ಮುಖ್ಯಮಂತ್ರಿಗಳೇ, ಯಾವ ಶಾಸಕರಿಗೂ ಇಲ್ಲದ ಮಾನದಂಡ ಮಾನ್ಯ ಶ್ರೀ . ಮಹೇಶ್ ಕುಮಟಳ್ಳಿ ರವರಿಗೆ ಏಕೆ?

ಮಾನ್ಯ ಮುಖ್ಯಮಂತ್ರಿಗಳೇ, ಯಾವ ಶಾಸಕರಿಗೂ ಇಲ್ಲದ ಮಾನದಂಡ ಮಾನ್ಯ ಶ್ರೀ . ಮಹೇಶ್ ಕುಮಟಳ್ಳಿ ರವರಿಗೆ ಏಕೆ , ತಾವು ಅಧಿಕಾರಕ್ಕೆ ಬರಲು ಕ್ಷೇತ್ರದ ಜನತೆ ಹಾಗೂ ರಾಜ್ಯದ ಜನತೆ ತಮ್ಮ ಮಾತೃ ಪಕ್ಷದ ಆರೋಪಗಳನ್ನು ಸಹಿಸಿಕೊಂಡು ತಮ್ಮನ್ನು ತೊಡಗಿಸಿಕೊಂಡಿರುವಂತಹ ಒಬ್ಬ ನಿಷ್ಠಾವಂತ ದೀಮಂತ ನಾಯಕರನ್ನು ತಮ್ಮ ಸಚಿವ ಸಂಪುಟದಿಂದ ಹೊರಗಿಟ್ಟ ಮರ್ಮವೇನೂ ಗೆದ್ದ 11 ಶಾಸಕರಿಗೆ ಸಚಿವ ಸ್ಥಾನ ಪೊಡುವುದಾಗಿ ತಾವೇ ಈ ಹಿಂದೆ ಪತ್ರಿಕಾ ಮಾಧ್ಯಮ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಬಹಿರಂಗ ಪಡಿಸಿದ್ದು ಆದರೆ ತಾವು ತಮ್ಮ ನಿರ್ಧಾರವನ್ನು ಬದಲಾಯಿಸಿದ ಹಿಂದಿನ ಶಕ್ತಿಯಾವುದು . ಮುಖ್ಯಮಂತ್ರಿಗಳೇ ನಮ್ಮ ಸಮಾಜವನ್ನು ಇಷ್ಟೊಂದು ನಿಕೃಷ್ಟತೆಯಿಂದ ಕಾಣಬೇಡಿ . ನಮ್ಮ ಪಂಚಸಾಲಿ ಸಮಾಜದಲ್ಲಿಯು ಸಹ ಮುಖ್ಯಮಂತ್ರಿ ಸ್ಥಾನಕ್ಕೆ ಏರುವಂತಹ ಅರ್ಹ ನಾಯಕರಿದ್ದಾರೆ . ಆದರೆ ಲಿಂಗಾಯಿತ ಸಮಾಜದಲ್ಲಿ ಬೃಹತ್ ಆಕಾರವಾಗಿ ಬೆಳೆದ ತಮ್ಮನ್ನು ಹಿಂದಿಕ್ಕಬಾರದೆಂಬ ಉದ್ದೇಶದಿಂದ ನಾವುಗಳು ತಮ್ಮ ಕೈಬಲ ಪಡಿಸಲು ಸಹಕರಿಸಿದ್ದು , ಆದರೆ ತಾವುಗಳು ನಮ್ಮ ನಾಯಕರು ಬೆಳಕಿಗೆ ಬರದಂತೆ ವ್ಯವಸ್ಥಿತವಾಗಿ ನೋಡಿಕೊಳ್ಳುತ್ತಿದ್ದೀರಿ ಇದೇ ಪ್ರವೃತ್ತಿ ಮುಂದುವರೆದಲ್ಲಿ ಹಿಂದಿನ ಎಲ್ಲಾ ಕಟ್ಟುಪಾಡುಗಳನ್ನು ಮುರಿದು ನಮ್ಮ ಸಮಾಜದ ಶಕ್ತಿಯನ್ನು ತಮಗೆ ತೋರಿಸಲು ಸಹ ಯೋಚಿಸುವುದಿಲ್ಲ . ಮಾನ್ಯ ಮುಖ್ಯಮಂತ್ರಿಗಳು ಕೊಟ್ಟ ಮಾತಿಗೆ ತಪ್ಪುವುದಿಲ್ಲವೆಂಬ ಮಾತು ಸುಳ್ಳಾಗದಂತೆ ತಾವು ನಡೆದುಕೊಳ್ಳಬೇಕು ಶ್ರೀ . ಮಹೇಶ್‌ ಕುಮಟಳ್ಳಿರವರಿಗೆ ಸಚಿವ ಸ್ಥಾನ ನೀಡುವುದರೊಂದಿಗೆ ಇನ್ನೆರಡು ಸಚಿವ ಸ್ಥಾನವನ್ನು ಸಮಾಜಕ್ಕೆ ನೀಡಿ ಪಂಚಮಸಾಲಿ ಸಮಾಜ ತಮ್ಮ ಮೇಲೆ ಇರಿಸಿದಂತಹ ನಂಬಿಕೆ ವಿಶ್ವಾಸವನ್ನು ಉಳಿಸಿಕೊಳ್ಳಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ .

ಬಸವರಾಜ ದಿಂಡೂರ

ಸಿದ್ದೇಶ ಹನಸಿ

-ಮಲ್ಲಣ್ಣ ಬೊಮ್ಮಸಾಗರ

City Today News

(citytoday.media)

9341997936

ಅಲಹಾಬಾದ್ ಬ್ಯಾಂಕಿನ ಡಿ. ಜಿ. ಎಮ್. ಆರ್ಮುಗಮ್ ಹಾಗೂ ಬ್ರಾಂಚ್ ವ್ಯವಸ್ಥಾಪಕ ಕುಮಾರ್ ತಮ್ಮ ಕೀಳರಿಮೆಯನ್ನು ಮೆರೆದಿದ್ದಾರೆ

2009 ರಿಂದ ಖಾಸಗಿ ಕಂಪನಿಯೊಂದು ತನ್ನ ವ್ಯವಹಾರವನ್ನು ಅಲಹಾಬಾದ್ ಬ್ಯಾಂಕ್ ಎಚ್. ಎಸ್. ಆರ್. ಬಡಾವಣೆಯಲ್ಲಿ ನಡೆಸುತ್ತಿದ್ದು ಇತ್ತೀಚೆಗೆ ವ್ಯಾಪಾರದಲ್ಲಿ ಅನಿರೀಕ್ಷಿತ ಘಟನೆಯಿಂದ ತುಂಬಲಾರದ ನಷ್ಟವನ್ನು ಅನುಭವಿಸಿ ಎನ್. ಪಿ. ಎ ಪಟ್ಟ ಧರಿಸಿ ಅದರಿಂದ ಹೊರ ಬರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವದಕ್ಕೆ ಬ್ಯಾಂಕು ಸಹಕರಿಸದೆ ಕಾನೂನು ಬಾಹಿರವಾಗಿ ಇದೇ ಕಂಪನಿಯ ವ್ಯವಸ್ಥಾಪಕರ ಗೋಲ್ಡ್ ಲೋನಿಗೆ ಕಂಪನಿ ಖಾತೆಯಿಂದ ಹಣ ವರ್ಗಾಯಿಸಿ ತನ್ನಅಟ್ಟಹಾಸವನ್ನು ಮೆರೆದಿದೆ. ವಿಚಾರಿಸಲು ಹೋದ ಕಂಪನಿ ಮುಖ್ಯಸ್ಥ ರೊಂದಿಗೆ ಅಸಭ್ಯವಾಗಿ ವರ್ತಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬ್ಯಾಂಕಿನ ಡಿ. ಜಿ. ಎಮ್. ಆರ್ಮುಗಮ್ ಹಾಗೂ ಬ್ರಾಂಚ್ ವ್ಯವಸ್ಥಾಪಕ ಕುಮಾರ್ ತಮ್ಮ ಕೀಳರಿಮೆಯನ್ನು ಮೆರೆದಿದ್ದಾರೆ. ಆದಾಯ ತೆರಿಗೆ ಖಾತೆಯಿಂದ ಟಿ. ಡಿ. ಎಸ್ ಹಣ ಸಂದಾಯವಾದ ಕ್ಷಣಾರ್ಧದಲ್ಲಿ ಹಣವನ್ನು ಗೋಲ್ಡ್ ಲೋನಿಗೆ ವರ್ಗಾಯಿಸಿದ್ದಾರೆ. ಖಾತೆದಾರರಿಗೆ ಯಾವುದೇ ವಿಷಯವನ್ನು ತಿಳಿಸಿಲ್ಲ. ವಿಚಾರಿಸಲು ಹೋದಾಗ ಹೀಗೆ ಮಾಡಲು ನಮಗೆ ಡಿ. ಜಿ. ಎಮ್ ನಿರ್ದೇಶಿಸಿದ್ದಾರೆ, ಈಗ ಎನೂ ಮಾಡಲು ಆಗುವುದಿಲ್ಲ, ನೀವು ಏನಾದರೂ ಮಾಡಿಕೊಳ್ಳಿ ಎಂದು ಅಸಡ್ಡೆ ಯಿಂದ ಉತ್ತರಿಸಿದ್ದಾರೆ. ನೊಂದ ಖಾತೆದಾರ ವಿಧಿ ಇಲ್ಲದೆ  ಹಿಂದಿರುಗಿ ಸಾರ್ವಜನಿಕವಾಗಿ ಖಂಡಿಸುವ ಪ್ರಯತ್ನದಲ್ಲಿ ಮಾಧ್ಯಮದ ಮೊರೆ ಹೋಗಿದ್ದಾರೆ. ಸಂಬಂಧ ಪಟ್ಟ ಉಚ್ಚ ಸಂಸ್ಥೆ ಆರ್. ಬಿ. ಐ, ಕೇಂದ್ರೀಯ ವಿತ್ತ ಸಚಿವಾಲಯ ಇತ್ತ ಕಡೆ ಗಮನ ಹರಿಸಿ, ಕಾಲಾವಕಾಶವನ್ನು ನೀಡಿ ಸ್ವಸ್ಥ ಮನಸ್ಸಿನಿಂದ ವ್ಯವಹಾರ ಮುಂದುವರಿಸಲು, ಸಾಲ ಮರುಪಾವತಿಸಲು ಅನುವು ಮಾಡಿಕೊಡಬೇಕಾಗಿ ಹಾಗೂ ಈ ರೀತಿ ಪ್ರಸಂಗಗಳು ಮರುಕಳಿಸದಂತೆ ಬ್ಯಾಂಕಿಗೆ ಎಚ್ಚರಿಕೆ ನೀಡಲು ಕೋರಲಾಗಿದೆ.

City Today News

(citytoday.media)

9341997936

ಕನ್ನಡಿಗರ ಉದ್ಯೋಗಕ್ಕಾಗಿ ಮಾಡುತ್ತಿರುವ ಹೋರಾಟ 93ನೇ ದಿನ ಪೂರೈಸಿದ್ದು , ದಿನಾಂಕ : 13 – 02 – 2020ಕ್ಕೆ ಅಖಂಡ ಕರ್ನಾಟಕ ಬಂದ್

ಈಗಾಗಲೇ ಕರ್ನಾಟಕ ಸಂಘಟನೆಗಳ ಒಕ್ಕೂಟವು ಕನ್ನಡಿಗರ ಸಾರಥ್ಯದಲ್ಲಿ ನೂರಾರು ಸಂಘಟನೆಗಳ ನೇತೃತ್ವದಲ್ಲಿ ಸುಮಾರು 93 ದಿನಗಳಿಂದ ಕನ್ನಡಿಗರ ಉದ್ಯೋಗಕ್ಕಾಗಿ ಮಾಡುತ್ತಿರುವ ಹೋರಾಟಕ್ಕೆ ಇಲ್ಲಿಯವರೆಗೆ ಪೇಜಾವರ ಶ್ರೀಗಳು ಸೇರಿದಂತೆ ರಾಜ್ಯದ 40ಕ್ಕೂ ಹೆಚ್ಚು ಮಠಾಧೀಶರುಗಳು ಸದುಶರಣರು ಮತ್ತು ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಮುಖಂಡರುಗಳು ಮತ್ತು ಸಂಘಟನೆಗಳ ಮುಖಂಡರು , ಸಾಹಿತಿಗಳು , ಚಿಂತಕರು , ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು , ಕರ್ನಾಟಕ ಸಾಹಿತ್ಯ ಪರಿಷತ್‌ನ ಸಾಕಷ್ಟು ಮುಖಂಡರುಗಳು ಅಲ್ಲದೆ ದಲಿತ ಸಂಘಟನೆಗಳು , ಕನ್ನಡಪರ ಸಂಘಟನೆಗಳು , ಮಹಿಳಾಪರ ಸಂಘಟನೆಗಳು , ಹಲವಾರು ಒಕ್ಕೂಟಗಳ ಕನ್ನಡ ಪರ ಹೋರಾಟಗಾರರು ಈ ಹೋರಾಟಕ್ಕೆ ಬಂದು ಬೆಂಬಲ ನೀಡಿರುವುದನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ . – ಈಗಾಗಲೇ ನಾವು ಮಾಡುತ್ತಿರುವ ಹೋರಾಟದ ಸ್ಥಳಕ್ಕೆ ಆಗಮಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವರು , ಕಾರ್ಮಿಕ ಸಚಿವರು , ಮತ್ತು ಉಪ ಮುಖ್ಯಮಂತ್ರಿಗಳು , ನಮ್ಮ ಧರಣಿಯ ಸ್ಥಳಕ್ಕೆ ಬಂದು ನಮ್ಮ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ಕೊಟ್ಟರೂ ಸಹಾ ಯಾವುದೇ ಸಮಯವನ್ನು ನಿಗದಿ ಮಾಡಲಿಲ್ಲ ಆದ್ದರಿಂದ ಈ ರಾಜ್ಯದ ಮುಖ್ಯಮಂತ್ರಿಗಳು ನಮ್ಮನ್ನು ಕರೆದು ನಿಮ್ಮ ಬೇಡಿಕೆ ನ್ಯಾಯಬದ್ಧವಾಗಿದೆ ನಾನೂ ಕೂಡ ಕನ್ನಡಿಗ ಎಂಬ ಮಾತನ್ನು ಹೇಳಿ ನಾನು ಕೂಡ ಕನ್ನಡಿಗರಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆಂದು ನಮಗೆ ಭರವಸೆ ನೀಡಿದರೂ ಅವರು ಕೂಡ ಯಾವುದೇ ಸಮಯವನ್ನು ನಿಗದಿ ಮಾಡಲಿಲ್ಲ . ಇದನ್ನು ಗಮನಿಸಿದ ನಾವು ನಿಮ್ಮ ಒಕ್ಕೂಟವು ನೂರಾರು ಸಂಘಟನೆಗಳ ಸೇರಿ ಧರಣಿಯನ್ನು ಮುಂದುವರೆಸುತ್ತಾ ಬಂದಿದ್ದೇವೆ . ಆದರೆ ಸರ್ಕಾರವು ಯಾವುದೇ ಕ್ರಮ ಕೈಗೊಳ್ಳದ ಕಾರಣ ನಾವು ನಮ್ಮ ಹಕ್ಕನ್ನು ಧರಣಿ ಮಾಡುವುದರಿಂದ ತುಂಬಾ ನಿಧಾನವಾಗುತ್ತದೆ ಎಂದು ಗಮನಿಸಿ , ಈಗಾಗಲೇ ಸರೋಜಿನಿ ಮಹಿಷಿ ವರದಿಯ ಹೋರಾಟಕ್ಕೆ 36ವರ್ಷಗಳು ಕಳೆದಿರುವುದು ನಿಮ್ಮ ಗಮನಕ್ಕೆ ತರಲು ಬಯಸಿದ್ದೇವೆ . ಇದನ್ನೆಲ್ಲಾ ಗಮನಿಸಿ , “ ಕರ್ನಾಟಕ ಬಂದ್ ‘ ಗೆ ಕರೆ ಕೊಟ್ಟಿದ್ದು , ಇದು ಕನ್ನಡಿಗರ ಉದ್ಯೋಗಕ್ಕಾಗಿ ಬಂದ್ ಮಾಡಲೇ ಬೇಕಾದ ಪರಿಸ್ಥಿತಿ ಬಂದಿದೆ . ಇನ್ನೂ ಕೂಡ ನಾವು ಕನ್ನಡಿಗರು ಸುಮ್ಮನೆ ಇದ್ದರೆ ನಮ್ಮ ಕನ್ನಡದ ಮಕ್ಕಳು ಪರಭಾಷಿಕರ ಮುಂದೆ ಕೈಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿ ಬರುವುದು ಖಂಡಿತ . ಇದನ್ನೆಲ್ಲಾ ಗಮನಿಸಿ ನಾವು ಕನ್ನಡಿಗರ ಸಾರಥ್ಯದಲ್ಲಿ ಕರ್ನಾಟಕ ಎಲ್ಲಾ ರೀತಿಯ ಸುಮಾರು 400 ಸಂಘಟೆಗಳ ಸಾರಥ್ಯದಲ್ಲಿ ಪ್ರಮುಖ ಪಾತ್ರ ಮತ್ತು ನಿಮ್ಮೆಲ್ಲರ ಬೆಂಬಲದಿಂದ ಕರ್ನಾಟಕ ಮಕ್ಕಳಿಗೆ ಉದ್ಯೋಗ ಕೊಡಿಸುವಲ್ಲಿ ಪ್ರಮುಖ ಪಾತ್ರವಹಿಸಿ ನಿರುದ್ಯೋಗಿ ಮಕ್ಕಳ ಭವಿಷ್ಯಕ್ಕೆ ಅನುಕೂಲ ಆಗುವ ನಿಟ್ಟಿನಲ್ಲಿ ನಮ್ಮೊಂದಿಗೆ ನೀವು ಇರುವಿರಿ ಎಂದು ನಂಬಿ ಫೆಬ್ರವರಿ – 13 ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿರುತ್ತೇವೆ . ಮತ್ತೊಂದು ಗಂಭೀರ ವಿಷಯ ಏನೆಂದರೆ ಶೀಘ್ರದಲ್ಲೇ ಮಹಾದಾಯಿ ಯೋಜನೆ ಜಾರಿ ಮಾಡಬೇಕೆಂದು ಅದೇ ರೀತಿ ಮೇಕೆದಾಟು ಯೋಜನೆ ಶೀಘ್ರದಲ್ಲೇ ಪ್ರಾರಂಭ ಮಾಡಬೇಕೆಂದು ಆಗ್ರಹವನ್ನು ಮಾಡುತ್ತಾ ಅಖಂಡ ಕರ್ನಾಟಕ ಬಂದ್‌ಗೆ ಸಹಕರೆ ನೀಡಿ ಸರ್ಕಾರದ ಗಮನ ಸೆಳೆಯುವುದರಲ್ಲಿ ಪ್ರಮುಖ ಪಾತ್ರ ನೀಡಬೇಕಾಗಿ ವಿನಮ್ರ ಮನವಿ .

– ಕನ್ನಡ ಚಳುವಳಿ ನಾಗೇಶ್

ಅಧ್ಯಕ್ಷರು – ಕರ್ನಾಟಕ ಸಂಘಟನೆಗಳ ಒಕ್ಕೂಟ

City Today News

(citytoday.media)

9341997936

GAIL (INDIA) LIMITED AND GAIL GAS LIMITED USHER PEOPLE OF INDIA TOWARDS A BETTER FUTURE WITH PCRA SAKSHAM WALKATHON INITIATIVE

Bangalore, February 07, 2020: In its attempt to spread awareness around extensive fuel and energy consumption due to rapidly increasing industrialization, the Petroleum Conservation Research Association (PCRA) announced the launch of Saksham Walkathon initiative in Bengaluru today.

The Saksham Walkathon is an awareness drive in association with GAIL (India) Limited and GAIL Gas Limited, to emphasize the need to cultivate the habit of walking for better individual health while also contributing towards greener environment, water and fuel conservation. The walkathon will start in the city on 9th of February 2020 from Sahakar Nagar.

Air pollution in India is a severe issue with vehicle emissions being a catalyst by contributing 27% of the overall pollution caused and leads to premature deaths of 2 million Indians every year due to hazardous air quality. In Bangalore alone, nearly 50% of children suffer from asthma and calls for immediate action by people to reduce traffic congestion. Congestion of traffic is one of most prevailing causes for increased pollution as it slows down average vehicle speed and increases inefficient fuel burning. Increased number of vehicles has led to a staggering increase in traffic congestion and hence residents of the city must cut down the usage of vehicles and utilize sustainable modes for everyday commute.
With the prime motto to promote walking as a medium for the conservation of natural resources, the drive aims to engage with people across India and instill socio-environmental consciousness in each individual and society at large.

Speaking at the inaugural ceremony of the initiative, Shri Vivek Wathodkar, Chief General Manager, GAIL Gas Limited, said “We are extremely delighted to be a part of Saksham Walkathon as it is a highly significant initiative by PCRA, in the era of evolving industrialization. GAIL Limited has been known in the country for not just delivering the best but also taking responsibility for sustainable growth for the masses. With this initiative we aim to bring more and more people under the umbrella of healthy and responsible lifestyle. We need people to come together with their family and friends and join us in our drive to lay the groundwork for a healthier life in turn building a stronger nation.”
Prior to this, PCRA recently organized a mega awareness cyclothon in 200 cities across the country to play a proactive role in fuel conservation and populate good health among people which in turn will also help in the reduction of India’s consumption of crude oil.

City Today News

(citytoday.media)

9341997936

ಲಾಭದಾಯಕತೆಯನ್ನು ಪ್ರಕಟಿಸಿದ ಟ್ರ್ಯೂಕಾಲರ್ ಜಾಗತಿಕವಾಗಿ 200 ದಶಲಕ್ಷ ಮಾಸಿಕ ಸಕ್ರಿಯ ಉಪಯೋಗಿಗಳ ಸಂಖ್ಯೆಯನ್ನು ದಾಟಿದೆ

ಬೆಂಗಳೂರು, ಫೆಬ್ರವರಿ 2020 : – ಕಳೆದ ನಾಲ್ಕು ತಿಂಗಳಲ್ಲಿ ಕಾಲರ್ ಲಾಭದಾಯಕತೆಯನ್ನು ಸಾಧಿಸಿದೆ ಎಂದು ಸಂಸ್ಥೆ ಪ್ರಕಟಿಸಿದೆ . ಜೊತೆಗೆ ಜಗತ್ತಿನ ಎಲ್ಲೆಡೆ 200 ದಶಲಕ್ಷ ಮಾಸಿಕ ಸಕ್ರಿಯ ಬಳಕೆದಾರರ ಪ್ರಮುಖ ಮೈಲುಗಲ್ಲನ್ನು ಕಂಪನಿ ದಾಟಿದೆ . ಟ್ರ್ಯೂಕಾಲರ್ ಭಾರತದಲ್ಲಿ ಅತ್ಯಂತ ದೊಡ್ಡ ಗ್ರಾಹಕರ ವೇದಿಕೆಗಳಲ್ಲಿ ಒಂದಾಗಿದ್ದು , ಅತ್ಯಂತ ಕ್ಷಿಪ್ರಗತಿಯಲ್ಲಿ ವಿಸ್ತರಿಸುವುದರೊಂದಿಗೆ ಈ ದೇಶ ಬ್ರಾಂಡ್ಗೆ ಸ್ಪಷ್ಟವಾಗಿ ತನ್ನ ಸ್ವಂತ ಮನೆಯಂತಹ ಮಾರುಕಟ್ಟೆಯಾಗಿದೆ . ಜಾಹೀರಾತು ಮಾರಾಟಗಳು ಮತ್ತು ಪ್ರಮುಖ ಚಂದಾದಾರಿಕೆಗಳಲ್ಲಿ ಆಕ್ರಮಣಕಾರಿ ಬೆಳವಣಿಗೆ ಭಾರತದಲ್ಲಿ ಕಂಡುಬಂದಿರುವುದು ಈ ಆದಾಯ ಸೃಷ್ಟಿಗೆ ಚಾಲನಾ ಶಕ್ತಿಯಾಗಿದೆ . ಒಂದು ವರ್ಷದ ಹಿಂದೆ ಅದು ಆರಂಭವಾದಾಗಿನಿಂದ ಪ್ರೀಮಿಯರ್ ಚಂದಾದಾರಿಕೆಗಳು ಅಪಾರವಾಗಿ ಬೆಳೆದಿವೆ . ಇದು ಒಂದು ದಶಲಕ್ಷ ಸಂಖ್ಯೆಯನ್ನು ಈಗಾಗಲೇ ದಾಟಿದ್ದು , ಮುಂಬರುವ ತಿಂಗಳುಗಳಲ್ಲಿ ಶೇ . 50ರಷ್ಟು ಬೆಳೆಯುವ ಅಂದಾಜಿದೆ . ಇದು ಟ್ರ್ಯೂಕಾಲರ್ ಕಾಲರ್‌ಗೆ ಗಮನಾರ್ಹ ಸಾಧನೆಯಾಗಿದೆ . ಟ್ರ್ಯೂಕಾಲರ್ ಕಾಲರ್ ಈಗ ಇನ್‌ಸ್ಟೆಂಟ್ ಮೆಸೇಜಿಂಗ್ , ವಿಒಐಪಿ ಮತ್ತು ಫಿನ್ ಟೆಕ್ ಉತ್ಪನ್ನಗಳಾದ ಯುಪಿಐ ಹಣ ವರ್ಗಾವಣೆ , ಭಾರತ್ ಬಿಲ್ ಪಾವತಿ ವ್ಯವಸ್ಥೆ ಮತ್ತು ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಆರಂಭವಾಗುವ ನಿರೀಕ್ಷೆ ಇರುವ ಡಿಜಿಟಲ್ ಹಣ ಸಾಲ ಮುಂತಾದ ವಿಸ್ತಾರವಾದ ಸೇವೆಗಳೆಲ್ಲವನ್ನು ಒಂದೇ ಕಡೆ ನೀಡುವಂತಹ ಸಂವಹನ ವೇದಿಕೆಯಾಗಿ ಹೊರಹೊಮ್ಮುತ್ತಿದೆ .

ಟ್ರ್ಯೂಕಾಲರ್ ಕಾಲರ್‌ನ ವ್ಯವಸ್ಥಾಪಕ ನಿರ್ದೇಶಕರಾದ ಸಂದೀಪ್ ಪಾಟೀಲ್ ಅವರು ಈ ಸಂದರ್ಭದಲ್ಲಿ ತಮ್ಮ ಚಿಂತನೆಗಳನ್ನು ಹಂಚಿಕೊಂಡು ಮಾತನಾಡಿ , ‘ ‘ ವಾರ್ಷಿಕವಾಗಿ ಶೇ . 70 ಕ್ಕೂ ಹೆಚ್ಚಿನ ಬೆಳವಣಿಗೆಯೊಂದಿಗೆ ಕಳೆದ ಹಲವು ತಿಂಗಳುಗಳಲ್ಲಿ ನಾವು ಲಾಭದಾಯಕವಾಗಿರುವುದರ ಬಗ್ಗೆ ನಾವು ರೋಮಾಂಚಿತರಾಗಿರುವುದಲ್ಲದೇ ಇದನ್ನು ವಿನಮ್ರತೆಯಿಂದ ಸ್ವೀಕರಿಸುತ್ತೇವೆ . ನಮ್ಮ ಬಳಕೆದಾರರು ನಮಲ್ಲಿ ಇಟ್ಟಿರುವ ನಂಬಿಕೆಗೆ ಮತ್ತು ನಮ್ಮ ಆದಾಯ ವ್ಯವಹಾರಗಳಿಗೆ ಈ ಸಾಧನೆ ಸಾಕ್ಷಿಯಾಗಿದೆ . ಜಾಹೀರಾತು , ಚಂದಾದಾರಿಕೆಗಳು , ಸಾಲ ಮತ್ತು ಹಣ ಕಾಸು ಸೇವೆಗಳ ಮೂಲಕ ಆದಾಯ ಬೆಳೆಸುವುದನ್ನು ನಾವು ಮುಂದುವರೆಸುವೆವು . ತಂತ್ರಜ್ಞಾನ , ಉತ್ಪನ್ನ ನಿರ್ವಹಣೆ , ಡಾಟಾ ವಿಜ್ಞಾನಗಳು ಮತ್ತು ಹಣಕಾಸು ಕ್ಷೇತ್ರಗಳಲ್ಲಿ ಪ್ರತಿಭೆಗಳನ್ನು ನೇಮಿಸಿಕೊಳ್ಳುವುದರ ಮೂಲಕ ಮತ್ತು ವ್ಯವಸ್ಥೆಯಲ್ಲಿ ಪಾಲುದಾರಿಕೆಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದರ ಮೂಲಕ ಭಾರತಕ್ಕಾಗಿ ಮೇಕ್ ಇನ್ ಇಂಡಿಯಾ ಕೈಗೊಳ್ಳಲಿದ್ದೇವೆ . ಮೂರು ವರ್ಷಗಳಲ್ಲಿ ಷೇರುಗಳ ಮೊದಲ ಸಾರ್ವಜನಿಕ ಕೊಡುಗೆ ಐಪಿಒ ) ಗೆ ಸಿದ್ಧವಾಗಲಿರುವ ಆರ್ಥಿಕವಾಗಿ ಸುಸ್ಥಿರ ಹಾಗೂ ಸ್ವತಂತ್ರ ಕಂಪನಿಯನ್ನು ನಿರ್ಮಿಸಲು ನಮ್ಮ ಮಾರ್ಗದಲ್ಲಿ ಇದು ದೃಢವಾದ ಮೈಲುಗಲ್ಲಾಗಿದೆ ‘ ಎಂದರು . ಟ್ರ್ಯೂಕಾಲರ್ ಕಾಲರ್ ತನ್ನ ವ್ಯವಹಾರ ಶ್ರೇಣಿಯನ್ನು ವಿಸ್ತರಿಸುತ್ತಿದೆ . ಟ್ರ್ಯೂಕಾಲರ್ ಕಾಲರ್ ಫಾರ್ ಬ್ಯುಸಿನೆಸ್‌ನಂತಹ ಸೇವೆಗಳನ್ನು ನೀಡಲಿದೆ . ಬ್ಲೂವೇಲರ್ ಮೂಲಕ ಹತ್ತಿರದ ಬಳಕೆದಾರರು ಸಣ್ಣ ವ್ಯವಹಾರಗಳನ್ನು ಆವಿಷ್ಕರಿಸಲು ಪ್ರಕ್ರಿಯೆಯನ್ನು ಇದು ಸರಳವಾಗಿಸುತ್ತದೆ . ಟ್ರ್ಯೂವೀಲರ್ ಪ್ರಿಯಾರಿಟಿ ಎಂಬ ಮತ್ತೊಂದು ವೈಶಿಷ್ಟ್ಯ ಉದ್ಯಮಗಳಿಂದ ಪ್ರಸ್ತುತವಾದ ಕರೆಗಳನ್ನು ಗುರುತಿಸುತ್ತದೆ . ಇವುಗಳನ್ನು ಸ್ವಾಮ್ ಕರೆಗಳಿಂದ ಪ್ರತ್ಯೇಕಿಸುತ್ತದೆ .

City Today News

(citytoday.media)

9341997936