಮಾ ಟಿಕೆಟ್ ಖರೀದಿಸಿದರೆ ಒಂದು ಉಚಿತ ಟಿಕೆಟ್ ಪಡೆಯುವ ಅವಕಾಶ ಲಭ್ಯವಿದೆ.

ಇದಲ್ಲದೆ, ಏರ್‌ಟೆಲ್ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ₹1,500 ಅಥವಾ ಅದಕ್ಕಿಂತ ಹೆಚ್ಚಿನ ಆಹಾರ ಮತ್ತು ಪಾನೀಯ ಆರ್ಡರ್‌ಗಳ ಮೇಲೆ ₹300 ರಿಯಾಯಿತಿ ನೀಡಲಾಗುತ್ತದೆ. ಅಪೋಲೋ 24X7 ಮೂಲಕ ಆರು ತಿಂಗಳ ಅಪೋಲೋ ಸರ್ಕಲ್ ಸದಸ್ಯತ್ವವೂ ಈ ಕೊಡುಗೆಗಳಲ್ಲಿದೆ.

ಅರ್ಹ ಏರ್‌ಟೆಲ್ ಮೊಬೈಲ್ ಮತ್ತು ಹೋಮ್ ಸೇವಾ ಗ್ರಾಹಕರು ಏರ್‌ಟೆಲ್ ಆ್ಯಪ್‌ನಲ್ಲಿರುವ ‘ಏರ್‌ಟೆಲ್ ಇನ್‌ಸೈಡರ್’ ವಿಭಾಗಕ್ಕೆ ಭೇಟಿ ನೀಡಿ ಈ ಆಫರ್‌ಗಳನ್ನು ಪಡೆದುಕೊಳ್ಳಬಹುದು. ಪ್ರತಿಯೊಂದು ಕೊಡುಗೆಯೂ ತನ್ನದೇ ಆದ ನಿಯಮಗಳು ಮತ್ತು ಅರ್ಹತಾ ಮಾನದಂಡಗಳಿಗೆ ಒಳಪಟ್ಟಿರುತ್ತದೆ.

ಈ ಹಿಂದೆ ಲಿಂಕ್ಡ್‌ಇನ್ ಪ್ರೀಮಿಯಂ, ಈಸಿಡೈನರ್ ಮತ್ತು ಮೇಕ್‌ಮೈಟ್ರಿಪ್ ಸೇರಿದಂತೆ ಹಲವು ಬ್ರ್ಯಾಂಡ್‌ಗಳೊಂದಿಗೆ ಕೈಜೋಡಿಸಿದ್ದ ಏರ್‌ಟೆಲ್, ಮುಂದಿನ ದಿನಗಳಲ್ಲಿ ಇನ್ನಷ್ಟು ಬ್ರ್ಯಾಂಡ್‌ಗಳು ಮತ್ತು ಹೊಸ ಕೊಡುಗೆಗಳನ್ನು ಸೇರ್ಪಡೆಗೊಳಿಸುವ ಉದ್ದೇಶ ಹೊಂದಿದೆ. ಈ ಮೂಲಕ ಗ್ರಾಹಕರ ದೈನಂದಿನ ಖರ್ಚಿಗೆ ಹೆಚ್ಚುವರಿ ಮೌಲ್ಯ ಒದಗಿಸುವ ಪ್ರಯತ್ನವನ್ನು ಮುಂದುವರಿಸಿದೆ.

City Today News 9341997936

Leave a Reply

This site uses Akismet to reduce spam. Learn how your comment data is processed.