ಕಣ್ಮಕೃಷ್ಣರ ಕಾಣೀಕೋತ್ಸವ: ಸಾವನದುರ್ಗದ ಶ್ರೀ ನರಸಿಂಹಸ್ವಾಮಿ ದೇಗುಲಕ್ಕೆ ನವ ನರಸಿಂಹ ವಜ್ರ ಕವಚ ಸಮರ್ಪಣೆ

ಬೆಂಗಳೂರು ದಕ್ಷಿಣ ಜಿಲ್ಲೆ, ಮಾಗಡಿ ತಾಲ್ಲೂಕಿನ ಸಾವನದುರ್ಗದಲ್ಲಿ ಸ್ಥಿತವಾಗಿರುವ ಪುರಾತನ ಹಾಗೂ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇಗುಲದಲ್ಲಿ ಕಣ್ಮಕೃಷ್ಣರ ಕಾಣೀಕೋತ್ಸವದ ಅಂಗವಾಗಿ ಮಹತ್ವದ ಧಾರ್ಮಿಕ ಸಮಾರಂಭವನ್ನು ಆಯೋಜಿಸಲಾಗಿದೆ.

ಈ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ ಶ್ರೀ ನರಸಿಂಹಸ್ವಾಮಿಯ ವಿಗ್ರಹಕ್ಕೆ ನವ ನರಸಿಂಹ ವಜ್ರ ಕವಚವನ್ನು ಸಮರ್ಪಿಸಲಾಗುತ್ತದೆ. ಈ ದಿವ್ಯ ಸಮರ್ಪಣಾ ಕಾರ್ಯಕ್ರಮವು ಜನವರಿ 28, 2026ರಂದು ಬೆಳಗ್ಗೆ 9.45 ರಿಂದ 10.30ರೊಳಗೆ ದೇವರ ಸನ್ನಿಧಿಯಲ್ಲಿ ನೆರವೇರಲಿದೆ.

ಭಕ್ತರು, ಗಣ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಪುಣ್ಯ ಕಾರ್ಯಕ್ಕೆ ಸಾಕ್ಷಿಗಳಾಗಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

ಈ ಧಾರ್ಮಿಕ ಕಾರ್ಯಕ್ರಮವನ್ನು ಸಾರಕ್ಕಿ ಅಗ್ರಹಾರ, ಜೆ.ಪಿ.ನಗರದ ಡಾ. ಶ್ರೀನಿವಾಸಮೂರ್ತಿ ಮತ್ತು ಕುಟುಂಬದವರು ದೈವ ಪ್ರೇರಣೆಯಿಂದ ಆಯೋಜಿಸಿದ್ದು, ಎಲ್ಲರಿಗೂ ಸಾದರ ಆಹ್ವಾನವನ್ನು ಸಲ್ಲಿಸಿದ್ದಾರೆ.

City Today News 9341997936

Aradhana of Sri Sujayendra Tirtha Held at Jayanagar Rayara Mutt

Bengaluru: The Aradhana of Pratah Smaraniya Sri Sri Sujayendra Tirtha Sripadangal was observed with great devotion on Thursday, January 22, at the Nanjangud Sri Raghavendra Swamy Mutt, located in 5th Block, Jayanagar.

As per the directives of Parama Poojya Sri 1008 Sri Subudhendra Tirtha Sripadangal, the religious proceedings were conducted under the leadership of the senior administrator of the Mutt, R.K. Vadindrachar. The morning rituals included Panchamrita Abhisheka, Kanakabhisheka, special alankara, Mahamangalarati, and Annadana seva, witnessed by a large gathering of devotees.

The evening programme featured the Rathotsava, Gajavahanotsava, Ashtavadhana, and Thottilu Puja, adding to the spiritual fervour of the occasion. As part of the cultural segment, Vidushi Smt. Gayathri Mayya and her students from Tamoha Art Foundation presented graceful dance performances as a devotional offering.

The details of the event were shared by Sri Nandakishore Achar, according to a press statement.

City Today News 9341997936

They Lost a Mother, Found a Rhythm, and Gained the World

January 22, 2026 | Bengaluru
From growing up in an SOS Children’s Village to becoming celebrated ambassadors of Indian culture, twin sisters Archana and Chetana’s journey is a moving story of resilience, passion, and purpose.

Now 39, the Bengaluru-based twins are accomplished Bharatanatyam dancers and founders of Nrithyarpanam School of Dance. Their life took a difficult turn at the age of three when they lost their mother. Unable to cope alone, their father sought support from SOS Children’s Villages India, where the sisters found a new home and a nurturing family environment under the care of an SOS Mother.

Recognising their artistic inclination early, SOS Children’s Villages enrolled them in Bharatanatyam classes alongside formal education. With consistent emotional and institutional support, both sisters completed engineering degrees and briefly pursued corporate careers. However, their lifelong connection with dance inspired them to take a bold leap of faith and follow their true calling.

Today, Archana and Chetana are nationally and internationally recognised artistes, Cultural Ambassadors of India, ICCR-empanelled performers, Doordarshan graded artistes, and recipients of several prestigious awards in India and abroad.

“Dance helped us heal and gave our lives direction,” says Archana. Chetana adds that their SOS Mother’s encouragement played a pivotal role in shaping their future.

Their story powerfully reflects how care, opportunity, and belief can transform adversity into achievement.

City Today News 9341997936

“Bringing Advanced Transplant Care Closer to Patients,” Says SPARSH Chairman

SPARSH Hospitals Launches Advanced Bone Marrow Transplant Unit at Hennur Road

Bengaluru, January 22, 2026: Reinforcing its stature as one of Bengaluru’s leading multi-specialty hospital networks, SPARSH Group of Hospitals has inaugurated a state-of-the-art Bone Marrow Transplant (BMT) Unit at its Hennur Road facility. With a steady rise in cancer and complex blood disorder cases across Karnataka, the new unit significantly enhances access to advanced, life-saving treatments for patients from Bengaluru, South India, and international destinations.

The dedicated BMT facility will offer comprehensive care for a wide spectrum of haematological conditions, including leukemia, thalassemia, lymphoma, aplastic anemia, and other complex blood disorders, bringing world-class expertise closer to patients’ homes.

The unit was inaugurated by Dr. Sharan Shivaraj Patil, Chairman and Chief Orthopaedic Surgeon, SPARSH Group of Hospitals, in the presence of Mr. Jasdeep Singh, Group CEO, along with senior clinicians and healthcare leaders. The event was further marked by the presence of bone marrow transplant survivors who shared inspiring stories of resilience, recovery, and renewed life following successful treatment at SPARSH Hospitals.

Addressing the gathering, Dr. Sharan Shivaraj Patil said, “Every life deserves a stronger second chance. The launch of this Bone Marrow Transplant Unit is a deeply meaningful milestone for SPARSH. For patients and families confronting some of the most challenging medical conditions, this unit represents renewed hope—supported by clinical excellence, advanced technology, and compassionate, end-to-end care.”

The BMT Unit forms a core component of the SPARSH Institute of Cancer Care, the group’s integrated oncology platform that delivers comprehensive cancer care—from early diagnosis and precision treatment to advanced therapies and long-term survivorship—through multidisciplinary expertise and patient-centric care pathways.

The advanced BMT wing is equipped with HEPA-filtered isolation rooms, a dedicated blood bank, stem cell processing laboratories, and in-house testing facilities for HLA typing, infection screening, and drug-level monitoring. Care is delivered by a highly experienced multidisciplinary team comprising haemato-oncologists, BMT physicians, intensivists, and specially trained nursing staff. In addition to conventional transplant procedures, the unit is also equipped to offer CAR-T Cell Therapy and advanced immunotherapies, further strengthening SPARSH Hospitals’ oncology and haematology ecosystem.

With this launch, SPARSH Group of Hospitals continues to expand its advanced clinical capabilities, reaffirming its commitment to delivering accessible, high-quality, and patient-centric healthcare.

City Today News 9341997936

ರಿಷಬ್ ಶೆಟ್ಟಿಯ ಅದ್ಭುತ ಅಭಿನಯದ ‘ಕಾಂತಾರ: ಚಾಪ್ಟರ್ 1’ – ಜನವರಿ 24ರಂದು ಜೀ ಕನ್ನಡಲ್ಲಿ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್

ಬೆಂಗಳೂರು, ಜನವರಿ 21, 2025:
ಕನ್ನಡ ಕಿರುತೆರೆಯ ಮನರಂಜನೆಯ ಮಹಾರಾಜ ಎಂದೇ ಖ್ಯಾತಿ ಪಡೆದಿರುವ ಜೀ ಕನ್ನಡ ವಾಹಿನಿ, ಧಾರಾವಾಹಿಗಳಷ್ಟೇ ಅಲ್ಲದೆ ಜನಪ್ರಿಯ ರಿಯಾಲಿಟಿ ಶೋಗಳು ಹಾಗೂ ಭರ್ಜರಿ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್‌ಗಳ ಮೂಲಕ ನಿರಂತರವಾಗಿ ಪ್ರೇಕ್ಷಕರ ಮನಗೆದ್ದು ನಂ.1 ಸ್ಥಾನದಲ್ಲಿದೆ. ಇದೀಗ ಅದೇ ಸಾಲಿನಲ್ಲಿ ಜೀ ಕನ್ನಡ ತನ್ನ ವೀಕ್ಷಕರಿಗೆ ಮತ್ತೊಂದು ಶುಭವಾರ್ತಿಯನ್ನು ನೀಡುತ್ತಿದೆ.
ಬಾಕ್ಸ್ ಆಫೀಸ್‌ನಲ್ಲಿ ಭಾರೀ ಯಶಸ್ಸು ದಾಖಲಿಸಿ, ಭಾರತೀಯ ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಇದೇ ಜನವರಿ 24ರಂದು ಸಂಜೆ 7 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಆಗಿ ಪ್ರಸಾರವಾಗಲಿದೆ.

‘ಕಾಂತಾರ: ಚಾಪ್ಟರ್ 1’ ಕಥೆ ನಾಲ್ಕನೇ ಶತಮಾನದ ಕದಂಬ ರಾಜವಂಶದ ಕಾಲಘಟ್ಟದಲ್ಲಿ ನೆಲೆಗೊಂಡಿದ್ದು, ಕಾಂತಾರ ಎಂಬ ಅರಣ್ಯಭೂಮಿಯ ನಾಯಕ ಬೇರ್ಮೆ ಮತ್ತು ಬಾಂಗ್ರಾ ರಾಜ ಮನೆತನದ ನಡುವಿನ ಸಂಘರ್ಷವನ್ನು ಕೇಂದ್ರೀಕರಿಸಿದೆ. ಈ ಚಿತ್ರ ಕಾಂತಾರ ಎಂಬ ಅದ್ಭುತ ಕಾಡಿನ ಹುಟ್ಟಿನ ಕಥೆಯ ಜೊತೆಗೆ, ಆ ನೆಲವನ್ನು ರೂಪಿಸಿದ ಆಳವಾದ ಸಂಪ್ರದಾಯಗಳು, ನಂಬಿಕೆಗಳು ಮತ್ತು ಜನಪದ ಪೌರಾಣಿಕತೆಯನ್ನು ಅತ್ಯಂತ ವೈಭವದಿಂದ ತೆರೆದಿಡುತ್ತದೆ. ಸಾಂಸ್ಕೃತಿಕ, ಭಾವನಾತ್ಮಕ ಮತ್ತು ಜಾನಪದ ಅಂಶಗಳ ಸಮನ್ವಯದಿಂದ ಈ ಸಿನಿಮಾ ಪ್ರೇಕ್ಷಕರ ಮನದಲ್ಲಿ ಆಳವಾದ ಮುದ್ರೆಯನ್ನು ಮೂಡಿಸಿದೆ.

ಚಿತ್ರದ ಯಶಸ್ಸಿಗೆ ಅದರ ಶಕ್ತಿಶಾಲಿ ತಾರಾಬಳಗವೂ ಪ್ರಮುಖ ಕಾರಣವಾಗಿದೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಬೇರ್ಮೆ ಮತ್ತು ಮಾಯಕಾರ ಎಂಬ ದ್ವಿಪಾತ್ರದಲ್ಲಿ ಮಿಂಚಿದ್ದು, ಅವರ ಅಭಿನಯ ಪ್ರೇಕ್ಷಕರನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತದೆ. ರುಕ್ಮಿಣಿ ವಸಂತ್ ಅವರು ಕನಕಾವತಿ ಎಂಬ ಯುವರಾಣಿಯ ಪಾತ್ರದಲ್ಲಿ ಕಾಣಿಸಿಕೊಂಡರೆ, ಮಲಯಾಳಂ ಸೂಪರ್ ಸ್ಟಾರ್ ಜಯರಾಮ್ ಅವರು ರಾಜ ರಾಜಶೇಖರನ ಪಾತ್ರವನ್ನು ನಿರ್ವಹಿಸಿದ್ದಾರೆ. ಬಾಲಿವುಡ್‌ನ ಖ್ಯಾತ ನಟ ಗುಲ್ಶನ್ ದೇವಯ್ಯ ಕುಲಶೇಖರ ಎಂಬ ರಾಜನ ಪಾತ್ರದಲ್ಲಿ ಅಭಿನಯಿಸಿದ್ದು, ಪ್ರಮೋದ್ ಶೆಟ್ಟಿ ಭೋಗೇಂದ್ರ ಪಾತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇತರ ಅನೇಕ ಕಲಾವಿದರ ಅಭಿನಯವೂ ಚಿತ್ರಕ್ಕೆ ಹೆಚ್ಚುವರಿ ಬಲ ನೀಡಿದೆ.
ಬೇರ್ಮೆ ಪಾತ್ರದಲ್ಲಿ ರಿಷಬ್ ಶೆಟ್ಟಿಯ ಅಭಿನಯ ಅತ್ಯಂತ ನೈಜವಾಗಿದ್ದು, ಶಕ್ತಿ, ಆಧ್ಯಾತ್ಮಿಕತೆ ಮತ್ತು ಭಾವನಾತ್ಮಕ ಆಳತೆಯಿಂದ ತುಂಬಿದೆ. ಚಿತ್ರದ ಮೊದಲಾರ್ಧದಲ್ಲಿ ಪೌರಾಣಿಕತೆ ಮತ್ತು ಭಾವನಾತ್ಮಕ ದೃಶ್ಯಗಳು ಮನಸೂರೆಗೊಳ್ಳುವಂತೆ ಇದ್ದರೆ, ದ್ವಿತೀಯಾರ್ಧದಲ್ಲಿ ತೀವ್ರ ಆಕ್ಷನ್ ದೃಶ್ಯಗಳು ಹಾಗೂ ದೈವಿಕ ಕ್ಷಣಗಳು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ದೃಶ್ಯ ವೈಭವ, ಕಥನ ಶೈಲಿ ಮತ್ತು ತಂತ್ರಜ್ಞಾನಗಳ ಸಮನ್ವಯದಿಂದ ‘ಕಾಂತಾರ: ಚಾಪ್ಟರ್ 1’ ಒಂದು ಅದ್ಭುತ ದೃಶ್ಯಕಾವ್ಯವಾಗಿ ರೂಪುಗೊಂಡಿದೆ.

ಈ ಕುರಿತು ಮಾತನಾಡಿದ ಜೀ ಕನ್ನಡ ಹಾಗೂ ಕನ್ನಡ ZEE5 ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು,
“‘ಕಾಂತಾರ: ಚಾಪ್ಟರ್ 1’ ಒಂದು ಸಿನಿಮಾ ಮಾತ್ರವಲ್ಲ; ಅದು ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯ ಜೀವಂತ ಪ್ರತಿಬಿಂಬ. ಈ ಸಿನೆಮಾಟಿಕ್ ಮಾಸ್ಟರ್‌ಪೀಸ್ ಅನ್ನು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಮಾಡುವುದಕ್ಕೆ ನಮಗೆ ಅಪಾರ ಹೆಮ್ಮೆ. ನಮ್ಮ ವಾಹಿನಿಯ ಮೂಲಕ ಕುಟುಂಬದೊಂದಿಗೆ ಕೂತು ಈ ಚಿತ್ರವನ್ನು ವೀಕ್ಷಿಸುವ ಅವಕಾಶ ದೊರೆಯಲಿದೆ,” ಎಂದು ಹೇಳಿದರು.

ವೀಕ್ಷಿಸಿ ‘ಕಾಂತಾರ: ಚಾಪ್ಟರ್ 1’ – ಇದೇ ಜನವರಿ 24ರಂದು ಸಂಜೆ 7 ಗಂಟೆಗೆ, ನಿಮ್ಮ ಜೀ ಕನ್ನಡ ವಾಹಿನಿಯಲ್ಲಿ.

City Today News 9341997936